For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಬರ್ತ್‌ಡೇಗೆ 'ಪೋಕಿರಿ' ರೀ-ರಿಲೀಸ್ : ಬಾಕ್ಸಾಫೀಸ್ ಗಡ ಗಡ!

  |

  ಮಹೇಶ್‌ ಬಾಬು ಹುಟ್ಟುಹಬ್ಬದ ವಿಶೇಷವಾಗಿ ನಾಳೆ(ಆಗಸ್ಟ್ 9) ಸೂಪರ್ ಹಿಟ್ 'ಪೋಕಿರಿ' ಸಿನಿಮಾ ರೀ-ರಿಲೀಸ್ ಆಗ್ತಿದೆ. ಪ್ರಪಂಚದಾದ್ಯಂತ 175ಕ್ಕೂ ಹೆಚ್ಚು ಶೋಗಳು ಕನ್ಫರ್ಮ ಆಗಿದ್ದು, ಬಹುತೇಕ ಎಲ್ಲಾ ಶೋಗಳ ಟಿಕೆಟ್ಸ್ 2 ದಿನ ಮೊದಲೇ ಸೋಲ್ಡೌಟ್ ಆಗೋಗಿದೆ.

  'ಪೋಕಿರಿ' ಚಿತ್ರವನ್ನು ಮತ್ತೊಮ್ಮೆ ಸಿಲ್ವರ್ ಸ್ಕ್ರೀನ್‌ ಮೇಲೆ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ವಾರಕ್ಕೂ ಮೊದಲೇ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರುವಾಗಿದ್ದು, ದೇಶ ವಿದೇಶಗಳಲ್ಲಿ ರೆಸ್ಪಾನ್ಸ್ ಜೋರಾಗಿದೆ. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಎಲ್ಲಾ ಶೋಗಳ ಟಿಕೆಟ್ಸ್ ಬಿಕರಿಯಾಗಿ ಹೌಸ್‌ಫುಲ್ ಬೋರ್ಡ್ ಬಿದ್ದಿದೆ.

  ಮಹೇಶ್ ಬಾಬು 28ನೇ ಸಿನಿಮಾದಲ್ಲಿ ವಿಜಯ್ ಸೇತುಪತಿ: ಉಪ್ಪಿ ನಟಿಸುತ್ತಾ ಇಲ್ವಾ?ಮಹೇಶ್ ಬಾಬು 28ನೇ ಸಿನಿಮಾದಲ್ಲಿ ವಿಜಯ್ ಸೇತುಪತಿ: ಉಪ್ಪಿ ನಟಿಸುತ್ತಾ ಇಲ್ವಾ?

  16 ವರ್ಷಗಳ ಹಿಂದೆ ತೆರೆಕಂಡಿದ್ದ ಆಕ್ಷನ್ ಥ್ರಿಲ್ಲರ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ನಿರ್ದೇಶಕ ಪುರಿ ಜಗನ್ನಾಥ್ ಕೈ ಚಳಕ, ಮಹೇಶ್ ಬಾಬು ಪರ್ಫಾರ್ಮೆನ್ಸ್‌ ನೋಡಿ ಸಿನಿರಸಿಕರು ಕಳೆದು ಹೋಗಿದ್ದರು. ಇಂದಿಗೂ 'ಪೋಕಿರಿ' ಕ್ರೇಜ್ ಕಮ್ಮಿ ಆಗಿಲ್ಲ ಅನ್ನೋದು ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ನಲ್ಲಿ ಗೊತ್ತಾಗುತ್ತಿದೆ. ಪ್ರಿನ್ಸ್ ಕರಿಯರ್‌ನಲ್ಲೇ ಬ್ಲಾಕ್ ಬಸ್ಟರ್ ಆಗಿದ್ದ ಈ ಚಿತ್ರವನ್ನು ರೀ ಮಾಸ್ಟರ್‌ ವರ್ಷನ್‌ ಮತ್ತು 4K ಸ್ಪೆಷಲ್ ಎಫೆಕ್ಟ್ಸ್ ತಂತ್ರಜ್ಞಾನದಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ತರಲಾಗುತ್ತಿದೆ.

   175ಕ್ಕೂ ಅಧಿಕ ಶೋಗಳು

  175ಕ್ಕೂ ಅಧಿಕ ಶೋಗಳು

  ಹೌದು, ದಾಖಲೆಯ ಮಟ್ಟದಲ್ಲಿ ವಿಶ್ವದಾದ್ಯಂತ 'ಪೋಕಿರಿ' ಸಿನಿಮಾ ನಾಳೆ ಮರು ಬಿಡುಗಡೆಯಾಗುತ್ತಿದೆ. ನೆಚ್ಚಿನ ನಟನ ಸಿನಿಮಾವನ್ನು ಬಹಳ ಅದ್ಧೂರಿಯಾಗಿ ಅಭಿಮಾನಿಗಳು ಮತ್ತೆ ಬೆಳ್ಳಿ ಪರದೆಗೆ ತರುತ್ತಿದ್ದಾರೆ. ಅಡ್ವಾನ್ಸ್ ಟಿಕೆಟ್ ಬುಕಿಂಗ್‌ಗೆ ಸಿಕ್ಕಿರೋ ರೆಸ್ಪಾನ್ಸ್ ನೋಡ್ತಿದ್ರೆ, ಮತ್ತಷ್ಟು ಶೋಗಳನ್ನು ಹೆಚ್ಚಿಸುವ ಸಾಧ್ಯತೆಯಿದೆ.

  ಆಂಧ್ರದ ಐಟಿ ಮಂತ್ರಿ ಆಗುತ್ತಾರಾ ಸೂಪರ್‌ಸ್ಟಾರ್ ಮಹೇಶ್ ಬಾಬು?ಆಂಧ್ರದ ಐಟಿ ಮಂತ್ರಿ ಆಗುತ್ತಾರಾ ಸೂಪರ್‌ಸ್ಟಾರ್ ಮಹೇಶ್ ಬಾಬು?

   2006ರಲ್ಲಿ 'ಪೋಕಿರಿ' ಸೆನ್ಸೇನಷನ್

  2006ರಲ್ಲಿ 'ಪೋಕಿರಿ' ಸೆನ್ಸೇನಷನ್

  ಪುರಿ ಜಗನ್ನಾಥ್ ನಿರ್ದೇಶನದ 'ಪೋಕಿರಿ' ಚಿತ್ರದಲ್ಲಿ ಮಹೇಶ್‌ ಬಾಬು ಕೃಷ್ಣ ಮನೋಹರ್ ಐಪಿಎಸ್ ಪಾತ್ರದಲ್ಲಿ ಅಬ್ಬರಿಸಿದ್ದರು. ಪ್ರಕಾಶ್‌ ರಾಜ್ ವಿಲನ್ ಆಗಿ ಅಬ್ಬರಿಸಿದರೆ ಸಯ್ಯಾಜಿ ಶಿಂಧೆ, ನಾಸರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಅವತ್ತಿನ ಕಾಲಕ್ಕೆ ಟಾಲಿವುಡ್‌ನ ಹಳೇ ದಾಖಲೆಗಳನ್ನೆಲ್ಲಾ ಮುರಿದು 50 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ 'ಪೋಕಿರಿ' ಚಿತ್ರ ದಾಖಲೆ ಬರೆದಿತ್ತು. ತಮಿಳು, ಹಿಂದಿ, ಕನ್ನಡಕ್ಕೂ ರಿಮೇಕ್ ಆಗಿತ್ತು.

   ಭರ್ಜರಿ ಸೆಲೆಬ್ರೇಷನ್‌ಗೆ ಪ್ಲ್ಯಾನ್

  ಭರ್ಜರಿ ಸೆಲೆಬ್ರೇಷನ್‌ಗೆ ಪ್ಲ್ಯಾನ್

  ಮಹೇಶ್ ಬಾಬು ನಟನೆಯ ಹೊಸ ಸಿನಿಮಾ ರೀತಿಯಲ್ಲೇ ನಾಳೆ 'ಪೋಕಿರಿ' ಬರ್ತಿದೆ. ಅಭಿಮಾನಿಗಳು ಥಿಯೇಟರ್ ಅಂಗಳದಲ್ಲಿ ಸೆಲೆಬ್ರೇಷನ್‌ ಮಾಡಿ ಸ್ವಾಗತಿಸಲು ತಯಾರಿ ನಡೆಸಿದ್ದಾರೆ. ಬೆಂಗಳೂರಿನ ಅಂಜನ್ ಥಿಯೇಟರ್‌ನಲ್ಲಿ 2 ಶೋ ಫಿಕ್ಸ್ ಆಗಿದ್ದು, ಈಗಾಗಲೇ ಟಿಕೆಟ್ಸ್ ಖಾಲಿಯಾಗಿದೆ.

   'ಪೋಕಿರಿ' ಹೊಸ ದಾಖಲೆ

  'ಪೋಕಿರಿ' ಹೊಸ ದಾಖಲೆ

  ಅತಿ ಹೆಚ್ಚು ಥಿಯೇಟರ್‌ಗಳಲ್ಲಿ ಎರಡನೇ ಬಾರಿ ರೀ-ರಿಲೀಸ್ ಆಗುತ್ತಿರುವ ಸಿನಿಮಾ ಆಗಿ 'ಪೋಕಿರಿ' ಹೊಸ ದಾಖಲೆ ಬರೆದಿದೆ. ಇನ್ನು ಅಮೆರಿಕದ 17ಕ್ಕೂ ಅಧಿಕ ಪ್ರಾಂತ್ಯಗಳ 24 ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಆಗ್ತಿದ್ದು, 10 ದಿನ ಮೊದಲೇ ಟಿಕೆಟ್ಸ್ ಮಾರಾಟವಾಗಿತ್ತು. ಈ ಸಿನಿಮಾದಿಂದ ಬಂದ ಹಣವನ್ನು ಮಹೇಶ್‌ ಬಾಬು ಫೌಂಡೇಶನ್ ಮೂಲಕ ಸಾಮಾಜಿಕ ಕೆಲಸಗಳಿಗೆ ಬಳಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.

  English summary
  Mahesh Babu Starrer Pokiri Re Release Creates New Records. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X