For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಾಸ್ 4 ಪ್ರೋಮೊ ಚಿತ್ರೀಕರಣ: ಮುಂಜಾಗ್ರತೆ ಕ್ರಮ ಹೀಗಿವೆ

  |

  ಕೊರೊನಾ ಕಾರಣಕ್ಕೆ ತಿಂಗಳುಗಳ ಕಾಲ ಬಂದ್ ಆಗಿದ್ದ ಧಾರಾವಾಹಿ, ರಿಯಾಲಿಟಿ ಶೋಗಳು ನಿಧಾನವಾಗಿ ಚಿತ್ರೀಕರಣ ಪ್ರಾರಂಭ ಮಾಡಿವೆ.

  ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್‌ಬಾಸ್ ಸಹ ಪ್ರಾರಂಭ ಮಾಡಲಾಗುತ್ತಿದೆ. ಆದರೆ ಕನ್ನಡದ ಬಿಗ್‌ಬಾಸ್ ಅಲ್ಲ ಬದಲಿಗೆ ತೆಲುಗು ಬಿಗ್‌ಬಾಸ್.

  ಈ ಬಾರಿ ಬಿಗ್‌ಬಾಸ್ ಕಾರ್ಯಕ್ರಮವನ್ನು ಹಿರಿಯ ನಟ ನಾಗಾರ್ಜುನ ನಿರೂಪಣೆ ಮಾಡಲಿದ್ದು, ಪ್ರೊಮೊ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಪ್ರೊಮೊ ಚಿತ್ರೀಕರಣ ಸೆಟ್‌ನ ಚಿತ್ರವನ್ನು ಹಂಚಿಕೊಂಡಿರುವ ನಾಗಾರ್ಜುನ ಚಿತ್ರೀಕರಣದಲ್ಲಿ ತೆಗೆದುಕೊಂಡಿದ್ದ ಮುಂಜಾಗ್ರತೆ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

  ಬಿಗ್‌ಬಾಸ್ 4 ತೆಲುಗು ಪ್ರೋಮೊ ಚಿತ್ರೀಕರಣ

  ಬಿಗ್‌ಬಾಸ್ 4 ತೆಲುಗು ಪ್ರೋಮೊ ಚಿತ್ರೀಕರಣ

  ಬಿಗ್‌ಬಾಸ್ 4 ತೆಲುಗು ಪ್ರೋಮೊ ಚಿತ್ರೀಕರಣವನ್ನು ಸಕಲ ಮುಂಜಾಗ್ರತೆಗಳನ್ನು ವಹಿಸಿ ಚಿತ್ರೀಕರಿಸಲಾಗಿದೆಯಂತೆ. ನಾಗಾರ್ಜುನ ಹಂಚಿಕೊಂಡಿರುವ ಚಿತ್ರ ನೋಡಿದರೆ ತಿಳಿಯುತ್ತದೆ ಎಷ್ಟೆಲ್ಲಾ ಮುಂಜಾಗ್ರತೆಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು. ನಾಗಾರ್ಜುನ ಮೇಕ್‌ಅಪ್‌ ಮ್ಯಾನ್‌ಗಳು ಸಹ ಸೆಟ್‌ನಲ್ಲಿ ಪಿಪಿಇ ಕಿಟ್ ಧರಿಸಿ ಕೆಲಸ ನಿರ್ವಹಿಸಿದ್ದಾರೆ.

  ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಚಿತ್ರೀಕರಣ

  ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಚಿತ್ರೀಕರಣ

  ಬಿಗ್‌ಬಾಸ್ 4 ನ ಪ್ರೋಮೊ ಚಿತ್ರೀಕರಣ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ನಡೆದಿದೆ. ಚಿತ್ರೀಕರಣದ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗಿದೆಯೆಂದು ಬಿಗ್‌ಬಾಸ್ ತಂಡ ಹೇಳಿದೆ. ಸರ್ಕಾರ ವಿಧಿಸಿದ್ದ ನಿಯಮಗಳನ್ನು ಸಹ ಪಾಲಿಸಲಾಗಿದೆಯಂತೆ.

  ಲೈಟ್ಸ್‌, ಕ್ಯಾಮೆರಾ, ಆಕ್ಷನ್‌ಗೆ ಮರಳಿದ್ದೇನೆ: ನಾಗಾರ್ಜುನ

  ಲೈಟ್ಸ್‌, ಕ್ಯಾಮೆರಾ, ಆಕ್ಷನ್‌ಗೆ ಮರಳಿದ್ದೇನೆ: ನಾಗಾರ್ಜುನ

  ಕೊರೊನಾ ಸಮಯದಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ ಮೊದಲ ತೆಲುಗು ಸ್ಟಾರ್ ನಟ ನಾಗಾರ್ಜುನ ಆಗಿದ್ದಾರೆ. ಅವರೇ ಟ್ವೀಟ್‌ ಮಾಡಿರುವಂತೆ, 'ಲೈಟ್ಸ್, ಕ್ಯಾಮೆರಾ, ಆಕ್ಷನ್‌ಗೆ ಮರಳಿ ಬಂದಿದ್ದೇನೆ. ಇದೊಂದು ಅದ್ಭುತ ಅನುಭವ' ಎಂದಿದ್ದಾರೆ ನಾಗಾರ್ಜುನ.

  ಬಿಗ್‌ಬಾಸ್ 3 ಸಹ ನಾಗಾರ್ಜುನ ನಡೆಸಿಕೊಟ್ಟಿದ್ದರು

  ಬಿಗ್‌ಬಾಸ್ 3 ಸಹ ನಾಗಾರ್ಜುನ ನಡೆಸಿಕೊಟ್ಟಿದ್ದರು

  ಬಿಗ್‌ಬಾಸ್ 3 ಅನ್ನು ಅವರೇ ನಿರೂಪಣೆ ಮಾಡಿದ್ದರು. ಅದರ ಹಿಂದೆ ಎನ್‌ಟಿಆರ್ ನಿರೂಪಣೆ ಮಾಡಿದ್ದರು. ಆದರೆ ಕಳೆದ ಬಾರಿಯ ತೆಲುಗು ಬಿಗ್‌ಬಾಸ್ ಹೆಚ್ಚು ವೀಕ್ಷಕರನ್ನು ಸೆಳೆದಿದೆ. ಹಾಗಾಗಿ ಈ ಬಾರಿಯೂ ನಾಗಾರ್ಜುನ ಅವರೇ ನಡೆಸಿಕೊಡುತ್ತಿದ್ದಾರೆ.

  English summary
  Actor Nagarjuna did Bigg Boss 4 promo shoot in mid of coronavirus. He shares set photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X