For Quick Alerts
  ALLOW NOTIFICATIONS  
  For Daily Alerts

  ಸಲಾರ್ ಚಿತ್ರದ ಪೃಥ್ವಿರಾಜ್ ಸುಕುಮಾರನ್ ಫಸ್ಟ್ ಲುಕ್ ಔಟ್; ಮತ್ತದೇ ಮಸಿ, ಈತ ಉಗ್ರಂ 'ಬಾಲ' ಎಂದ ಪ್ರೇಕ್ಷಕರು!

  |

  ಕೆಜಿಎಫ್ ಚಿತ್ರ ಸರಣಿ ಬಳಿಕ ಇದೀಗ ಕಾಂತಾರ ಚಿತ್ರದ ಮೂಲಕ ಇಡೀ ಭಾರತ ಚಿತ್ರರಂಗವನ್ನು ಮತ್ತೊಮ್ಮೆ ತನ್ನತ್ತ ನೋಡುವಂತೆ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಬತ್ತಳಿಕೆಯಲ್ಲಿ ಮತ್ತಷ್ಟು ಮೆಗಾ ಚಿತ್ರಗಳು ಅಡಗಿವೆ.

  ಈ ಮೆಗಾ ಚಿತ್ರಗಳ ಪೈಕಿ ಸದ್ಯ ಅಭಿಮಾನಿಗಳು ಕಾಯುತ್ತಿರುವ, ಚಿತ್ರೀಕರಣವನ್ನು ಬಹುಪಾಲು ಮುಕ್ತಾಯಗೊಳಿಸಿರುವ ಚಿತ್ರವೆಂದರೆ ಅದು ಸಲಾರ್. ಬಾಹುಬಲಿ ನಂತರ ಸಾಹೋ ಹಾಗೂ ರಾಧೆಶ್ಯಾಮ್ ಚಿತ್ರಗಳಲ್ಲಿ ನಟಿಸಿ ಕೈಸುಟ್ಟುಕೊಂಡಿರುವ ಪ್ರಭಾಸ್ ಸಲಾರ್ ಮೂಲಕ ಮಾತ್ರ ಕಮ್ ಬ್ಯಾಕ್ ಮಾಡಲು ಸಾಧ್ಯ, ಸೋಲಿನ ಟ್ರ್ಯಾಕ್ ತುಳಿಯುತ್ತಿರುವ ಪ್ರಭಾಸ್ ಅವರನ್ನು ಯಶಸ್ಸಿನ ಹಾದಿಗೆ ಕರೆತರಲು ಸಲಾರ್ ಚಿತ್ರದಿಂದ ಮಾತ್ರ ಸಾಧ್ಯ ಎಂಬ ಅಭಿಪ್ರಾಯಗಳಿವೆ.

  ಬದಲಾಯ್ತು ಬುಕ್ ಮೈ ಶೋ ರೇಟಿಂಗ್ ವಿಧಾನ: ಕಾಂತಾರ, ಜೇಮ್ಸ್, ಕೆಜಿಎಫ್ 2 ರೇಟಿಂಗ್ ಈಗ ಎಷ್ಟಿದೆ? ಬದಲಾಯ್ತು ಬುಕ್ ಮೈ ಶೋ ರೇಟಿಂಗ್ ವಿಧಾನ: ಕಾಂತಾರ, ಜೇಮ್ಸ್, ಕೆಜಿಎಫ್ 2 ರೇಟಿಂಗ್ ಈಗ ಎಷ್ಟಿದೆ?

  ಹೀಗೆ ಬೃಹತ್ ಹೈಪ್ ಹುಟ್ಟು ಹಾಕಿರುವ ಸಲಾರ್ ಚಿತ್ರತಂಡ ಚಿತ್ರದ ಒಂದೊಂದೇ ಪಾತ್ರಗಳನ್ನು ಆ ನಟ ಮತ್ತು ನಟಿಯರ ಹುಟ್ಟುಹಬ್ಬದ ದಿನದಂದು ಬಹಿರಂಗಪಡಿಸುತ್ತಾ ಬಂದಿದೆ. ಈ ಸಾಲಿಗೆ ಇದೀಗ ಪೃಥ್ವಿರಾಜ್ ಸುಕುಮಾರನ್ ಕೂಡ ಸೇರಿಕೊಂಡಿದ್ದಾರೆ. ಹೌದು, ಸಲಾರ್ ಚಿತ್ರದಲ್ಲಿ ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಆದರೆ ಚಿತ್ರತಂಡ ಇಲ್ಲಿಯವರೆಗೂ ಪೃಥ್ವಿರಾಜ್ ಸುಕುಮಾರನ್ ಅವರ ಲುಕ್ ಅನ್ನು ಬಿಡುಗಡೆಗೊಳಿಸಿರಲಿಲ್ಲ. ಇದೀಗ ಇಂದು ( ಅಕ್ಟೋಬರ್ 16 ) ಪೃಥ್ವಿರಾಜ್ ಸುಕುಮಾರನ್ ಹುಟ್ಟುಹಬ್ಬದ ಪ್ರಯುಕ್ತ ಸಲಾರ್ ಚಿತ್ರತಂಡ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿದೆ.

   ವರ್ಧರಾಜ್ ಮನ್ನಾರ್ ಆದ ಪೃಥ್ವಿರಾಜ್

  ವರ್ಧರಾಜ್ ಮನ್ನಾರ್ ಆದ ಪೃಥ್ವಿರಾಜ್

  ಹುಟ್ಟು ಹಬ್ಬದ ಪ್ರಯುಕ್ತವಾಗಿ ಪೃಥ್ವಿರಾಜ್ ಸುಕುಮಾರನ್ ಅವರ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದ್ದು, ಪ್ರಭಾಸ್ ಅಭಿನಯದ ಸಲಾರ್ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ 'ವರ್ಧರಾಜ್ ಮನ್ನಾರ್' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೃಥ್ವಿರಾಜ್ ಗೆಟಪ್ ತುಂಬ ರಗಡ್ ಆಗಿದ್ದು, ಇದೊಂದು ಮಾಸ್ ಕ್ಯಾರೆಕ್ಟರ್ ಎಂಬುದನ್ನು ಸಾರಿ ಹೇಳುತ್ತಿದೆ.

   ಮತ್ತದೇ ಮಸಿ, ಪ್ರಶಾಂತ್ ನೀಲ್ 'ಮಸಿ ಯೂನಿವರ್ಸಿಟಿ'ಯ ಮತ್ತೊಂದು ಕ್ಯಾಂಡಿಡೇಟ್!

  ಮತ್ತದೇ ಮಸಿ, ಪ್ರಶಾಂತ್ ನೀಲ್ 'ಮಸಿ ಯೂನಿವರ್ಸಿಟಿ'ಯ ಮತ್ತೊಂದು ಕ್ಯಾಂಡಿಡೇಟ್!

  ಹೊಂಬಾಳೆ ಫಿಲ್ಮ್ಸ್ ಈ ಪೋಸ್ಟರ್ ಅನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದಂತೆಯೇ ಪೋಸ್ಟರ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಲಾರ್ ಚಿತ್ರದ ಪ್ರತೀ ಪೋಸ್ಟರ್ ಕುರಿತಾಗಿ ವ್ಯಕ್ತವಾಗುತ್ತಿದ್ದಂತೆ ಈ ಪೋಸ್ಟರ್ ಕುರಿತಾಗಿಯೂ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆರಂಭಗೊಂಡಿವೆ. ಪ್ರಶಾಂತ್ ನೀಲ್ 'ಮಸಿ ಯೂನಿವರ್ಸಿಟಿ'ಯ ಮತ್ತೊಬ್ಬ ಕ್ಯಾಂಡಿಡೇಟ್ ಬಂದ ನೋಡಿ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

   ಈತನೇ ಉಗ್ರಂ 'ಬಾಲ' ಎಂದ ಕನ್ನಡ ಸಿನಿ ಪ್ರೇಕ್ಷಕರು

  ಈತನೇ ಉಗ್ರಂ 'ಬಾಲ' ಎಂದ ಕನ್ನಡ ಸಿನಿ ಪ್ರೇಕ್ಷಕರು

  ಇನ್ನು ಸಲಾರ್ ಚಿತ್ರ ಆರಂಭವಾದಾಗಿನಿಂದ ಇದು ಉಗ್ರಂ ಚಿತ್ರದ ರಿಮೇಕ್ ಎಂಬ ದೊಡ್ಡ ಅನುಮಾನ ಪ್ರೇಕ್ಷಕ ವರ್ಗದಲ್ಲಿದೆ. ಅದರಲ್ಲಿಯೂ ಪ್ರಭಾಸ್ ಪೋಸ್ಟರ್ ಬಿಡುಗಡೆಯಾದಾಗ ಈ ಅನುಮಾನ ದುಪ್ಪಟ್ಟಾಗಿತ್ತು. ಉಗ್ರಂ ಚಿತ್ರದಲ್ಲಿ ಶ್ರೀ ಮುರಳಿ ಅಂತೆಯೇ ಪ್ರಭಾಸ್ ಗೆಟಪ್ ಕೂಡ ಇತ್ತು. ಸದ್ಯ ಪೃಥ್ವಿರಾಜ್ ಸುಕುಮಾರನ್ ಪೋಸ್ಟರ್ ಬಿಡುಗಡೆಯಾದ ಬೆನ್ನಲ್ಲೇ ಕೆಲ ಕನ್ನಡ ಸಿನಿ ಪ್ರೇಕ್ಷಕರು ಉಗ್ರಂ ಚಿತ್ರದಲ್ಲಿ ತಿಲಕ್ ನಿರ್ವಹಿಸಿದ್ದ ಬಾಲಾ ಪಾತ್ರವನ್ನು ಇಲ್ಲಿ ಪೃಥ್ವಿರಾಜ್ ಸುಕುಮಾರನ್ ನಿರ್ವಹಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.

  English summary
  Fans trolled Prashanth Neel and Hombale Films as Prithviraj Sukumaran's Salaar first look poster released . Take a look
  Sunday, October 16, 2022, 13:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X