For Quick Alerts
  ALLOW NOTIFICATIONS  
  For Daily Alerts

  ರಾಜಮೌಳಿ ಚಿತ್ರಕ್ಕಾಗಿ ಪ್ರಭಾಸ್ ಹಾದಿಯಲ್ಲಿ ಮಹೇಶ್ ಬಾಬು!

  |

  RRR ಚಿತ್ರದ ಬಳಿಕ ನಿರ್ದೇಶಕ ರಾಜಮೌಳಿ ಮುಂದಿನ ನಡೆ ಬಗ್ಗೆ ಸಾಕಷ್ಟು ಕುತೂಹಲ ಇತ್ತು. ಅದಕ್ಕೆ ಉತ್ತರ ಸಿಕ್ಕಿದ್ದು, ರಾಜಮೌಳಿ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆಗೆ ಎನ್ನುವುದು ಖಚಿತವಾಗಿದೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟು ಕೊಟ್ಟಿಲ್ಲ. ಆದರೆ ತೆರೆಮರೆಯಲ್ಲಿ ಎಲ್ಲವೂ ನಡೀತಿದೆ.

  ನಟ ಮಹೇಶ್ ಬಾಬು ಪ್ರಸ್ತುತ SSMB28 ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಈ ಚಿತ್ರದ ನಿರ್ಮಾಪಕರು 28 ಏಪ್ರಿಲ್ 2023ರಲ್ಲಿ ಸಿನಿಮಾ ದೊಡ್ಡ ಪರದೆಯ ಮೇಲೆ ಬರಲಿದೆ ಎಂದು ಹೇಳಿಕೊಂಡಿದ್ದರು.

  ಮಹೇಶ್ ಬಾಬು 28ನೇ ಸಿನಿಮಾದಲ್ಲಿ ವಿಜಯ್ ಸೇತುಪತಿ: ಉಪ್ಪಿ ನಟಿಸುತ್ತಾ ಇಲ್ವಾ?ಮಹೇಶ್ ಬಾಬು 28ನೇ ಸಿನಿಮಾದಲ್ಲಿ ವಿಜಯ್ ಸೇತುಪತಿ: ಉಪ್ಪಿ ನಟಿಸುತ್ತಾ ಇಲ್ವಾ?

  ಹಾಗಾಗಿ ಸಹಜವಾಗಿ, ಅಭಿಮಾನಿಗಳು ಮಹೇಶ್ ಬಾಬು 28ನೇ ಸಿನಿಮಾಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

  ಆದರೆ ನಟ ಮಹೇಶ್ ಬಾಬು ರಾಜಮೌಳಿ ಜೊತೆಗಿನ ಸಿನಿಮಾದ ಬಗ್ಗೆ ಹೆಚ್ಚು ಉತ್ಸುಕರಾದಂತೆ ಇದೆ. ಹಾಗಾಗಿ ಮಹೇಶ್ ಬಾಬು ತೆರೆಮರೆಯಲ್ಲಿ ರಾಜಮೌಳಿ ಸಿನಿಮಾಗಾಗಿ ಸಿದ್ದವಾಗುತ್ತಿದ್ದಾರೆ. ಈ ಬಗ್ಗೆ ಟಾಲಿವುಡ್‌ನಲ್ಲಿ ಹೊಸ ಸುದ್ದಿ ಹಬ್ಬಿದೆ.

  ರಾಜಮೌಳಿ ಹೀರೋಗಳಿಗೆ ಸವಾಲು!

  ರಾಜಮೌಳಿ ಹೀರೋಗಳಿಗೆ ಸವಾಲು!

  ನಿರ್ದೇಶಕ ರಾಜಮೌಳಿ ತಮ್ಮ ನಟರಿಂದ ಅತ್ಯುತ್ತಮವಾದುದನ್ನು ನಿರೀಕ್ಷೆ ಮಾಡುತ್ತಾರೆ. ನಾಯಕ ನಟರು ಎಷ್ಟೇ ಸಿನಿಮಾಗಳನ್ನು ಮಾಡಿದ್ದರು ಕೂಡ, ರಾಜಮೌಳಿ ಸಿನಿಮಾದಲ್ಲಿ ಬೇರೆ ರೀತಿಯಲ್ಲಿ ಕಾಣಿಸುತ್ತಾರೆ. ಇನ್ನು ರಾಜಮೌಳಿ ಸಿನಿಮಾದಲ್ಲಿ ನಟಿಸುವುದೇ ಒಂದು ಅದೃಷ್ಟ ಎನ್ನುವಂತಾಗಿದೆ. ಈಗ ನಟ ಮಹೇಶ್ ಬಾಬು ಸರದಿ. ಸಿನಿಮಾ ಶುರುವಾಗಲು ಇನ್ನು ಸಾಕಷ್ಟು ಸಮಯ ಇದೆ. ಆದರೆ ಈಗಿನಿಂದಲೇ ನಟ ಮಹೇಶ್ ಬಾಬು, ರಾಜಮೌಳಿ ಸಿನಿಮಾಗಾಗಿ ತಯಾರಿ ಶುರು ಮಾಡಿದ್ದಾರಂತೆ.

  ಮಹೇಶ್ ಬಾಬು ರೂಪಾಂತರ!

  ಮಹೇಶ್ ಬಾಬು ರೂಪಾಂತರ!

  ವರದಿಗಳ ಪ್ರಕಾರ, ನಟ ಮಹೇಶ್ ಬಾಬು ಮತ್ತು ರಾಜಮೌಳಿ ಅವರ ಚಿತ್ರ ಮುಂದಿನ ವರ್ಷ ಪ್ರಾರಂಭವಾಗಲಿದೆ. ಆದರೆ ಈಗಿನಿಂದಲೇ ದೈಹಿಕವಾಗಿ ಬದಲಾವಣೆಗಳನ್ನು ಮಾಡಿಕೊಳ್ಳಲು ನಟ ಮಹೇಶ್ ಬಾಬು ಕಸರತ್ತು ಆರಂಭಿಸಿದ್ದಾರೆ. ಸದ್ಯ ಕೆಲವು ದಿನಗಳ ಹಿಂದೆ, ಫಿಟ್ನೆಸ್ ತರಬೇತುದಾರ ಲಾಯ್ಡ್ ಸ್ಟೀವನ್ಸ್, ಮಹೇಶ್ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳು ಮಹೇಶ್ ಬಾಬು ತಮ್ಮ ದೈಹಿಕ ರೂಪಾಂತರಕ್ಕಾಗಿ ತಯಾರಿ ಆರಂಭಿಸಿದ್ದಾರೆ ಎನ್ನುವ ಸುಳಿವು ನೀಡಿದ್ದವು.

  ಪ್ರಭಾಸ್ ಹಾದಿಯಲ್ಲಿ ಮಹೇಶ್ ಬಾಬು!

  ಪ್ರಭಾಸ್ ಹಾದಿಯಲ್ಲಿ ಮಹೇಶ್ ಬಾಬು!

  ರಾಜಮೌಳಿ ಸಿನಿಮಾಗಾಗಿ ನಟ ಮಹೇಶ್ ಬಾಬು, ಪ್ರಭಾಸ್ ದಾರಿ ಹಿಡಿಯಲು ನಿರ್ಧರಿಸಿದ್ದಾರೆ ಎನ್ನುವುದು ವರದಿಯಾಗಿದೆ. ಬಾಹುಬಲಿ ಸರಣಿ ಸಿನಿಮಾಗಳಿಗಾಗಿ ನಟ ಪ್ರಭಾಸ್ ಸುಮಾರು ನಾಲ್ಕರಿಂದ ಐದು ವರ್ಷಗಳನ್ನು ಮೀಸಲಿಟ್ಟಿದ್ದರು. ಅಷ್ಟೂ ವರ್ಷಗಳೂ ಪ್ರಭಾಸ್ ಕೇವಲ ರಾಜಮೌಳಿ ಅವರೊಂದಿಗೆ ಸಿನಿಮಾ ಮಾಡಿದ್ದರು. ಆ ಸಮಯದಲ್ಲಿ ಬಾಹುಬಲಿ ಬಿಟ್ಟರೆ ಬೇರೆ ಯಾವುದೇ ಸಿನಿಮಾವನ್ನೂ ಕೂಡ ಅವರು ಕೈಗೆತ್ತಿಕೊಂಡಿರಲಿಲ್ಲ. ಈಗ ನಟ ಮಹೇಶ್ ಬಾಬು ಕೂಡ ಅದೇ ನಿರ್ಧಾರ ಮಾಡಿದ್ದು, ಸದ್ಯ ಸಂಪೂರ್ಣವಾಗಿ ರಾಜಮೌಳಿ ಸಿನಿಮಾಗೆ ತಯಾರಿ ನಡೆಸಿದ್ದಾರಂತೆ.

  ಮಹೇಶ್ ಬಾಬು 28ನೇ ಚಿತ್ರದಲ್ಲಿ ಬ್ಯೂಸಿ!

  ಮಹೇಶ್ ಬಾಬು 28ನೇ ಚಿತ್ರದಲ್ಲಿ ಬ್ಯೂಸಿ!

  ಮಹೇಶ್ ಬಾಬು ಈಗಾಗಲೇ ಎಸ್‌ಎಸ್‌ಎಂಬಿ28ರ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಕಾಂಬಿನೇಷನ್ ಸಿನಿಮಾ ಇದು. ಈ ಚಿತ್ರದಲ್ಲಿ ನಟಿ ಪೂಜಾ ಹೆಗ್ಡೆ ನಾಯಾಕಿಯಾಗಿದ್ದು, ಕನ್ನಡದ ನಟ ಉಪೇಂದ್ರ ಮತ್ತು ವಿಜಯ್ ಸೇತುಪತಿ ಇಬ್ಬರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  Recommended Video

  Siddaramaiah | ಡೊಳ್ಳು ಚಿತ್ರ ವೀಕ್ಷಿಸಿದ ಮಾಜಿ ಸಿ ಎಂ ಸಿದ್ದರಾಮಯ್ಯ | Dollu | Pawan Wadeyar | Filmibeat
  English summary
  Mahesh Babu Preparinig For SS Rajamouli Movie And going In Prabhas way, Know More,
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X