For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಅಭಿಮಾನಿಗಳಿಗೆ ಸಂತಸದ ಸುದ್ದಿ: ಮತ್ತೆ ತೆರೆಮೇಲೆ ಅಬ್ಬರಿಸಿದ 'ದೂಕುಡು' ಸಿನಿಮಾ

  |

  ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ನಟನೆಯ ಸೂಪರ್ ಹಿಟ್ ದೂಕುಡು ಸಿನಿಮಾ ಬಿಡುಗಡೆಯಾಗಿ ಇಂದಿಗೆ ಸರಿಯಾಗಿ 10 ವರ್ಷಗಳು ತುಂಬಿವೆ. ಮಹೇಶ್ ಬಾಬು ಮತ್ತು ಸಮಂತಾ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಈ ಚಿತ್ರ ಅಭಿಮಾನಿಗಳ ಹೃದಯಗೆದ್ದಿತ್ತು. ಅಂದಹಾಗೆ ಇದು ಪವರ್ ಸ್ಟಾರ್ ಹೆಸರಿನಲ್ಲಿ ಕನ್ನಡದಲ್ಲೂ ರಿಮೇಕ್ ಆಗಿತ್ತು. ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್‌ಗೆ ನಾಯಕಿಯಾಗಿ ತ್ರಿಷಾ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ತ್ರಿಷಾ ಮತ್ತೆ ದ್ವಿತ್ವ ಸಿನಿಮಾದಲ್ಲಿ ಪುನೀತ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

  ಮಹೇಶ್ ಬಾಬು ನಟನೆಯ ದೂಕುಡು ಸಿನಿಮಾ ಸೆಪ್ಟೆಂಬರ್ 11, 2011ರಂದು ಬಿಡುಗಡೆಯಾಗಿತ್ತು. ಈ ಸಿನಿಮಾ ನಟಿ ಸಮಂತಾ ಸೇರಿದಂತೆ ಅನೇಕ ಕಲಾವಿದರು, ತಂತ್ರಜ್ಞರ ವೃತ್ತಿ ಬದುಕಿಗೆ ಬಹುದೊಡ್ಡ ತಿರುವನ್ನು ನೀಡಿತ್ತು. ಹಾಗಾಗಿ ಈ ಸೂಪರ್ ಹಿಟ್ ಸಿನಿಮಾ 10 ವರ್ಷ ತುಂಬಿದ ಸಂತಸವನ್ನು ನಿರ್ಮಾಪಕರು ಮತ್ತು ವಿತರಕರು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದಾರೆ.

  ಚಿತ್ರದಲ್ಲಿ ನಟ ಮಹೇಶ್ ಬಾಬು ಪೋಲಿಸ್ ಪಾತ್ರದಲ್ಲಿ ಮಿಂಚಿದ್ದರು. ಅವರ ತಂದೆಯ ಪಾತ್ರದಲ್ಲಿ ಪ್ರಕಾಶ್ ರಾಜ್ ಕಾಣಿಸಿಕೊಂಡಿದ್ದರು. ಬಿಡುಗಡೆಯಾದ ಹತ್ತು ವರ್ಷಗಳ ಸವಿನೆನಪಿಗೆ ಚಿತ್ರಮಂದಿರಗಳಲ್ಲಿ ಈ ಸಿನಿಮಾದ ವಿಶೇಷ ಪ್ರದರ್ಶನಗಳನ್ನು ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಇಂದು ಚಿತ್ರತಂಡ ಆಯೋಜಿಸಿದೆ. ಈ ಮೂಲಕ ಹತ್ತು ವರ್ಷಗಳ ನಂತರ ಮತ್ತೆ ಮಹೇಶ್ ಬಾಬು ಮತ್ತು ಸಮಂತಾ ನಟನೆಯ ದೂಕುಡು ಸಿನಿಮಾವನ್ನು ದೊಡ್ಡ ತೆರೆಯ ಮೇಲೆ ವೀಕ್ಷಿಸಿ ಎಂಜಾಯ್ ಮಾಡುವ ಅವಕಾಶ ಸಿಕ್ಕಿದೆ.

  ಇನ್ನು ದೂಕುಡು ಚಿತ್ರದಲ್ಲಿ ಬೃಹತ್ ತಾರಾಗಣವೇ ಇತ್ತು. ಫ್ಯಾಮಿಲಿ ಎಂಟಟೈರ್ಮೆಂಟ್ ಸಿನಿಮಾ ಇದಾಗಿದೆ. ಸೋನು ಸೂದ್, ಬ್ರಹ್ಮಾನಂದಂ, ಕೋಟ ಶ್ರೀನಿವಾಸ ರಾವ್, ಎಂಎಸ್ ನಾರಾಯಣ ಮತ್ತು ನಾಸರ್ ಸೇರಿದಂತೆ ಖ್ಯಾತ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅಂದಹಾಗೆ ಚಿತ್ರಕ್ಕೆ ಶ್ರೀನು ವೈಟ್ಲ ಆಕ್ಷನ್ ಕಟ್ ಹೇಳಿದ್ದರು. ಚಿತ್ರಕ್ಕೆ ಎಸ್.ಎಸ್.ತಮನ್ ಸಂಗೀತ ಸಂಯೋಜಿಸಿದ್ದರು. 'ದೂಕುಡು'ಗೆ ವಿಮರ್ಶಕರಿಂದ, ವೀಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲದೇ ಹಲವಾರು ಪ್ರಶಸ್ತಿಗಳನ್ನೂ ಸಹ ಚಿತ್ರ ಬಾಚಿಕೊಂಡಿತ್ತು.

  ಕೊರೊನಾ ಬಳಿಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಗೆ ಬರುತ್ತಿರುವ ಸಿನಿಮಾ ದೂಕುಡು. ಸಿನಿಮಾ ರಿ-ರಿಲೀಸ್ ಆಗುತ್ತಿದೆ ಎಂದು ಘೋಷಣೆ ಆಗುತ್ತಿದ್ದಂತೆ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಫುಲ್ ಆಗಿದೆ. ಕೊರೊನಾ ಬಳಿಕ ಹೌಸ್ ಫುಲ್ ಬುಕ್ಕಿಂಗ್ ಆಗಿರುವುದು ತೆಲುಗು ಸಿನಿಮಾರಂಗದ ಸಂತಸಕ್ಕೆ ಕಾರಣವಾಗಿದೆ.

  ಮಹೇಶ್ ಬಾಬು ಸದ್ಯ ಸರ್ಕಾರು ವಾರಿ ಪಾಟ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀರಣ ಪ್ರಾರಂಭವಾಗಿದ್ದು, ಬಹುತೇಕ ಚಿತರೀಕರಣ ಮುಕ್ತಾಯವಾಗಿದೆ. ಚಿತ್ರದಲ್ಲಿ ಮಹೇಶ್ ಬಾಬುಗೆ ಜೋಡಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೆ ತೆರೆಗೆ ಬರಲಿದೆ ಎಂದು ಘೋಷಣೆ ಮಾಡಲಾಗಿದೆ.

  English summary
  Mahesh Babu starrer Dookudu special screening in Andhra Pradesh and Telangana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X