For Quick Alerts
  ALLOW NOTIFICATIONS  
  For Daily Alerts

  ನಟಿ, ಸಚಿವೆ ರೋಜಾ ಕಾರಿನ ಮೇಲೆ ಜನಸೇನಾ ಕಾರ್ಯಕರ್ತರಿಂದ ದಾಳಿ: ಪವನ್‌ಗೆ ನಾಚಿಕೆ ಆಗಬೇಕು- ರೋಜಾ

  |

  ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳ ನಿರ್ಮಾಣ ವಿಚಾರ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಆಂಧ್ರಪ್ರದೇಶದ ಅಭಿವೃದ್ಧಿಯ ವಿಕೇಂದ್ರೀಕರಣದ ಹೆಸರಿನಲ್ಲಿ, ಆಡಳಿತಾರೂಢ ವೈಸಿಪಿಯು ವಿಶಾಖಪಟ್ಟಣದಲ್ಲಿ ಕಾರ್ಯಕಾರಿ ರಾಜಧಾನಿ, ಅಮರಾವತಿಯಲ್ಲಿ ಶಾಸಕಾಂಗ ರಾಜಧಾನಿ ಮತ್ತು ಕರ್ನೂಲ್‌ನಲ್ಲಿ ನ್ಯಾಯಾಂಗ ರಾಜಧಾನಿಯ ಪ್ರಸ್ತಾಪಗಳನ್ನು ಮುಂದಿಟ್ಟಿದೆ. ಇದಕ್ಕೆ ಟಿಡಿಪಿ ಹಾಗೂ ಜನಸೇನಾ ಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳು ಅಸಮಧಾನ ವ್ಯಕ್ತಪಡಿಸುತ್ತಿವೆ. ನಿನ್ನೆ(ಅಕ್ಟೋಬರ್ 15) 'ವಿಶಾಖ ಘರ್ಜನ' ಸಭೆಯಲ್ಲಿ ಭಾಗವಹಿಸಿ ವಿಶಾಖಪಟ್ಟಣ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಆಂಧ್ರಪ್ರದೇಶ ಸಚಿವರ ವಾಹನಗಳ ಮೇಲೆ ದಾಳಿ ನಡೆದಿದೆ.

  ಆಂಧ್ರದ ಸಚಿವರಾದ ರೋಜಾ, ಜೋಗಿ ರಮೇಶ್ ಹಾಗೂ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಅವರ ಕಾರುಗಳ ಮೇಲೆ ದಾಳಿ ನಡೆದಿದೆ. ಅಮರಾವತಿಯನ್ನು ಪೂರ್ಣ ಪ್ರಮಾಣದ ರಾಜಧಾನಿಯಾಗಿ ಮಾಡಬೇಕು ಎಂದು ಟಿಡಿಪಿ ಪಕ್ಷ ಒತ್ತಾಯಿಸುತ್ತಾ ಬರುತ್ತಿದೆ. ಇದಕ್ಕೆ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ ಕೂಡ ಬೆಂಬಲ ಸೂಚಿಸುತ್ತಿದೆ. ವಿಶಾಖ ಪಟ್ಟಣವನ್ನು ರಾಜಧಾನಿಯಾಗಿ ಮಾಡಬೇಕೆಂದು 'ವಿಶಾಖ ಘರ್ಜನ' ಹೆಸರನಲ್ಲಿ ಜನರು ನಮಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಆಡಳಿಪ ಪಕ್ಷ ಹೇಳುತ್ತಿದೆ. ಇದೇ ರ್ಯಾಲಿಯಲ್ಲಿ ಭಾಗವಹಿಸಿದ್ದ ಸಚಿವರ ವಾಹನಗಳ ಮೇಲೆ ಜನಸೇನಾ ಪಕ್ಷದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಪವನ್ ಕಲ್ಯಾಣ್ ಜನವಾಣಿ ಎನ್ನುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅದರ ಭಾಗವಾಗಿ ವಿಶಾಖ ಪಟ್ಟಣ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಜನಸೇನಾನಿನ ನೋಡಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಇದೇ ಸಮಯದಲ್ಲಿ 'ವಿಶಾಖ ಘರ್ಜನ' ಕಾರ್ಯಕ್ರಮ ಮುಗಿಸಿದ ವೈಸಿಪಿ ಸಚಿವರು ವಿಜಯವಾಡಕ್ಕೆ ಹೊರಟಿದ್ದರು. ಈ ವೇಳೆ ಅಲ್ಲೇ ಇದ್ದ ಜನಸೇನಾ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

  ಚಂದ್ರಬಾಬು ನಾಯ್ಡು ವಿರುದ್ಧ ಸೇಡು ತೀರಿಸಿಕೊಳ್ಳಿ.. ಜಗನ್ ಮೇಲೆ ಅಲ್ಲ: ಬಾಲಯ್ಯಗೆ ರೋಜಾ ಟಾಂಗ್!ಚಂದ್ರಬಾಬು ನಾಯ್ಡು ವಿರುದ್ಧ ಸೇಡು ತೀರಿಸಿಕೊಳ್ಳಿ.. ಜಗನ್ ಮೇಲೆ ಅಲ್ಲ: ಬಾಲಯ್ಯಗೆ ರೋಜಾ ಟಾಂಗ್!

  ವಿಮಾನ ನಿಲ್ದಾಣದ ಗೇಟ್‌ ಬಳಿ ಇದ್ದ ಕಲ್ಲುಗಳು ಮತ್ತು ದೊಣ್ಣೆಗಳಿಂದ ಸಚಿವರು ಹಾಗೂ ಅವರ ಬೆಂಗಾವಲು ಕಾರುಗಳ ಮೇಲೆ ದಾಳಿ ಮಾಡಲಾಗಿದೆ. ಆದರೆ ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಅಲ್ಲಿದ್ದವರನ್ನು ಚದುರಿಸಿದ್ದಾರೆ. ಸಚಿವರಾದ ರೋಜಾ, ಜೋಗಿ ರಮೇಶ್ ಹಾಗೂ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ ಅವರ ಕಾರುಗಳ ಮೇಲೆ ದಾಳಿ ನಡೆದಿದೆ. ಸಚಿವರ ಮೇಲೆ ದೊಣ್ಣೆ, ಕಲ್ಲುಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದರು. ಸಚಿವೆ ರೋಜಾ ಅವರ ಸಹಾಯಕ ಗಾಯಗೊಂಡಿದ್ದಾರೆ. ನಟಿ, ಸಚಿವೆ ರೋಜಾ ಮಾತನಾಡಿ ಜನಸೇನಾ ಕಾರ್ಯಕರ್ತರು ಹಾಗೂ ಪವನ್ ಕಲ್ಯಾಣ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ರೌಡಿಗಳನ್ನು ನೋಡಿ ಪವನ್ ಹಾರಾಡೋದಲ್ಲ

  ರೌಡಿಗಳನ್ನು ನೋಡಿ ಪವನ್ ಹಾರಾಡೋದಲ್ಲ

  "ಜನರ ಪರ ನಿಂತ ನಮ್ಮ ಕಾರುಗಳ ಮೇಲೆ ದಾಳಿ ನಡೆಸಿದರೆ ಏನು ಪ್ರಯೋಜನ. ನಾನು ಒಳ್ಳೆಯದನ್ನು ಪಕ್ಕಕ್ಕಿಟ್ಟು, ನೀವು ಮಾಡಿದ್ದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಮುಂದಾದರೆ ಇವರು ಯಾರಿಗೂ ಉಳಿಗಾಲ ಇರುವುದಿಲ್ಲ. ರಾಜಕೀಯ ಹೇಗೆ ಮಾಡಬೇಕೋ ಹಾಗೆ ಮಾಡಿ. ನಮ್ಮ ನಿರ್ಧಾರ ತಪ್ಪು ಎನ್ನುವುದಾದರೆ ನೀವು ಜನರ ಜೊತೆಗೆ ನಿಲ್ಲಿ. ಆದರೆ ಪ್ರಜೆಗಳೇ ನಿಮ್ಮನ್ನು ತಿರಸ್ಕರಿಸುತ್ತಿದ್ದಾರೆ. ಅದರ ಬಗ್ಗೆ ಯೋಚಿಸಿ, ನಮ್ಮ ಮೇಲೆ ಹಾರಾಡೋದಲ್ಲ. ಮೋಸ ಮಾಡುವವರನ್ನು, ರೌಡಿಗಳನ್ನು ನೋಡಿಕೊಂಡು ಪವನ್ ಕಲ್ಯಾನ್ ಅಬ್ಬರಿಸುತ್ತಿರುವುದು ಸರಿಯಲ್ಲ."

  ರಾಜಕೀಯ ಬಿಟ್ಟು ಸಿನಿಮಾ ಮಾಡಿಕೊಂಡು ಇರಿ

  ರಾಜಕೀಯ ಬಿಟ್ಟು ಸಿನಿಮಾ ಮಾಡಿಕೊಂಡು ಇರಿ

  "2019ರಲ್ಲಿ ಜನ ನಿಮ್ಮನ್ನು ತಿರಸ್ಕರಿಸಿದ್ದಾರೆ. ಜನರಿಗೆ ಎಲ್ಲಾ ಗೊತ್ತಾಗಿದೆ. ಸಾಧ್ಯ ಆದರೆ ಸಿನಿಮಾ ಶೂಟಿಂಗ್ ಮಾಡಿಕೊಳ್ಳಿ ಅದು ಬಿಟ್ಟು ಪ್ರಾಂತ್ಯಗಳ ನಡುವೆಗೆ ತಂದಿಟ್ಟು ತಮಾಷೆ ಮಾಡಬೇಡಿ. ಜನರ ಮೇಲೆ ದಾಳಿ ಮಾಡಿದರೆ ಚೆನ್ನಾಗಿರುವುದಿಲ್ಲ. ಜನರು ವಿಶಾಖಪಟ್ಟಣದಲ್ಲೂ ರಾಜಧಾನಿ ಬೇಕು ಎಂದು ಬಯಸುತ್ತಿದ್ದಾರೆ ಎನ್ನುವುದು ಅರ್ಥವಾಗಿದೆ. ಅದೇ ಕಾರಣಕ್ಕೆ ಜನರನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ನಮ್ಮ ದಾಳಿ ಮಾಡಿ ವಿಚಾರದ ದಿಕ್ಕು ಬದಲಿಸುವ ಪ್ರಯತ್ನ ಮಾಡಬೇಡಿ. ಅದು ನಡೆಯುವುದಿಲ್ಲ."

  ತಪ್ಪು ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ

  ತಪ್ಪು ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ

  ಸಿಸಿ ಟಿವಿ ಫುಟೇಜ್ ಇದೆ. ತಪ್ಪಿತಸ್ಥರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ನಮ್ಮ ಕಾರುಗಳ ಗಾಜುಗಳನ್ನು ಒಡೆದರು. ಕಾರುಗಳ ಸುತ್ತಾ ಮುಗಿಬಿದ್ದು ಹಲ್ಲೆಗೆ ಯತ್ನಿಸಿದರು. ಯಾವುದೇ ಅಜೆಂಡಾ ಆದರೂ ಜನರು ಒಪ್ಪುವಂತೆ ಮಾಡಬೇಕು. ಅದು ಬಿಟ್ಟು ರೌಡಿಸಂ, ಗೂಂಡಾಯಿಸಂ ಮಾಡಿ ಕಾರುಗಳನ್ನು ಒಡೆಯುವುದು, ಕಲ್ಲು ಹಾಕುವುದು, ಚಪ್ಪಲಿ ಹಾಕುವುದು ಸರಿಯಲ್ಲ. ಇದೇ ಕೆಲಸ ಅಧಿಕಾರದಲ್ಲಿರುವ ನಾವು ಮಾಡಿದರೆ ಏನಾಗಬಹುದು ಯೋಚಿಸಿ. ಇಂತಹ ಪಿಳ್ಳೆ ಸೈನ್ಯ, ಹುಚ್ಚು ಸೈನ್ಯ ಇದೆಲ್ಲಾ, ರೌಡಿಗಳು ಇದೆಲ್ಲಾ ಮಾಡ್ತಿದ್ದಾರೆ.

  ಪವನ್ ಕಲ್ಯಾಣ್‌ಗೆ ನಾಚಿಕೆ ಆಗಬೇಕು

  ಪವನ್ ಕಲ್ಯಾಣ್‌ಗೆ ನಾಚಿಕೆ ಆಗಬೇಕು

  "ಚಿರಂಜೀವಿ ಅವರಂತಹವರನ್ನು ಮನೆಗೆ ಕಳುಹಿಸಿದ್ದಾರೆ. ಕಳೆದ ಬಾರಿ ಪವನ್‌ ಕಲ್ಯಾಣ್‌ನ ಕೂಡ ಸೋಲಿಸಿದ್ದಾರೆ. ಇದೇ ರೌಡಿಗಳು, ಗೂಂಡಾಗಳು 2 ಕ್ಷೇತ್ರಗಳಲ್ಲಿ ಸೋಲಿಸಿದ್ದು ಮರೆತು ಹೋಯಿತಾ. ಇವರನ್ನೆಲ್ಲಾ ನೋಡಿ ಪವನ್ ಕಲ್ಯಾಣ್ ನಾಚಿಕೆ ಪಡಬೇಕು. ಇಂತಹವರನ್ನ ನಂಬಿಕೊಂಡು ನೀನು ರೌಡಿಸಂ ಮಾಡಿಸುತ್ತಿದ್ದಿಯಾ, ಇರುವ ಮರ್ಯಾದೆ ಕೂಡ ಇದರಿಂದ ಹೋಗುತ್ತೆ. ರಾಜಕೀಯ ಮಾಡಬೇಕು ಎಂದರೆ ನಾಜಕೀಯ ನಾಯಕನ ರೀತಿ ಇರಬೇಕು. ಇಂತಹ ರೌಡಿಸಂ ಎಲ್ಲಾ ಬಿಟ್ಟುಬಿಡು" ಎಂದು ಜನಸೇನಾನಿ ಪವನ್ ಕಲ್ಯಾಣ್‌ಗೆ ಸಚಿವೆ ರೋಜಾ ಎಚ್ಚರಿಕೆ ನೀಡಿದ್ದಾರೆ.

  English summary
  Minister Roja Fires on Janasena Pawan Kalyan At Vizag Attack. Andhra Pradesh Minister RK Roja reacted to the alleged Jana Sena activists' attack on Ministers' vehicles at the airport on Saturday evening in Visakhapatnam.
  Sunday, October 16, 2022, 11:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X