For Quick Alerts
  ALLOW NOTIFICATIONS  
  For Daily Alerts

  ಮೊಮ್ಮಕ್ಕಳ ಜೊತೆ KFC ಚಿಕ್ಕನ್ ತಯಾರಿಸಿದ ಮೆಗಾಸ್ಟಾರ್ ಚಿರಂಜೀವಿ

  |

  ಕೊರೊನಾ ಲಾಕ್‌ಡೌನ್ ಆದ್ಮೇಲೆ ಚಿತ್ರೀಕರಣಕ್ಕೆ ಬ್ರೇಕ್ ನೀಡಿರುವ ಮೆಗಾಸ್ಟಾರ್ ಚಿರಂಜೀವಿ ಮೊಮ್ಮಕ್ಕಳ ಜೊತೆ ಮನೆಯಲ್ಲಿಯೇ ಸಮಯ ಕಳೆಯುತ್ತಿದ್ದಾರೆ.

  ವಿಶೇಷ ಅಂದ್ರೆ ಮೊಮ್ಮಕ್ಕಳ ಜೊತೆ ಸೇರಿ ನಟ ಚಿರಂಜೀವಿ ಕೆಎಫ್‌ಸಿ ಚಿಕ್ಕನ್ ತಯಾರಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  'ಆಚಾರ್ಯ' ನಿರ್ದೇಶಕ-ನಿರ್ಮಾಪಕರ ಮುಂದೆ ಕಠಿಣ ಬೇಡಿಕೆಯಿಟ್ಟ ಚಿರಂಜೀವಿ

  ಈಗಿನ ಟ್ರೆಂಡ್‌ನಲ್ಲಿ ಕೆಎಫ್‌ಸಿ ಚಿಕ್ಕನ್ ಅಂದ್ರೆ ಮಕ್ಕಳು ಹೆಚ್ಚು ಇಷ್ಟ ಪಡ್ತಾರೆ. ಅದನ್ನು ಮನೆಯಲ್ಲಿ ಮಾಡುವುದು ಸ್ವಲ್ಪ ಸವಾಲಿನ ಕೆಲಸ. ಅಂತಹದ್ರಲ್ಲಿ ಚಿರಂಜೀವಿ ಅವರ ಮೊಮ್ಮಕ್ಕಳಿಬ್ಬರು ಸಲೀಸವಾಗಿ KFC ಚಿಕ್ಕನ್ ಮಾಡಿದ್ದಾರೆ.

  ಮೊಮ್ಮಕ್ಕಳಿಗೆ ಚಿರಂಜೀವಿ ಸಹ ಸಾಥ್ ನೀಡಿದ್ದು, ಮಕ್ಕಳ ಪ್ರತಿಭೆ ಕಂಡು ಆಶ್ಚರ್ಯವಾಗಿದ್ದಾರೆ. ''ಎಕ್ಸ್‌ಪರ್ಟ್‌ ರೀತಿ ಕೆಎಫ್‌ಸಿ ಚಿಕ್ಕನ್ ತಯಾರಿಸುತ್ತಿದ್ದೀರಾ, ನೀವು ಆರಾಮಾಗಿ ರಸ್ತೆ ಬದಿ ಗಾಡಿ ಹಾಕ್ಕೊಂಡು ಕೆಎಫ್‌ಸಿ ಚಿಕ್ಕನ್ ಮಾಡಬಹುದು'' ಎಂದು ಮೆಚ್ಚಿಕೊಂಡಿದ್ದಾರೆ.

  ಕೊರಟಲಾ ಶಿವ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಆಚಾರ್ಯ' ಸಿನಿಮಾದಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಈ ತಿಂಗಳ ಮಧ್ಯದಲ್ಲಿ ಶೂಟಿಂಗ್ ಆರಂಭವಾಗುವ ಸಾಧ್ಯತೆ ಇದ್ದು, ಮೆಗಾಸ್ಟಾರ್ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

  ಚಿರಂಜೀವಿಗೆ ನಾಯಕಿಯಾಗಿ ಕಾಜಲ್ ಅಗರ್‌ವಾಲ್ ನಟಿಸುತ್ತಿದ್ದು, ಅತಿಥಿ ಪಾತ್ರದಲ್ಲಿ ರಾಮ್ ಚರಣ್ ತೇಜ ಕಾಣಿಸಿಕೊಳ್ಳಲಿದ್ದಾರೆ.

  English summary
  Video: Megastar Chiranjeevi preparing KFC chicken at home with granddaughter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X