Don't Miss!
- Technology
ಇಂಥಾ ಸ್ಮಾರ್ಟ್ಫೋನ್ ಖರೀದಿಸಿದ್ರೆ, ಫೋನ್ ಹ್ಯಾಂಗ್ ಆಗುವ ಸಮಸ್ಯೆ ಇರಲ್ಲ!
- News
ಕುಕ್ಕರ್, ಸ್ಟೌವ್, ನಿಕ್ಕರ್ ಕೊಟ್ಟು ಜನರನ್ನು ಯಾಮರಿಸುತ್ತಿದ್ದಾರೆ: ಸುಧಾಕರ್ ವಿರುದ್ಧ ಕೆ.ಪಿ.ಬಚ್ಚೇಗೌಡ ಆರೋಪ
- Sports
ಭಾರತ vs ಆಸ್ಟ್ರೇಲಿಯಾ ಟೆಸ್ಟ್: ಟೀಮ್ ಇಂಡಿಯಾ ಆಟಗಾರರಿಗೆ ನೆಟ್ಸ್ನಲ್ಲಿ ಸ್ಪಿನ್ ಅಗ್ನಿ ಪರೀಕ್ಷೆ!
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Automobiles
ಹಳೆಯ ಕಾರನ್ನು ಮಾರಾಟ ಮಾಡುತ್ತಿದ್ದೀರಾ?: ಟಾಟಾದಿಂದ ದೊಡ್ಡ ಘೋಷಣೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Waltair Veerayya Twitter Review : ಚಿರಂಜೀವಿ ಸಿನಿಮಾ 'ವಾಲ್ತೇರು ವೀರಯ್ಯ' ಹೇಗಿದೆ? ಟ್ವಿಟ್ಟರ್ ಹೇಳುತ್ತಿರೋದೇನು?
ನಟ ಮೆಗಾಸ್ಟಾರ್ ಚಿರಂಜೀವಿಯ 'ವಾಲ್ತೇರು ವೀರಯ್ಯ' ಸಿನಿಮಾ ಇಂದು ಅಂದರೆ ಜನವರಿ 13 ರಂದು ತೆರೆಗೆ ಬಂದಿದ್ದು ಆಂಧ್ರ, ತೆಲಂಗಾಣ, ತಮಿಳುನಾಡು ಸೇರಿದಂತೆ ಇನ್ನೂ ಹಲವೆಡೆ ಅರ್ಲಿ ಮಾರ್ನಿಂಗ್ ಶೋಗಳ ಪ್ರದರ್ಶನ ಆಗಿದೆ.
ಆಚಾರ್ಯ, 'ಗಾಡ್ ಫಾದರ್' ಸಿನಿಮಾಗಳ ಸರಣಿ ಸೋಲಿನ ಬಳಿಕ ಚಿರಂಜೀವಿಯ ಈ ಸಿನಿಮಾ ಆದರೂ ಹಿಟ್ ಆಗುತ್ತದೆಯೇ ಎಂಬ ನಿರೀಕ್ಷೆ ಪ್ರೇಕ್ಷಕರಿಗೆ, ಚಿರು ಅಭಿಮಾನಿಗಳಿಗೆ ಹಾಗೂ ಸ್ವತಃ ಚಿರಂಜೀವಿಗೆ ಇದೆ.
ಸಂಕ್ರಾಂತಿಯಂದು ಸಿನಿಮಾ ಬಿಡುಗಡೆ ಆಗುತ್ತಿದ್ದು, ಅದರಲ್ಲಿಯೂ ತಮ್ಮ ಬಹುಕಾಲದ ಪ್ರತಿಸ್ಪರ್ಧಿ ಬಾಲಕೃಷ್ಣ ಅವರ 'ವೀರ ಸಿಂಹ ರೆಡ್ಡಿ' ಸಿನಿಮಾದ ಎದುರು ಪೈಪೋಟಿಯಾಗಿ ಸಿನಿಮಾ ಬಿಡುಗಡೆ ಆಗಿದ್ದು, ಯಾರ ಸಿನಿಮಾ ಗೆಲ್ಲಲಿದೆ ಎಂಬ ಬಗ್ಗೆಯೂ ಕುತೂಹಲ ಇದೆ. ಸಿನಿಮಾದ ಅರ್ಲಿ ಮಾರ್ನಿಂಗ್ ಶೋ ವೀಕ್ಷಿಸಿರುವವರು ಸಿನಿಮಾದ ಬಗ್ಗೆ ಅಭಿಪ್ರಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ಅಭಿಪ್ರಾಯ ಇಂತಿದೆ.

ಸಿನಿಮಾ ಸೂಪರ್
ಸೆಕೆಂಡ್ ಹಾಫ್‌ನಲ್ಲಿ ಚಿರಂಜೀವಿ ಹಾಗೂ ರವಿತೇಜ ನಡುವಿನ ಮಾಸ್ ಸೀನ್‌ಗಳು ನೋಡಲು ಅದ್ಭುತವಾಗಿವೆ. ಸಿನಿಮಾಕ್ಕೆ ಇವೇ ದೃಶ್ಯಗಳು ಜೀವಾಳ. ಚರಂಜೀವಿಯ ನಟನೆ ಅದರಲ್ಲಿಯೂ ಅವರ ಕಾಮಿಡಿ ಟೈಮಿಂಗ್ ಅದ್ಭುತ. ಸಂಕ್ರಾಂತಿಗೆ ಸರಿಯಾದ ಮಾಸ್ ಎಂಟರ್ಟೈನರ್ ಈ ಸಿನಿಮಾ. ಪಕ್ಕಾ ಸೂಪರ್ ಹಿಟ್ ಸಿನಿಮಾ ಇದಾಗಿರಲಿದೆ ಎಂದಿದ್ದಾರೆ ಟ್ವಿಟ್ಟರ್ ಬಳಕೆದಾರರು.

ಸಾಮಾನ್ಯ ರಿವೇಂಜ್ ಸ್ಟೋರಿ
ಸಿನೆ ವರ್ಲ್ಡ್ ಹೇಳಿರುವಂತೆ 'ವಾಲ್ತೇರು ವೀರಯ್ಯ' ಸಿನಿಮಾ ಚೆನ್ನಾಗಿಲ್ಲವಂತೆ. ಸಿನಿಮಾದ ಮೊದಲಾರ್ಧ ನಿರೀಕ್ಷಿಸಿದ ಮಟ್ಟಕ್ಕಿಲ್ಲ. ಸಿನಿಮಾ ಪ್ರಾರಂಭ ಚೆನ್ನಾಗಿ ಆಗಿದೆ ಆ ಬಳಿಕ ಹಠಾತ್ತನೆ ಕತೆ ಮಲೇಷ್ಯಾಕ್ಕೆ ಶಿಫ್ಟ್ ಆಗುತ್ತದೆ. ಸಿನಿಮಾದ ಹಾಸ್ಯ ದೃಶ್ಯಗಳು ಸರಿಯಾಗಿ ಕಚಗುಳಿ ಇಡುವುದಿಲ್ಲ. ಸಿನಿಮಾದ ಇಂಟರ್ವೆಲ್ ಬ್ಲಾಕ್ ಚೆನ್ನಾಗಿದೆ. ದ್ವೀತೀರಾರ್ಧದ ಫ್ಲ್ಯಾಷ್ ಬ್ಯಾಕ್‌ಗೆ ಸೂಕ್ತ ವೇದಿಕೆ ಕಲ್ಪಿಸುತ್ತದೆ. ಆದರೆ ಕತೆಯೇ ಸರಿಯಿಲ್ಲ. ಸಾಮಾನ್ಯ ರಿವೇಂಜ್ ಸ್ಟೋರಿ ಎನಿಸುತ್ತದೆ'' ಎಂದಿದೆ.

ಚಿರಂಜೀವಿ ಹಾಗೂ ರವಿತೇಜ ಸೂಪರ್
'ವಾಲ್ತೇರು ವೀರಯ್ಯ' ಸಿನಿಮಾ ಒಂದು ಪಕ್ಕಾ ಎಂಟರ್ಟೈನರ್ ಸಿನಿಮಾ. ಆಕ್ಷನ್ ಮತ್ತು ಭಾವುಕತೆಯನ್ನು ಸೂಕ್ತವಾಗಿ ಬೆರೆಸಿ ಭಾವಗಳನ್ನು ಮೆಗಾಸ್ಟಾರ್ ಚಿರಂಜೀವಿಯ ಮೂಲಕ ಅಭಿವ್ಯಕ್ತಿಪಡಿಸಿರುವ ರೀತಿ ಚೆನ್ನಾಗಿದೆ. ಚಿರಂಜೀವಿ ಹಾಗೂ ರವಿತೇಜ ಅವರ ಬಾಂಡಿಂಗ್ ತೆರೆಯ ಮೇಲೆ ಅದ್ಭುತವಾಗಿ ಮೂಡಿ ಬಂದಿದೆ. ಚಿರು ಅಭಿಮಾನಿಯೂ ಆಗಿರುವ ಬಾಬಿ ಸಂಕ್ರಾಂತಿ ಹಬ್ಬಕ್ಕೆ ಒಂದೊಳ್ಳೆ ಮಾಸ್ ಪ್ಯಾಕೇಜ್ ಅನ್ನು ಅಭಿಮಾನಿಗಳಿಗೆ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ ಶ್ರೀನಿವಾಸ ಕುಮಾರನ್.

ಬಾಸ್ ಈಸ್ ಬ್ಯಾಕ್ ಎನ್ನಬಹುದು
ಬಾಸ್ ಈಸ್ ಬ್ಯಾಕ್ ಎಂದು ಹೇಳುವ ಸಮಯ ಬಂದೇ ಬಿಟ್ಟಿದೆ. 'ವಾಲ್ತೇರು ವೀರಯ್ಯ' ಸಿನಿಮಾ ಪಕ್ಕಾ ಕ್ಲಾಸ್ ಹಾಗೂ ಮಾಸ್ ಸಿನಿಮಾ. ಪಕ್ಕಾ ಫ್ಯಾಮಿಲಿ ಎಂಟರ್ಟೈನರ್. ಚಿರಂಜೀವಿ ಅದ್ಭುತವಾಗಿ ನಟಿಸಿದ್ದಾರೆ. ರವಿತೇಜ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ದೇವಿಶ್ರೀ ಪ್ರಸಾದ್ ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ಒಂಬತ್ತನೇ ಇಂಡಸ್ಟ್ರಿ ಹಿಟ್ ಇದೇ ಆಗಲಿದೆ ಎಂದಿದೆ ಟಾಲಿವುಡ್ ಬಾಕ್ಸ್ ಆಫೀಸ್.

ಸಿನಿಮಾದ ನೆಗೆಟಿವ್‌ಗಳೇನು?
ಪಾನಿಪುರಿ ಎಂಬ ಪೇಜ್ 'ವಾಲ್ತೇರು ವೀರಯ್ಯ' ಸಿನಿಮಾಕ್ಕೆ ಕೇವಲ 2.25 ರೇಟಿಂಗ್ ನೀಡಿದೆ. ಸಿನಿಮಾದ ಇಂಟರ್ವೆಲ್ ಬ್ಯಾಂಗ್ ಚೆನ್ನಾಗಿದೆ. ಹಾಗೂ ರವಿತೇಜರ ಆಕ್ಟಿಂಗ್ ಚೆನ್ನಾಗಿದೆ ಎಂದಿದೆ. ಸಿನಿಮಾದಲ್ಲಿ ಋಣಾತ್ಮಕ ಅಂಶಗಳು ಹೆಚ್ಚಿಗಿದ್ದು, ಚಿರಂಜೀವಿ ಅದೇ ಹಳೆ ಮಾದರಿಯಲ್ಲಿ ನಟಿಸಿದ್ದಾರೆ. ಸಿನಿಮಾದ ಹಾಸ್ಯ ಬಹಳ ಪೇಲವವಾಗಿದೆ. ಕ್ಲೈಮ್ಯಾಕ್ಸ್ ಮತ್ತು ಪ್ರೀ ಕ್ಲೈಮ್ಯಾಕ್ಸ್ ಕೆಟ್ಟದಾಗಿದೆ. ಭಾವುಕವಾಗಿ ಕನೆಕ್ಟ್ ಆಗುವ ಯಾವ ಅಂಶವೂ ಸಿನಿಮಾದಲ್ಲಿಲ್ಲ. ಕಳಪೆ ನಿರ್ದೇಶನ ಹಾಗೂ ಬಹಳ ಉದ್ದವಾದ ಎರಡನೇ ಅರ್ಧ ಸಿನಿಮಾಗದ ನೆಗೆಟಿವ್‌ಗಳು ಎಂದಿದೆ.