For Quick Alerts
  ALLOW NOTIFICATIONS  
  For Daily Alerts

  ಅವತಾರ್ ಚೆನ್ನಾಗಿಲ್ಲ ಎಂದ ತೆಲುಗು ನಿರ್ಮಾಪಕ; ತೆಲುಗು ಪ್ರೇಕ್ಷಕರಿಂದಲೇ ಬಿತ್ತು ಕೆಟ್ಟ ಪದಗಳ ಗುನ್ನಾ!

  |

  ಜೇಮ್ಸ್ ಕ್ಯಾಮೆರೂನ್ ನಿರ್ದೇಶನದ ಬಹು ನಿರೀಕ್ಷಿತ ಅವತಾರ್ ದ ವೇ ಆಫ್ ವಾಟರ್ ಇಂದು ( ಡಿಸೆಂಬರ್ 16 ) ವಿಶ್ವದಾದ್ಯಂತ ಬಿಡುಗಡೆಗೊಂಡಿದೆ. 2009ರಲ್ಲಿ ಬಿಡುಗಡೆಗೊಂಡು ಬಾಕ್ಸ್ ಆಫೀಸ್‌ ಕೊಳ್ಳೆ ಹೊಡೆದು ಒಂದು ದಶಕದವರೆಗೆ ವಿಶ್ವದಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆಯನ್ನು ನಿರ್ಮಿಸಿದ್ದ ಅವತಾರ್ ಚಿತ್ರದ ಸೀಕ್ವೆಲ್ ಈ ಅವತಾರ್ ದ ವೇ ಆಫ್ ವಾಟರ್.

  ಇನ್ನು ಬಿಡುಗಡೆಗೂ ಮುನ್ನವೇ ಬೆಟ್ಟದಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಅವತಾರ್ ದ ವೇ ಆಫ್ ವಾಟರ್ ಪ್ರೀಮಿಯರ್ ಪ್ರದರ್ಶನಗಳ ನಂತರ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತ್ತು. ಆದರೆ ಚಿತ್ರ ಬಿಡುಗಡೆಯಾದ ನಂತರ ಕ್ಲೀನ್ ಬ್ಲಾಕ್‌ಬಸ್ಟರ್ ಎಂಬುದು ಖಚಿತವಾಗಿದೆ. ಸಿನಿ ರಸಿಕರು ಇದೊಂದು ಸಿನಿಮ್ಯಾಟಿಕ್ ಮಾಸ್ಟರ್‌ಪೀಸ್, ವಿಷುಯಲ್ ವಂಡರ್ ಎಂದು ಅವತಾರ್ 2 ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

  ಇನ್ನು ಭಾರತದಲ್ಲಿ ಅಪಾರವಾದ ಹಾಲಿವುಡ್ ಸಿನಿ ಪ್ರಿಯರಿದ್ದು ಇಲ್ಲೂ ಸಹ ಚಿತ್ರ ವೀಕ್ಷಿಸಿದ ಸಿನಿ ರಸಿಕರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಆದರೆ ತೆಲುಗಿನ ಓರ್ವ ನಿರ್ಮಾಪಕ ಮಾತ್ರ ಅವತಾರ್ ದ ವೇ ಆಫ್ ವಾಟರ್ ಬಗ್ಗೆ ಕೇವಲವಾಗಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅನೇಕ ತೆಲುಗು ಸಿನಿ ಪ್ರೇಮಿಗಳು ಕೆಟ್ಟ ಪದಗಳನ್ನು ಉಪಯೋಗಿಸಿಯೇ ಆತನಿಗೆ ಗುನ್ನಾ ಇಟ್ಟಿದ್ದಾರೆ.

  ಅವತಾರ್ ಬಗ್ಗೆ ಕೊಂಕು ನುಡಿದ ನಾಗ ವಂಸಿ

  ಅವತಾರ್ ಬಗ್ಗೆ ಕೊಂಕು ನುಡಿದ ನಾಗ ವಂಸಿ

  ಪವನ್ ಕಲ್ಯಾಣ್ ನಟನೆಯ ಭೀಮ್ಲಾ ನಾಯಕ್ ಸೇರಿದಂತೆ ಅನೇಕ ತೆಲುಗು ಚಿತ್ರಗಳಿಗೆ ಸೀತಾರಾ ಎಂಟರ್‌ಟೈನ್‌ಮೆಂಟ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯಡಿಯಲ್ಲಿ ಬಂಡವಾಳ ಹೂಡಿರುವ ನಿರ್ಮಾಪಕ ನಾಗವಂಸಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ "ಜೇಮ್ಸ್ ಕ್ಯಾಮೆರೂನ್ ಅವರು ತಾವು ನಿರ್ದೇಶಿಸಿರುವ ಸಮುದ್ರ ಜೀವಶಾಸ್ತ್ರದ ಡಾಕುಮೆಂಟರಿಯನ್ನು ನೋಡಿ ಎಂದು ಆದೇಶಿಸುತ್ತಾರೆ ಹಾಗೂ ತ್ರೀಡಿಯಲ್ಲಿ ಮೂಡಿ ಬಂದಿರುವ ಕಾರಣ ಮತ್ತು ಜೇಮ್ಸ್ ಕ್ಯಾಮೆರೂನ್ ನಿರ್ದೇಶಿಸಿರುವ ಕಾರಣ ಇದನ್ನು ನಾವು ಅತ್ಯದ್ಭುತ ಹಾಗೂ ಬ್ಲಾಕ್‌ಬಸ್ಟರ್ ಎಂದೇ ಹೇಳಬೇಕಿದೆ" ಎಂದು ಬರೆದುಕೊಂಡಿದ್ದಾರೆ. ಅವತಾರ್‌ಗೆ ಹೋಲಿಸಿದರೆ ಪುಟ್ಟ ನಿರ್ಮಾಪಕ ಎನಿಸಿಕೊಳ್ಳುವ ನಾಗವಂಸಿ ಈ ರೀತಿಯ ಟ್ವೀಟ್ ಮಾಡಿ ತಮ್ಮದೇ ಇಂಡಸ್ಟ್ರಿಯ ಚಿತ್ರ ಪ್ರೇಮಿಗಳಿಂದ ಕ್ಯಾಕರಿಸಿ ಉಗಿಸಿಕೊಂಡಿದ್ದಾರೆ.

  ನಾಳೆ ದಿನ ಈ ಚಿತ್ರದ ದೃಶ್ಯಗಳನ್ನು ನೀವೇ ಕದ್ದು ಚಿತ್ರ ಮಾಡ್ತೀರ!

  ನಾಳೆ ದಿನ ಈ ಚಿತ್ರದ ದೃಶ್ಯಗಳನ್ನು ನೀವೇ ಕದ್ದು ಚಿತ್ರ ಮಾಡ್ತೀರ!

  ನಾಗವಂಸಿಯ ಕುಚೇಷ್ಟೆ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನೆಟ್ಟಿಗನೋರ್ವ ನಾಳೆ ಇದೇ ಚಿತ್ರದ ದೃಶ್ಯಗಳನ್ನು ನಿಮ್ಮ ಸ್ನೇಹಿತ ನಿರ್ದೇಶಕ ತ್ರಿವಿಕ್ರಮ್ ಕದ್ದು ತಂದು ನಿಮ್ಮದೇ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿ ಬರುವ ಚಿತ್ರದಲ್ಲಿ ಹಾಕ್ತಾರೆ ಎಂದು ಬರೆದುಕೊಂಡು ನಾಗವಂಸಿಯ ಕಾಲೆಳೆದಿದ್ದಾರೆ. ಮತ್ತೋರ್ವ ನೆಟ್ಟಿಗ ನಾಗವಂಸಿ ಟ್ವೀಟ್‌ಗೆ ರಿಪ್ಲೈ ಮಾಡಿದ್ದು, ಸಮುದ್ರ ಜೀವಶಾಸ್ತ್ರದ ಡಾಕುಮೆಂಟರಿಯನ್ನು ನಿಜವಾದ ಜೀವಿಗಳನ್ನು ಚಿತ್ರಿಸಿ ತೆರೆಮೇಲೆ ತರುತ್ತಾರೆ, ಈ ರೀತಿ ವಿಎಫ್ಎಕ್ಸ್ ಬಳಸುವುದಿಲ್ಲ ಅಲ್ಲವೇ ಎಂದು ಪ್ರಶ್ನೆ ಹಾಕಿ ಕೌಂಟರ್ ನೀಡಿದ್ದಾರೆ. ಈ ಮೂಲಕ ಓರ್ವ ನಿರ್ಮಾಪಕನಾಗಿ ಡಾಕುಮೆಂಟರಿಗೂ ಕಮರ್ಷಿಯಲ್ ಚಿತ್ರಕ್ಕೂ ಇರುವ ವ್ಯತ್ಯಾಸ ತಿಳಿದಿಲ್ವಾ ಎಂದು ಕಾಲೆಳೆದಿದ್ದಾರೆ.

  ಎರಡು ಚಿತ್ರ ಹಿಟ್ ಆಗಿದ್ದಕ್ಕೆ ಇಷ್ಟೆಲ್ಲಾ

  ಎರಡು ಚಿತ್ರ ಹಿಟ್ ಆಗಿದ್ದಕ್ಕೆ ಇಷ್ಟೆಲ್ಲಾ

  ಮತ್ತೋರ್ವ ನೆಟ್ಟಿಗ ಎರಡು ತೆಲುಗು ಚಿತ್ರ ಹಿಟ್ ಆಗಿದ್ದೇ ತಡ ಹಾಲಿವುಡ್ ನಿರ್ದೇಶಕನ ಬಗ್ಗೆ ಕಾಮೆಂಟ್ ಮಟ್ಟಕ್ಕೆ ಹೊರಟು ಹೋಗ್ತಾರೆ ಎಂದು ನಾಗ ವಂಸಿ ಟ್ವೀಟ್ ವಿರುದ್ಧ ಕಿಡಿಕಾರಿದ್ದಾರೆ. ಇನ್ನು ಈ ಕಾಮೆಂಟ್‌ಗಳು ಮಾತ್ರವಲ್ಲದೇ ಇನ್ನೂ ಹತ್ತಾರು ಕಾಮೆಂಟ್ ನಾಗವಂಸಿ ಟ್ವೀಟ್‌ಗೆ ಬಂದಿದ್ದು, ಕೆಟ್ಟ ಪದಗಳನ್ನು ಬಳಸಿ ಟ್ರೋಲ್ ಮಾಡಿದ್ದಾರೆ. ನಿಮ್ಮ ಚಿತ್ರಗಳ ಬಗ್ಗೆ ಮೊದಲು ಸರಿಯಾಗಿ ಕೆಲಸ ಮಾಡಿ ಆನಂತರ ಇತರರ ಬಗ್ಗೆ ಮಾತನಾಡಿ ಎಂದು ಸಿನಿ ರಸಿಕರು ಬುದ್ಧಿವಾದ ಹೇಳಿದ್ದಾರೆ.

  English summary
  Netizens slams telugu producer Naga Vamsi for his negative tweet about Avatar 2. Read on
  Friday, December 16, 2022, 18:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X