For Quick Alerts
  ALLOW NOTIFICATIONS  
  For Daily Alerts

  4 ದಿನಕ್ಕೆ ₹100 ಕೋಟಿ ಕ್ಲಬ್ ಸೇರಿದ ಮೆಗಾಸ್ಟಾರ್ ಸಿನಿಮಾ 'ಗಾಡ್‌ಫಾದರ್': ಕರ್ನಾಟಕದ ಪಾಲು ಎಷ್ಟು?

  |

  ಮೆಗಾಸ್ಟಾರ್ ಚಿರಂಜೀವಿ ಸಿನಿಮಾ 'ಗಾಡ್‌ಫಾದರ್' ಮೇಲೆ ಮೆಗಾಫ್ಯಾನ್ಸ್ ಕಣ್ಣಿಟ್ಟಿದೆ. ಚಿರಂಜೀವಿ ಹಾಗೂ ಸಲ್ಮಾನ್ ಖಾನ್ ಕಾಂಬಿನೇಷನ್ ಬಾಕ್ಸಾಫೀಸ್‌ನಲ್ಲಿ ಹೇಗೆಲ್ಲಾ ಸದ್ದು ಮಾಡಬಹುದು ಅನ್ನೋ ಕುತೂಹಲ ಇನ್ನೂ ಕಮ್ಮಿಯಾಗಿಲ್ಲ.

  'ಗಾಡ್‌ಫಾದರ್' ಸಿನಿಮಾ ರಿಲೀಸ್ ಆಗಿ 4 ದಿನಗಳಾಗಿವೆ. ಮೊದಲ ಎರಡು ದಿನಗಳಲ್ಲೇ 'ಗಾಡ್‌ಫಾದರ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ವಿಶ್ವದಾದ್ಯಂತ ₹60 ಕೋಟಿ ಕಲೆಕ್ಷನ್ ಮಾಡಿತ್ತು. ಈಗ ನಾಲ್ಕು ದಿನಗಳಲ್ಲಿ 'ಗಾಡ್‌ಫಾದರ್' ಸಿನಿಮಾ ₹100 ಕೋಟಿಯನ್ನು ಬಾಚಿಕೊಂಡಿದೆ.

  ಮೆಗಾಸ್ಟಾರ್ ಚಿರಂಜೀವಿಗೆ 'ಗಾಡ್‌ಫಾದರ್' ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತು. ದಸರಾ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಆಗಿದ್ದರಿಂದ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಅಷ್ಟಕ್ಕೂ 'ಗಾಡ್‌ಫಾದರ್' ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಮಾಡಿದೆ? ಈ ನಾಲ್ಕು ದಿನಗಳಲ್ಲಿ ಕರ್ನಾಟಕದ ಕಲೆಕ್ಷನ್ ಎಷ್ಟು? ಅನ್ನೋದನ್ನು ತಿಳಿಯಲು ಮುಂದೆ ಓದಿ.

  'ಗಾಡ್‌ಫಾದರ್' ಬಾಕ್ಸಾಫೀಸ್‌ನಲ್ಲಿ ಚಿಂದಿ

  'ಗಾಡ್‌ಫಾದರ್' ಬಾಕ್ಸಾಫೀಸ್‌ನಲ್ಲಿ ಚಿಂದಿ

  ಮೆಗಾಸ್ಟಾರ್ ಗ್ಯಾಪ್ ಕೊಟ್ಟು ಸಿನಿಮಾಗೆ ಮರಳಿದ್ದರು. ಅಲ್ಲಿಂದ ಚಿರಂಜೀವಿ ಸಿನಿಮಾ ಕರಿಯರ್‌ನಲ್ಲಿ ಏರಿಳಿತಗಳನ್ನು ಕಂಡಿದ್ದಾರೆ. 'ಆಚಾರ್ಯ' ಹೀನಾಯ ಸೋಲಿನ ಬಳಿಕ ಈ ಸಿನಿಮಾ ಗೆಲ್ಲಲ್ಲೇ ಬೇಕಿತ್ತು. ಆದರೆ, ಮಲಯಾಳಂ ಸಿನಿಮಾ 'ಲೂಸಿಫರ್' ರಿಮೇಕ್ ಮಾಡುತ್ತಿರುವುದರಿಂದ ಈ ಸಿನಿಮಾ ಗೆಲುವಿನ ಬಗ್ಗೆ ಬೆರಗು ಕಣ್ಣುಗಳಿಂದಲೇ ನೋಡುತ್ತಿದ್ದರು. ಆದರೆ, ಆ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗಿದೆ. ನಾಲ್ಕು ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ.

  'ಗಾಡ್‌ಫಾದರ್' ₹100 ಕೋಟಿ ಕಲೆಕ್ಷನ್

  'ಗಾಡ್‌ಫಾದರ್' ₹100 ಕೋಟಿ ಕಲೆಕ್ಷನ್

  ಚಿರಂಜೀವಿ ಅಭಿನಯದ 'ಗಾಡ್‌ಫಾದರ್' ಸಿನಿಮಾ ₹100 ಕೋಟಿ ಕ್ಲಬ್ ಸೇರಿಕೊಂಡಿದೆ. ಹಿಂದಿ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು. ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ನಟಿಸಿದ್ದರಿಂದ 'ಗಾಡ್‌ಫಾದರ್' ಸಿನಿಮಾವನ್ನು ಹಿಂದಿಯಲ್ಲೂ ರಿಲೀಸ್ ಮಾಡಲಾಗಿತ್ತು. ಆದರೆ, ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ ಮೋಡಿ ಮಾಡಿಲ್ಲ. ತೆಲುಗು ವರ್ಷ ಭರ್ಜರಿ ಕಲೆಕ್ಷನ್ ಮಾಡಿದೆ. ನಾಲ್ಕು ದಿನಗಳಲ್ಲಿ ವಿಶ್ವದಾದ್ಯಂತ ₹100 ಕೋಟಿ ಕಲೆ ಹಾಕುವಲ್ಲಿ ಯಶಸ್ವಿಯಾಗಿದೆ. ಇನ್ನು 5ನೇ ದಿನ (ಅಕ್ಟೋಬರ್ 09) ಕೂಡ ಅತೀ ಹೆಚ್ಚು ಗಳಿಕೆ ಮಾಡುವ ನಿರೀಕ್ಷೆಯಿದೆ. ಸದ್ಯ ಚಿತ್ರತಂಡ ಅಧಿಕೃತವಾಗಿ ₹100 ಕೋಟಿ ಕ್ಲಬ್ ಸೇರಿದೆ ಎಂದು ಹೇಳಿದೆ.

  ಕರ್ನಾಟಕದಲ್ಲಿ 'ಗಾಡ್‌ಫಾದರ್' ಗಳಿಕೆ ಎಷ್ಟು?

  ಕರ್ನಾಟಕದಲ್ಲಿ 'ಗಾಡ್‌ಫಾದರ್' ಗಳಿಕೆ ಎಷ್ಟು?

  'ಗಾಡ್‌ಫಾದರ್' ವಿಶ್ವದ ನಾನಾ ಕಡೆಗಳಲ್ಲಿ ರಿಲೀಸ್ ಆಗಿದೆ. ಆದರೆ, ಕರ್ನಾಟಕದಲ್ಲೂ ತೆಲುಗು ಸಿನಿಮಾದ ಕಲೆಕ್ಷನ್ ಅಷ್ಟೇ ಜೋರಾಗಿರುತ್ತೆ. ಕೋಟಿಗಳಲ್ಲೇ ಬ್ಯುಸಿನೆಸ್ ಮಾಡುತ್ತೆ. ಬಿಡುಗಡೆಯಾದ ನಾಲ್ಕು ದಿನಗಳಲ್ಲಿ 'ಗಾಡ್‌ಫಾದರ್' ₹3.90 ಕೋಟಿ ಕಲೆಕ್ಷನ್ ಆಗಿದೆ ಎನ್ನಲಾಗಿತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.

  ಮೊದಲ ದಿನ ₹2.10 ಕೋಟಿ
  ಎರಡನೇ ದಿನ ₹0.60 ಕೋಟಿ
  ಮೂರನೇ ದಿನ ₹0.50 ಕೋಟಿ
  ನಾಲ್ಕನೇ ದಿನ ₹0.70 ಕೋಟಿ
  ಒಟ್ಟು ₹3.90 ಕೋಟಿ

  ಸಲ್ಮಾನ್ ಖಾನ್‌ಗೆ ಚಿರಂಜೀವಿ ಧನ್ಯವಾದ

  ಸಲ್ಮಾನ್ ಖಾನ್‌ಗೆ ಚಿರಂಜೀವಿ ಧನ್ಯವಾದ

  'ಗಾಡ್‌ಫಾದರ್' ಸಿನಿಮಾದಲ್ಲಿ ಚಿರಂಜೀವಿ ಜೊತೆ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದು ಗೊತ್ತೇ ಇದೆ. ಇಲ್ಲಿ ಮಸೂದ್ ಬಾಯ್ ಅವತಾರದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ನಟಿಸಿದ್ದರೂ, ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಮಾತ್ರ 'ಗಾಡ್‌ಫಾದರ್' ಮೋಡಿ ಮಾಡುತ್ತಿಲ್ಲ. ಕೇವಲ 5 ಕೋಟಿ ರೂ. ಆಸು-ಪಾಸಿನಲ್ಲಿ ಗಳಿಸಿದೆ ಎನ್ನಲಾಗಿದೆ.

  English summary
  Mega Star Chiranjeevi Starrer Godfather Worldwide Collection 100Crore In Day 4, Know More.
  Sunday, October 9, 2022, 21:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X