For Quick Alerts
  ALLOW NOTIFICATIONS  
  For Daily Alerts

  ದುಬೈ ಏರ್‌ಪೋರ್ಟ್‌ನಿಂದ 'ಪ್ರಿನ್ಸ್' ಫೋಟೋ ಹಂಚಿಕೊಂಡ ನಮ್ರತಾ

  |

  ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತನ್ನ ಪತ್ನಿ ಮತ್ತು ಮಕ್ಕಳ ಜೊತೆ ದುಬೈನಲ್ಲಿ ಹಾಲಿಡೇ ಎಂಜಾಯ್ ಮಾಡಲು ಹೋಗಿದ್ದರು. ಕಳೆದ ಒಂದು ವಾರದಿಂದ ದುಬೈ ಪ್ರವಾಸದಲ್ಲಿದ್ದ ಪ್ರಿನ್ಸ್ ಕುಟುಂಬ ಹೈದರಾಬಾದ್‌ಗೆ ಹಿಂತಿರುಗಿದೆ.

  ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಜಾನೆ 3 ಗಂಟೆಗೆ ಮಹೇಶ್ ಬಾಬು ಅವರ ಫೋಟೋವೊಂದನ್ನು ಕ್ಲಿಕ್ಕಿಸಿರುವ ಪತ್ನಿ ನಮ್ರತಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಕ್ಯಾಪ್ಷನ್ ಹಾಕಿರುವ ನಮ್ರತಾ, ತನ್ನ ಪತಿ ರಾತ್ರಿ ವೇಳೆಯೂ ಎಷ್ಟು ಹ್ಯಾಂಡ್‌ಸಮ್ ಆಗಿ ಕಾಣಿಸ್ತಾರೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

  ಮಹೇಶ್ ಬಾಬು ಮದುವೆ ಫೋಟೋ ವೈರಲ್: 'ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ' ಎಂದ ಪತ್ನಿಮಹೇಶ್ ಬಾಬು ಮದುವೆ ಫೋಟೋ ವೈರಲ್: 'ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ' ಎಂದ ಪತ್ನಿ

  ''ಮುಂಜಾನೆ 3 ಗಂಟೆಗೆ ಯಾರು ಈ ರೀತಿ ಕಾಣಿಸಬಹುದು!!! ಇಂತಹ ಸುಂದರವಾದ ವ್ಯಕ್ತಿ ಎದುರಲ್ಲಿ ಕುಳಿತಾಗ ನಾವು ವಿಮಾನಕ್ಕಾಗಿ ಕಾಯುತ್ತಿದ್ದ ಸಮಯ ಹೇಗೆ ಕಳೆಯಿತು ಎಂದೇ ತಿಳಿದಿಲ್ಲ'' ಎಂದು ನಮ್ರತಾ ಪೋಸ್ಟ್ ಹಾಕಿದ್ದಾರೆ.

  ಮಹೇಶ್ ಬಾಬು ಅವರ ಈ ಫೋಟೋ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ನಮ್ರತಾ ಅವರ ಪೋಸ್ಟ್‌ಗೆ ನೆಟ್ಟಿಗರು ಫಿದಾ ಆಗಿದ್ದು, ಪ್ರಿನ್ಸ್ ಆಲ್ ಟೈಂ ಹ್ಯಾಂಡ್‌ಸಮ್ ಎನ್ನುತ್ತಿದ್ದಾರೆ.

  ಮಹೇಶ್ ಬಾಬು ಪತ್ನಿ ನಮ್ರತಾ ಅವರ ಸಹೋದರಿ ಶಿಲ್ಪಾ ಶಿರೋಡ್ಕರ್ ಅವರ ದುಬೈನಲ್ಲಿರುವ ಮನೆಗೆ ದೀಪಾವಳಿ ಹಬ್ಬದ ವಿಶೇಷವಾಗಿ ಹೋಗಿದ್ದರು. ಕಳೆದ ರಾತ್ರಿ (ನವೆಂಬರ್ 16) ಇಡೀ ಕುಟುಂಬಕ್ಕೆ ಒಟ್ಟಿಗೆ ಊಟಕ್ಕೆ ಹೊಗಿದ್ದೇವೆ ಎಂದು ನಮ್ರತಾ ಫೋಟೋ ಹಂಚಿಕೊಂಡಿದ್ದರು.

  ಪಾರ್ಟ್ನರ್ ಗಳನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ KL Rahul | Filmibeat Kannada

  ಅಂದ್ಹಾಗೆ, ಜನವರಿಯಿಂದ 'ಸರ್ಕಾರು ವಾರಿ ಪಾಟ' ಚಿತ್ರದ ಚಿತ್ರೀಕರಣವನ್ನು ಮಹೇಶ್ ಬಾಬು ಆರಂಭಿಸಲಿದ್ದಾರೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಶೂಟಿಂಗ್‌ಗೂ ಮುಂಚೆಯೇ ಈ ಚಿತ್ರದ ಸ್ಯಾಟ್‌ಲೈಟ್ ಹಕ್ಕು, ಡಿಜಿಟಲ್ ಹಕ್ಕು ಭಾರಿ ದೊಡ್ಡ ಬೆಲೆಗೆ ಸೇಲ್ ಆಗಿದೆ ಎಂದು ಹೇಳಲಾಗಿದೆ.

  English summary
  Telugu actor Mahesh Babu wife Namratha shares his husband photo at morning 3 am.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X