For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಭಾರಿ ಎತ್ತರದ ಕಟೌಟ್ ಅನಾವರಣಗೊಳಿಸಿದ ನಾಗಚೈತನ್ಯ

  |

  ನಾಗಚೈತನ್ಯ ನಟಿಸುತ್ತಿರುವ 'ಥ್ಯಾಂಕ್ ಯೂ' ಸಿನಿಮಾದ ಚಿತ್ರೀಕರಣ ಪೂರ್ವ ಗೋದಾವರಿಯಲ್ಲಿ ನಡೆಯುತ್ತಿದೆ. ಕಳೆದ ಎರಡು ವಾರದಿಂದ ನಾಗ್ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.

  ಇದೀಗ, ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರ ಭಾರಿ ಎತ್ತರದ ಕಟೌಟ್‌ನ್ನು ನಾಗಚೈತನ್ಯ ಅನಾವರಣಗೊಳಿಸುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಅಗಿದೆ. ಎತ್ತರದ ಪ್ರಿನ್ಸ್ ಕಟೌಟ್ ಮೇಲೆ ಏರಿ ಕಟೌಟ್ ಅನಾವರಣ ಮಾಡುವ ದೃಶ್ಯ ಥ್ಯಾಂಕ್ ಯೂ ಚಿತ್ರದಲ್ಲಿದೆ.

  ಮತ್ತೊಂದು ಪುಟ್ಟ ಕಂದಮ್ಮನ ಜೀವ ಉಳಿಸಿದ ಮಹೇಶ್ ಬಾಬುಮತ್ತೊಂದು ಪುಟ್ಟ ಕಂದಮ್ಮನ ಜೀವ ಉಳಿಸಿದ ಮಹೇಶ್ ಬಾಬು

  'ಥ್ಯಾಂಕ್ ಯೂ' ಚಿತ್ರದಲ್ಲಿ ನಾಗಚೈತನ್ಯ ಅವರು ಮಹೇಶ್ ಬಾಬು ಅಭಿಮಾನಿಯಾಗಿ ನಟಿಸಿದ್ದಾರೆ. ಹಾಗಾಗಿ, ಸಿನಿಮಾದ ದೃಶ್ಯವೊಂದರಲ್ಲಿ ಮಹೇಶ್ ಬಾಬು ಅವರ ಭಾರಿ ಎತ್ತರದ ಕಟೌಟ್ ಮೇಲೆ ಏರಿ ಅನಾವರಣ ಮಾಡುವ ಸೀನ್ ಇದೆ.

  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅಂದ್ಹಾಗೆ, ಥ್ಯಾಂಕ್ ಯೂ ಸಿನಿಮಾದಲ್ಲಿ ನಾಗಚೈತನ್ಯ ಹಾಕಿ ಆಟಗಾರನಾಗಿ ನಟಿಸಿದ್ದು, ಮಹೇಶ್ ಬಾಬು ಅವರ ಅಪ್ಪಟ ಅಭಿಮಾನಿಯಂತೆ.

  ವಿಕ್ರಮ್ ಕುಮಾರ್ ಈ ಚಿತ್ರ ನಿರ್ದೇಶನ ಮಾಡ್ತಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬಂಡವಾಳ ಹಾಕ್ತಿದ್ದು, ಎಸ್ ತಮನ್ ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಪಿಸಿ ಶ್ರೀರಾಮ್ ಅವರ ಛಾಯಾಗ್ರಹಣವಿದ್ದು, ಥ್ಯಾಂಕ್ ಯೂ ಸಿನಿಮಾದ ಫೋಟೋವೊಂದನ್ನು ಹಂಚಿಕೊಂಡಿದ್ದರು.

  Recommended Video

  4ವರ್ಷಾದ ಮಗುವಾಗಿದ್ದಾಗಲೇ ಹಾರ್ಮೋನಿಯಂ‌ ನುಡಿಸಿದ ಶ್ರೆಯಾ ಘೋಶಾಲ್ | Filmibeat Kannada

  ಥ್ಯಾಂಕ್ ಯೂ ಸಿನಿಮಾಗೂ ಮುಂಚೆ ನಾಗ್ ಅಭಿನಯದ 'ಲವ್ ಸ್ಟೋರಿ' ಚಿತ್ರ ತೆರೆಗೆ ಬರಬೇಕಿದೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿದ್ದಾರೆ. ಮತ್ತೊಂದೆಡೆ ಮಹೇಶ್ ಬಾಬು 'ಸರ್ಕಾರು ವಾರಿ ಪಾಟ' ಚಿತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Telugu Actor Naga Chaitanya played Mahesh Babu fans role in 'Thank You' movie. leaked video viral in social media.
  Wednesday, March 10, 2021, 7:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X