twitter
    For Quick Alerts
    ALLOW NOTIFICATIONS  
    For Daily Alerts

    'ಇಂಡಸ್ಟ್ರಿ ಒಬ್ಬರದ್ದಲ್ಲ': ಚಿರಂಜೀವಿ ಸಕಾರ್ಯದ ಬಗ್ಗೆ ಮಂಚು ವಿಷ್ಣು ಅಪಸ್ವರ

    |

    ಆಂಧ್ರ ಪ್ರದೇಶ ಸರ್ಕಾರವು ಚಿತ್ರಮಂದಿರಗಳ ಟಿಕೆಟ್ ದರ ತಗ್ಗಿಸಿದ್ದಕ್ಕೆ ತೆಲುಗು ಚಿತ್ರರಂಗ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಇದೇ ಕಾರಣದಿಂದಲೇ ಹಲವು ನಿರ್ಮಾಪಕರು ಸಿನಿಮಾ ಬಿಡುಗಡೆಯನ್ನೇ ನಿಲ್ಲಿಸಿದ್ದರು. ಚಿತ್ರಮಂದಿರಗಳ ಮಾಲೀಕರಂತೂ ಚಿತ್ರಮಂದಿರಗಳನ್ನೇ ಮುಚ್ಚಿದರು.

    ನ್ಯಾಯಾಲಯ ಹೋರಾಟಕ್ಕೂ ಬಗ್ಗದೆ ಆಂಧ್ರ ಸಿಎಂ ಜಗನ್ ಚಿತ್ರಮಂದಿರಗಳ ಟಿಕೆಟ್ ದರ ತಗ್ಗಿಸಿದ ತಮ್ಮ ನಿರ್ಣಯದಿಂದ ಹಿಂದೆ ಸರಿಯಲಿಲ್ಲ. ಅಂತಿಮವಾಗಿ ತೆಲುಗು ಚಿತ್ರರಂಗದ ಹಿರಿಯ ನಟ ಚಿರಂಜೀವಿ ಸಿಎಂ ಜಗನ್ ಅನ್ನು ಭೇಟಿಯಾಗಿ ಜಗನ್ ಮನಪರಿವರ್ತನೆ ಮಾಡುವಲ್ಲಿ ಯಶಸ್ವಿಯಾದರು.

    ಜಗನ್ ಭೇಟಿ ಬಳಿಕ ಮಾತನಾಡಿದ ನಟ ಚಿರಂಜೀವಿ, ''ತೆಲುಗು ಚಿತ್ರರಂಗಕ್ಕೆ ಶೀಘ್ರದಲ್ಲಿಯೇ ಸಿಹಿ ಸುದ್ದಿ ದೊರಕಲಿದೆ. ಈಗ ಹೊರಡಿಸಿರುವ ಟಿಕೆಟ್ ದರಗಳ ಕುರಿತಾದ ಆದೇಶವನ್ನು ಜಗನ್ ಸರ್ಕಾರ ಪುನರ್‌ ಪರಿಶೀಲನೆ ಮಾಡಲು ಒಪ್ಪಿಕೊಂಡಿದೆ. ನಮ್ಮ ಮನವಿಗಳನ್ನು ಸರ್ಕಾರ ಪರಿಗಣಿಸಲಿದೆ'' ಎಂದಿದ್ದರು. ಇದನ್ನು ತೆಲುಗು ಚಿತ್ರರಂಗ ಸ್ವಾಗತಿಸಿತ್ತು. ಆದರೆ ಚಿರಂಜೀವಿ ಈ ಸಕಾರ್ಯದ ಬಗ್ಗೆಯೂ ಕೆಲವರು ನಂಜು ಕಾರಿದ್ದರು. ಈಗ ತೆಲುಗು ಚಿತ್ರರಂಗದ ಪ್ರಮುಖ ಸಂಘ 'ಮಾ' (ಮೂವಿ ಆರ್ಟಿಸ್ಟ್ ಅಸೋಸಿಯೇಷನ್) ಅಧ್ಯಕ್ಷರೇ ಚಿರಂಜೀವಿಯನ್ನು ಟೀಕಿಸಿದ್ದಾರೆ.

    ಅದು ಅವರ ವೈಯಕ್ತಿಕ ಭೇಟಿ: ಮಂಚು ವಿಷ್ಣು

    ಅದು ಅವರ ವೈಯಕ್ತಿಕ ಭೇಟಿ: ಮಂಚು ವಿಷ್ಣು

    ಮಾ ಅಧ್ಯಕ್ಷರಾಗಿ ಕೆಲ ತಿಂಗಳ ಹಿಂದಷ್ಟೆ ಆಯ್ಕೆ ಆಗಿರುವ ನಟ ಮಂಚು ವಿಷ್ಣು, ಚಿರಂಜೀವಿ, ಆಂಧ್ರ ಸಿಎಂ ಜಗನ್ ಅನ್ನು ಭೇಟಿಯಾಗಿದ್ದಕ್ಕೂ ತೆಲುಗು ಚಿತ್ರರಂಗಕ್ಕೂ ಸಂಭಂಧವಿಲ್ಲ. ಅದು ಅವರ ವೈಯಕ್ತಿಕ ಭೇಟಿ. ಕೆಲವರ ಲಾಭಕ್ಕಾಗಿ ಮಾಡಿಕೊಂಡಿರುವ ಭೇಟಿ'' ಎಂದು ಪರೋಕ್ಷವಾಗಿ ನಟ ಚಿರಂಜೀವಿ ಅವರನ್ನು ಟೀಕಿಸಿದ್ದಾರೆ ಮಂಚು ವಿಷ್ಣು.

    ಚಿತ್ರರಂಗ ಒಬ್ಬರದ್ದಲ್ಲ: ಮಂಚು ವಿಷ್ಣು

    ಚಿತ್ರರಂಗ ಒಬ್ಬರದ್ದಲ್ಲ: ಮಂಚು ವಿಷ್ಣು

    ಅಷ್ಟೇ ಅಲ್ಲದೆ, 'ತೆಲುಗು ಚಿತ್ರರಂಗ ಯಾರೊ ಒಬ್ಬರದ್ದು ಮಾತ್ರವಲ್ಲ. ಇಲ್ಲಿ ನಿರ್ಮಾಪಕ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಇನ್ನೂ ಕೆಲವು ಸಂಘಗಳು ಇವೆ. ಎಲ್ಲರ ಅಭಿಪ್ರಾಯವೂ ಮುಖ್ಯವಾಗುತ್ತದೆ. ಎಲ್ಲರೂ ಚರ್ಚಿಸಿ ತೀರ್ಮಾನ ತೆಗೆದುಕೊಂಡರಷ್ಟೆ ಅದು ತೆಲುಗು ಚಿತ್ರರಂಗದ ತೀರ್ಮಾನವಾಗುತ್ತದೆ. ಚಲನಚಿತ್ರ ವಾಣಿಜ್ಯ ಮಂಡಳಿ ಈ ವಿಷಯವಾಗಿ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾವು (ಮಾ ಸಂಘ) ಬದ್ಧವಾಗಿರುತ್ತೇನೆ'' ಎಂದಿದ್ದಾರೆ ಮಂಚು ವಿಷ್ಣು.

    ಸಭೆಗೆ ಕರೆಯದ್ದಕ್ಕೆ ಸಿಟ್ಟಾಗಿರುವ ಮಂಚು ವಿಷ್ಣು

    ಸಭೆಗೆ ಕರೆಯದ್ದಕ್ಕೆ ಸಿಟ್ಟಾಗಿರುವ ಮಂಚು ವಿಷ್ಣು

    ಜಗನ್ ಅವರನ್ನು ಭೇಟಿ ಮಾಡುವ ಮುನ್ನ ನಟ ಚಿರಂಜೀವಿ ತೆಲುಗು ಚಿತ್ರರಂಗದ ಪ್ರಮುಖರೊಟ್ಟಿಗೆ ಸಭೆ ನಡೆಸಿದ್ದರು. ಆ ಸಭೆಗೆ ಮಂಚು ವಿಷ್ಣುವನ್ನಾಗಲಿ ಅವರ ತಂದೆಯನ್ನಾಗಲಿ ಕರೆದಿರಲಿಲ್ಲ. ಜಗನ್ ಆಹ್ವಾನದ ಮೇರೆಗೆ ಚಿರಂಜೀವಿ ಒಬ್ಬರೇ ಜಗನ್ ಅನ್ನು ಭೇಟಿಯಾಗಿದ್ದರು. ಜಗನ್ ಭೇಟಿಯ ಬಳಿಕವೂ ಚಿರಂಜೀವಿ, ಮೋಹನ್ ಬಾಬುವನ್ನು ಸಭೆಗೆ ಕರೆದಿರಲಿಲ್ಲ ಬದಲಿಗೆ ಉದ್ಯಮದ ಪ್ರಮುಖ ನಿರ್ಮಾಪಕರು, ನಿರ್ಮಾಣ ಸಂಸ್ಥೆ ಹೊಮದಿದ ನಟರನ್ನಷ್ಟೆ ಸಭೆಗೆ ಕರೆದಿದ್ದರು. ಹಾಗಾಗಿ ಮಂಚು ವಿಷ್ಣು ಚಿರಂಜೀವಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಬೆಂಬಲ ಕೊಟ್ಟಿರಲಿಲ್ಲ ಚಿರಂಜೀವಿ

    ಬೆಂಬಲ ಕೊಟ್ಟಿರಲಿಲ್ಲ ಚಿರಂಜೀವಿ

    ಅದು ಮಾತ್ರವೇ ಅಲ್ಲದೆ ಮಂಚು ವಿಷ್ಣು ಮಾ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದಾಗ ನಟ ಚಿರಂಜೀವಿ ಮಂಚು ವಿಷ್ಣುಗೆ ಬೆಂಬಲ ನೀಡಿರಲಿಲ್ಲ ಬದಲಿಗೆ ನಟ ಪ್ರಕಾಶ್ ರೈಗೆ ಬೆಂಬಲ ಸೂಚಿಸಿದ್ದರು. ಅಸಲಿಗೆ ಪ್ರಕಾಶ್ ರೈ ಮೊದಲೇ ಹೋಗಿ ಚಿರಂಜೀವಿ ಅವರ ಬೆಂಬಲ ಕೋರಿದ್ದರು. ಬಳಿಕ ಮೋಹನ್‌ ಬಾಬು ಹೋಗಿ ತಮ್ಮ ಮಗನಿಗೆ ಬೆಂಬಲ ಕೇಳಿದರಾದರೂ ಚಿರಂಜೀವಿ ತಾವು ಪ್ರಕಾಶ್ ರೈಗೆ ಬಹಿರಂಗ ಬೆಂಬಲವನ್ನು ಈಗಾಗಲೇ ವ್ಯಕ್ತಪಡಿಸಿದ್ದಾಗಿ ಹೇಳಿದರು. ಇದು ಸಹ ಮಂಚು ವಿಷ್ಣು ಹಾಗೂ ಮೋಹನ್ ಬಾಬುಗೆ ಚಿರಂಜೀವಿ ಮೇಲೆ ಅಸಮಾಧಾನ ಹೆಚ್ಚಾಗಲು ಕಾರಣವಾಯ್ತು.

    English summary
    MAA president Manchu Vishnu shocking comments on Chiranjeevi meeting CM Jagan to discuss theater ticket pricing issue.
    Thursday, February 10, 2022, 9:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X