Don't Miss!
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Sports
IND vs NZ 2nd T20: ಭಾರತಕ್ಕೆ ಸಾಧಾರಣ ಗುರಿ ನೀಡಿದ ನ್ಯೂಜಿಲೆಂಡ್
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಜಗಪತಿ ಬಾಬು ಮನೆ ಮಾರಿಕೊಂಡಿದ್ರು...ನಾನು ಬಂದ್ಮೇಲೆ ಕೋಟಿ ಬಂದಿದ್ದು....'
ದಕ್ಷಿಣ ಭಾರತ ಸ್ಟೈಲಿಶ್ ಖಳನಟನಾಗಿ ಮಿಂಚುತ್ತಿರುವ ಜಗಪತಿ ಬಾಬು ಒಂದು ಸಮಯದಲ್ಲಿ ತೆಲುಗು ಚಿತ್ರರಂಗದ ಪ್ರಮುಖ ನಾಯಕ ನಟ. ಕೌಟುಂಬಿಕ ಚಿತ್ರಗಳ ಮೂಲಕ ಮನೆ ಮಾತಾಗಿದ್ದರು. ಖ್ಯಾತ ನಿರ್ದೇಶಕ ರಾಜೇಂದ್ರ ಪ್ರಸಾದ್ ಅವರ ಮಗ ಜಗಪತಿ ಬಾಬು. 1989 ರಿಂದ ಹೀರೋ ಆಗಿ ಮಿಂಚಿದ ಜಗಪತಿ ಬಾಬು ನಂತರ ನಿಧಾನವಾಗಿ ತೆರೆಯಿಂದ ಮರೆಯಾದರು.
Recommended Video
ಬಳಿಕ 2014ರ ನಂತರ ಜಗಪತಿ ಬಾಬು ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಪೋಷಕ ನಟನೆ ಕಡೆ ಹೆಚ್ಚು ಗಮನ ನೀಡಿದರು. ಸ್ಟಾರ್ ನಟರ ಚಿತ್ರಗಳಲ್ಲಿ ಖಡಕ್ ವಿಲನ್ ಆಗಿ ಮಿಂಚಿದರು. ಇದರ ಪರಿಣಾಮ ನೋಡು ನೋಡುತ್ತಿದ್ದಂತೆ ಜಗಪತಿ ಬಾಬು ಬಹುಬೇಡಿಕೆಯ ಪೋಷಕ ನಟ ಆಗಿಬಿಟ್ಟರು. ಹೀಗೆ, ವೃತ್ತಿ ಜೀವನದಲ್ಲಿ ಏಳು-ಬೀಳುಗಳನ್ನು ಕಂಡು ಯಶಸ್ಸು ಹುಡುಕಿದ ನಟನ ಬಗ್ಗೆ ರಾಮ್ ಗೋಪಾಲ್ ವರ್ಮಾ ಸಿನಿಮಾದ ನಾಯಕಿ ಅಚ್ಚರಿಯ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ, ಏನದು? ಮುಂದೆ ಓದಿ....
ಸೌಂದರ್ಯ
ಜೊತೆಗಿದ್ದ
ಸುಂದರ
ಸಂಬಂಧದ
ಬಗ್ಗೆ
ಜಗಪತಿ
ಬಾಬು
ಮಾತು

ನನ್ನ ಹೆಸರಿನಲ್ಲೇ ಲಕ್ಷ್ಮಿ ಇದೆ
ರಾಮ್ ಗೋಪಾಲ್ ವರ್ಮಾ ನಿರ್ದೇಶನ ಮಾಡಿದ್ದ 'ನಗ್ನಂ' ಸಿನಿಮಾದಲ್ಲಿ ನಟಿಸಿರುವ ಶ್ರೀ ರಾಪಕಾ, ಜಗಪತಿಬಾಬು ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಬಾಲಕೃಷ್ಣ ಹಾಗೂ ವಿಜಯ್ ದೇವರಕೊಂಡ ಬಗ್ಗೆ ಮಾತನಾಡಿ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿರುವ ನಟಿ ಈಗ ಮತ್ತೊಬ್ಬ ತೆಲುಗು ನಟನ ಬಗ್ಗೆ ಗೊತ್ತಿಲ್ಲದ ಸಂಗತಿಗಳನ್ನು ಹೇಳಿದ್ದಾರೆ. 'ನನ್ನ ಹೆಸರಿನಲ್ಲಿ ಲಕ್ಷ್ಮಿ ಇದೆ, ನಾನು ಯಾರ ಜೀವನಕ್ಕೆ ಹೋಗ್ತೇನೋ ಅವರ ಜೀವನದಲ್ಲಿ ಲಕ್ಷ್ಮಿ ಹುಡುಕಿಕೊಂಡು ಬರುತ್ತೆ, ನನ್ನ ಪ್ರವೇಶದಿಂದ ಜಗಪತಿ ಬಾಬು ಅವರು ಕೋಟಿ ಸಂಪಾದಿಸಿದರು'' ಎಂದು ಹೇಳಿಕೊಂಡಿದ್ದಾರೆ.

ಜಗಪತಿ ಬಾಬು ಮನೆ ಮಾರಿದ್ದರು
''ಜಗಪತಿ ಬಾಬು ನನಗೆ 2013ರಲ್ಲಿ ಪರಿಚಯ. ಆ ಸಮಯದಲ್ಲಿ ಅವರು ಆರ್ಥಿಕವಾಗಿ ನಷ್ಟದಲ್ಲಿದ್ದರು. ಜ್ಯೂಬ್ಲಿ ಹಿಲ್ಸ್‌ನಲ್ಲಿರುವ ಮನೆಯನ್ನು ಸಹ ಮಾರಿದ್ದರು. ಬಹಳ ನೋವಿನಲ್ಲಿದ್ದರು. 'ಪಿಲ್ಲ ನುವ್ವು ಲೇನಿ ಜೀವಿತಂ' ಚಿತ್ರಕ್ಕೆ ಶ್ರೀಹರಿ ನಿಧನದಿಂದ ಅವರ ಬದಲು ಜಗಪತಿ ಬಾಬುಗೆ ಅವಕಾಶ ಸಿಕ್ತು. ಅಲ್ಲಿಂದ ನನ್ನ ಅವರ ಪರಿಚಯ ಆಯ್ತು. ಅವರ ನೋವುಗಳನ್ನು ಅನೇಕ ಸಲ ನನ್ನ ಬಳಿ ಹೇಳಿಕೊಂಡಿದ್ದಾರೆ'' ಎಂದು ನಟಿ ನಟನ ಕುರಿತು ಮಾತನಾಡಿದ್ದಾರೆ.

ನಾನು ಬಂದ್ಮೇಲೆ ಕೋಟಿ ಬರುತ್ತೆ ಎಂದಿದ್ದೆ
''ಜಗಪತಿ ಬಾಬು ಮತ್ತು ನನ್ನ ಸ್ನೇಹ ಚೆನ್ನಾಗಿತ್ತು. ಅವರು ಬೇಜಾರಾಗಿದ್ದ ಸಮಯದಲ್ಲಿ ನನ್ನನ್ನು ಕರೆಯುತ್ತಿದ್ದರು. ನಾನು ಅವರಿದ್ದ ಶೂಟಿಂಗ್ ಸೆಟ್ ಹಾಗೂ ಮನೆಗೆ ಹೋಗುತ್ತಿದ್ದೆ. ಅವರ ಕಷ್ಟ ಹಾಗೂ ನೋವನ್ನು ಹೇಳುತ್ತಿದ್ದರು. ಹೀಗೆ ಒಂದು ದಿನ ನಾನು ಅವರಿಗೆ ಹೇಳಿದ್ದೆ, ''ನಾನು ಬಂದ್ಮೇಲೆ ನಿಮ್ಮ ಕಷ್ಟ ಹೋಯ್ತು ಅಂದ್ಕೊಳ್ಳಿ, ಇನ್ಮುಂದೆ ನಿಮ್ಮ ಹತ್ರಾ ಲಕ್ಷ್ಮಿ ಬರ್ತಾಳೆ' ಅಂದಿದ್ದೆ. ಆಮೇಲೆ ಅವರು ಕೋಟಿ ಕೋಟಿ ದುಡಿದರು. ಅಂದು ನಾನು ಹೇಳಿದಂತೆ ಜಗಪತಿ ಬಾಬು ಕೋಟಿ ಗಳಿಸಿದರು. ಅವರ ಎಲ್ಲ ಲಾಭಕ್ಕೂ ನಾನೇ ಕಾರಣ ಅಂತಲ್ಲ,,,ಆದರೆ, ನನ್ನದು ಪಾತ್ರ ಇದೆ' ಎಂದು ಶ್ರೀರಾಪಕಾ ತಿಳಿಸಿದ್ದಾರೆ.

ಯಾರು ಈ ನಗ್ನಂ ಸುಂದರಿ?
ಶ್ರೀರಾಪಕಾ ತೆಲುಗು ಇಂಡಸ್ಟ್ರಿಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದರು. ಹಲವು ಸ್ಟಾರ್ ನಟ ಹಾಗೂ ನಟಿಯರಿಗೆ ವಸ್ತ್ರವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ಟಿವಿ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಸಹ ಭಾಗವಹಿಸಿದ್ದಾರೆ. ಇದನ್ನು ನೋಡಿದ ರಾಮ್ ಗೋಪಾಲ್ ವರ್ಮಾ, ನಗ್ನಂ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಮಾಡಿಕೊಂಡರು.