Don't Miss!
- News
ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿಜವಾಯ್ತು ನಿರ್ದೇಶಕನ ಬಗ್ಗೆ ಮಹೇಶ್ ನುಡಿದಿದ್ದ ಭವಿಷ್ಯ: ವಾಟ್ಸ್‌ಆಪ್ ಚಾಟ್ ಸಾಕ್ಷಿ
ಮಹೇಶ್ ಬಾಬು ಒಳ್ಳೆಯ ನಟ ಎಂಬುದರ ಜೊತೆಗೆ ಒಳ್ಳೆಯ ಸಿನಿಮಾ ಪ್ರೇಮಿ ಮತ್ತು ಸಿನಿಮಾ ಪ್ರೇಕ್ಷಕ. ಯಾವುದೇ ಒಳ್ಳೆಯ ಸಿನಿಮಾ ಬಂದರೂ ತಪ್ಪದೆ ನೋಡುತ್ತಾರೆ ಮಹೇಶ್ ಬಾಬು. ತಮಗೆ ಸಿನಿಮಾ ಇಷ್ಟವಾದರೆ ಕೂಡಲೇ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅಥವಾ ಸಿನಿಮಾದ ನಟ-ನಿರ್ದೇಶಕರಿಗೆ ತಮ್ಮ ಅಭಿಪ್ರಾಯ ತಿಳಿಸುತ್ತಾರೆ.
ಹೀಗೆಯೇ 2017 ರಲ್ಲಿ ಸಿನಿಮಾ ಒಂದು ಇಷ್ಟವಾಗಿ ಆ ಸಿನಿಮಾದ ನಿರ್ದೇಶಕನಿಗೆ ಮಹೇಶ್ ಬಾಬು ವಾಟ್ಸ್‌ಅಪ್ ಸಂದೇಶ ಕಳಿಸಿ ಭವಿಷ್ಯ ನುಡಿದಿದ್ದರು. ಅದೀಗ ನಿಜವಾಗಿದೆ. ಈಗ ಆ ನಿರ್ದೇಶಕ ಮಹೇಶ್ ಬಾಬು ಮಾಡಿದ್ದ ವಾಟ್ಸ್‌ಅಪ್ ಸಂದೇಶದ ಸ್ಕ್ರೀನ್ ಶಾಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
67ನೇ
ರಾಷ್ಟ್ರೀಯ
ಸಿನಿಮಾ
ಪ್ರಶಸ್ತಿ
ಪೂರ್ಣ
ಪಟ್ಟಿ
ಇಲ್ಲಿದೆ
ನಿರ್ದೇಶಕ ವಂಶಿ ಪೈಡಿಪಲ್ಲಿಗೆ 2017 ರಲ್ಲಿ 'ಊಪಿರಿ' ಸಿನಿಮಾಕ್ಕಾಗಿ ಫಿಲಂಫೇರ್ ಪ್ರಶಸ್ತಿ ದೊರೆತಿತ್ತು. ಕೂಡಲೇ ವಂಶಿಗೆ ಸಂದೇಶ ಕಳುಹಿಸಿದ ಮಹೇಶ್ ಬಾಬು, 'ಈಗ ಫಿಲಂಫೇರ್ ಸಿಕ್ಕಿದೆ, ಮುಂದೆ ರಾಷ್ಟ್ರ ಪ್ರಶಸ್ತಿ ದೊರಕುತ್ತದೆ' ಎಂದಿದ್ದರು. ಅದೀಗ ನಿಜವಾಗಿದೆ.

ಅತ್ಯುತ್ತಮ ಮನೊರಂಜನಾ ಸಿನಿಮಾ 'ಮರ್ಹಷಿ'
ಮಹೇಶ್ ಬಾಬು ನಟನೆಯ 'ಮಹರ್ಷಿ' ಸಿನಿಮಾವನ್ನು ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿದ್ದರು. ಈ ಸಿನಿಮಾವು ಅತ್ಯುತ್ತಮ ಮನೊರಂಜನಾತ್ಮಕ ಸಿನಿಮಾ ವಿಭಾಗದಲ್ಲಿ ಈ ಬಾರಿ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ.

ವಂಶಿಗೆ ಅಭಿನಂದನೆ ಸಲ್ಲಿಸಿರುವ ಮಹೇಶ್ ಬಾಬು
ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ದೊರೆತ ಖುಷಿಯನ್ನು ಹಂಚಿಕೊಂಡಿರುವ ಮಹೇಶ್ ಬಾಬು, 'ಈ ಪ್ರತಿಷ್ಟಿತ ಪ್ರಶಸ್ತಿಯನ್ನು ಗೌರವ ಹಾಗೂ ವಿನಮ್ರತೆಯಿಂದ ಸ್ವೀಕರಿಸುತ್ತೇವೆ. ಸಾಮಾಜಿಕ ವಿಷಯವೊಂದನ್ನು ಬೆಳಕಿಗೆ ತಂದ ನಿರ್ದೇಶಕ ವಂಶಿ ಬಗ್ಗೆ ಹೆಮ್ಮೆಯಿದೆ. 'ಮಹರ್ಷಿ' ಸಿನಿಮಾಕ್ಕಾಗಿ ಕೆಲಸ ಮಾಡಿದ ಎಲ್ಲರಿಗೂ ಹಾಗೂ ಪ್ರೇಕ್ಷಕರಿಗೂ ಧನ್ಯವಾದ ಎಂದಿದ್ದಾರೆ.
67ನೇ
ರಾಷ್ಟ್ರೀಯ
ಸಿನಿಮಾ
ಪ್ರಶಸ್ತಿ:
ಕನ್ನಡಕ್ಕೆ
ಸಿಕ್ಕ
ಪ್ರಶಸ್ತಿಗಳೆಷ್ಟು?

2017 ರಲ್ಲಿಯೇ ಭವಿಷ್ಯ ನುಡಿದಿದ್ದ ಮಹೇಶ್ ಬಾಬು
ನಿರ್ದೇಶಕ ವಂಶಿ ಸಹ ಈ ಖುಷಿಯನ್ನು ಹಂಚಿಕೊಂಡಿದ್ದು, 2017 ರಲ್ಲಿ ಮಹೇಶ್ ಬಾಬು ವಂಶಿಗೆ ಕಳಿಸಿದ್ದ ವಾಟ್ಸ್‌ಆಪ್ ಸಂದೇಶದ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಆ ಸ್ಕ್ರೀನ್‌ಶಾಟ್‌ನಲ್ಲಿ 'ಈಗ ಫಿಲಂಫೇರ್ ಮುಂದೆ ರಾಷ್ಟ್ರಪ್ರಶಸ್ತಿ ಸಿಗುತ್ತದೆ' ಎಂದು ಮಹೇಶ್ ಬಾಬು ಭವಿಷ್ಯ ನುಡಿದಿದ್ದಾರೆ.
Recommended Video

ಪೂಜಾ ಹೆಗ್ಡೆ, ಅಲ್ಲರಿ ನರೇಶ್ ಸಹ ಇದ್ದಾರೆ
'ಮಹರ್ಷಿ' ಸಿನಿಮಾವು ಉದ್ಯಮಿಯೊಬ್ಬ ಮರಳಿ ಹಳ್ಳಿಗೆ ಬಂದು ಕೃಷಿಯಲ್ಲಿ ತೊಡಗಿಕೊಲ್ಳುವ ಕತೆಯುಳ್ಳ ಸಿನಿಮಾ. ಕೃಷಿ ಭೂಮಿ ಎಷ್ಟು ಅವಶ್ಯಕ. ಕೃಷಿ ಭೂಮಿಯನ್ನು ಕಬಳಿಸಲು ಕಾರ್ಪೊರೇಟರ್‌ಗಳು ಮಾಡುವ ಹುನ್ನಾರಗಳ ಬಗ್ಗೆ ಸಿನಿಮಾದಲ್ಲಿ ಬೆಳಕು ಚೆಲ್ಲಲಾಗಿದೆ. ಸಿನಿಮಾದಲ್ಲಿ ಮಹೇಶ್ ಬಾಬು, ಪೂಜಾ ಹೆಗ್ಡೆ, ಅಲ್ಲರಿ ನರೇಶ್, ಜಗಪತಿ ಬಾಬು, ಪ್ರಕಾಶ್ ರೈ ಇನ್ನೂ ಹಲವರು ನಟಿಸಿದ್ದಾರೆ.