For Quick Alerts
  ALLOW NOTIFICATIONS  
  For Daily Alerts

  ಮತ್ತೊಮ್ಮೆ ಇತಿಹಾಸ ಸೃಷ್ಟಿಸುತ್ತದೆ ನಮ್ಮ ಕುಟುಂಬ ಎಂದ ಬಾಲಯ್ಯ

  By ರವೀಂದ್ರ ಕೊಟಕಿ
  |

  ಸಿನಿಮಾ ಮಂದಿಯ ದೃಷ್ಟಿಯಲ್ಲಿ ಚರಿತ್ರೆ ಅಂದರೆ ಸಿನಿಮಾಗಳು ಮಾಡುವ ದಾಖಲೆಗಳು. ಎಷ್ಟು ಕೇಂದ್ರಗಳಲ್ಲಿ ಚಿತ್ರ ಬಿಡುಗಡೆಯಾಯಿತು, ಎಷ್ಟು ಕೇಂದ್ರಗಳಲ್ಲಿ ಶತದಿನೋತ್ಸವ ಸಿನಿಮಾ ಕಂಡಿತು, ಸಿಲ್ವರ್ ಜುಬಿಲಿ ಎಷ್ಟು ಕೇಂದ್ರಗಳಲ್ಲಿ ಆಯಿತು. ಇದೆಲ್ಲವೂ ಕೂಡ ಒಂದು ಕಾಲದಲ್ಲಿ ಸಿನಿಮಾರಂಗದ ಇತಿಹಾಸಗಳಲ್ಲಿ ದಾಖಲಾಗುತ್ತಿತ್ತು ಇದಕ್ಕಾಗಿಯೇ ಸ್ಟಾರ್ ನಟರ ಫ್ಯಾನ್ಸ್ ಗಳ ಮಧ್ಯೆ ಕದನಗಳು ಕೂಡ ಜೋರಾಗಿ ನಡೆಯುತ್ತಿತ್ತು. ಪರೋಕ್ಷವಾಗಿ ಇಂತಹ ಕದನಗಳಿಗೆ ನಾಯಕನಟರುಗಳು ಕೂಡ ನೀರೆರೆದು ಪೋಷಿಸುತ್ತಿದ್ದರು.

  ಈಗ ಕಾಲ ಬದಲಾಗಿದೆ, ಶತದಿನೋತ್ಸವ, ಸಿಲ್ವರ್ ಜುಬಿಲಿ ಎಲ್ಲಾ ಈಗ ಮಾಯವಾಗಿದೆ. ಈಗ ಅದರ ಸ್ಥಾನದಲ್ಲಿ ಕಲೆಕ್ಷನ್‌ಗಳ ಮಹಾಯುದ್ಧ ಮೊದಲಾಗಿದೆ. ಹೀಗಾಗಿಯೇ ಅನೇಕ ಸಲ ಚಿತ್ರಕ್ಕೆ ಕಲೆಕ್ಷನ್ ಇಲ್ಲದೆ ಹೋದರೂ ಕೋಟಿಗಟ್ಟಲೆ ಕಲೆಕ್ಷನ್ ಆಗಿದೆ ಅಂತ ನಿರ್ಮಾಪಕರು ತೋರಿಸಿಕೊಳ್ಳುತ್ತಾರೆ.ಈಗಿನ ಸ್ಟಾರ್ ಅಭಿಮಾನಿಗಳ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಕೋಲ್ಡ್ ವಾರ್ ಮತ್ತು ಅವ್ಯಾಚ ಶಬ್ದಗಳ ನಿಂದನೆ ಪ್ರಸ್ತುತ ಜೋರಾಗಿಯೇ ನಡೆಯುತ್ತಿದೆ.

  ತೆಲುಗು ಸಿನಿಮಾ ರಂಗಕ್ಕೆ ಬಂದರೆ ಚಿರಂಜೀವಿ ಮತ್ತು ಬಾಲಕೃಷ್ಣ ಅಭಿಮಾನಿಗಳ ಮಧ್ಯೆ ಮೊದಲಿನಿಂದಲೂ ದೊಡ್ಡ ಕದನ ನಡೆಯುತ್ತಿತ್ತು. ಈಗ ಕಾಲ ಬದಲಾಗಿದೆ, ಇಬ್ಬರಿಗೂ ಕೂಡ ವಯಸ್ಸಾಗಿದೆ, ಹಿಂದಿನ ಆಕರ್ಷಕ ಇಬ್ಬರಲ್ಲೂ ಉಳಿದಿಲ್ಲ. ಆದರೂ ಕೂಡ ಆಗಾಗ ಚರಿತ್ರೆಯ ವಿಷಯ ಹಿಡಿದು ಬಾಲಕೃಷ್ಣ ಅಭಿಮಾನಿಗಳ ಮಧ್ಯದ ಅಂತರ್ಯುದ್ಧಕ್ಕೆ ನೀರೆರೆದು ಪೋಷಿಸುವ ಮಾತುಗಳನ್ನು ಪರೋಕ್ಷವಾಗಿ ಹೇಳುತ್ತಲೇ ಬರುತ್ತಿರುತ್ತಾರೆ.

  ಬಾಲಯ್ಯನ 'ಅಖಂಡ' ತೆರೆಗೆ ಬಂತು

  ಬಾಲಯ್ಯನ 'ಅಖಂಡ' ತೆರೆಗೆ ಬಂತು

  ನಂದಮೂರಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಕ್ಷಣ ಇದೀಗ ಬಂದಿದೆ. ಬಾಲಯ್ಯ ಬಾಬು ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಅಖಂಡ' ಇಂದು (ಡಿಸೆಂಬರ್ 2) ತೆರೆಕಂಡಿದೆ. ಬಾಲಕೃಷ್ಣ-ಬೋಯಪಾಟಿ ಕಾಂಬೊ ಹ್ಯಾಟ್ರಿಕ್ ಸಿನಿಮಾವಾಗಿದ್ದು, ಈ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದರ ಜೊತೆಗೆ ಚಿತ್ರದ ಶೂಟಿಂಗ್ ವೇಳೆ ಬೋಯಪಾಟಿ ಬಿಡುಗಡೆ ಮಾಡಿದ್ದ ಚಿತ್ರದ ಅಪ್ಡೇಟ್ಸ್, ಟೀಸರ್ ಮತ್ತು ಟ್ರೈಲರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

  'ಅಖಂಡ' ಟ್ವಿಟರ್ ವಿಮರ್ಶೆ

  'ಅಖಂಡ' ಟ್ವಿಟರ್ ವಿಮರ್ಶೆ

  'ಅಖಂಡ' ಚಿತ್ರವನ್ನು ನೋಡಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಈಗ ಚಿತ್ರ ಬಿಡುಗಡೆಯಾದ ಮೇಲೆ ನೋಡಿರುವಂತಹ ಪ್ರೇಕ್ಷಕರಿಂದ ಚಿತ್ರಕ್ಕೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ ಬಾಲಕೃಷ್ಣ ಅಘೋರ ಪಾತ್ರಧಾರಿಯಾಗಿ ಅದ್ಭುತವಾದ ಪರ್ಫಾರ್ಮೆನ್ಸ್ ಮಾಡಿದ್ದಾರೆ ಅಂತ ಪ್ರೇಕ್ಷಕರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಸಿನಿ ವಿಮರ್ಶಕರಿಂದಲೂ ಉತ್ತಮವಾದ ಅಭಿಪ್ರಾಯ ಚಿತ್ರದ ಬಗ್ಗೆ ಕೇಳಿ ಬರುತ್ತಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಚಿತ್ರ ನೋಡಿದವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಅದರಲ್ಲೂ ವಿಶೇಷವಾಗಿ ಟ್ವಿಟರ್ ವೇದಿಕೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಬಾಲಯ್ಯ ಬಾಬು ಅವರಿಗೆ ಹಲವು ಸಿನಿಮಾ ಸೆಲೆಬ್ರಿಟಿಗಳು ಆಲ್ ದಿ ಬೆಸ್ಟ್ ಹೇಳುತ್ತಿದ್ದಾರೆ. ಪ್ರೇಕ್ಷಕರ ಮಾತು ಮತ್ತು ಟ್ವಿಟ್ಟರ್ ಪೋಸ್ಟ್‌ಗಳನ್ನು ಆಧರಿಸಿ, ಚಿತ್ರವು ಪ್ರೇಕ್ಷಕರ ನಿರೀಕ್ಷೆಯನ್ನು ತಲುಪಿದೆ ಎಂದು ತೋರುತ್ತದೆ.

  ಫಸ್ಟ್ ಆಫ್ ಓಕೆ, ಸೆಕೆಂಡ್ ಆಫ್ ಸೂಪರ್

  ಫಸ್ಟ್ ಆಫ್ ಓಕೆ, ಸೆಕೆಂಡ್ ಆಫ್ ಸೂಪರ್

  'ಅಖಂಡ' ನೋಡಿದ ಬಹುತೇಕ ಮಂದಿ ಅದರಲ್ಲೂ ವಿಶೇಷವಾಗಿ ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿರುವ ಮಾತಿನಲ್ಲಿ ಹೇಳುವುದಾದರೆ, ಫಸ್ಟಾಫ್ ಸರಿಯಲ್ಲ ಎನ್ನುತ್ತಾ, ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುವಂತೆ ಕಿಕ್ ಕೊಡುವ ದೃಶ್ಯಗಳೊಂದಿಗೆ ಬೋಯಪಾಟಿಯ ಮಾರ್ಕ್ ಅನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ದ್ವಿತಿಯಾರ್ಧದಲ್ಲಿ ಮಾಸ್ ಅಂಶಗಳೊಂದಿಗೆ ಚಿತ್ರವು ಪ್ರಭಾವಶಾಲಿಯಾಗಿದೆ. ಎಂದಿನಂತೆ, ಬಾಲಕೃಷ್ಣ ಅವರು ಸಂಪೂರ್ಣ ಮತ್ತು ನೈಜವಾದ ಅಭಿನಯವನ್ನು ತೋರಿಸಿದರೆ, ನಾಯಕಿ ಪ್ರಜ್ಞಾ ಜೈಸ್ವಾಲ್, ಜಗಪತಿ ಬಾಬು ಮತ್ತು ಶ್ರೀಕಾಂತ್ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಬಾಲಕೃಷ್ಣ-ಬೋಯಪಾಟಿ ಕಾಂಬಿನೇಷನ್ ಅಭಿಮಾನಿಗಳು ಮತ್ತು ಪ್ರೇಕ್ಷಕರ ನಿರೀಕ್ಷೆಯ ನಿರೀಕ್ಷೆ ಹುಸಿಗೊಳಿಸಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  'ಅಖಂಡ' ಮಾಸ್ ಎಂಟರ್ಟೈನ್ಮೆಂಟ್

  'ಅಖಂಡ' ಮಾಸ್ ಎಂಟರ್ಟೈನ್ಮೆಂಟ್

  ಸಿನಿಮಾದಲ್ಲಿ ಹಿನ್ನೆಲೆ ಸಂಗೀತ ಪ್ರಮುಖ ಆಕರ್ಷಣೆ, "ಇದು ಸಂಪೂರ್ಣ ಮಾಸ್ ಪ್ಯಾಕೇಜ್" ಎಂದು ಸಂಗೀತ ನಿರ್ದೇಶಕ ಎಸ್ ಎಸ್ ತಮನ್ ಟ್ವೀಟ್ ಮಾಡಿದ್ದಾರೆ. ಬಾಲಕೃಷ್ಣ ಅಘೋರ ಅವರ ಪಾತ್ರ ಚಿತ್ರದ ಹೈಲೈಟ್ ಪಾಯಿಂಟ್ ಎನ್ನಲಾಗಿದೆ. ನಂದಮೂರಿ ಬಾಲಕೃಷ್ಣ ಡೈಲಾಗ್‌ಗಳು ಮತ್ತು ದೃಶ್ಯಗಳನ್ನು ನೋಡುತ್ತಾ ಅವರ ಅಭಿಮಾನಿಗಳ ಚಿತ್ರಮಂದಿರಗಳಲ್ಲಿ ಶಿಳ್ಳೆ ಹೊಡೆಯುತ್ತಿದ್ದಾರೆ. ಒಟ್ಟಿನಲ್ಲಿ ಈ 'ಅಖಂಡ' ಸಿನಿಮಾ ಬಾಲಕೃಷ್ಣ ಅಭಿಮಾನಿಗಳಿಗೆ ಭರ್ಜರಿ ಟ್ರೀಟ್ ಕೊಡುವಂತಿದೆ ಎಂಬ ಮಾತು ಕೇಳಿಬರುತ್ತಿದೆ. ಮಾಸ್ ಎಲಿಮೆಂಟ್ಸ್ ಪ್ರತಿ ಹಂತದಲ್ಲೂ ಶಿಳ್ಳೆ ಹೊಡೆಯುವ ದೃಶ್ಯಗಳಿವೆ. ಮಕ್ಕಳು, ದೇವಸ್ಥಾನ, ದೇವರು, ಪ್ರಕೃತಿ ಹೀಗೆ ಎಲ್ಲದರ ಹಿನ್ನೆಲೆಯಲ್ಲಿ ಭಾವನೆಗಳನ್ನು ಬೆಸೆದುಕೊಂಡು ಬೋಯಪಾಟಿ ಮ್ಯಾಜಿಕ್ ರಿಪೀಟ್ ಮಾಡಿದ್ದಾರೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ದ್ವಾರಕಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಮಿರ್ಯಾಲ ರವೀಂದರ್ ರೆಡ್ಡಿ ನಿರ್ಮಿಸಿರುವ ಈ ಚಿತ್ರದಲ್ಲಿ ಪೂರ್ಣ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಯ್ಯ ಬಾಬುಗೆ ನಾಯಕಿಯಾಗಿ ಪ್ರಜ್ಞಾ ಜೈಸ್ವಾಲ್ ನಟಿಸಿದ್ದಾರೆ. ಶ್ರೀಕಾಂತ್ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಜಗಪತಿ ಬಾಬು ಒಂದು ಬಹುಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ.

  ''ಚರಿತ್ರೆ ಬರೆದವರು ನಾವೇ, ಪುನಃಸೃಷ್ಟಿಸೋರು ನಾವೇ''

  ''ಚರಿತ್ರೆ ಬರೆದವರು ನಾವೇ, ಪುನಃಸೃಷ್ಟಿಸೋರು ನಾವೇ''

  'ಅಖಂಡ' ಚಿತ್ರ ಮೊದಲ ದಿನದ ಮೊದಲ ಶೋ ಇಂದಲೇ ಪಾಸಿಟಿವ್ ಟಾಕ್ ಪಡೆಯುತ್ತಿದ್ದಂತೆ ಚಿತ್ರತಂಡ ಗುರುವಾರ ಸಂಜೆ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದು. ಇಲ್ಲಿ ಸಾಕಷ್ಟು ಲವಲವಿಕೆಯಿಂದ ಕಂಡುಬಂದ ಬಾಲಕೃಷ್ಣ ಅವರು ಚಿತ್ರದ ಯಶಸ್ಸಿನ ಬಗ್ಗೆ ಮಾತನಾಡುತ್ತಾ "ಅಖಂಡ ಮೊದಲ ದಿನದ ಮೊದಲ ಶೋ ಇಂದಲೇ ಸೂಪರ್ ಹಿಟ್ ಟಾಕ್ ಬಂದಿದೆ. ಇದು ನಮ್ಮೆಲ್ಲರ ಪ್ರಯತ್ನಕ್ಕೆ ಸಂದ ಗೆಲುವು. ನೀವು ಇತಿಹಾಸ ತೆಗೆದುಕೊಂಡರೆ ಇತಿಹಾಸ ಸೃಷ್ಟಿಸಿದವರು (ನಂದಮೂರಿ ಕುಟುಂಬದವರು) ಮತ್ತೆ ಇತಿಹಾಸವನ್ನು ರಚಿಸುವರು ಕೂಡ ನಾವೇ" ಅಂತ ಹೇಳಿಕೊಂಡು ಬಂದಿದ್ದಾರೆ.

  ಅಂಕಲ್... ಅಂತ ಕರೆದರೆ ಇಷ್ಟ ಆಗಲ್ಲ

  ಅಂಕಲ್... ಅಂತ ಕರೆದರೆ ಇಷ್ಟ ಆಗಲ್ಲ

  ನಂದಮೂರಿ ಬಾಲಕೃಷ್ಣ ಅವರಿಗೆ ಸದ್ಯ 61 ವರ್ಷ. ಆದರೆ, ಬಾಲಯ್ಯ ಚಿಕ್ಕವಯಸ್ಸಿನಲ್ಲಿದ್ದ ಅದೇ ಎನರ್ಜಿಯಲ್ಲಿ ಈಗಲೂ ಸಿನಿಮಾ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ (ಡಿಸೆಂಬರ್ 2) ಅವರು ನಾಯಕನಾಗಿ ನಟಿಸಿರುವ 'ಅಖಂಡ' ಚಿತ್ರ ಗ್ರ್ಯಾಂಡ್ ಆಗಿ ತೆರೆಕಂಡಿದೆ. ಕರೋನಾ ದುರಂತದ ನಂತರ ತೆಲುಗು ಚಿತ್ರರಂಗಕ್ಕೆ ಪೂರ್ವ ವೈಭವವನ್ನು ತರುವುದರಲ್ಲಿ 'ಅಖಂಡ' ಚಿತ್ರ ಯಶಸ್ವಿಯಾಗಿದೆ ಎಂಬ ಮಾತು ಚಿತ್ರತಂಡದಿಂದ ಕೇಳಿಬಂದಿದೆ. ಅದೇ ಖುಷಿಯಲ್ಲಿ ಪ್ರೆಸ್ ಮೀಟ್ ನಲ್ಲಿ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತಾ ಬಾಲಯ್ಯ ಕುತೂಹಲಕಾರಿ ಮಾತುಗಳನ್ನಾಡಿದ್ದಾರೆ. "ತೆಲುಗು ಪ್ರೇಕ್ಷಕರು ಯಾವಾಗಲೂ ಹೊಸದನ್ನು ಆಧರಿಸುತ್ತಾ ಬಂದಿದ್ದಾರೆ. ಮೊದಲ ಶೋದಲ್ಲೇ ಹಿಟ್ ಟಾಕ್ ಪಡೆದಿರುವ ಸಿನಿಮಾವನ್ನು ಹೈದರಾಬಾದ್ ನ ಥಿಯೇಟರ್ ನಲ್ಲಿ ಅಭಿಮಾನಿಗಳೊಂದಿಗೆ ವೀಕ್ಷಿಸಿದೆ. ಆದರೆ, ಮಧ್ಯಂತರದಲ್ಲಿ ಕೆಲವು ಮಕ್ಕಳು ತಮ್ಮ ಬಳಿ ಬಂದು 'ಅಂಕಲ್ ಸಿನಿಮಾ ಅದ್ಭುತವಾಗಿದೆ...' ಎಂದು ಹೇಳಿದರು.ಆದರೆ ಯಾಕೋ ಮಕ್ಕಳು ಅಂಕಲ್ ಅಂತ ಅಂದಿದ್ದು ನನಗೆ ಇಷ್ಟ ಆಗಲಿಲ್ಲ. ನಾನು ಇನ್ನೂ ಯಂಗ್ ಹೀರೋ ಅನ್ಕೊಂಡಿದ್ದೀನಿ" ಅಂತ ಫನ್ನಿ ಕಾಮೆಂಟ್ ಮಾಡಿ ನಕ್ಕಿದ್ದಾರೆ.

  English summary
  we created the history and we will re create the history. addressing in a press meet balakrishna said success of Akhanda is not only success of his team but it's Telugu film industry success.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X