Just In
Don't Miss!
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- News
ಸೌಮ್ಯ ರೆಡ್ಡಿ ಮೇಲಿನ ಎಫ್ಐಆರ್ ರದ್ದುಗೊಳಿಸಿ: ರೆಡ್ಡಿ ಜನ ಸಂಘ
- Sports
"ಸಿಡ್ನಿಯಲ್ಲಿ ನಾನು 30 ನಿಮಿಷ ಹೆಚ್ಚು ಬ್ಯಾಟಿಂಗ್ ಮಾಡಿದ್ದರೆ ಭಾರತ ಗೆಲ್ಲುವ ಸಾಧ್ಯತೆಯಿತ್ತು"
- Automobiles
ಪವರ್ಫುಲ್ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆದುಕೊಳ್ಳಲಿದೆ ಸ್ಕೋಡಾ ಕುಶಾಕ್
- Lifestyle
ನಿಮ್ಮ ದೇಹದ ಮೇಲಿನ ಕೂದಲು ಹೇಳುತ್ತೆ ನಿಮ್ಮ ಆರೋಗ್ಯದ ಭವಿಷ್ಯ
- Education
Indian Air Force Recruitment 2021: ಏರ್ಮೆನ್ ಗ್ರೂಪ್ X & Y ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜನವರಿ 10ಕ್ಕೆ ರಿವೀಲ್ ಆಗಲಿದೆ ನಟಿ ಸಾಯಿ ಪಲ್ಲವಿ 'ಲವ್ ಸ್ಟೋರಿ'
ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಸಾಯಿ ಪಲ್ಲವಿ ಕೂಡ ಒಬ್ಬರು. ಸರಶತೆ ಮತ್ತು ಸಹಜ ಸೌಂದರ್ಯದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ಸಾಯಿ ಪಲ್ಲವಿ ಸದ್ಯ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಾ, ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿರುವ ಸಾಯಿ ಪಲ್ಲವಿ ಸದ್ಯ ತನ್ನ ಲವ್ ಸ್ಟೋರಿ ರಿವೀಲ್ ಮಾಡುವ ತಯಾರಿಯಲ್ಲಿದ್ದಾರೆ.
ಸಾಯಿ ಪಲ್ಲವಿ ಲವ್ ಸ್ಟೋರಿನಾ? ಅಂತ ಅಚ್ಚರಿ ಪಡಬೇಡಿ, ಇಲ್ಲಿ ಸಾಯಿ ಪಲ್ಲವಿ ನಟನೆಯ ಲವ್ ಸ್ಟೋರಿ ಸಿನಿಮಾದ ಬಗ್ಗೆ ಹೇಳಲಾಗುತ್ತಿದೆ. ಪ್ರೇಮಂ ಸುಂದರಿ ತೆಲುಗು ನಟ ನಾಗಚೈತನ್ಯ ಜೊತೆ ಲವ್ ಸ್ಟೋರಿ ಸಿನಿಮಾದಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ರಿಲೀಸ್ ನ ತಯಾರಿಯಲ್ಲಿದೆ. ಅದಕ್ಕೂ ಮೊದಲು ಚಿತ್ರದ ಟೀಸರ್ ರಿಲೀಸ್ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ.
ಪವನ್ ಕಲ್ಯಾಣ್ ಜೊತೆ ನಟಿಸಲು ದೊಡ್ಡ ಮೊತ್ತದ ಸಂಭಾವನೆ ಪಡೆದ ಸಾಯಿ ಪಲ್ಲವಿ!

ಜನವರಿ 10ಕ್ಕೆ ಲವ್ ಸ್ಟೋರಿ ಟೀಸರ್
ಹೌದು, ಇದೇ ತಿಂಗಳು ಜನವರಿ 10ರಂದು ಲವ್ ಸ್ಟೋರಿ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದೆ. ಹೆಸರೇ ಹೇಳುವ ಹಾಗೆ ಇದೊಂದು ರೊಮ್ಯಾಂಟಿಕ್ ಸಿನಿಮಾವಾಗಿದೆ. ಈಗಾಗಲೇ ಚಿತ್ರದಿಂದ ಒಂದು ಪ್ರೋಮೋ ಮತ್ತು ಪೋಸ್ಟರ್ ಗಳು ರಿಲೀಸ್ ಆಗಿದ್ದು ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಪೋಸ್ಟರ್ ಹೊಂಚಿಕೊಂಡ ನಾಗಚೈತನ್ಯ
ಸದ್ಯ ಟೀಸರ್ ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟ ನಾಗಚೈತನ್ಯ, 'ಕನಸು, ಉತ್ಸಾಹ, ನಿರ್ಣ, ಪ್ರೀತಿ. ನಮ್ಮ ಲವ್ ಸ್ಟೋರಿಯೂ ಹಾಗೆ. ಲವ್ ಸ್ಟೋರಿ ಸಿನಿಮಾದ ಟೀಸರ್ ಜನವರಿ 8ರಂದು ರಿಲೀಸ್ ಆಗುತ್ತಿದೆ' ಎಂದು ಹೇಳಿದ್ದಾರೆ. ಜೊತೆಗೆ ಸಾಯಿ ಪಲ್ಲವಿ ನಾಗಚೈತನ್ಯ ಕಿವಿಯಲ್ಲಿ ಏನೋ ಹೇಳುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ನಾಗಚೈತನ್ಯ ಜೊತೆ ಸಾಯಿ ಪಲ್ಲವಿ ಮದುವೆ ಫೋಟೋ ವೈರಲ್

ಶೇಖರ್ ಕಮ್ಮುಲಾ ನಿರ್ದೇಶನ
ಮೂಲಗಳ ಪ್ರಕಾರ ಲವ್ ಸ್ಟೋರಿ ಸಿನಿಮಾ, ಮರ್ಯಾದಾ ಹತ್ಯೆ ಬಗ್ಗೆ ಇರುವ ಸಿನಿಮಾ ಆಗಿದೆ ಎನ್ನಲಾಗುತ್ತಿದೆ. ನಿರ್ದೇಶಕ ಶೇಖರ್ ಕಮ್ಮುಲಾ ಆಕ್ಷನ್ ಕಟ್ ಹೇಳಿದ್ದಾರೆ. ಕೆಲವು ದಿನಗಳ ಹಿಂದೆ ಸಿನಿಮಾದಿಂದ ರಿಲೀಸ್ ನಾಗ ಚೈತನ್ಯ ಮತ್ತು ಸಾಯಿಪಲ್ಲವಿ ಮದುವೆ ಪೋಸ್ಟರ್ ಅಭಿಮಾನಿಗಳ ಗಮನ ಸೆಳೆದಿತ್ತು.

ವೈರಲ್ ಆಗಿತ್ತು ಮದುವೆ ಫೋಟೋ
ಅದ್ದೂರಿಯಾಗಿ ಅಲಂಕೃತಗೊಂಡಿರುವ ಮಂಟಪದಲ್ಲಿ, ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ಹಸೆಮಣೆ ಮೇಲೆ ಕುಳಿತಿದ್ದು, ಇಬ್ಬರು ಒಬ್ಬರಿಗೊಬ್ಬರು ನೋಡಿಕೊಂಡು ನಗುತ್ತಿರುವ ಲುಕ್ ಅಭಿಮಾನಿಗಳ ನಿದ್ದೆ ಗೆಡಿಸಿತ್ತು. ಇದೀಗ ರಿಲೀಸ್ ಆಗುತ್ತಿರುವ ಟೀಸರ್ ಹೇಗರಲಿದೆ ಎನ್ನುವ ಕುತೂಹಲ ಅಭಿಮಾನಿಗಲ್ಲಿ ಮನೆಮಾಡಿದೆ.