For Quick Alerts
  ALLOW NOTIFICATIONS  
  For Daily Alerts

  ನಟಿ ಪೂಜಾ ಹೆಗ್ಡೆ ಹುಟ್ಟುಹಬ್ಬ: 'ರಾಧೆ ಶ್ಯಾಮ್' ಸಿನಿಮಾದಿಂದ ಭರ್ಜರಿ ಗಿಫ್ಟ್

  |

  ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟಿ ಪೂಜಾ ಹೆಗಡೆಗೆ ಇಂದು ಹುಟ್ಟುಹಬ್ಬದ ಸಂಭ್ರಮ. ತೆಲುಗು ಚಿತ್ರರಂಗದಲ್ಲಿ ಭಾರಿ ಬೇಡಿಕೆ ಹೊಂದಿರುವ ನಟಿ ಪೂಜಾ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಪೂಜಾ ಸದ್ಯ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  ಇಂದು ಹುಟ್ಟುಹಬ್ಬದ ಪ್ರಯುಕ್ತ ರಾಧೆ ಶ್ಯಾಮ್ ಸಿನಿಮಾದಿಂದ ಭರ್ಜರಿ ಉಡುಗೊರೆ ಸಿಕ್ಕಿದೆ. ಹೌದು, ನಟಿ ಪೂಜಾ ಹೆಗ್ಡೆ ಲುಕ್ ಅನ್ನು ರಿವೀಲ್ ಮಾಡಲಾಗಿದೆ. ಚಿತ್ರದಲ್ಲಿ ಪೂಜಾ, ಪ್ರೇರಣಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಪ್ರದಾಯಸ್ಥ ಕುಟುಂಬದ ಹೆಣ್ಣುಮಗಳ ಪಾತ್ರವಾಗಿದ್ದು, ಪೂಜಾ ಈ ಸಿನಿಮಾದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

  ಯೋಗ ಮಾಡುತ್ತಿರುವ ವಿಡಿಯೋ ಹಂಚಿಕೊಂಡ ಪೂಜಾ ಹೆಗಡೆ: ಅಭಿಮಾನಿಗಳು ಫಿದಾ

  ನಟ ಪ್ರಭಾಸ್, ಪ್ರೇರಣಾ ಲುಕ್ ಅನ್ನು ರಿವೀಲ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಅಂದ್ಹಾಗೆ ರಾಧೆ ಶ್ಯಾಮ್ ಸಿನಿಮಾ ನಿರ್ದೇಶಕ ರಾಧೆಕೃಷ್ಣ ಕುಮಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. ಪುನರ್ಜನ್ಮದ ಕಥೆ ಇದಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಕೊರೊನಾ ಲಾಕ್ ಡೌನ್ ನಿಂದ ಚಿತ್ರೀಕರಣ ನಿಲ್ಲಸಲಾಗಿದೆ. ಇದೀಗ ಮತ್ತೆ ಚಿತ್ರೀಕರಣಕ್ಕೆ ಹೊರಡಲು ಸಿನಿಮಾತಂಡ ಸಿದ್ಧವಾಗಿದೆ.

  ಕಂಗನಾ ಅಭಿನಯದ ಜಯಲಲಿತಾ ಬಯೋಪಿಕ್ ಗೆ ಎದುರಾಗಿದೆ ದೊಡ್ಡ ಕಂಟಕ | Filmibeat Kannada

  ಈ ಸಿನಿಮಾ ಜೊತೆಗೆ ಪೂಜಾ 'ಮೋಸ್ಟ್ ಎಲಿಜೆಬಲ್ ಬ್ಯಾಚುಲರ್' ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಕಿಲ್ ಅಕ್ಕಿನೇನಿಗೆ ನಾಯಕಿಯಾಗಿ ಪೂಜಾ ನಟಿಸುತ್ತಿದ್ದಾರೆ. ಪೂಜಾ ಕೊನೆಯದಾಗಿ ತೆಲುಗಿನಲ್ಲಿ ಅಲಾ ವೈಕುಂಠಪುರಮುಲೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

  English summary
  Makers Unveil Pooja Hegde’s Look As Prerana in the Radhe Shyam Movie on Her Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X