twitter
    For Quick Alerts
    ALLOW NOTIFICATIONS  
    For Daily Alerts

    'ಲೈಗರ್' ಚಿತ್ರಕ್ಕೂ ಮೊದಲು 'ಬಾಕ್ಸಿಂಗ್ ಲೆಜೆಂಡ್' ಕನ್ನಡದಲ್ಲಿ ನಟಿಸಬೇಕಿತ್ತಂತೆ!

    |

    'ಬಾಕ್ಸಿಂಗ್ ಲೆಜೆಂಡ್' ಮೈಕ್ ಟೈಸನ್ ಹೆಸರು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದ್ದಾರೆ. ಅದಕ್ಕೆ ಕಾರಣ ವಿಜಯ್ ದೇವರಕೊಂಡ ನಟನೆಯ ಲೈಗರ್ ಚಿತ್ರ. ಇದೇ ಮೊದಲ ಬಾರಿಗೆ ಭಾರತೀಯ ಚಿತ್ರದಲ್ಲಿ ಟೈಸನ್ ನಟಿಸುತ್ತಿದ್ದಾರೆ. ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವುದಾಗಿ ಘೋಷಣೆಯಾಗಿದೆ. ಈ ಸುದ್ದಿ ಹೊರಬೀಳುತ್ತಿದ್ದಂತೆ ಮೈಕ್ ಟೈಸನ್ ಭಾರತೀಯ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆಯಲ್ಲಿದ್ದಾರೆ.

    ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಚಿತ್ರದಲ್ಲಿ ಮೈಕ್ ಟೈಸನ್ ನಟಿಸುತ್ತಿರುವ ಬಗ್ಗೆ ನಿರ್ಮಾಪಕ ಕರಣ್ ಜೋಹರ್ ಟ್ವೀಟ್ ಮಾಡಿ, ''ಇದೇ ಮೊದಲ ಬಾರಿಗೆ 'ಕಿಂಗ್ ಆಫ್ ದಿ ರಿಂಗ್' ಖ್ಯಾತಿಯ ಟೈಸನ್ ಭಾರತೀಯ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಲೈಗರ್ ತಂಡದಿಂದ ಟೈಸನ್‌ಗೆ ಸುಸ್ವಾಗತ' ಎಂದು ಪೋಸ್ಟ್ ಹಾಕಿದ್ದಾರೆ.

    'ಲೈಗರ್' ಚಿತ್ರತಂಡ ಸೇರಿಕೊಂಡ 'ಭೂಮಿ ಮೇಲಿನ ಅತಿ ಕೆಟ್ಟ ಮನುಷ್ಯ''ಲೈಗರ್' ಚಿತ್ರತಂಡ ಸೇರಿಕೊಂಡ 'ಭೂಮಿ ಮೇಲಿನ ಅತಿ ಕೆಟ್ಟ ಮನುಷ್ಯ'

    ವಿಜಯ್ ದೇವರಕೊಂಡ ಸಹ ಮೈಕ್ ಟೈಸನ್ ಎಂಟ್ರಿ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದ್ದು, ''ಭೂಮಿ ಮೇಲಿರುವ ಅತಿ ಕೆಟ್ಟ ವ್ಯಕ್ತಿ, ಗಾಡ್ ಆಫ್ ಬಾಕ್ಸಿಂಗ್, ದಿ ಲೆಜೆಂಡ್, ಸಾರ್ವಕಾಲಿಕ ಶ್ರೇಷ್ಠ ವ್ಯಕ್ತಿ ನಮ್ಮ ತಂಡ ಸೇರಿದ್ದಾರೆ. ಭಾರತೀಯ ಚಿತ್ರದಲ್ಲಿ ಮೊದಲ ಸಲ' ಎಂದು ಸ್ವಾಗತಿಸಿದ್ದಾರೆ.

    Mike Tyson Was 1st Approached For Dhruva Sarjas Pogaru, Why He Rejected It

    'ಮೈಕ್ ಟೈಸನ್' ಭಾರತದ ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ ಚಿತ್ರಪ್ರೇಮಿಗಳು ಥ್ರಿಲ್ ಆಗಿದ್ದಾರೆ. ತೆಲುಗು ಮತ್ತು ಹಿಂದಿಯಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ಪೂರಿ ಮತ್ತು ದೇವರಕೊಂಡ ಕಾಂಬಿನೇಷನ್ ಹೆಚ್ಚು ಕುತೂಹಲ ಮೂಡಿಸಿದೆ.

    ಬಹುತೇಕರಿಗೆ ತಿಳಿಯದ ಸಂಗತಿ ಏನಪ್ಪಾ ಅಂದ್ರೆ 'ಮೈಕ್ ಟೈಸನ್' ಈ ಮುಂಚೆಯೇ ಭಾರತೀಯ ಸಿನಿಮಾದಲ್ಲಿ ನಟಿಸಬೇಕಿತ್ತು. ಧ್ರುವ ಸರ್ಜಾ ನಟನೆಯ ಪೊಗರು ಚಿತ್ರಕ್ಕಾಗಿ ಮೈಕ್ ಟೈಸನ್ ಅವರನ್ನು ಅಪ್ರೋಚ್ ಮಾಡಲಾಗಿತ್ತಂತೆ. ಆದರೆ, ಟೈಸನ್ ಆ ಪ್ರಾಜೆಕ್ಟ್‌ ಮಾಡಲಿಲ್ಲವಂತೆ.

    ಸ್ವತಃ ಧ್ರುವ ಸರ್ಜಾ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ, ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ ಮೈಕ್ ಟೈಸನ್ ಅವರನ್ನು ಅಪ್ರೋಚ್ ಮಾಡಿದ್ದ ವಿಷಯ ಬಹಿರಂಗಪಡಿಸಿದ್ದರು. ''ಮೈಕ್ ಟೈಸನ್ ಅವರನ್ನು ಪೊಗರು ಚಿತ್ರದ ಅಂತಿಮ ಫೈಟ್ ದೃಶ್ಯಕ್ಕಾಗಿ ಸಂಪರ್ಕಿಸಲಾಗಿತ್ತು. ಅವರು ಈ ಸಿನಿಮಾ ಮಾಡಲು ಒಪ್ಪಿದ್ದರು. ಆದರೆ, ಅಂತಿಮ ಫೈಟ್‌ನಲ್ಲಿ ಸೋಲುವುದನ್ನು ಅವರು ಬದಲಾಯಿಸಲು ಕೇಳಿದರು. ಸೋಲಲು ನನಗೆ ಇಷ್ಟವಿಲ್ಲ, ಫೈಟ್‌ನಲ್ಲಿ ಡ್ರಾ ಮಾಡುವಂತೆ ನಿರ್ದೇಶಕರ ಬಳಿ ಕೇಳಿದರು. ಆದರೆ, ಕಥೆಯಲ್ಲಿ ಅದು ಸಾಧ್ಯವಾಗದ ಕಾರಣ ಬೇಡ ಎಂದು ಸುಮ್ಮನಾದರು ಎಂದು ಹೇಳಿದರು. ಅದೇ ಸಂದರ್ಶನದಲ್ಲಿ ಮತ್ತೊಬ್ಬ ಫೈಟರ್ ದಿ ಅಂಡರ್‌ಟೇಕರ್ ಅವರನ್ನು ಸಹ ಅಪ್ರೋಚ್ ಮಾಡಲಾಗಿತ್ತು. ಆದರೆ ಕಮಿಟ್‌ಮೆಂಟ್‌ ಕಾರಣದಿಂದ ಕಾಲ್‌ಶೀಟ್ ಸಿಗಲಿಲ್ಲ'' ಎಂದು ತಿಳಿಸಿದರು.

    'ಲೈಗರ್' ಸಿನಿಮಾವು ಬಾಕ್ಸಿಂಗ್ ಕುರಿತಾದ ಸಿನಿಮಾ ಆಗಿದೆ. ಮೈಕ್ ಟೈಸನ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಕ್ಲೈಮ್ಯಾಕ್ಸ್ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದ್ದು, ಬಾಕ್ಸಿಂಗ್ ರಿಂಗ್‌ಗಳ ಸೆಟ್‌ ಹಾಕಿ ಶೂಟಿಂಗ್ ನಡೆಸಲಾಗುತ್ತಿದೆ. ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಈ ಸಿನಿಮಾದಲ್ಲಿ ನಾಯಕಿಯಾಗಿದ್ದು, ನಟಿ ಚಾರ್ಮಿ ಮತ್ತು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಬಂಡವಾಳ ಹೂಡಿದ್ದಾರೆ.

    ಮೈಕ್ ಟೈಸನ್‌ಗೆ ಸಿನಿಮಾಗಳಲ್ಲಿ ನಟಿಸುವುದು ಹೊಸದೇನೂ ಅಲ್ಲ. ಈ ಹಿಂದೆ ಅವರು ಹಲವು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಬ್ಲ್ಯಾಕ್ ಆಂಡ್ ವೈಟ್', 'ಹ್ಯಾಂಗ್‌ ಓವರ್', 'ರಾಕಿ ಬಲ್ಬೋವಾ', 'ಸ್ಕೇರಿ ಮೂವಿ', 'ಗ್ರಡ್ಜ್ ಮ್ಯಾಚ್', 'ಐಪಿ ಮ್ಯಾನ್ 3', 'ಚೈನಾ ಸೇಲ್ಸ್ ಮ್ಯಾನ್', 'ಕಿಕ್‌ಬಾಕ್ಸರ್; ರಿಟ್ಯಾಲಿಯೇಷನ್', 'ಗರ್ಲ್ಸ್ 2', 'ಹ್ಯಾಮ್ಲೆಟ್ ಫರಾನ್' ಸಿನಿಮಾಗಳಲ್ಲಿ ಮೈಕ್ ಟೈಸನ್ ನಟಿಸಿದ್ದಾರೆ. ಆದರೆ ಅವರು ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ.

    English summary
    Mike Tyson Was 1st Approached For Dhruva Sarja's Pogaru, Why He Rejected It.
    Wednesday, September 29, 2021, 10:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X