twitter
    For Quick Alerts
    ALLOW NOTIFICATIONS  
    For Daily Alerts

    ಹಿಂದೂಗಳ ಭಾವನೆಗೆ ಧಕ್ಕೆ: ನೆಟ್‌ ಫ್ಲಿಕ್ಸ್ ಬಹಿಷ್ಕರಿಸುವಂತೆ ಅಭಿಯಾನ

    |

    ನೆಟ್ ಫ್ಲಿಕ್ಸ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ನೆಟ್ ಫ್ಲಿಕ್ಸ್ಅನ್ನು ಭಾರತದಲ್ಲಿ ಬಹಿಷ್ಕರಿಸುವಂರೆ ಕರೆ ನೀಡಲಾಗುತ್ತಿದೆ. 'ಬಾಯ್ಕಾಟ್ ನೆಟ್‌ಫ್ಲಿಕ್ಸ್' ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗುತ್ತಿದೆ. ಇದಕ್ಕೆ ಕಾರಣ ತೆಲುಗಿನ 'ಕೃಷ್ಣ ಆಂಡ್ ಹಿಸ್ ಲೀಲಾ' ಚಿತ್ರ.

    Recommended Video

    Darshan to Dub For Chirus Rajamarthanda:ಚಿರು ಸರ್ಜಾಗೆ ಧನಿಯಾಗಲು ಮುಂದೆ ಬಂದ ದಾಸ ದರ್ಶನ್|Filmibeat Kannada

    ಜೂನ್ 25ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದ ಚಿತ್ರದ ಅನೇಕರ ಆಕ್ರೋಶಕ್ಕೆ ತುತ್ತಾಗಿದೆ. ಕನ್ನಡತಿ ಶ್ರದ್ಧಾ ಶ್ರೀನಾಥ್ ಕೂಡ ನಟಿಸಿರುವ ಈ ಚಿತ್ರದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ಉಂಟುಮಾಡುವ ಸನ್ನಿವೇಶಗಳಿವೆ ಎನ್ನುವುದು ಈ ಸಿಟ್ಟಿಗೆ ಕಾರಣ.

    ಬುಲೆಟ್ ಓಡಿಸಲು ಹೋಗಿ ಬಿದ್ದ ನಟಿ ಶ್ರದ್ಧಾ ಶ್ರೀನಾಥ್ಬುಲೆಟ್ ಓಡಿಸಲು ಹೋಗಿ ಬಿದ್ದ ನಟಿ ಶ್ರದ್ಧಾ ಶ್ರೀನಾಥ್

    ಚಿತ್ರದಲ್ಲಿ ಕೃಷ್ಣ ಹೆಸರಿನ ನಾಯಕ ಅನೇಕ ಮಹಿಳೆಯರ ಜತೆಗೆ ಲೈಂಗಿಕ ಸಂಬಂಧಗಳನ್ನು ಇರಿಸಿಕೊಳ್ಳುತ್ತಾನೆ. ಈ ಮಹಿಳೆಯರಲ್ಲಿ ಒಂದು ಪಾತ್ರದ ಹೆಸರು ರಾಧಾ. ಮುಂದೆ ಓದಿ..

    ದೇವರ ಹೆಸರಲ್ಲಿ ಅಶ್ಲೀಲತೆ

    ದೇವರ ಹೆಸರಲ್ಲಿ ಅಶ್ಲೀಲತೆ

    ಶ್ರೀ ಕೃಷ್ಣ ಮತ್ತು ಆತನ ಲೀಲೆಗಳ ಕುರಿತು ಜನರ ಮನಸಿನಲ್ಲಿರುವ ಕಲ್ಪನೆಗಳೇ ಬೇರೆ. ಆದರೆ ಈ ಚಿತ್ರ ಹಿಂದೂಗಳ ದೇವರಾದ ಕೃಷ್ಣ ಹಾಗೂ ರಾಧಾ ಹೆಸರನ್ನು ಮುಖ್ಯ ಪಾತ್ರಗಳಿಗೆ ಇರಿಸಿ ಅವುಗಳಲ್ಲಿ ಅಶ್ಲೀಲತೆಯನ್ನು ಬಿಂಬಿಸಲಾಗಿದೆ ಎಂದು ಆರೋಪಿಸಲಾಗಿದೆ.

    ನೆಟ್‌ಫ್ಲಿಕ್ಸ್ ಬಹಿಷ್ಕರಿಸಿ

    ನೆಟ್‌ಫ್ಲಿಕ್ಸ್ ಬಹಿಷ್ಕರಿಸಿ

    ರವಿಕಾಂತ್ ಪೆರೆಪು ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಹಿಂದೂಗಳ ವಿರೋಧಿಯಾಗಿದ್ದು, ಧಾರ್ಮಿಕ ಭಾವನೆಗಳನ್ನು ಅವಮಾನಿಸುತ್ತಿದೆ ಎಂದು ಟ್ವಿಟ್ಟರಿಗರು ಆರೋಪಿಸಿದ್ದಾರೆ. ನೆಟ್ ಫ್ಲಿಕ್ಸ್ ಇಂತಹ ಕಂಟೆಂಟ್ ಹೊಂದಿರುವ ಸಿನಿಮಾ ಮತ್ತು ವೆಬ್ ಸೀರೀಸ್‌ಗಳನ್ನು ಪ್ರಸಾರ ಮಾಡುತ್ತಿದೆ. ಅದನ್ನು ಬಹಿಷ್ಕರಿಸಬೇಕು ಎಂದು ಅಭಿಯಾನ ನಡೆಸಲಾಗಿದೆ.

    ಋತುಚಕ್ರವಾದಾಗ ಪೂಜೆಯಲ್ಲಿ ಭಾಗಿಯಾಗಿದ್ದೆ: ನಟಿ ಶ್ರದ್ಧಾ ಶ್ರೀನಾಥ್ ಬೋಲ್ಡ್ ಹೇಳಿಕೆಋತುಚಕ್ರವಾದಾಗ ಪೂಜೆಯಲ್ಲಿ ಭಾಗಿಯಾಗಿದ್ದೆ: ನಟಿ ಶ್ರದ್ಧಾ ಶ್ರೀನಾಥ್ ಬೋಲ್ಡ್ ಹೇಳಿಕೆ

    ರಾಣಾ ದಗ್ಗುಬಾಟಿ ನಿರ್ಮಾಣ

    ರಾಣಾ ದಗ್ಗುಬಾಟಿ ನಿರ್ಮಾಣ

    ಸಿದ್ದು ಜೊನ್ನಾಲಗದ್ದ ಈ ಚಿತ್ರದಲ್ಲಿ ಕೃಷ್ಣ ಹೆಸರಿನ ನಾಯಕ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ಶ್ರದ್ಧಾ ಶ್ರೀನಾಥ್, ಶಾಲಿನಿ ವಡ್ನಿಕಟ್ಟಿ ಮತ್ತು ಸೀರ್ತಾ ಕಪೂರ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 'ಬಾಹುಬಲಿ' ಖ್ಯಾತಿಯ ಖಳನಟ ರಾಣಾ ದಗ್ಗುಬಾಟಿ ಚಿತ್ರ ನಿರ್ಮಿಸಿದ್ದಾರೆ.

    ಧರ್ಮದ ವಿರುದ್ಧದ ಸಂಚು

    ಧರ್ಮದ ವಿರುದ್ಧದ ಸಂಚು

    ನೈಜ ರೂಮರ್‌ಗಳ ಆಧಾರಿತ ಎಂಬ ಟ್ಯಾಗ್‌ಲೈನ್ ಚಿತ್ರಕ್ಕಿದೆ. ನೆಟ್ ಫ್ಲಿಕ್ಸ್ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು, ಮೀಮ್‌ಗಳು ಕೂಡ ಹರಿದಾಡುತ್ತಿವೆ. ಇದು ಉದ್ದೇಶಪೂರ್ವಕವಾಗಿ ದ್ವೇಷ ಬಿತ್ತುವ ಸಲುವಾಗಿ ಸೃಷ್ಟಿಯಾಗಿರುವ ಸಂಚು. ಹಿಂದೂ ಧರ್ಮದ ಕುರಿತು ಅವಹೇಳನೆ ಮಾಡುವುದೇ ಇದರ ಉದ್ದೇಶವಾಗಿದೆ ಎಂದು ಆರೋಪಿಸಲಾಗಿದೆ.

    ರಾಮ್‌ಗೋಪಾಲ್ ವರ್ಮಾ ಹುಚ್ಚಾಟ: ಪವನ್‌ ಕಲ್ಯಾಣ್‌ಗೆ ಅವಮಾನರಾಮ್‌ಗೋಪಾಲ್ ವರ್ಮಾ ಹುಚ್ಚಾಟ: ಪವನ್‌ ಕಲ್ಯಾಣ್‌ಗೆ ಅವಮಾನ

    English summary
    Netizens calling to boyocott Netflix as Telugu movie Krishna And His Leela for hurting Hindu sentiments.
    Tuesday, June 30, 2020, 9:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X