For Quick Alerts
  ALLOW NOTIFICATIONS  
  For Daily Alerts

  ಇದಕ್ಕೆ ಅಷ್ಟೆಲ್ಲಾ ಬಿಲ್ಟ್ಅಪ್ ಬೇಕಾ? 'ಪುಷ್ಪ' ರಷ್ಯಾದಲ್ಲಿ 25 ದಿನಕ್ಕೆ ಗಳಿಸಿದ್ದನ್ನು ಕಂಡು ನಕ್ಕ ಸಿನಿ ರಸಿಕರು!

  |

  2022ರಲ್ಲಿ ಕೆಜಿಎಫ್ ಚಾಪ್ಟರ್ 2 ವಿಶ್ವದಾದ್ಯಂತ ಅತಿಹೆಚ್ಚು ಗಳಿಕೆ ಮಾಡಿದ ಭಾರತದ ಸಿನಿಮಾ ಎನಿಸಿಕೊಂಡರೆ 2021ರಲ್ಲಿ ಈ ಖ್ಯಾತಿಯನ್ನು ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಶನ್‌ನ ಪುಷ್ಪ ಚಿತ್ರ ತನ್ನದಾಗಿಸಿಕೊಂಡಿತ್ತು. ಹೌದು, 2021ರಲ್ಲಿ ವರ್ಷದಲ್ಲಿ ಅತಿಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿದ ಚಿತ್ರ ಎನಿಸಿಕೊಂಡಿದ್ದ ಪುಷ್ಪ ಚಿತ್ರ ಮೊದಲಿಗೆ ಸಾಧಾರಣ ಹಾಗೂ ಸಾಧಾರಣಕ್ಕಿಂತ ತುಸು ಉತ್ತಮ ಚಿತ್ರ ಎನಿಸಿಕೊಂಡಿತ್ತು.

  ಹೀಗೆ ಬಿಡುಗಡೆಯಾದಾಗ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದ ಪುಷ್ಪ ದಿ ರೈಸ್ ಚಿತ್ರ ನಂತರದ ದಿನಗಳಲ್ಲಿ ಒಳ್ಳೆಯ ಗಳಿಕೆ ಮಾಡಿ ಗೆಲುವು ಕಂಡಿತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಹಿಂದಿಯಲ್ಲೂ ಸಹ ದೊಡ್ಡ ಗಳಿಕೆಯನ್ನೇ ಮಾಡಿತು. ಹೀಗೆ ಈ ಚಿತ್ರ ಯಶಸ್ಸು ಸಾಧಿಸಿದ ನಂತರ ಚಿತ್ರತಂಡ ಪುಷ್ಪ ದಿ ರೂಲ್ ಚಿತ್ರೀಕರಣವನ್ನು ಆರಂಭಿಸಿದೆ.

  ಇದರ ನಡುವೆ ಚಿತ್ರತಂಡ ತಮ್ಮ ಚಿತ್ರವನ್ನು ರಷ್ಯಾದಲ್ಲಿ ದೊಡ್ಡದಾಗಿ ಬಿಡುಗಡೆಯನ್ನೂ ಸಹ ಮಾಡಿತು. ಹೌದು, ಯಾವಾಗ ಆರ್ ಆರ್ ಆರ್ ಚಿತ್ರವನ್ನು ಜಾಪನೀಸ್ ಭಾಷೆಗೆ ಡಬ್ ಮಾಡಿ ಜಪಾನ್‌ನಲ್ಲಿ ಬಿಡುಗಡೆಗೊಳಿಸಿದ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿತೋ ಅದಾದ ಕೆಲವೇ ದಿನಗಳಲ್ಲಿ ಪುಷ್ಪ ಚಿತ್ರವನ್ನು ರಷ್ಯಾದಲ್ಲಿ ಅದೇ ಮಾದರಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಅದರಂತೆ ಪುಷ್ಪ ಚಿತ್ರ ರಷ್ಯಾದಲ್ಲಿಯೂ ಬಿಡುಗಡೆಯೂ ಸಹ ಆಯಿತು.

  ಡಿಸೆಂಬರ್ 8ರಂದು ರಷ್ಯಾದಲ್ಲಿ ಬಿಡುಗಡೆ, ಕಲೆಕ್ಷನ್ ಎಷ್ಟು?

  ಡಿಸೆಂಬರ್ 8ರಂದು ರಷ್ಯಾದಲ್ಲಿ ಬಿಡುಗಡೆ, ಕಲೆಕ್ಷನ್ ಎಷ್ಟು?

  ಇನ್ನು ಡಿಸೆಂಬರ್ 8ರಂದು ಪುಷ್ಪ ದ ರೈಸ್ ಚಿತ್ರವನ್ನು ರಷ್ಯಾದ 774 ಪರದೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಚಿತ್ರದ ಪ್ರಚಾರ ಮಾಡಲು ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹಾಗೂ ನಿರ್ದೇಶಕ ಸುಕುಮಾರ್ ಸೇರಿದಂತೆ ಇಡೀ ಪುಷ್ಪ ಚಿತ್ರತಂಡವೇ ರಷ್ಯಾಗೆ ತೆರಳಿತ್ತು. ಇನ್ನು ಚಿತ್ರ ಬಿಡುಗಡೆಗೊಂಡ ನಂತರ ಚಿತ್ರ ರಷ್ಯಾದಲ್ಲಿ ಯಾವ ರೀತಿಯ ಪ್ರದರ್ಶನ ಕಾಣುತ್ತಿದೆ ಹಾಗೂ ಮಾಡಿದ ಕಲೆಕ್ಷನ್ ಎಷ್ಟು ಎಂಬ ಮಾಹಿತಿಯನ್ನು ಮಾತ್ರ ಹಂಚಿಕೊಂಡಿರಲಿಲ್ಲ. ಆದರೆ ಇದೀಗ ಹೊಸ ಪೋಸ್ಟರ್ ಒಂದನ್ನು ಹಂಚಿಕೊಂಡಿರುವ ಪುಷ್ಪ ಚಿತ್ರತಂಡ ರಷ್ಯಾದಲ್ಲಿ ಚಿತ್ರವು 25 ದಿನಗಳನ್ನು ಪೂರೈಸಿದ್ದು 10 ಮಿಲಿಯನ್‌ಗೂ ಹೆಚ್ಚು ರೂಬಲ್ ( ರಷ್ಯಾ ಕರೆನ್ಸಿ ) ಗಳಿಸಿದೆ ಎಂದು ಬರೆದುಕೊಂಡಿದೆ.

  ಕಲೆಕ್ಷನ್ ಕಂಡು ನಕ್ಕ ಸಿನಿ ರಸಿಕರು

  ಕಲೆಕ್ಷನ್ ಕಂಡು ನಕ್ಕ ಸಿನಿ ರಸಿಕರು

  ಇನ್ನು ಪುಷ್ಪ ಚಿತ್ರತಂಡ ಹಂಚಿಕೊಂಡಿರುವ ಈ ಪೋಸ್ಟರ್ ಕಂಡ ಸಿನಿ ರಸಿಕರು ಚಿತ್ರತಂಡದ ಕಾಲೆಳೆದಿದ್ದಾರೆ. 10 ಮಿಲಿಯನ್ ರೂಬೆಲ್ ಭಾರತದ ರೂಪಾಯಿ ಲೆಕ್ಕದಲ್ಲಿ 1 ಕೋಟಿ 13 ಲಕ್ಷಗಳಷ್ಟು ಎಂಬುದನ್ನು ಅರಿತ ನಂತರ 25 ದಿನಗಳು ಪ್ರದರ್ಶನ ಕಂಡು ಒಂದು ಕೋಟಿ ಗಳಿಸಿತಾ ಎಂದು ಪ್ರಶ್ನಿಸಿ ಚಿತ್ರತಂಡವನ್ನು ಟ್ರೋಲ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಚಿತ್ರ 774 ಪರದೆಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಪೋಸ್ಟರ್ ಪ್ರಕಟಿಸಿದ್ದ ಚಿತ್ರತಂಡ 25 ದಿನಗಳನ್ನು 774 ಪರದೆಗಳಲ್ಲಿ ಪೂರೈಸಿದೆ ಎಂದು ಪ್ರಕಟಿಸಿರುವುದು ಚಿತ್ರತಂಡ ಮತ್ತಷ್ಟು ಟ್ರೋಲ್ ಆಗುವುದಕ್ಕೆ ಕಾರಣವಾಗಿದೆ.

  ಪ್ರಚಾರಕ್ಕೆ ಇದಕ್ಕಿಂತ ಹೆಚ್ಚು ಸುರಿದಿದ್ದ ಚಿತ್ರತಂಡ

  ಪ್ರಚಾರಕ್ಕೆ ಇದಕ್ಕಿಂತ ಹೆಚ್ಚು ಸುರಿದಿದ್ದ ಚಿತ್ರತಂಡ

  ಹೀಗೆ ರಷ್ಯಾದಲ್ಲಿ 25 ದಿನಗಳನ್ನು ಪೂರೈಸಿ ಒಂದು ಕೋಟಿ ಗಳಿಸಿರುವ ಪುಷ್ಪ ಚಿತ್ರದ ರಷ್ಯಾ ಬಿಡುಗಡೆ ಪ್ರಚಾರಕ್ಕಾಗಿ ಸುಮಾರು ಐದು ಕೋಟಿಯನ್ನು ಖರ್ಚು ಮಾಡಲಾಗಿತ್ತು ಎಂಬ ಸುದ್ದಿ ಈ ಹಿಂದೆ ಹರಿದಾಡಿತ್ತು. ಈ ಮೂಲಕ ಪ್ರಚಾರಕ್ಕೆಂದು ಖರ್ಚು ಮಾಡಿದ್ದ ಹಣವನ್ನೂ ಸಹ ಚಿತ್ರ ಗಳಿಸುವುದಿಲ್ಲ ಎಂಬುದು ಚಿತ್ರ ಹೀನಾಯವಾಗಿ ಸೋತಿದೆ ಎಂಬುದನ್ನು ಬಿಚ್ಚಿಟ್ಟಿದೆ. ಹೀಗಿದ್ದರೂ ಸಹ ಚಿತ್ರತಂಡ 'ರಷ್ಯಾದಲ್ಲಿ ಪುಷ್ಪ ರೇಜ್' ಎಂದು ಬಿಲ್ಡ್ ಅಪ್ ಪೋಸ್ಟ್‌ಗಳನ್ನು ಹಾಕಿದೆ. ಇದನ್ನು ಕಂಡ ನೆಟ್ಟಿಗರು ಸೋತರೂ ಮಹಾ ಸಾಧನೆ ಮಾಡಿದ ಹಾಗೆ ಬಿಲ್ಡ್ ಅಪ್ ಯಾಕೆ ಎಂದು ಕಾಲೆಳೆದಿದ್ದಾರೆ.

  English summary
  Netizens troll Pushpa movie for collecting just 1 crore in 25 days at Russia box office. Read on
  Monday, January 2, 2023, 16:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X