For Quick Alerts
  ALLOW NOTIFICATIONS  
  For Daily Alerts

  ಸಾಯಿ ಪಲ್ಲವಿಯನ್ನು ಹಾಡಿ ಹೊಗಳಿದ ಮಹೇಶ್ ಬಾಬು; 'ಫಿದಾ' ಸುಂದರಿ ಹೇಳಿದ್ದೇನು?

  By ಫಿಲ್ಮಿಬೀಟ್ ಡೆಸ್ಕ್
  |

  ಸೌತ್ ಸುಂದರಿ ಸಾಯಿ ಪಲ್ಲವಿ ಯಾರಿಗೆತಾನೆ ಇಷ್ಟ ಇಲ್ಲ. ಸಾಯಿ ಪಲ್ಲವಿ ನಟನೆಗೆ ಫಿದಾ ಆಗದ ಪ್ರೇಕ್ಷಕರಿಲ್ಲ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊೆಂದಿರುವ ನಟಿ ಸಾಯಿ ಪಲ್ಲವಿಗೆ ಸ್ಟಾರ್ ಕಲಾವಿದರು ಸಹ ಅಭಿಮಾನಿಗಳಾಗಿದ್ದಾರೆ. ಅದ್ಭುತ ನಟನೆ ಮತ್ತು ಸಖತ್ ಡಾನ್ಸ್ ಮೂಲಕವೇ ಎಲ್ಲರ ಮನಕದ್ದಿರುವ ಸಾಯಿ ಪಲ್ಲವಿ ಇದೀಗ ಲವ್ ಸ್ಟೋರಿ ಮೂಲಕ ಮತ್ತೊಮ್ಮೆ ಎಲ್ಲರ ಹೃದಯಕದ್ದಿದ್ದಾರೆ.

  ನಟ ನಾಗ ಚೈತನ್ಯ ನಾಯಕನಾಗಿ ಕಾಣಿಸಿಕೊಂಡಿರುವ ಲವ್ ಸ್ಟೋರಿ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಯಿ ಪಲ್ಲವಿ ಅಭಿನಯ ಮತ್ತು ಡಾನ್ಸ್ ಗೆ ಎಲ್ಲರೂ ಮನಸೋತಿದ್ದಾರೆ. ಸ್ಟಾರ್ ಕಲಾವಿದರು ಸಹ ಲವ್ ಸ್ಟೋರಿ ನೋಡಿ ಹಾಡಿಗೊಳಿದ್ದಾರೆ. ತೆಲುಗು ಸ್ಟಾರ್ ಮಹೇಶ್ ಬಾಬು ಲವ್ ಸ್ಟೋರಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಅಷ್ಟೆಯಲ್ಲ ಸಾಯಿ ಪಲ್ಲವಿ ಡಾನ್ಸ್ ನೋಡಿ ಮೂಳೆ ಇದಿಯಾ ಎಂದು ಕೇಳಿದ್ದಾರೆ.

  "ಪ್ರೇಮಕಥೆ, ನಿರ್ದೇಶಕ ಶೇಖರ್ ಕಮ್ಮುಲ ನಿರ್ದೇಶನ. ನಾಕ್ ಕೌಟ್ ಫಿಲ್ಮ್ ನೀಡುತ್ತಿದ್ದಾರೆ. ನಾಗ ಚೈತನ್ಯ ಅದ್ಭುತವಾಗಿ ನಟಿಸಿದ್ದಾರೆ. ನಾಗ ಚೈತನ್ಯಗೆ ಈ ಸಿನಿಮಾ ಗೇಮ್ ಚೇಂಜರ್" ಎಂದು ಹೇಳಿದ್ದಾರೆ. ಬಳಿಕ ಮತ್ತೊಂದು ಟ್ವೀಟ್ ಮಾಡಿ ಹಾಡಿ ಹೊಗಳಿದ್ದಾರೆ. "ಸಾಯಿ ಪಲ್ಲವಿ ಎಂದಿನಂತೆ ಸೆನ್ಸೇಷನಲ್. ಈ ನಟಿಗೆ ಯಾವುದೇ ಮೂಳೆಗಳಿಲ್ಲವೇ? ತೆರೆಮೇಲೆ ಈ ರೀತಿ ನೃತ್ಯ ಮಾಡಿದವರನ್ನು ನಾನು ನೋಡಿಲ್ಲ" ಎಂದು ಹೇಳುವ ಮೂಲಕ ಸಾಯಿ ಪಲ್ಲವಿ ಡಾನ್ಸ್ ಅನ್ನು ಕೊಂಡಾಡಿದ್ದಾರೆ.

  ಮಹೇಶ್ ಬಾಬು ಮಾತಿನಿಂದ ಫುಲ್ ಖುಷ್ ಆಗಿರುವ ಸಾಯಿ ಪಲ್ಲವಿ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಪ್ರಜ್ಞೆಗೆ ಮರಳಲು ಸ್ವಲ್ಪ ಸಮಯ ಬೇಕು. ನಿಮ್ಮ ನಾನು ವಿನಮ್ರನಾಗಿದ್ದೇನೆ. ಧನ್ಯವಾದಗಳು ಸರ್. ನನ್ನಲ್ಲಿರುವ ಅಭಿಮಾನಿ ಹುಡುಗಿ ನಿಮ್ಮ ಟ್ವೀಟ್ ಅನ್ನು ಈಗಾಗಲೇ ಮಿಲಿಯನ್ ಬಾರಿ ಓದಿದ್ದಾರೆ" ಎಂದು ಬರೆದುಕೊಂಡಿದ್ದಾರೆ.

  ಇತ್ತೀಚಿಗಷ್ಟೆ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ನಟ ಚಿರಂಜೀವಿ ಸಹ ಸಾಯಿ ಪಲ್ಲವಿಯನ್ನು ಹಾಡಿಹೊಗಳಿದ್ದರು. ಅಲ್ಲದೆ ಸಾಯಿ ಪಲ್ಲವಿ ಜೊತೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಸಾಯಿ ಪಲ್ಲವಿ ಕೂಡ ಮುಂದಿನ ಸಿನಿಮಾದಲ್ಲಿ ನಟಿಸುವ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದರು.

  Mahesh Babu praises Sai Pallavi and Naga Chaitanyas love story

  ಕೊರೊನಾ ಭೀತಿಯ ನಡುವೆಯೂ ತೆರೆಗೆ ಬಂದ ಲವ್ ಸ್ಟೋರಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೆಪ್ಟಂಬರ್ 24ರಂದು ಲವ್ ಸ್ಟೋರಿ ಸಿನಿಮಾ ತೆರೆಗೆ ಬಂದಿದೆ. ಮೊದಲ ದಿನ ಉತ್ತಮ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ. ಸುಮಾರು 16 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿದೆ. ನಾಗ ಚೈತನ್ಯ ವೃತ್ತಿ ಜೀವನದಲ್ಲಿ ಇದೇ ಮೊದಲು ಮೊದಲ ದಿನ ಇಷ್ಟು ದೊಡ್ಡ ಮಟ್ಟದ ಕಲೆಕ್ಷನ್ ಆಗಿದೆ ಎನ್ನಲಾಗುತ್ತಿದೆ.

  ಇನ್ನು ವಿಶೇಷ ಅಂದ್ರೆ ಲವ್ ಸ್ಟೋರಿ ಸಿನಿಮಾ ಆಂಧ್ರ ಮತ್ತು ತೆಲಂಗಾಣದಲ್ಲಿ 700ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಸಿನಿಮಾ ತೆರೆಗೆ ಬಂದಿದೆ. ಇನ್ನು ವರ್ಲ್ಡ್‌ವೈಡ್ 1000ಕ್ಕೂ ಅಧಿಕ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಪ್ರಿ-ರಿಲೀಸ್ ಬಿಸಿನೆಸ್‌ನಲ್ಲಿ ಲವ್ ಸ್ಟೋರಿ ಸಿನಿಮಾ 26 ಕೋಟಿ ಬಾಚಿಕೊಂಡಿದೆಯಂತೆ.

  English summary
  Telugu Actor Mahesh Babu praises Sai Pallavi and Naga Chaitanya's love story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X