Don't Miss!
- News
ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
SS Rajamouli : ರಾಜಮೌಳಿ, ಮಹೇಶ್ ಬಾಬು ಚಿತ್ರದ ಬಜೆಟ್ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ!
'RRR' ಸಿನಿಮಾ ರಿಲೀಸ್ ಆಗಿ ಉತ್ತಮ ಪ್ರಸಂಶೆ ಪಡೆದುಕೊಳ್ಳುತ್ತಿದೆ. ಬಾಕ್ಸಾಫೀಸ್ ಕಲೆಕ್ಷನ್‌ನಲ್ಲೂ ಕೋಟಿ ಕೋಟಿ ಲೂಟಿ ಮಾಡಿರುವ ಈ ಸಿನಿಮಾ, ಎಲ್ಲರಿಂದಲೂ ಜನ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಈ ಸಿನಿಮಾದ ನಂತರ ರಾಜಮೌಳಿ ಮುಂದಿನ ಪ್ರಾಜೆಕ್ಟ್ ಬಗ್ಗೆ ಪ್ರಶ್ನೆ ಹುಟ್ಟಿಕೊಂಡಿತ್ತು.ಅದಕ್ಕೆ ಕೆಲ ದಿನಗಳ ಹಿಂದೆಯೇ ಉತ್ತರ ಸಿಕ್ಕಿದೆ.
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಸಿನಿಮಾ ಮಾಡುವುದಾಗಿ ನಿರ್ದೇಶಕ ಎಸ್.ಎಸ್. ರಾಜಮೌಳಿ ತಿಳಿಸಿದ್ದಾರೆ. 'ಎಲ್ಲ ಅಂತೆ ಕಂತೆಗಳಿಗೆ ತೆರೆ ಎಳೆದಿರುವ ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ. ಮುಂದಿನ ಚಿತ್ರದಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬುಗೆ ಆ್ಯಕ್ಷನ್ ಕಟ್ ಹೇಳುವುದು ಪಕ್ಕಾ ಎಂಬ ಸುದ್ದಿ ಈ ಹಿಂದೆನೇ ಅಧಿಕೃತಗೊಂಡಿದೆ.
Malaika
Arora:
ಬಾಲಿವುಡ್
ನಟಿ
ಮಲೈಕಾ
ಅರೋರಾ
ಕಾರು
ಅಪಘಾತ:
FIR
ದಾಖಲು
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಜಮೌಳಿ, ನಾನು ಮಹೇಶ್ ಬಾಬುಗೆ ನಿರ್ದೇಶನ ಮಾಡುತ್ತೇನೆ. ಆ ಸಿನಿಮಾವನ್ನು ಕೆ.ಎಲ್. ನಾರಾಯಣ ನಿರ್ಮಿಸಲಿದ್ದು, RRR ನಂತರ ಸಿನಿಮಾ ಸೆಟ್ಟೇರಲಿದೆ ಎಂದು ಹೇಳಿದ್ದರು. ಇದೀಗ ಈ ಸಿನಿಮಾದ ಬಗ್ಗೆ ಒಂದಷ್ಟು ಅಪ್‌ಡೇಟ್‌ಗಳು ಹೊರ ಬರುತ್ತಿದೆ.

ಭರ್ಜರಿಯಾಗಿ ನಡೆಯುತ್ತಿದೆ ತಯಾರಿ
ಟಾಲಿವುಡ್ ನಟ ಮಹೇಶ್ ಬಾಬು ಮತ್ತು ರಾಜಮೌಳಿ ಸಿನಿಮಾ ಇದೀಗ ಅಧಿಕೃತಗೊಂಡಿದೆ. ಅಲ್ಲದೆ ಚಿತ್ರದ ಬಗ್ಗೆ ಸಾಕಷ್ಟು ತಯಾರಿ ಕೂಡ ಜರುಗುತ್ತಿದೆ. ಮಹೇಶ್ ಬಾಬುಗೆ ರಾಜಮೌಳಿ ಸಿನಿಮಾ ಮಾಡಲಿದ್ದಾರೆ ಎಂದಾಗ ಅಭಿಮಾನಿಗಳಲ್ಲಿ ಒಂದು ಪ್ರಶ್ನೆ ಹುಟ್ಟಿಕೊಂಡಿತ್ತು. ಇದೀಗ ಒಂದೊಂದಾಗೆ ಇದಕ್ಕೆ ಉತ್ತರಗಳು ಸಿಗುತ್ತಿವೆ. ಮಹೇಶ್ ಬಾಬು ಸಿನಿಮಾ ಬಹಳ ದೊಡ್ಡ ಮಟ್ಟದಲ್ಲಿ ತಯಾರಾಗಲಿದ್ದು, ಬರೋಬ್ಬರಿ 800 ಕೋಟಿ ಬಂಡವಾಳದಲ್ಲಿ ಈ ಚಿತ್ರ ಮೂಡಿ ಬರಲಿದೆಯಂತೆ. ಇದೊಂದು ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾವಾಗಿದ್ದು ಆದಷ್ಟು ಬೇಗ ಸೆಟ್ಟೇರಲಿದೆ.

ಈ ಹಿಂದೆ ಮಾಹಿತಿ ಹಂಚಿಕೊಂಡಿದ್ದ ಪ್ರಿನ್ಸ್
ಸಿನಿಮಾ ಶೂಟಿಂಗ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಈ ಸಿನಿಮಾಗೂ ಕಥೆ ಹೆಣೆದಿದ್ದಾರೆ. ಇನ್ನು ಈ ಸಿನಿಮಾದ ಬಗ್ಗೆ ಸ್ವತಃ ಮಹೆಶ್ ಬಾಬು ಕೂಡ ಈ ಹಿಂದೆ ಮಾಹಿತಿ ಹಂಚಿಕೊಂಡಿದ್ದರು. ಮಹೇಶ್ ಬಾಬು ಟಾಲಿವುಡ್ ಸಿನಿಮಾಗಳು ಬಿಟ್ಟು ಬೇರೆ ಯಾವ ಭಾಷೆಯ ಚಿತ್ರಗಳಲ್ಲೂ ನಟಿಸುವ ಉತ್ಸಾಹ ಇಲ್ಲಿವರೆಗೂ ತೋರಿಸಿರಲಿಲ್ಲ. ಅದರಂತೆ ಈಗ ಬಾಲಿವುಡ್ ಎಂಟ್ರಿಗೆ ಅವಕಾಶ ಬಂದಿದೆ ಅದು ಕೂಡ ರಾಜಮೌಳಿ ಅವರಿಂದ ಎಂದಿದ್ದಾರೆ. ರಾಜಮೌಳಿ ನಿರ್ದೇಶನದ ನನ್ನ ಮುಂದಿನ ಸಿನಿಮಾ ಹಿಂದಿ ಭಾಷೆಯಲ್ಲೂ ರಿಲೀಸ್ ಆಗಲಿದೆ. ಹೀಗಾಗಿ ನನಗೆ ಖುಷಿ ಇದೆ ಎಂದು ಹೇಳಿಕೊಂಡಿದ್ದಾರೆ. ಈ ಮೂಲಕ ಬಾಲಿವುಡ್‌ಗೆ ನಾನು ಎಂಟ್ರಿ ಕೊಡುತ್ತಿದ್ದೇನೆ" ಎಂದು ಹೇಳಿಕೊಂಡಿದ್ದರು.
Recommended Video


ಆಫ್ರಿಕನ್ ಕಾಡಿನಲ್ಲಿ ಆಕ್ಷನ್ ಅಡ್ವೆಂಚರ್
ರಾಜಮೌಳಿ ಪ್ಯಾನ್ ಇಂಡಿಯಾ ಕಲ್ಪನೆಯಲ್ಲಿ ಸಿನಿಮಾ ಮಾಡಲಿದ್ದಾರೆ ಎಂಬುದು ಅಧಿಕೃತವಾಗಿದೆ. ಇನ್ನು ಈ ಸಿನಿಮಾಗಾಗಿ ನಿರ್ದೆಶಕ ರಾಜಮೌಳಿ ದೊಡ್ಡ ತಯಾರಿಯನ್ನೇ ನಡೆಸಿದ್ದಾರೆ. ಆಫ್ರಿಕನ್ ಕಾಡಿನಲ್ಲಿ ಆಕ್ಷನ್ ಅಡ್ವೆಂಚರ್ ಸೆಟ್ ಹಾಕುವ ಆಲೋಚನೆ ಮಾಡಿದ್ದಾರೆ. ಇದನ್ನು ಹೇಗೆ ಸಾಧ್ಯವಾಗಿಸುವುದು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗೆ ಸಾಕಷ್ಟು ದೊಡ್ಡ ಮೊತ್ತದಲ್ಲಿ ರಾಜಮೌಳಿಯ ಸಿನಿಮಾ ತಯಾರಾಗುತ್ತಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.

ನಟನಾ ಕೌಶಲ್ಯಕ್ಕೆ ಮಾರುಹೋಗದವರೇ ಇಲ್ಲ
ಟಾಲಿವುಡ್‌ನಲ್ಲಿ ನಂ 1 ನಟರಲ್ಲಿ ಮಹೇಶ್ ಬಾಬು ಕೂಡ ಒಬ್ಬರು. ಮಹೇಶ್ ಬಾಬು ಸಿನಿಮಾ, ಡೈಲಾಗ್ ಡೆಲಿವರಿ, ನಟನಾ ಕೌಶಲ್ಯಕ್ಕೆ ಮಾರುಹೋಗದವರೇ ಇಲ್ಲ. ಹಿರಿಯರಿಂದ ಕಿರಿಯರವರೆಗೂ ಮಹೇಶ್ ಬಾಬು ಸಿನಿಮಾವನ್ನು ಇಷ್ಟ ಪಡುತ್ತಾರೆ. ಫ್ಯಾಮಿಲಿ ಆಡಿಯನ್ಸ್‌ಗೆ ಮಹೇಶ್ ಬಾಬು ಸಿನಿಮಾ ಅಂದ್ರೆ ಅಚ್ಚುಮೆಚ್ಚು. ಸದ್ಯ ಟಾಲಿವುಡ್‌ನಲ್ಲಿ ಕೈತುಂಬ ಸಿನಿಮಾ ಇಟ್ಟುಕೊಂಡಿರೊ ಮಹೇಶ್ ಬಾಬು ತಮ್ಮ ಮುಂದಿನ ಸಿನಿಮಾ ರಾಜಮೌಳಿ ಜೊತೆ ಎಂಬುದನ್ನು ಕನ್ಫರ್ಮ್ ಮಾಡಿದ್ದಾರೆ. ಅಭಿಮಾನಿಗಳು ಈ ಸಿನಿಮಾ ಸೆಟ್ಟೇರುವುದನ್ನೇ ಎದುರು ನೋಡುತ್ತಿದ್ದಾರೆ.