For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್‌ಗಾಗಿ ಪ್ರೈವೆಟ್ ಜೆಟ್‌ನಲ್ಲಿ ಹೈದರಾಬಾದ್‌ಗೆ ಬಂದಿಳಿದ ನಾಗಾರ್ಜುನ

  |

  ಬಿಗ್ ಬಾಸ್‌ನಿಂದ ಒಂದು ವಾರ ಬ್ರೇಕ್ ತೆಗೆದುಕೊಂಡಿದ್ದ ನಾಗಾರ್ಜುನ ಕಂಬ್ಯಾಕ್ ಮಾಡಿದ್ದಾರೆ. ವೈಲ್ಡ್ ಡಾಗ್ ಚಿತ್ರದ ಶೂಟಿಂಗ್‌ಗಾಗಿ ಹಿಮಾಲಯಕ್ಕೆ ಹೋಗಿದ್ದ ನಾಗಾರ್ಜುನ ಕಳೆದ ವಾರ ಬಿಗ್ ಬಾಸ್ ನಿರೂಪಣೆ ಮಾಡಿರಲಿಲ್ಲ.

  ನಾಗಾರ್ಜುನ ಬದಲಿಗೆ ಅಕ್ಕಿನೇನಿ ಸೊಸೆ ಸಮಂತಾ ಅವರು ಬಿಗ್ ಬಾಸ್ ನಡೆಸಿಕೊಟ್ಟಿದ್ದರು. ಸ್ಟೈಲ್ ಕಿಂಗ್ ಅಲಭ್ಯತೆಯ ನಡುವೆಯೂ ಯಶಸ್ಸಿಯಾಗಿ ಶೋ ಮಾಡಿಕೊಟ್ಟಿದ್ದ ಸಮಂತಾ ಎರಡನೇ ವಾರ ನಿರೂಪಣೆ ಮಾಡ್ತಾರಾ ಇಲ್ವಾ ಎಂಬ ಚರ್ಚೆ ನಡೆಯುತ್ತಿತ್ತು.

  ಬಿಗ್‌ಬಾಸ್ ನಿರೂಪಣೆ ಮಾಡಲು ಸಮಂತಾ ಪಡೆಯುತ್ತಿದ್ದಾರೆ ಭಾರಿ ದೊಡ್ಡ ಮೊತ್ತಬಿಗ್‌ಬಾಸ್ ನಿರೂಪಣೆ ಮಾಡಲು ಸಮಂತಾ ಪಡೆಯುತ್ತಿದ್ದಾರೆ ಭಾರಿ ದೊಡ್ಡ ಮೊತ್ತ

  ಸಮಂತಾ ಒಂದು ವೇಳೆ ಹಿಂದೇಟು ಹಾಕಿದರೆ ಹಿರಿಯ ನಟಿ ರೋಜಾ ಅವರು ಬಿಗ್ ಬಾಸ್ ನಿರೂಪಣೆ ಮಾಡಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿತ್ತು.

  ಆದ್ರೆ, ಅಚ್ಚರಿಯೆಂಬಂತೆ ನಾಗಾರ್ಜುನ ಅವರೇ ಕಂಬ್ಯಾಕ್ ಮಾಡಿದ್ದಾರೆ. ಬಿಗ್‌ಬಾಸ್ ಶೋಗಾಗಿ ಪ್ರೈವೆಟ್ ಜೆಟ್‌ನಲ್ಲಿ ಹೈದರಾಬಾದ್‌ಗೆ ಬಂದಿಳಿದಿದ್ದಾರೆ.

  ಈ ಮೊದಲು ಹೇಳಿದಂತೆ ನಾಗಾರ್ಜುನ ಅವರು ಎರಡು ವಾರಗಳ ಕಾಲ ಬಿಗ್ ಬಾಸ್ ನಿರೂಪಣೆ ಮಾಡಲ್ಲ ಎಂದಿದ್ದರು. ಅದರಂತೆ ಒಂದು ವಾರ ಸಮಂತಾ ಶೋ ಮಾಡಿದ್ದರು. ಎರಡನೇ ವಾರದ ಲೆಕ್ಕಾಚಾರ ನಡೆಯುತ್ತಿದ್ದ ನಡುವೆಯೇ ನಾಗಾರ್ಜುನ ಸರ್ಪ್ರೈಸ್ ನೀಡಿದ್ದಾರೆ.

  ಒಂದೇ ವಾರಕ್ಕೆ ಸುಸ್ತಾದ ಸಮಂತಾ, ಬಿಗ್ ಬಾಸ್‌ ನಿರೂಪಣೆ ಮಾಡಲು ಮತ್ತೊಬ್ಬ ನಟಿ!ಒಂದೇ ವಾರಕ್ಕೆ ಸುಸ್ತಾದ ಸಮಂತಾ, ಬಿಗ್ ಬಾಸ್‌ ನಿರೂಪಣೆ ಮಾಡಲು ಮತ್ತೊಬ್ಬ ನಟಿ!

  SUPERSTAR SURYA Kannada Short Film Teaser | Rakshit | Praveen | Nikhil | Filmibeat Kannada

  ನಾಗಾರ್ಜುನ ಅವರ ಕಂಬ್ಯಾಕ್ ಪ್ರೋಮೋ ಶನಿವಾರ ಬೆಳಗ್ಗೆಯೇ ಸ್ಟಾರ್ ಮಾ ವಾಹಿನಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿತ್ತು. ಇನ್ನು ಬಿಗ್ ಬಾಸ್ ಶೂಟಿಂಗ್ ಮುಗಿಸಿ ಮತ್ತೆ ವೈಲ್ಡ್ ಡಾಗ್ ಚಿತ್ರೀಕರಣಕ್ಕಾಗಿ ಹಿಮಾಲಯಕ್ಕೆ ಹಿಂತಿರುಗಲಿದ್ದಾರೆ ಎಂಬ ಪ್ರಶ್ನೆಯೂ ಕಾಡಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ಇಲ್ಲ.

  English summary
  Telugu actor Nagarjuna is Back to Bigg Boss telugu season 4 shooting. he came in private jet for reality show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X