For Quick Alerts
  ALLOW NOTIFICATIONS  
  For Daily Alerts

  ಅಂಧಾಧುನ್ ತೆಲುಗು ರೀಮೇಕ್‌ನಲ್ಲಿ ಕನ್ನಡತಿ ನಾಯಕಿ: ನಿತಿನ್ ಜತೆ ರೊಮ್ಯಾನ್ಸ್ ಮಾಡುವ ನಟಿ ಯಾರು?

  By Avani Malnad
  |

  ವ್ಯಾಪಕ ಮೆಚ್ಚುಗೆಗೆ ಒಳಗಾಗಿದ್ದ ಹಿಂದಿ ಚಿತ್ರ 'ಅಂಧಾಧುನ್' ತೆಲುಗಿಗೆ ರೀಮೇಕ್ ಆಗುತ್ತಿರುವುದು ಇತ್ತೀಚೆಗೆ ಸುದ್ದಿಯಾಗಿತ್ತು. ಅದಕ್ಕೆ ನಾಯಕರಾಗಿ ನಿತಿನ್ ಆಯ್ಕೆಯಾಗಿದ್ದರು. ಆದರೆ ನಾಯಕಿ ಯಾರು ಎಂಬ ಚರ್ಚೆಗೆ ಉತ್ತರ ಸಿಕ್ಕಿರಲಿಲ್ಲ. ಈಗ ಕನ್ನಡದ ನಟಿಯೊಬ್ಬರ ಹೆಸರು ಕೇಳಿಬಂದಿದೆ.

  ಆಯುಷ್ಮಾನ್ ಖುರಾನಾ ಮತ್ತು ರಾಧಿಕಾ ಆಪ್ಟೆ ಮೂಲ ಚಿತ್ರದಲ್ಲಿ ಮುಖ್ಯಪಾತ್ರಗಳಲ್ಲಿ ನಟಿಸಿದ್ದರು. ಅವರೊಂದಿಗೆ ಹಿರಿಯ ನಟಿ ಟಬು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತೆಲುಗು ಅವತರಣಿಕೆಯ ಪಾತ್ರದಲ್ಲಿ ನಾಯಕಿಯಾಗಿ ಮೊದಲು ಕೇಳಿಬಂದಿದ್ದು ಕೀರ್ತಿ ಸುರೇಶ್ ಹೆಸರು. ಆದರೆ ಈ ಚಿತ್ರದಲ್ಲಿ ಲಿಪ್ ಲಾಕ್ ದೃಶ್ಯವಿದ್ದು, ಅದಕ್ಕೆ ಕೀರ್ತಿ ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಅವರ ಬಳಿಕ ಪ್ರಿಯಾಂಕಾ ಅರುಳ್ ಮೋಹನ್ ಅವರ ಹೆಸರೂ ಕೇಳಿಬಂದಿತ್ತು. ಟಬು ಪಾತ್ರಕ್ಕೆ ರಮ್ಯಾಕೃಷ್ಣ ಅವರನ್ನು ಹಾಕಿಕೊಳ್ಳಲು ಬಯಸಿದ್ದರು. ಆದರೆ ಸದ್ಯಕ್ಕೆ ಒಂದಷ್ಟು ಬದಲಾವಣೆಗಳಾಗಿವೆ. ಮುಂದೆ ಓದಿ...

  ಬಾಲಿವುಡ್ ಸೂಪರ್ ಹಿಟ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಕೀರ್ತಿ ಸುರೇಶ್ಬಾಲಿವುಡ್ ಸೂಪರ್ ಹಿಟ್ ಸಿನಿಮಾದ ತೆಲುಗು ರಿಮೇಕ್ ನಲ್ಲಿ ಕೀರ್ತಿ ಸುರೇಶ್

  ನಭಾ ನಟೇಶ್ ಹೆಸರು

  ನಭಾ ನಟೇಶ್ ಹೆಸರು

  'ಅಂಧಾಧುನ್' ರೀಮೇಕ್‌ನ ನಾಯಕಿ ಪಾತ್ರದಲ್ಲಿ ಮೊದಲ ಚಿತ್ರ 'ವಜ್ರಕಾಯ'ದಲ್ಲಿಯೇ ಮಿಂಚು ಹರಿಸಿದ್ದ ನಟಿ ನಭಾ ನಟೇಶ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ವಜ್ರಕಾಯದಲ್ಲಿ ವ್ಯಾಪಕ ಮೆಚ್ಚುಗೆ ಪಡೆದರೂ ನಭಾ ಕನ್ನಡದಲ್ಲಿ ನಂತರ ನಟಿಸಿದ್ದು 'ಲೀ' ಎಂಬ ಚಿತ್ರದಲ್ಲಿ ಮಾತ್ರ.

  ನಭಾ ಕೈಯಲ್ಲಿ ಇನ್ನೆರಡು ಸಿನಿಮಾ

  ನಭಾ ಕೈಯಲ್ಲಿ ಇನ್ನೆರಡು ಸಿನಿಮಾ

  ತೆಲುಗಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ನಭಾ ಕೈಯಲ್ಲಿ 'ಇನ್ನು ಎರಡು ಸಿನಿಮಾಗಳಿವೆ. ಸಾಯಿ ಧರಂ ತೇಜ್ ನಾಯಕರಾಗಿರುವ 'ಸೋಲೊ ಬ್ರದುಕೆ ಸೋ ಬೆಟರ್' ಮತ್ತು ಬೆಲ್ಲಂಕೊಂಡ ಶ್ರೀನಿವಾಸ್ ಜತೆ 'ಅಲ್ಲುಡು ಅಧುರ್ಸ್' ಚಿತ್ರಗಳಲ್ಲಿ ನಭಾ ನಟಿಸುತ್ತಿದ್ದಾರೆ.

  ನಿತಿನ್ ಚಿತ್ರದಲ್ಲಿ ಅಭಿನಯಿಸಲು ನಿರ್ಮಾಪಕರಿಂದ ಟಬು ಡಿಮ್ಯಾಂಡ್ ಮಾಡುತ್ತಿರುವ ಸಂಭಾವನೆ ಎಷ್ಟು.?ನಿತಿನ್ ಚಿತ್ರದಲ್ಲಿ ಅಭಿನಯಿಸಲು ನಿರ್ಮಾಪಕರಿಂದ ಟಬು ಡಿಮ್ಯಾಂಡ್ ಮಾಡುತ್ತಿರುವ ಸಂಭಾವನೆ ಎಷ್ಟು.?

  ಟಬು ಪಾತ್ರದಲ್ಲಿ ಶಿಲ್ಪಾ

  ಟಬು ಪಾತ್ರದಲ್ಲಿ ಶಿಲ್ಪಾ

  ಟಬು ನಟಿಸಿದ್ದ ಪಾತ್ರಕ್ಕೆ ರಮ್ಯಾಕೃಷ್ಣ ಅವರನ್ನು ಹಾಕಿಕೊಳ್ಳಲು ಚಿತ್ರತಂಡ ಬಯಸಿತ್ತು. ಆದರೆ ಈಗ ಬಾಲಿವುಡ್‌ನಿಂದಲೇ ಖ್ಯಾತ ನಟಿಯನ್ನು ಕರೆತರಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ. ಆಕೆಯೂ ಮೂಲ ಕನ್ನಡತಿ ಎನ್ನುವುದು ವಿಶೇಷ. ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಇದರಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  ಭರ್ಜರಿ ಹಿಟ್ ಆಗಿದ್ದ ಚಿತ್ರ

  ಭರ್ಜರಿ ಹಿಟ್ ಆಗಿದ್ದ ಚಿತ್ರ

  ಶ್ರೀರಾಮ್ ರಾಘವನ್ ನಿರ್ದೇಶನದ ಹಿಂದಿಯ 'ಅಂಧಾಧುನ್' 2018ರಲ್ಲಿ ತೆರೆಕಂಡಿತ್ತು. ಅಂಧನ ಪಾತ್ರದಲ್ಲಿ ನಟಿಸಿದ್ದ ಆಯುಷ್ಮಾನ್ ಖುರಾನಾ ಅವರಿಗೆ ರಾಷ್ಟ್ರಪ್ರಶಸ್ತಿ ಕೂಡ ಸಿಕ್ಕಿತ್ತು. 32 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಒಟ್ಟಾರೆ 450 ಕೋಟಿ ರೂ ಗಳಿಕೆ ಕಂಡಿತ್ತು.

  ತಮ್ಮ ಕುರಿತ ಈ ಸುದ್ದಿ ಸತ್ಯವಲ್ಲ ಎಂದ 'ಪಟಾಕಾ' ನಭಾ ನಟೇಶ್ತಮ್ಮ ಕುರಿತ ಈ ಸುದ್ದಿ ಸತ್ಯವಲ್ಲ ಎಂದ 'ಪಟಾಕಾ' ನಭಾ ನಟೇಶ್

  English summary
  Reports says Nabha Natesh to play as heroine in the Telugu remake of Hindi movie Andhadhun. Shilpa Shetty to play Tabu role in the remake.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X