For Quick Alerts
  ALLOW NOTIFICATIONS  
  For Daily Alerts

  ಪುಟ್ಟ ಕಂದಮ್ಮನ ಜೀವ ಉಳಿಸಿದ ತೆಲುಗು ನಟ ಮಹೇಶ್ ಬಾಬು

  |

  ಟಾಲಿವುಡ್ ಬಾಕ್ಸ್ ಆಫೀಸ್ ಕಿಂಗ್ ಮಹೇಶ್ ಬಾಬು ಕೇವಲ ಸಿನಿಮಾಗಳ ಮೂಲಕ ಮಾತ್ರ ಸೂಪರ್ ಸ್ಟಾರ್ ಎನಿಸಿಕೊಂಡಿಲ್ಲ. ಅದರ ಹೊರತಾಗಿಯೂ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಸೂಪರ್ ಸ್ಟಾರ್ ಎಂದು ಗುರುತಿಸಿಕೊಂಡಿದ್ದಾರೆ.

  ಬಡ ಮಕ್ಕಳ ಶಿಕ್ಷಣ, ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ಧನ ಸಹಾಯ ಹೀಗೆ ಹಲವು ಸಮಾಜ ಮುಖಿ ಕೆಲಸಗಳನ್ನು ಮಾಡುವ ಮಹೇಶ್ ಬಾಬು, ಇತ್ತೀಚಿಗಷ್ಟೆ ಪುಟ್ಟ ಕಂದಮ್ಮನ ಜೀವ ಉಳಿಸುವ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಈ ಕುರಿತು ಮಹೇಶ್ ಬಾಬು ಪತ್ನಿ ನಮ್ರತಾ ಟ್ವೀಟ್ ಮಾಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

  ಶಸ್ತ್ರ ಚಿಕಿತ್ಸೆಗೆ ಮಹೇಶ್ ಧನಸಹಾಯ

  ಶಸ್ತ್ರ ಚಿಕಿತ್ಸೆಗೆ ಮಹೇಶ್ ಧನಸಹಾಯ

  ''ಅನಾರೋಗ್ಯದಿಂದ ಸಂಕಷ್ಟದಲ್ಲಿದ್ದ ತನುಶ್ರೀ ಎಂಬ ಪುಟ್ಟ ಮಗುವಿಗೆ ಮಹೇಶ್ ಬಾಬು ನೆರವು ನೀಡಿದ್ದಾರೆ. ಅದಕ್ಕಾಗಿ ಧನ್ಯವಾದ. ಮಗುವಿಗೆ ಚಿಕಿತ್ಸೆ ನೀಡಿದ ಆಂಧ್ರ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೂ ಹೃದಯಪೂರ್ವಕ ಧನ್ಯವಾದ. ಮಗುವಿಗೆ ಮತ್ತು ಕುಟುಂಬಕ್ಕೆ ನಿಮ್ಮ ಆಶೀರ್ವಾದ ಇರಲಿ'' ಎಂದು ಮಹೇಶ್ ಬಾಬು ಪತ್ನಿ ನಮ್ರತಾ ಟ್ವೀಟ್ ಮಾಡಿದ್ದಾರೆ.

  ಮಹೇಶ್ ಬಾಬು ಮೀಸೆ ಲುಕ್ ಗೆ ಅಭಿಮಾನಿಗಳು ಫಿದಾಮಹೇಶ್ ಬಾಬು ಮೀಸೆ ಲುಕ್ ಗೆ ಅಭಿಮಾನಿಗಳು ಫಿದಾ

  ಮಹೇಶ್ ಚಿನ್ನದ ಹೃದಯವುಳ್ಳ ವ್ಯಕ್ತಿ

  ಮಹೇಶ್ ಚಿನ್ನದ ಹೃದಯವುಳ್ಳ ವ್ಯಕ್ತಿ

  ಕಳೆದ ಕೆಲವು ದಿನಗಳ ಹಿಂದೆಯೇ ನಮ್ರತಾ ಎರಡು ಪೋಸ್ಟ್ ಹಾಕಿದ್ದರು. ''ಅನಾರೋಗ್ಯದಿಂದ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಇಬ್ಬರು ಮಕ್ಕಳಿಗೆ ಮಹೇಶ್ ಬಾಬು ಸಹಾಯ ಮಾಡಿದ್ದಾರೆ. ಅವರ ಚಿನ್ನದ ಹೃದಯವುಳ್ಳ ವ್ಯಕ್ತಿ'' ಎಂದು ಇನ್ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದರು.

  'ಸರ್ಕಾರು ವಾರಿ ಪಾಟ' ಚಿತ್ರೀಕರಣ ಆರಂಭ

  'ಸರ್ಕಾರು ವಾರಿ ಪಾಟ' ಚಿತ್ರೀಕರಣ ಆರಂಭ

  ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಚಿತ್ರೀಕರಣ ಮತ್ತೆ ಆರಂಭವಾಗಿದೆ. ಲಾಕ್‌ಡೌನ್‌ನಿಂದ ಬ್ರೇಕ್‌ನಲ್ಲಿದ್ದ ಮಹೇಶ್ ಬಾಬು ಮತ್ತೆ ಕ್ಯಾಮೆರಾ ಮುಂದೆ ಕೆಲಸ ಆರಂಭಿಸಿದ್ದಾರೆ. ಪರುಶುರಾಮ್ ನಿರ್ದೇಶನದ ಈ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿದ್ದಾರೆ. ಇತ್ತೀಚಿಗಷ್ಟೆ ನಮ್ರತಾ ಅವರು ಮಹೇಶ್ ಅವರ ಮೊದಲ ಶೂಟಿಂಗ್ ಚಿತ್ರವನ್ನು ಹಂಚಿಕೊಂಡಿದ್ದರು.

  SUPERSTAR SURYA Kannada Short Film Teaser | Rakshit | Praveen | Nikhil | Filmibeat Kannada
  ಜೇಮ್ಸ್ ಬಾಂಡ್ ನಿಧನಕ್ಕೆ ಸಂತಾಪ

  ಜೇಮ್ಸ್ ಬಾಂಡ್ ನಿಧನಕ್ಕೆ ಸಂತಾಪ

  ಜೇಮ್ಸ್ ಬಾಂಡ್ ಸರಣಿಯ ಮೊಟ್ಟ ಮೊದಲ ಜೇಮ್ಸ್ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ನಟ ಶಾನ್ ಕಾನರಿ ನಿಧನವಾಗಿದ್ದಾರೆ. ಶಾನ್ ಕಾನರಿ ಸಾವಿಗೆ ಮಹೇಶ್ ಬಾಬು ಸಂತಾಪ ಸೂಚಿಸಿದ್ದಾರೆ. ಮಿಸ್ ಯೂ ಸರ್ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

  English summary
  Telugu actor Mahesh babu saves of ailing girl by funding for her treatment. Mahesh babu wife namrata shares happy tale.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X