Don't Miss!
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- News
Namma Metro:ರೈಲ್ವೆ ಹಳಿಗೆ ಅಡ್ಡಲಾಗಿ ವೆಬ್ ಗರ್ಡರ್ ನಿರ್ಮಿಸಿ BMRCL, ಏನಿದು?
- Automobiles
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೆಗಾ vs ಅಲ್ಲು: ಚಿರಂಜೀವಿ ಛಾಯೆಯಿಂದ ಹೊರ ಬರ್ತಿದ್ದಾರಾ ಅಲ್ಲು ಅರ್ಜುನ್? ಚಿರು ಹೇಳಿದ್ದಿಷ್ಟು
ಟಾಲಿವುಡ್‌ನಲ್ಲಿ ಮೆಗಾ ಫ್ಯಾಮಿಲಿ ಹಾಗೂ ಅಲ್ಲು ಫ್ಯಾಮಿಲಿ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಎಲ್ಲರೂ ಸಂಬಂಧಿಕರೇ ಆಗಬೇಕು. ಚಿರಂಜೀವಿ ಹಾಕಿದ ಹಾದಿಯಲ್ಲೇ ಎರಡೂ ಕುಟುಂಬ ಸದಸ್ಯರು ಚಿತ್ರರಂಗದಲ್ಲಿ ಹಾದು ಬಂದಿದ್ದಾರೆ. ಆದರೆ ಕೆಲ ದಿನಗಳಿಂದ ಎರಡೂ ಫ್ಯಾಮಿಲಿ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.
ಅಲ್ಲು ಅರ್ಜುನ್ ಮೆಗಾ ಛಾಯೆಯಿಂದ ಹೊರ ಬಂದು ಸ್ವತಂತ್ರವಾಗಿ ಗುರ್ತಿಸಿಕೊಳ್ಳಲು ಪ್ರಯತ್ನಿಸುತ್ತಿದ್ಧಾರೆ ಎನ್ನುವ ಗುಸು ಗುಸು ಕೂಡ ಕೇಳಿ ಬರ್ತಿದೆ. ಕೆಲ ದಿನಗಳಿಂದ ಎರಡೂ ಫ್ಯಾಮಿಲಿ ಸದಸ್ಯರು ಒಟ್ಟಿಗೆ ಕಾಣಿಸಿಕೊಳ್ಳದೇ ಇರುವುದು, ಅಹಾ ಓಟಿಟಿ ಫ್ಲಾಟ್‌ಫಾರ್ಮ್ ಶೋನಲ್ಲಿ ಬಾಲಕೃಷ್ಣ ಹೋಸ್ಟ್ ಆಗಿ ಕಾಣಿಸಿಕೊಂಡಿರುವುದು ಇಂತಹ ಗಾಳಿಸುದ್ದಿಗಳಿಗೆ ಮತ್ತಷ್ಟು ತುಪ್ಪ ಸುರಿದಂತೆ ಆಗುತ್ತಿದೆ. ಅದೊಂದು ಕಾರ್ಯಕ್ರಮದಲ್ಲಿ ಪವನ್ ಕಲ್ಯಾಣ್ ಹೆಸರನ್ನು ಅಲ್ಲು ಅರ್ಜುನ್ ಹೇಳಲಿಲ್ಲ. ಎರಡೂ ಫ್ಯಾಮಿಲಿಗಳ ನಡುವೆ ವೈಮನಸ್ಸು ಮೂಡಿದೆ ಎನ್ನು ಟಾಕ್ ಫಿಲ್ಮ್‌ನಗರ್‌ನಲ್ಲಿ ಜೋರಾಗಿ ಕೇಳಿ ಬರ್ತಿದೆ.
5
ದಿನದಲ್ಲೇ
₹100
ಕೋಟಿ
ಕ್ಲಬ್
ಸೇರಿದ
'ವಾಲ್ತೇರು
ವೀರಯ್ಯ':
ಬಾಲಯ್ಯ
ಸಿನಿಮಾದ
ಕಥೆಯೇನು?
ಮೆಗಾಸ್ಟಾರ್ ಚಿರಂಜೀತಿ ಸದ್ಯ 'ವಾಲ್ತೇರು ವೀರಯ್ಯ' ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಇಂತಹ ಸಮಯದಲ್ಲೇ ಸಂದರ್ಶನವೊಂದರಲ್ಲಿ ಮೆಗಾ ವರ್ಸಸ್ ಅಲ್ಲು ಫ್ಯಾಮಿಲಿ ಎನ್ನುವುದರ ಬಗ್ಗೆ ಚಿರು ಸ್ಪಂದಿಸಿದ್ದಾರೆ.

ಎಲ್ಲರೂ ಕ್ರಿಸ್‌ಮಸ್ ಆಚರಿಸಿದ್ರು
ಗಾಳಿಸುದ್ದಿಗಳ ಬಗೆಗಿನ ಪ್ರಶ್ನೆಗಳಿಗೆ ಚಿರು ತಮ್ಮದೇ ಸ್ಟೈಲ್‌ನಲ್ಲಿ ಉತ್ತರಿಸಿದ್ದಾರೆ. "ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ನನ್ನ ಉತ್ತರ ಒಂದೇ, ಈ ಸಂದರ್ಶನ ಮುಗಿದ ನಂತರ ನಾನು, ನನ್ನ ಪತ್ನಿ ಸುರೇಖಾ ಹೋಗಿ ಅಲ್ಲು ಅರವಿಂದ್‌ನ ಭೇಟಿ ಮಾಡುತ್ತಿದ್ದೇವೆ, ಬರ್ತ್‌ಡೇ ವಿಶ್ ಮಾಡುತ್ತಿದ್ದೇವೆ. ನಿಮ್ಮ ಪ್ರಶ್ನೆಗೆ ಇಷ್ಟು ಉತ್ತರ ಸಾಕು ಎನಿಸುತ್ತದೆ. ಇತ್ತೀಚೆಗೆ ನಮ್ಮ ಮನೆಯಲ್ಲಿ ಕ್ರಿಸ್‌ಮಸ್ ಆಚರಿಸಿದ್ದೆವು. ಹಬ್ಬಕ್ಕೆ ಅಲ್ಲು ಅರ್ಜುನ್, ರಾಮ್‌ಚರಣ್, ತೇಜ್ ವರುಣ್, ವೈಷ್ಣವ್ ಹೀಗೆ ಎಲ್ಲಾ ಕಜೀನ್ಸ್ ಬಂದಿದ್ದರು. ಒಟ್ಟಿಗೆ ಸೇರಿ ಕ್ರಿಸ್‌ಮಸ್ ಸೆಲಬ್ರೇಟ್ ಮಾಡಿದ್ರು. ಸಂತೋಷದಿಂದ ಕಾಲ ಕಳೆದರು. ಫೋಟೊ ಕ್ಲಿಕ್ಕಿಸಿಕೊಂಡಿದ್ದರು".

ಎಲ್ರೂ ನನ್ನ ಹೆಸ್ರು ಹೇಳಬೇಕಾಗಿಲ್ಲ
"ಇನ್ನು ಪ್ರೊಫೇಷನ್ ವಿಚಾರಕ್ಕೆ ಬಂದರೆ ಅವರವರ ಪ್ರಯತ್ನ ಅವ್ರು ಮಾಡುತ್ತಿದ್ದಾರೆ. ಯಾರ ಬೆಳವಣಿಗೆ ಅವರದ್ದು. ಅವರವರ ಸಾಧನೆಗಾಗಿ ಅವ್ರು ಪ್ರಯತ್ನಿಸುವುದರಲ್ಲಿ ತಪ್ಪಿಲ್ಲ. ಪವನ್ ಕಲ್ಯಾಣ್‌ಗಿಂತ ನಾನು ಹೆಚ್ಚು ಎಂದು, ನಟನಾಗಿ ಅವನು ಬೆಳೆಯಬೇಕು ಎಂದು ಎಲ್ಲರಿಗಿಂತ ಚರಣ್, ಬನ್ನಿ, ವರುಣ್, ತೇಜ್, ವೈಷ್ಣವ್ ಮುಂದಿನ ಸಾಲಿನಲ್ಲಿ ಇರಬೇಕು ಎಂದು ಪ್ರಯತ್ನಿಸಿದರೆ ನಾವು ಸ್ವಾಗತಿಸುತ್ತೇವೆ. ಆ ಹಾದಿಯಲ್ಲಿ ನನ್ನ ಹೆಸ್ರು ಹೇಳಿದ್ರಾ? ಇಲ್ವಾ? ಅಂದ್ರೆ ಹೇಳ್ತಾರೆ. ಆದರೆ ಎಷ್ಟು ಬಾರಿ ಹೇಳಬೇಕು. ನಮ್ಮ ತಂದೆ, ನಮ್ಮ ತಂದೆ, ಅಂತ ಪದೇ ಪದೇ ಹೇಳಿದ್ರೆ ಚರಣ್‌ನ ಬೈತಾರೆ. ಹಾಗಂತ ಹೆಸ್ರು ಹೇಳದಿದ್ದರೆ ನಮ್ಮ ನಡುವೆ ವೈಮನಸ್ಸು ಇದೆ ಎಂದು ಅರ್ಥ ಅಲ್ಲ. ಮನೆಯಲ್ಲಿ ನಾವು ಒಟ್ಟಿಗೆ ತಿನ್ನುತ್ತೇವೆ. ಕೈತುತ್ತು ತಿನ್ನಿಸುತ್ತೇವೆ. ಅದು ಎಲ್ಲರಿಗೂ ಗೊತ್ತಾಗಬೇಕು ಅಂತೇನು ಇಲ್ಲ"

ಅಹಾ ಶುರು ಮಾಡಿದ್ದರಲ್ಲಿ ತಪ್ಪಿಲ್ಲ
ಪ್ರೋಫೆಷನ್, ಬ್ಯುಸಿನೆಸ್‌ಗೆ ವಿಚಾರದಲ್ಲಿ ಅಲ್ಲು ಅರವಿಂದ್ ಹೋಗಿ ಬಾಲಕೃಷ್ಣ ಅವರನ್ನು ಭೇಟಿ ಮಾಡಿದ್ದಕ್ಕೆ ಈ ಪ್ರಶ್ನೆ ಬಂತು ಅಂತೀರಾ? ಎನ್ನುವ ಪ್ರಶ್ನೆಗೆ "ನಿಜ ಹೇಳಬೇಕು ಅಂದ್ರೆ, ಅಹಾ ಶುರು ಮಾಡಿದ್ದರಲ್ಲಿ ತಪ್ಪಿಲ್ಲ. ಅಹಾ ಎಲ್ಲರದ್ದು ಕೂಡ. ನನಗಿರುವ ಬ್ಯುಸಿ ಶೆಡ್ಯೂಲ್ ಕಾರಣಕ್ಕೆ ಅವ್ರು ಬಾಲಕೃಷ್ಣ ಅವರನ್ನು ಅನ್‌ಸ್ಟಾಪಬಲ್ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಅದೇ ರೀತಿ ನಾನು ಬ್ಯುಸಿ ಇರುವುದರಿಂದ ನನ್ನನ್ನು ಕರೆಯದೇ ಇರಬಹುದು. ಅಷ್ಟೇ, ಅದುಬಿಟ್ಟು ಬಾಲಕೃಷ್ಣನ ಆಯ್ಕೆ ಮಾಡಿಕೊಂಡ್ರು ಅಂದ ಮಾತ್ರಕ್ಕೆ ನಮ್ಮಲ್ಲಿ ಭಿನ್ನಾಭಿಪ್ರಾಯ ಇದೆ ಎಂದು ಅರ್ಥ ಅಲ್ಲ.

ಬ್ರ್ಯಾಂಡ್ ನೇಮ್ ಸೃಷ್ಟಿಸಿಕೊಳ್ಳಬೇಕು
ನಟರಾಗಿ ಯಾರಿಗೆ ಅವ್ರು ತಮ್ಮ ಬ್ರ್ಯಾಂಡ್ ನೇಮ್ ಸೃಷ್ಟಿಸಿಕೊಳ್ಳಬೇಕು. ಕೊನೆಗೆ ಅವ್ರು ಬೆಳೆಯಬೇಕು ಅಂದ್ರೆ ಮನಸಾರೆ ಸ್ವಾಗತಿಸುತ್ತೇನೆ. ಅವರೆಲ್ಲರೂ ನನ್ನ ಮಕ್ಕಳೇ" ಎಂದು ಚಿರಂಜೀವಿ ಹೇಳಿದ್ದಾರೆ. ಮೆಗಾಸ್ಟಾರ್ ನಟನೆಯ 'ವಾಲ್ತೇರು ವೀರಯ್ಯ' ಸಿನಿಮಾ 5 ದಿನಕ್ಕೆ 108 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. 'ವೀರಸಿಂಹ ರೆಡ್ಡಿ' ಎದುರು ಸಂಕ್ರಾಂತಿ ಫೈಟ್‌ನಲ್ಲಿ ವೀರಯ್ಯ ಗೆದ್ದಿದ್ದಾನೆ.