Don't Miss!
- Sports
Aus vs SL 1st Test: ಮೊದಲ ದಿನವೇ 13 ವಿಕೆಟ್ ಪತನ, ಶ್ರೀಲಂಕಾ 214ರನ್ಗೆ ಆಲೌಟ್
- Finance
ಜೂ.29ರ ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ
- News
ರಾಜಸ್ಥಾನದ ಕಾಂಗ್ರೆಸ್ ಸರಕಾರ ವಜಾಗೊಳಿಸುವಂತೆ ನಳಿನ್ ಕುಮಾರ್ ಕಟೀಲ್ ಆಗ್ರಹ
- Automobiles
ಸುರಕ್ಷತಾ ಮಾನದಂಡಗಳನ್ನು ರಾಜಿ ಮಾಡಿಕೊಳ್ಳಲು ಕಾರು ಕಂಪನಿಗಳ ಸಭೆ ಕರೆದ ನಿತಿನ್ ಗಡ್ಕರಿ
- Education
IWST Recruitment 2022 : 13 ಪ್ರಾಜೆಕ್ಟ್ ಫೆಲೋ ಮತ್ತು ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಬಿಳಿ ನಾಲಿಗೆ ನೀಡುತ್ತದೆ ಅರೋಗ್ಯದ ಬಗ್ಗೆ ಆಪಾಯದ ಮುನ್ಸೂಚನೆ
- Technology
ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್ನಲ್ಲಿ ಈ ಫೋನ್ಗಳಿಗೆ ಬಿಗ್ ಆಫರ್!
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಕಾಲಲ್ಲಿ ಕೀರ್ತಿ ಸುರೇಶ್ ಮೈ ಮುಟ್ಟಿದ ಮಹೇಶ್: ಛೀ.. ಎಂದ ನೆಟ್ಟಿಗರು
ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಸಿನಿಮಾವು 200 ಕೋಟಿ ಗಳಿಕೆ ದಾಟಿದೆ.
ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿರುವ ಬೆನ್ನಲ್ಲೆ ವಿವಾದವೊಂದು ಬೆನ್ನು ಹತ್ತಿದೆ. ಸಿನಿಮಾದಲ್ಲಿ ಮಹೇಶ್ ಬಾಬು ಹಾಡಿನ ದೃಶ್ಯವೊಂದರಲ್ಲಿ ನಾಯಕಿ ಕೀರ್ತಿ ಸುರೇಶ್ ಅನ್ನು ಮುಟ್ಟಿರುವ ರೀತಿ ವಿವಾದಕ್ಕೆ ಕಾರಣವಾಗಿದೆ.
ದೃಶ್ಯವೊಂದರಲ್ಲಿ ನಾಯಕ ನಟ ಮಹೇಶ್ ಬಾಬು ಬಲವಂತದಿಂದ ಅಥವಾ ಬೆದರಿಕೆ ಒಡ್ಡಿ ನಾಯಕಿ ಕೀರ್ತಿ ಸುರೇಶ್ ಅನ್ನು ತನ್ನ ಪಕ್ಕ ಮಲಗಿಕೊಳ್ಳುವಂತೆ ಮಾಡುತ್ತಾನೆ. ನಂತರ ತನ್ನ ಕಾಲನ್ನು ಆಕೆಯ ಮೇಲೆ ಹಾಕುತ್ತಾನೆ. ಈ ದೃಶ್ಯ ಚರ್ಚೆಗೆ ಕಾರಣವಾಗಿದೆ. ಈ ದೃಶ್ಯ ವಲ್ಗರ್ ಆಗಿದೆಯೆಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದರೆ ಈಗ 'ಸರ್ಕಾರು ವಾರಿ ಪಾಟ' ಸಿನಿಮಾದ ನಿರ್ದೇಶಕ ಪರಶುರಾಮ್, ಆ ದೃಶ್ಯದ ಬಗ್ಗೆ ನೀಡಿರುವ ಹೇಳಿಕೆ ವಿವಾದವನ್ನು ಇನ್ನಷ್ಟು ದೊಡ್ಡದಾಗಿಸಿದೆ.
ಮಾಧ್ಯಮಗಳ ಪ್ರಶ್ನೆಗೆ ಉತ್ತಿರಿಸಿರುವ ನಿರ್ದೇಶಕ ಪರಶುರಾಮ್, ''ಆ ದೃಶ್ಯದಲ್ಲಿ ಏನು ತಪ್ಪಿದೆ. ಮಗುವೊಬ್ಬ ತನ್ನ ತಾಯಿಯೊಂದಿಗೆ ಮಲಗಲು ಆಸೆ ಪಟ್ಟಂತೆ ಅಲ್ಲಿ ನಾಯಕ, ನಾಯಕಿಯ ಪಕ್ಕ ಮಲಗಿದ್ದಾನೆ'' ಎಂದಿದ್ದಾರೆ. ಪರಶುರಾಮ್‌ರ ಈ ಅಪ್ರಬುದ್ಧ ಹೇಳಿಕೆಯನ್ನು ನೆಟ್ಟಿಗರು ತೀಕ್ಷ್ಣವಾಗಿ ಖಂಡಿಸಿದ್ದಾರೆ.
''ಆ ದೃಶ್ಯ ಅಸಹ್ಯಕರವಾಗಿ ಇದ್ದಿದ್ದರೆ ಮಹೇಶ್ ಬಾಬು ಅವರೇ ಆ ದೃಶ್ಯದಲ್ಲಿ ನಟಿಸಲು ಒಪ್ಪುತ್ತಿರಲಿಲ್ಲ. ಅಲ್ಲದೆ ಆ ದೃಶ್ಯ ತೆಗೆದು ಹಾಕುವಂತೆ ನನಗೆ ಹೇಳುತ್ತಿದ್ದರು. ಆದರೆ ಯಾವುದೇ ಸಮಸ್ಯೆ ಇಲ್ಲದೆ ಮಹೇಶ್ ಬಾಬು ಹಾಗೂ ನಟಿ ಕೀರ್ತಿ ಸುರೇಶ್ ಇಬ್ಬರೂ ಆ ದೃಶ್ಯದಲ್ಲಿ ನಟಿಸಿದ್ದಾರೆ'' ಎಂದಿದ್ದಾರೆ ಪರಶುರಾಮ್.
ಆದರೆ ನೆಟ್ಟಿಜನರು, ನಿರ್ದೇಶಕ ಪರಶುರಾಮ್ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ''ಕೆಟ್ಟ ದೃಶ್ಯವನ್ನು ತೆಗೆದಿರುವುದಲ್ಲದೆ, ಅದನ್ನು ಕೆಟ್ಟ ರೀತಿಯಲ್ಲಿ ಸಮಜಾಯಿಷಿ ಕೊಡುತ್ತಿದ್ದೀರಿ. ಪ್ರೇಯಸಿಗೂ ತಾಯಿಗೂ ಹೋಲಿಸುವುದನ್ನು ಬಿಡಿ'' ಎಂದಿದ್ದಾರೆ. ಇನ್ನು ಕೆಲವರು ನಾಯಕಿಯನ್ನು ಭೋಗದ ವಸ್ತುಗಳನ್ನಾಗಿ ಸಿನಿಮಾಗಳಲ್ಲಿ ತೋರಿಸಲಾಗುತ್ತಿದೆ, ನಾಯಕ ಮಾಡುವ ಎಲ್ಲ ಅನಾಚರಕ್ಕೂ 'ಹೀರೋಯಿಸಂ' ಬ್ರ್ಯಾಂಡ್ ಮಾಡಲಾಗುತ್ತಿದೆ. ಕೆಲವು ಸಿನಿಮಾಗಳಲ್ಲಿ ವಿಲನ್‌ಗಳಿಗಿಂತಲೂ ಕೆಟ್ಟದಾಗಿ ನಾಯಕರು, ನಾಯಕಿಯರೊಟ್ಟಿಗೆ ನಡೆದುಕೊಂಡಿದ್ದಾರೆ'' ಎಂದು ಕೆಲವು ಉದಾಹರಣೆಗಳನ್ನೂ ಸಹ ನೆಟ್ಟಿಗರು ನೀಡಿದ್ದಾರೆ.
'ಸರ್ಕಾರು ವಾರಿ ಪಾಟ' ಸಿನಿಮಾ ಬ್ಯಾಂಕ್ ವ್ಯವಸ್ಥೆ ಕುರಿತಾದ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಮಹೇಶ್ ಬಾಬು ಎದುರು ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್ ನಟಿಸಿದ್ದಾರೆ. ಇಬ್ಬರ ಲವ್ ಟ್ರ್ಯಾಕ್ ಹಾಗೂ ಕೆಮಿಸ್ಟ್ರಿ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದಿವೆ. ಒಟ್ಟಾರೆ ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಆದರೆ ಬಾಕ್ಸ್ ಆಫೀಸ್‌ನಲ್ಲಿ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.