For Quick Alerts
  ALLOW NOTIFICATIONS  
  For Daily Alerts

  ತಣ್ಣಗಿದ್ದ ತೆಲುಗು ಸಿನಿರಂಗದಲ್ಲಿ ಆತಂಕ ಎಬ್ಬಿಸಿದ ನಟಿಯ 'ಡ್ರಗ್ಸ್' ಹೇಳಿಕೆ!

  |

  ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಪ್ರಸ್ತುತ ಕೇವಲ ಡ್ರಗ್ಸ್‌ ನದ್ದಷ್ಟೇ ಮಾತು. ಸುಶಾಂತ್ ಸಾವಿಗೂ ಡ್ರಗ್ಸ್ ಜಾಲಕ್ಕೂ ಸಂಬಂಧವಿದೆಯೆಂಬ ಅನುಮಾನದ ಮೇಲೆ ಪ್ರಾರಂಭವಾದ ತನಿಖೆ ಈಗ ದೊಡ್ಡ ಮಟ್ಟಕ್ಕೆ ತಲುಪಿದೆ.

  ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ತನಿಖೆ ತೀವ್ರವಾಗಿ ನಡೆಯುತ್ತಿದ್ದು, ಎರಡೂ ಕಡೆ ಸ್ಟಾರ್ ನಟಿಯರು ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ದೇಶದ ಉಳಿದ ಸಿನಿಮಾ ರಂಗಗಳು ಆತಂಕದಿಂದಲೇ ಈ ಪ್ರಕರಣವನ್ನು ಗಮನಿಸುತ್ತಿವೆ.

  ಡ್ರಗ್ಸ್ ಪ್ರಕರಣದಲ್ಲಿ ರಕುಲ್ ಹೆಸರು, ಹಳೇ ಫೋಟೋ ವೈರಲ್, ಟಾಲಿವುಡ್‌ಗೂ ಆತಂಕ!ಡ್ರಗ್ಸ್ ಪ್ರಕರಣದಲ್ಲಿ ರಕುಲ್ ಹೆಸರು, ಹಳೇ ಫೋಟೋ ವೈರಲ್, ಟಾಲಿವುಡ್‌ಗೂ ಆತಂಕ!

  ಹಿಂದೊಮ್ಮೆ ಡ್ರಗ್ಸ್ ಪ್ರಕರಣದಿಂದ ಸಖತ್ ಸುದ್ದಿಗೆ ಗ್ರಾಸವಾಗಿದ್ದ ತೆಲುಗು ಸಿನಿರಂಗವನ್ನು ತನ್ನ ನೆರೆಯ ಕನ್ನಡ ಸಿನಿಮಾರಂಗದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಬಿಟ್ಟಕಣ್ಣಿನಿಂದ ಗಮನಿಸುತ್ತಿದೆ. ಆದರೆ ಈ ಮಧ್ಯೆ ನಟಿಯೊಬ್ಬರು ನೀಡಿರುವ ಹೇಳಿಕೆ ತೆಲುಗು ಸಿನಿಮಾರಂಗದ ಕೆಲವರಿಗೆ ಆತಂಕಕ್ಕೆ ಕಾರಣವಾಗಿದೆ.

  ತೆಲುಗು ಸಿನಿಮಾರಂಗ ತನಿಖೆ ಆಗಬೇಕು: ನಟಿ ಮಾಧವಿ ಲತಾ

  ತೆಲುಗು ಸಿನಿಮಾರಂಗ ತನಿಖೆ ಆಗಬೇಕು: ನಟಿ ಮಾಧವಿ ಲತಾ

  ತೆಲುಗು ನಟಿ ಮಾಧವಿ ಲತಾ, ಸಿನಿಮಾ ರಂಗಗಳಲ್ಲಿ ಡ್ರಗ್ಸ್ ಬಗ್ಗೆ ಮಾತನಾಡಿದ್ದು, 'ಮೊದಲು ತೆಲುಗು ಸಿನಿಮಾರಂಗದಲ್ಲಿ ಡ್ರಗ್ಸ್ ಬಗ್ಗೆ ತನಿಖೆ ಮಾಡಬೇಕು' ಎಂದಿದ್ದಾರೆ. ಹಾಗೋ-ಹೀಗೋ ಪ್ರಸ್ತುತ ನಡೆಯುತ್ತಿರುವ ಡ್ರಗ್ಸ್ ಪ್ರಕರಣದಿಂದ ದೂರವಿದ್ದ ತೆಲುಗು ಸಿನಿರಂಗಕ್ಕೆ ನಟಿ ನೀಡಿರುವ ಹೇಳಿಕೆ ಮುಜುಗರ ತಂದಿದೆ. ಜೊತೆಗೆ ಟಾಲಿವುಡ್‌ನಲ್ಲೂ ತನಿಖೆ ಪ್ರಾರಂಭವಾಗುತ್ತದೆಯಾ ಎಂಬ ಭಯವನ್ನೂ ತಂದಿದೆ.

  ಡ್ರಗ್ಸ್ ಇಲ್ಲದ ಪಾರ್ಟಿಗಳು ಬಹಳ ವಿರಳ: ಮಾಧವಿ ಲತಾ

  ಡ್ರಗ್ಸ್ ಇಲ್ಲದ ಪಾರ್ಟಿಗಳು ಬಹಳ ವಿರಳ: ಮಾಧವಿ ಲತಾ

  ಮಾಧವಿ ಲತಾ ಹೇಳಿರುವ ಪ್ರಕಾರ, ತೆಲುಗು ಸಿನಿಮಾ ರಂಗದಲ್ಲಿ ಡ್ರಗ್ಸ್‌ ಪಾರ್ಟಿಗಳು ಬಹಳ ಸಾಮಾನ್ಯವಂತೆ. ಲಾಕ್‌ಡೌನ್ ಸಮಯದಲ್ಲಿ ಸಹ ಚಿತ್ರರಂಗದ ಹಲವರು ಡ್ರಗ್ಸ್‌ ಪಾರ್ಟಿಗಳನ್ನು ಭಾಗವಹಿಸಿದ್ದರು ಎಂದಿದ್ದಾರೆ ಮಾಧವಿ ಲತಾ.

  ಸ್ಯಾಂಡಲ್‌ವುಡ್ ಡ್ರಗ್ಸ್ ನಂಟು ಪ್ರಕರಣ: ಮತ್ತೆ ಮೂವರ ಬಂಧನಸ್ಯಾಂಡಲ್‌ವುಡ್ ಡ್ರಗ್ಸ್ ನಂಟು ಪ್ರಕರಣ: ಮತ್ತೆ ಮೂವರ ಬಂಧನ

  ತೆಲುಗು ಚಿತ್ರರಂಗವನ್ನು ತನಿಖೆಗೆ ಒಳಪಡಿಸಿ: ನಟಿ ಒತ್ತಾಯ

  ತೆಲುಗು ಚಿತ್ರರಂಗವನ್ನು ತನಿಖೆಗೆ ಒಳಪಡಿಸಿ: ನಟಿ ಒತ್ತಾಯ

  ಎನ್‌ಸಿಬಿ ಅಧಿಕಾರಿಗಳು ತೆಲುಗು ಚಿತ್ರರಂಗವನ್ನು ಸಹ ತನಿಖೆಗೆ ಒಳಪಡಿಸಬೇಕು, ಹಲವು ನಟ-ನಟಿಯರು ಡ್ರಗ್ಸ್ ಸೇವಿಸುವುದನ್ನು ನಾನು ನೋಡಿದ್ದೇನೆ. ಡ್ರಗ್ಸ್‌ ಸರಬರಾಜು ಹಿಂದೆ ದೊಡ್ಡ ಮಾಫಿಯಾ ಇದೆ ಎಂಬ ಕಾರಣಕ್ಕೆ ಈವರೆಗೆ ಮಾತನಾಡಿರಲಿಲ್ಲ. ಈಗ ಎನ್‌ಸಿಬಿ ಅಧಿಕಾರಿಗಳು ತನಿಖೆ ಮಾಡುತ್ತಿರುವ ಕಾರಣ ಮಾತನಾಡುತ್ತಿದ್ದೇನೆ ಎಂದರು.

  ಪತ್ನಿ Revathi ಕಾಲೆಳೆದ Nikhil Kumaraswamy | Oneindia Kannada
  ತೆಲುಗು ಸಿನಿರಂಗದ ಕೆಲವರ ಬಂಧನವಾಗಿತ್ತು

  ತೆಲುಗು ಸಿನಿರಂಗದ ಕೆಲವರ ಬಂಧನವಾಗಿತ್ತು

  ಈ ಹಿಂದೊಮ್ಮೆ ತೆಲುಗು ಸಿನಿಮಾ ರಂಗದಲ್ಲಿ ಡ್ರಗ್ಸ್ ಬಳಕೆ ಬಗ್ಗೆ ಬೆಳಕಿಗೆ ಬಂದಿತ್ತು. ನಟ ರವಿತೇಜಾ ಸಹೋದರ ಸೇರಿ ಹಲವರು ಈ ಪ್ರಕರಣದಲ್ಲಿ ಬಂಧಿತರಾಗಿದ್ದರು. ಈಗ ಕನ್ನಡ ಸಿನಿಮಾದಲ್ಲಿ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದಿದ್ದು ನಟಿ ರಾಗಿಣಿ, ಸಂಜನಾ ಸೇರಿ ಹಲವರು ಬಂಧನಕ್ಕೆ ಒಳಗಾಗಿದ್ದಾರೆ.

  English summary
  Narcotics Control Bureau must investigate Tollywood about drug parties said actress Madhavi Lata.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X