For Quick Alerts
  ALLOW NOTIFICATIONS  
  For Daily Alerts

  ಮತ್ತೆ ಮುಂದಕ್ಕೆ ಹೋಯ್ತು ನಾಗ ಚೈತನ್ಯ-ಸಾಯಿ ಪಲ್ಲವಿ 'ಲವ್ ಸ್ಟೋರಿ'

  |

  ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ನಟನೆಯ 'ಲವ್ ಸ್ಟೋರಿ' ಸಿನಿಮಾ ಬಹಳ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಪೋಸ್ಟರ್, ಟೀಸರ್ ಎಲ್ಲವೂ ಕುತೂಹಲ ಹೆಚ್ಚಿಸಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಇಷ್ಟೊತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಪದೇ ಪದೇ ಮುಂದಕ್ಕೆ ಹೋಗುತ್ತದೆ.

  ಈ ಹಿಂದೆ ಪ್ರಕಟಿಸಿದಂತೆ ಸೆಪ್ಟೆಂಬರ್ 10 ರಂದು 'ಲವ್ ಸ್ಟೋರಿ' ಸಿನಿಮಾ ಥಿಯೇಟರ್‌ಗೆ ಬರಬೇಕಿತ್ತು. ಆದ್ರೀಗ, ಮತ್ತೆ ಮುಂದೂಡಿದೆ. ''ಅನಿವಾರ್ಯ ಪರಿಸ್ಥಿತಿಯಲ್ಲಿ ಲವ್ ಸ್ಟೋರಿ ಸಿನಿಮಾ ಮತ್ತೆ ಮುಂದೂಡಲಾಗುತ್ತಿದೆ. ಸೆಪ್ಟೆಂಬರ್ 10 ರಂದು ಚಿತ್ರ ಬಿಡುಗಡೆಯಾಗುತ್ತಿಲ್ಲ'' ಎಂದು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

  ಸೆಪ್ಟಂಬರ್ 10ಕ್ಕೆ ರಿವೀಲ್ ಆಗ್ತಿದೆ ಸಾಯಿ ಪಲ್ಲವಿ-ನಾಗ ಚೈತನ್ಯ 'ಲವ್ ಸ್ಟೋರಿ'ಸೆಪ್ಟಂಬರ್ 10ಕ್ಕೆ ರಿವೀಲ್ ಆಗ್ತಿದೆ ಸಾಯಿ ಪಲ್ಲವಿ-ನಾಗ ಚೈತನ್ಯ 'ಲವ್ ಸ್ಟೋರಿ'

  ಈ ಮೊದಲು ಏಪ್ರಿಲ್ 18 ರಂದು ಲವ್ ಸ್ಟೋರಿ ಸಿನಿಮಾ ಬಿಡುಗಡೆಯಾಗಬೇಕಿತ್ತು. ಅದಾದ ಮೇಲೆ ಆಗಸ್ಟ್ 18ಕ್ಕೆ ಎರಡನೇ ಬಾರಿ ರಿಲೀಸ್ ದಿನಾಂಕ ಘೋಷಿಸಲಾಯಿತು. ಮೂರನೇ ಸಲ ಸೆಪ್ಟೆಂಬರ್ 10ಕ್ಕೆ ಮುಂದೂಡಲಾಯಿತು. ಈಗ ಆ ದಿನಾಂಕವೂ ಪೋಸ್ಟ್‌ಪೋನ್ ಆಗಿದೆ.

  ಈಗ ಹೊಸ ದಿನಾಂಕ ಘೋಷಣೆ ಮಾಡಿದ್ದು, ಸೆಪ್ಟೆಂಬರ್ 24 ರಂದು 'ಲವ್ ಸ್ಟೋರಿ' ಬಿಡುಗಡೆಯಾಗುತ್ತಿದೆ.

  ಅಂದ್ಹಾಗೆ, ಈ ಚಿತ್ರವನ್ನು ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ. ಶೇಖರ್ ಕಮ್ಮುಲ ನಿರ್ದೇಶನದಲ್ಲಿ ನಟಿ ಸಾಯಿ ಪಲ್ಲವಿ ನಟಿಸುತ್ತಿರುವ ಎರಡನೇ ಸಿನಿಮಾ 'ಲವ್ ಸ್ಟೋರಿ'. ಈ ಮೊದಲು ಶೇಖರ್ ನಿರ್ದೇಶಿಸಿದ್ದ 'ಫಿದಾ' ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದ 'ಸಾರಂಗ ದರಿಯಾ' ಹಾಡಂತೂ ಯೂಟ್ಯೂಬ್ ನಲ್ಲಿ ದಾಖಲೆ ಬರೆದಿದೆ.

  2019ರಲ್ಲಿ 'ವೆಂಕಿಮಾಮ' ಚಿತ್ರದಲ್ಲಿ ಕೊನೆಯದಾಗಿ ನಾಗ ಚೈತನ್ಯ ನಟಿಸಿದ್ದರು. ಲವ್ ಸ್ಟೋರಿ ಸಿನಿಮಾ ಹೊರತುಪಡಿಸಿ, 'ಥ್ಯಾಂಕ್ ಯೂ', ಬಂಗಾರುರಾಜು ಹಾಗೂ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗ ಚೈತನ್ಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Due to unavoidable circumstances, the release of Love Story has been postponed to 24th September 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X