For Quick Alerts
  ALLOW NOTIFICATIONS  
  For Daily Alerts

  ಪ್ರಧಾನಿ ಮೋದಿಗೆ ಜೈ ಎಂದ ನಟಿ ಸಮಂತಾ ವಿರುದ್ಧ ನೆಟ್ಟಿಗರು ಫುಲ್ ಗರಂ!

  |

  ಕೆಲ ವರ್ಷಗಳ ಹಿಂದೆ ನಟಿ ಸಮಂತಾ ಪ್ರಧಾನಿ ನರೇಂದ್ರ ಮೋಗಿ ಹಾಗೂ ಬಿಜೆಪಿ ಬಗ್ಗೆ ನೀಡಿದ್ದ ಹೇಳಿಕೆಯ ವಿಡಿಯೋ ಈಗ ವೈರಲ್ ಆಗಿದೆ. "ನಾನು ಮೋದಿ ಸಪೋರ್ಟರ್, ಅವರು ಮಾಡುತ್ತಿರುವ ಕೆಲಸಗಳು ಬಹಳ ಖುಷಿ ತಂದಿದೆ" ಎಂದು ನಟಿ ಸಮಂತಾ ಹೇಳಿದ್ದರು. ಮತ್ತೊಂದು ಸಂದರ್ಶನದಲ್ಲಿ "ನಾನು ಮೋದಿ ಸಪೋರ್ಟರ್. ಯಾಕಂದ್ರೆ ಅವರ ನಾಯಕತ್ವದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿದೆ. ಅವರು ದೇಶವನ್ನು ಉತ್ತಮ ರೀತಿಯಲ್ಲಿ ಮುಂದಕ್ಕೆ ಕೊಂಡೊಯ್ಯುತ್ತಾರೆ, ಆರ್ಥಿಕ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಎನ್ನುವ ನಂಬಿಕೆ ಇದೆ" ಎಂದಿದ್ದರು. ಈ ವಿಡಿಯೋವನ್ನು ನೆಟ್ಟಿಗರೊಬ್ಬರು ಶೇರ್ ಮಾಡಿದ್ದು, ಸಖತ್ ವೈರಲ್ ಆಗಿದೆ.

  ಸಮಂತಾ ಹೇಳಿಕೆಯ ಬಗ್ಗೆ ನೆಟ್ಟಿಗರು ಗರಂ ಆಗಿದ್ದಾರೆ. ಪ್ರಧಾನಿ ಮೋದಿ ನಿರ್ಣಯಗಳ ಹಿನ್ನೆಲೆಯಲ್ಲಿ ಸ್ಯಾಮ್ ಹೇಳಿಕೆಯನ್ನು ವೈರಲ್ ಆಗ್ತಿದೆ. "ಎಲ್‌ಪಿಜಿ ಸಿಲಿಂಡರ್ ದರ 1100ರೂ. ಆಗಿದೆ. ಆರ್ಥಿಕ ಸುಧಾರಣೆ ಎಂದರೆ ಇದೇನಾ?" ಎಂದು ಕೇಳುತ್ತಿದ್ದಾರೆ. ಮೋದಿ ಯೋಜನೆಗಳು, ನಿರ್ಣಯಗಳ ಬಗ್ಗೆ ಸಮಾಧಾನವನ್ನು ನಟಿ ಸಮಂತಾ ಮೇಲೆ ತೋರಿಸುತ್ತಿದ್ದಾರೆ. ಕಳೆದ 3 ದಿನಗಳಿಂದ ಸಮಂತಾ ಹೇಳಿಕೆಯ ಈ ವಿಡಿಯೋ ಟ್ವಿಟ್ಟರ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

  ಪವನ್ ಕಲ್ಯಾಣ್‌ 2ನೇ ಪತ್ನಿ 2ನೇ ಮದುವೆ? ವೈರಲ್ ಆಯ್ತು ಪೋಸ್ಟ್!ಪವನ್ ಕಲ್ಯಾಣ್‌ 2ನೇ ಪತ್ನಿ 2ನೇ ಮದುವೆ? ವೈರಲ್ ಆಯ್ತು ಪೋಸ್ಟ್!

  ಸೆಲೆಬ್ರೆಟಿಗಳ ಹೇಳಿಕೆಗಳನ್ನು ಹೀಗೆ ವೈರಲ್ ಮಾಡುವುದು ಇದೇ ಮೊದಲಲ್ಲ. ಈ ಹಿಂದೆ ಸಾಕಷ್ಟು ಬಾರಿ ಈ ರೀತಿ ಮಾಡಲಾಗಿತ್ತು. ಆದರೆ ಈ ಬಾರಿ ಮಾತ್ರ ಸಮಂತಾ ಪೇಚಿಗೆ ಸಿಲುವಂತಾಗಿದೆ. ಇನ್ನು ನಾಗಚೈತನ್ಯಾಗೆ ಡೈವೋರ್ಸ್ ನೀಡಿದ ನಂತರ ಸಮಂತಾ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಹಾಲಿವುಡ್‌ ಪ್ರಾಜೆಕ್ಟ್‌ಗೂ ಸೈ ಎಂದಿದ್ದಾರೆ. ಶೀಘ್ರದಲ್ಲೇ ಬಾಲಿವುಡ್ ಪ್ರವೇಶಿಸುವ ಸುಳಿವು ಸಿಕ್ತಿದೆ.

  ಡೈವೋರ್ಸ್ ನಂತರ ಸಮಂತಾ ಕ್ರೇಜ್ ಕಮ್ಮಿ ಆಗುತ್ತದೆ ಅಂತಲೇ ಕೆಲವರು ಅಂದುಕೊಂಡಿದ್ದರು. ಆದರೆ 'ಪುಷ್ಪ' ಚಿತ್ರದ 'ಹೂಂ ಅಂತೀಯಾ ಮಾವ' ಸಾಂಗ್‌ನಿಂದ ಸ್ಯಾಮ್ ಕ್ರೇಜ್ ಡಬಲ್ ಆಯಿತು. ಬಿಂದಾಸ್ ಸಾಂಗ್‌ನಲ್ಲಿ ಸಿಕ್ಕಾಪಟ್ಟೆ ಹಾಟ್‌ ಆಗಿ ಹೆಜ್ಜೆ ಹಾಕಿ ಚೆಲುವೆ ಧೂಳೆಬ್ಬಿಸಿದ್ದರು. ಇನ್ನು ಹಾಟ್ ಹಾಟ್ ಫೋಟೊಶೂಟ್‌ಗಳಲ್ಲೂ ಸ್ಯಾಮ್ ಕಾಣಿಸಿಕೊಂಡು ರಂಗೇರಿಸಿದ್ದಾರೆ.

  Netizens Trolling Actress Samantha for her comments on PM Modi

  'ಯಶೋಧ' ಹಾಗೂ 'ಶಾಕುಂತಲಂ' ಅನ್ನುವ ಎರಡು ಮಹಿಳಾ ಪ್ರಧಾನ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಚೆನ್ನೈ ಚೆಲುವೆ ಬಣ್ಣ ಹಚ್ಚಿದ್ದಾರೆ. ವಿಜಯ್ ದೇವರಕೊಂಡ ಜೋಡಿಯಾಗಿ 'ಖುಷಿ' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ.

  English summary
  Netizens trolling Actress Samantha for her comments on PM Modi. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X