For Quick Alerts
  ALLOW NOTIFICATIONS  
  For Daily Alerts

  ಸಮಂತಾಗೆ ಧನ್ಯವಾದ ತಿಳಿಸಿದ ನಾಗ ಚೈತನ್ಯ: ಹಾರ್ಟ್ ಇಮೋಜಿ ಎಲ್ಲಿ ಎನ್ನುತ್ತಿದ್ದಾರೆ ನೆಟ್ಟಿಗರು

  By ಫಿಲ್ಮಿಬೀಟ್ ಡೆಸ್ಕ್
  |

  ಟಾಲಿವುಡ್ ಸ್ಟಾರ್ ದಂಪತಿ ಸಮಂತಾ ಮತ್ತು ನಾಗ ಚೈತನ್ಯ ನಡುವೆ ಬಿರುಕು ಮೂಡಿದೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸ್ಟಾರ್ ದಂಪತಿಯ ನಡುವೆ ಯಾವುದು ಸರಿಯಿಲ್ಲ, ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ವೈರಲ್ ಆಗಿದೆ. ಸ್ಟಾರ್ ದಂಪತಿಯ ವಿಚ್ಛೇದನ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದರೂ ಈ ಬಗ್ಗೆ ಸಮಂತಾ ಕಡೆಯಿಂದ ಅಥವಾ ಅಕ್ಕಿನೇನಿ ಕುಟುಂಬದಿಂದ ಯಾವುದೇ ಅಧಿಕೃತ ಹೇಳಿಕೆ ಬಹಿರಂಗವಾಗಿಲ್ಲ.

  ಸಮಂತಾ ಮತ್ತು ನಾಗ್ ಚೈತನ್ಯ ಒಟ್ಟಿಗೆ ಕಾಣಿಸಿಕೊಳ್ಳದೆ ತಿಂಗಳುಗಳೇ ಆಗಿದೆ. ಸಮಂತಾ ಈಗಾಗಲೇ ಅಕ್ಕಿನೇನಿ ಕುಟುಂಬದಿಂದ ದೂರ ಆಗಿ ತಾಯಿ ಮನೆ ಸೇರಿದ್ದಾರೆ ಎನ್ನುವ ಗುಸು ಗುಸು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. ಈ ಎಲ್ಲಾ ಸುದ್ದಿಗಳ ನಡುವೆ ನಟ ನಾಗ ಚೈತನ್ಯ ಅವರ ಬಹುನಿರೀಕ್ಷೆಯ ಲವ್ ಸ್ಟೋರಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

  ವಿಚ್ಛೇದನ ವದಂತಿ ನಡುವೆಯೂ ಪತಿಯ 'ಲವ್ ಸ್ಟೋರಿ'ಗೆ ಆಲ್ ದಿ ಬೆಸ್ಟ್ ಹೇಳಿದ ನಟಿ ಸಮಂತಾವಿಚ್ಛೇದನ ವದಂತಿ ನಡುವೆಯೂ ಪತಿಯ 'ಲವ್ ಸ್ಟೋರಿ'ಗೆ ಆಲ್ ದಿ ಬೆಸ್ಟ್ ಹೇಳಿದ ನಟಿ ಸಮಂತಾ

  ಸಮಂತಾ ಪತಿಯ ಲವ್ ಸ್ಟೋರಿ ಚಿತ್ರವನ್ನು ವಿಭಿನ್ನವಾಗಿ ಪ್ರಮೋಟ್ ಮಾಡುತ್ತಿದ್ದರು. ಆದರೆ ನಿನ್ನೆ (ಸೆಪ್ಟಂಬರ್ 13) ಟ್ರೈಲರ್ ಬಿಡುಗಡೆಯಾಗಿ ಅನೇಕ ಸಮಯವಾದರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಬಳಿಕ ಸಮಂತಾ ಪತಿಯ ಲವ್ ಸ್ಟೋರಿ ಸಿನಿಮಾದ ಟ್ರೈಲರ್ ಶೇರ್ ಮಾಡುವ ಮೂಲಕ ಆಲ್ ದಿ ಬೆಸ್ಟ್ ಹೇಳಿದರು. ನಾಗ ಚೈತನ್ಯ ಅವರನ್ನು ವಿನ್ನರ್ ಎಂದು ಕರೆದು ಅಚ್ಚರಿ ಮೂಡಿಸಿದರು.

  ಸಮಂತಾ ಪ್ರತಿಕ್ರಿಯೆಗೆ ನಾಗ ಚೈತನ್ಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ನೆಟ್ಟಿಗರು ನಾಗ ಚೈತನ್ಯ ಬೇಕು ಅಂತನೆ ಕಡೆಗಣಿಸಿದ್ದಾರೆ ಎಂದು ಕಾಮಂಟ್ ಮಾಡುತ್ತಿದ್ದರು. ಸಮಂತಾ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿ ನಾಗ ಚೈತನ್ಯ ಅವರಿಗೆ ಪ್ರತಿಕ್ರಿಯೆ ನೀಡಲು ಏನು ಸಮಸ್ಯೆ ಎಂದು ಕಾಮೆಂಟ್ ಮಾಡುತ್ತಿದ್ದರು.

  ಇಂದು ನಾಗ ಚೈತನ್ಯ, ಪತ್ನಿ ಸಮಂತಾ ಟ್ವೀಟ್ ಗೆ ಪ್ರತಿಕ್ರಿಯೆ ನೀಡುವ ಮೂಲಕ ನೆಟ್ಟಿಗರು ಬಾಯಿ ಮುಚ್ಚಿಸಿದ್ದಾರೆ. ಸಮಂತಾಗೆ ನಾಗ ಚೈತನ್ಯ "ಧನ್ಯವಾದಗಳು ಸ್ಯಾಮ್" ಎಂದು ಹೇಳಿದ್ದಾರೆ. ನಾಗ ಚೈತನ್ಯ ಪ್ರತಿಕ್ರಿಯೆ ನೀಡಿದರು ಅಭಿಮಾನಿಗಳು ಮತ್ತೆ ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಎಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಇಬ್ಬರ ನಡುವೆ ಎಲ್ಲಾ ಸರಿ ಇದಿಯಾ, ಏನು ಸಮಸ್ಯೆ ಆಗಿದೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಸಮಂತಾ ಆಗಲಿ ಅಥವಾ ನಾಗ ಚೈತನ್ಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

  Naga Chaitanya reacts to Samantha for her reply for Love Story Trailer

  ಇಬ್ಬರ ನಡುವೆ ವಿಚ್ಛೇದನ ಸುದ್ದಿ ಜೋರಾಗಿ ಸದ್ದು ಮಾಡುತ್ತಿದ್ದರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಇದೀಗ ಮೊದಲ ಬಾರಿಗೆ ಸಿನಿಮಾ ವಿಚಾರವಾಗಿ ಪ್ರತಿಕ್ರಿಯೆ ನೀಡುವ ಮೂಲಕ ಕೇಳಿಬರುತ್ತಿರುವ ಸುದ್ದಿಗೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ. ಇಬ್ಬರ ನಡುವೆ ಎಲ್ಲವೂ ಸರಿ ಇದಿಯಾ.. ಅಥವಾ ಸಿನಿಮಾ ವಿಚಾರವಾಗಿ ಇಬ್ಬರು ಒಂದಾಗಿದ್ದಾರಾ ಎನ್ನುವ ಅನುಮಾನ ಅಭಿಮಾನಿಗಳನ್ನು ಕಾಡುತ್ತಿದೆ. ಏನೆ ಇದ್ದರೂ ಇಬ್ಬರು ಅನ್ಯೋನ್ಯವಾಗಿ ಇರಲಿ ಎನ್ನುವುದು ಅಭಿಮಾನಿಗಳ ಆಶಯ.

  English summary
  Naga Chaitanya reacts to Samantha for her reply for Love Story Trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X