Don't Miss!
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- News
Bill Pending: ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ: ಕೆಸಿ ಜನರಲ್ ಆಸ್ಪತ್ರೆಗೆ ಬೆಸ್ಕಾಂ ನೋಟಿಸ್
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗನ್ ತೋರಿಸಿ ಹೆದರಿಸಿದ್ದ ನರೇಶ್: ರಮ್ಯಾ ರಘುಪತಿ ಆರೋಪ
ನರೇಶ್-ಪವಿತ್ರಾ ಲೋಕೇಶ್ ಪ್ರಕರಣದ ಕೇಂದ್ರದಲ್ಲಿರುವ ಪ್ರತಿಯೊಬ್ಬರು ಒಂದೊಂದು ರೀತಿಯ ಹೇಳಿಕೆಗಳನ್ನು, ಪರಸ್ಪರರ ಮೇಲೆ ಮೂದಲಿಕೆಗಳನ್ನು, ಆರೋಪಗಳನ್ನು ಮಾಡುತ್ತಲೇ ಇದ್ದಾರೆ.
ಎರಡು ದಿನದ ಹಿಂದೆ ಬೆಂಗಳೂರಿಗೆ ಬಂದಿದ್ದ ನಟ ನರೇಶ್ ತಮ್ಮ ಮೂರನೇ ಪತ್ನಿ ರಮ್ಯಾ ರಘುಪತಿ ವಿರುದ್ಧ ಸರಣಿ ಆರೋಪಗಳನ್ನು ಮಾಡಿ ಹೋಗಿದ್ದಾರೆ. ನಿನ್ನೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಪವಿತ್ರಾ ಲೋಕೇಶ್ ಸಹ ರಮ್ಯಾ ರಘುಪತಿ ವಿರುದ್ಧ ಹರಿಹಾಯ್ದಿದ್ದರು.
ಪವಿತ್ರಾ ಲೋಕೇಶ್ ಮಾಧ್ಯಮ ಹೇಳಿಕೆ ನೀಡಿದ ಬಳಿಕ ಮಾತನಾಡಿರುವ ರಮ್ಯಾ ರಘುಪತಿ, ನರೇಶ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮಗೆ ಬಂದೂಕು ತೋರಿಸಿ ನರೇಶ್ ಹೆದರಿಸಿದ್ದಾಗಿ ಹೇಳಿದ್ದಾರೆ.

ಬಂದೂಕು ತೋರಿಸಿ ಹೆದರಿಸಿದ್ದರು: ರಮ್ಯಾ
ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ರಮ್ಯಾ ರಘುಪತಿ, ''ನರೇಶ್, ನನಗೆ ಬಂದೂಕು ತೋರಿಸಿ ಹೆದರಿಸಿದ್ದರು. ಬಂದೂಕು ತೆಗೆದುಕೊಂಡು ನನ್ನ ಮುಂದೆ ಇಟ್ಟು, ವಿಚ್ಛೇಧನ ಆಗುವುದಂತೂ ಖಾಯಂ, ವಿಚ್ಛೇಧನ ಪತ್ರಕ್ಕೆ ಸುಮ್ಮನೆ ಸಹಿ ಮಾಡಬೇಕು, ಏಕೆ-ಏನು ಎಂದು ಕೇಳಬಾರದು ಎಂದಿದ್ದರು'' ಎಂದಿದ್ದಾರೆ.

ಬಂದೂಕಿಗೆ ಗುಂಡು ಹಾಕುತ್ತಾ ಸಿನಿಮೀಯ ಶೈಲಿ ಡೈಲಾಗ್
''ಬಂದೂಕನ್ನು ನನ್ನ ಮುಂದೆ ಇಡುವುದು, ಕೈಗೆ ತೆಗೆದುಕೊಂಡು ಬುಲೆಟ್‌ಗಳನ್ನು ಒಂದೊಂದಾಗಿಯೇ ಬಂದೂಕಿಗೆ ಹಾಕುತ್ತಾ ಸಿನಿಮೀಯ ಮಾದರಿಯಲ್ಲಿ ಬೆದರಿಕೆ ಹಾಕುವುದು ಮಾಡುತ್ತಿದ್ದರು. ಅವರ ಬಳಿ ಪರವಾನಗಿ ಇರುವ ಬಂದೂಕಿದೆ ಆದರೆ ಅದರ ಪರವಾನಗಿ ನವೀಕರಣ ಮಾಡಿಸಿದ್ದಾರೊ ಇಲ್ಲವೊ ಗೊತ್ತಿಲ್ಲ'' ಎಂದಿರುವ ರಮ್ಯಾ, ''ಆತನನ್ನು ಮದುವೆಯಾದ ದಿನವೇ ನಾನೇ ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು, ಅಂಥ ಕೆಟ್ಟ ವ್ಯಕ್ತಿದವನು ಅವನು'' ಎಂದಿದ್ದಾರೆ.

ನಾಯಿಗಳನ್ನು ಬಿಟ್ಟುಬಿಡುತ್ತಿದ್ದರು: ರಮ್ಯಾ
''ಅದು ಮಾತ್ರವೇ ಅಲ್ಲದೆ, ನನ್ನ ವಿರುದ್ಧ ನಾಯಿಗಳನ್ನು ಬಿಡುವ ಅಭ್ಯಾಸ ಮಾಡಿಕೊಂಡಿದ್ದರು. ನನ್ನ ಮಗನನ್ನು ಕರೆದುಕೊಂಡು ಸಿನಿಮಾಕ್ಕೆ ಹೋದರೆ ಅಥವಾ ಬೇರೆ ಯಾವುದೋ ಸಾಮಾಜಿಕ ಕಾರ್ಯಕ್ಕೆ ಹೋಗಿ ಮನೆಗೆ ಬರುವುದು ತಡವಾದರೆ, ಕಾಂಪೌಡ್ ಒಳಗೆ ನಾಯಿಗಳನ್ನು ಬಿಟ್ಟುಬಿಡುತ್ತಿದ್ದರು. ಅವುಗಳ ಭಯಕ್ಕೆ ನಾನು ಹಲವು ಬಾರಿ ನನ್ನ ತಂಗಿಯ ಮನೆಯಲ್ಲಿ ಮಲಗಿದ್ದೇನೆ'' ಎಂದಿದ್ದಾರೆ ರಮ್ಯಾ.

ನರೇಶ್ ಸುಳ್ಳು ಆರೋಪ ಮಾಡಿದ್ದಾರೆ: ರಮ್ಯಾ
ಹಣ ವಂಚನೆ ಮಾಡಿರುವ ಬಗ್ಗೆ ನರೇಶ್ ಮಾಡಿರುವ ಆರೋಪದ ಬಗ್ಗೆ ಮಾತನಾಡಿದ ರಮ್ಯಾ, ''ಆತ ಸುಳ್ಳು ಹೇಳುತ್ತಿದ್ದಾನೆ. ಮಾಧ್ಯಮದವರು ಅವನ ಸುಳ್ಳು ಆರೋಪಗಳನ್ನು ನಂಬಬಾರದು. ಈ ಹಿಂದೆ ಸಹ ಹಲವು ಬಾರಿ ನರೇಶ್ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಆತನೇ ನನ್ನ ವಿರುದ್ಧ ಸುಳ್ಳು ವರದಿಗಳನ್ನು ಪ್ರಕಟಿಸಿರುವ ಬಗ್ಗೆ ಸಾಕ್ಷಿ ಸಹ ನನ್ನ ಬಳಿ ಇದೆ'' ಎಂದಿದ್ದಾರೆ ರಮ್ಯಾ.