For Quick Alerts
  ALLOW NOTIFICATIONS  
  For Daily Alerts

  ಶೋಗಳು ಹೌಸ್‌ಫುಲ್.. ರೀ ರಿಲೀಸ್‌ನಲ್ಲೂ 'ಖುಷಿ' ದಾಖಲೆ: ಕರ್ನಾಟಕ ಡಿಸ್ಟ್ರಿಬ್ಯೂಟರ್ ಹೇಳಿದ್ದಿಷ್ಟು!

  |

  ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ 'ಖುಷಿ' ಸಿನಿಮಾ ಹೊಸ ವರ್ಷದ ಸಂಭ್ರಮದಲ್ಲಿ ರೀ ರಿಲೀಸ್ ಆಗ್ತಿದೆ. ವಿಶ್ವದಾದ್ಯಂತ ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗೆ ಬರ್ತಿದ್ದು, ಈಗಾಗಲೇ ಸಾಕಷ್ಟು ಶೋಗಳು ಹೌಸ್‌ಫುಲ್ ಆಗಿ ಎಲ್ಲರ ಹುಬ್ಬೇರಿಸಿದೆ.

  ಪವನ್ ಕಲ್ಯಾಣ್‌ ನಟನೆಯ ಹೊಸ ಸಿನಿಮಾ ರಿಲೀಸ್‌ಗೆ ಸಿಗುವಂತಹ ರೆಸ್ಪಾನ್ಸ್ 21 ವರ್ಷಗಳ ಹಿಂದಿನ ಚಿತ್ರಕ್ಕೆ ಸಿಕ್ತಿದೆ. ಎಸ್‌. ಜೆ ಸೂರ್ಯ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಚಿತ್ರದಲ್ಲಿ ಪವನ್ ಕಲ್ಯಾಣ್ ಜೋಡಿಯಾಗಿ ಭೂಮಿಕಾ ಚಾವ್ಲಾ ನಟಿಸಿದ್ದರು. ಅವತ್ತಿನ ಕಾಲಕ್ಕೆ ಸಿನಿಮಾ 27 ಕೋಟಿ ರೂ. ಕಲೆಕ್ಷನ್ ಮಾಡಿ ಟಾಲಿವುಡ್ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪವರ್ ಸ್ಟಾರ್ ಕರಿಯರ್‌ನಲ್ಲೇ ಬಿಗ್ಗೆಸ್ಟ್ ಹಿಟ್ ಸಿನಿಮಾ ಎನಿಸಿಕೊಂಡಿತ್ತು. ಈ ಶನಿವಾರ ಸಿನಿಮಾ ಹೊಸ ರೂಪದಲ್ಲಿ 4k ವರ್ಷನ್‌ನಲ್ಲಿ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದೆ.

  ಮಹೇಶ್, ಪವನ್ ಚಿತ್ರಗಳಿಂದ ನನಗಾದ ನಷ್ಟ ಬೇರೆಯವರಿಗೆ ಆಗಿದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ರು: ದಿಲ್ ರಾಜು!ಮಹೇಶ್, ಪವನ್ ಚಿತ್ರಗಳಿಂದ ನನಗಾದ ನಷ್ಟ ಬೇರೆಯವರಿಗೆ ಆಗಿದ್ರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ರು: ದಿಲ್ ರಾಜು!

  ತೆಲುಗು ಚಿತ್ರರಂಗದಲ್ಲಿ ಈಗ ಸೂಪರ್ ಹಿಟ್ ಸಿನಿಮಾಗಳನ್ನು ರೀರಿಲೀಸ್ ಮಾಡುವ ಟ್ರೆಂಡ್ ನಡೀತಿದೆ. ಹೊಸ ವರ್ಷದ ಸಂಭ್ರಮದಲ್ಲಿ ಎವರ್‌ಗ್ರೀನ್ 'ಖುಷಿ' ಚಿತ್ರ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರ್ತಿರೋದು ವಿಶೇಷ.

  'ಖುಷಿ' ಶೋಗಳು ಹೌಸ್‌ಫುಲ್

  'ಖುಷಿ' ಶೋಗಳು ಹೌಸ್‌ಫುಲ್

  ಆಂಧ್ರ, ತೆಲಂಗಾಣ ಮಾತ್ರವಲ್ಲದೇ ಮುಂಬೈ, ಕರ್ನಾಟಕ, ಚೆನ್ನೈನಲ್ಲೂ 'ಖುಷಿ' ಸಿನಿಮಾ ರೀ ರಿಲೀಸ್ ಆಗ್ತಿದೆ. 2 ದಿನ ಮೊದ್ಲೆ ಆನ್‌ಲೈನ್‌ನಲ್ಲಿ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಈಗಾಗಲೇ ಹೈದರಾಬಾದ್‌ನಲ್ಲಿ 45, ವೈಜಾಗ್‌ನಲ್ಲಿ 15, ಚೆನ್ನೈನಲ್ಲಿ 3 ಹಾಗೂ ಬೆಂಗಳೂರಿನಲ್ಲಿ 3 ಶೋಗಳು ಹೌಸ್‌ಫುಲ್ ಆಗಿರುವುದು ಅಚ್ಚರಿ ಮೂಡಿಸಿದೆ. ಹಳೇ ಚಿತ್ರಕ್ಕೆ ಈ ಪಾಟಿ ಕ್ರೇಜ್ ಇದ್ಯಾ ಎಂದು ಕೆಲವರು ಶಾಕ್ ಆಗಿದ್ದಾರೆ. ಕೆಲವೆಡೆ ಬೆಳಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಆರಂಭ ಆಗ್ತಿದೆ.

  ಪವನ್ ಕಲ್ಯಾಣ್ ಎವರ್ ಗ್ರೀನ್ ಹಿಟ್ 'ಖುಷಿ' ಮರು ಬಿಡುಗಡೆಗೆ ಮುಹೂರ್ತ ಫಿಕ್ಸ್ಪವನ್ ಕಲ್ಯಾಣ್ ಎವರ್ ಗ್ರೀನ್ ಹಿಟ್ 'ಖುಷಿ' ಮರು ಬಿಡುಗಡೆಗೆ ಮುಹೂರ್ತ ಫಿಕ್ಸ್

  ಕರ್ನಾಟಕದಲ್ಲಿ 'ಖುಷಿ' ಕ್ರೇಜ್

  ಕರ್ನಾಟಕದಲ್ಲಿ 'ಖುಷಿ' ಕ್ರೇಜ್

  ತೆಲುಗು ರಾಜ್ಯಗಳಲ್ಲಿ ಮಾತ್ರವಲ್ಲ ಕರ್ನಾಟಕದಲ್ಲೂ 'ಖುಷಿ' ಸಿನಿಮಾ ರೀ ರಿಲೀಸ್ ಕ್ರೇಜ್ ಜೋರಾಗಿದೆ. ಈಗಾಗಲೇ 25ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ನಾಳೆ ಮತ್ತಷ್ಟು ಸ್ಕ್ರೀನ್‌ಗಳನ್ನು ಸೇರಿಸುವುದಾಗಿ ವಿತರಕರು ಹೇಳಿದ್ದಾರೆ. ಈಗಾಗಲೇ ಮಾರತ್ ಹಳ್ಳಿಯ ತುಳಸಿ ಥಿಯೇಟರ್‌ನ 3 ಶೋಗಳ ಟಿಕೆಟ್ ಮಾರಾಟವಾಗಿದೆ. ಹಲವೆಡೆ ಫಾಸ್ಟ್‌ ಫಿಲ್ಲಿಂಗ್ ಆಗ್ತಿದೆ. ಬೆಂಗಳೂರಿನಲ್ಲೂ ಕೆಲವೆಡೆ ಬೆಳಗ್ಗೆ 6 ಗಂಟೆಗೆ ಶೋಗಳು ಆರಂಭವಾಗಲಿದೆ. ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್‌ನಿಂದ ಲಕ್ಷ ಲಕ್ಷ ಕಲೆಕ್ಷನ್ ಆಗಿದೆ.

  ಕರ್ನಾಟಕ ವಿತರಕರು ಹೇಳಿದ್ದೇನು?

  ಕರ್ನಾಟಕ ವಿತರಕರು ಹೇಳಿದ್ದೇನು?

  ಧೀರಜ್ ಎಂಟರ್‌ಪ್ರೈಸಸ್ ಸಂಸ್ಥೆ ಕರ್ನಾಟದಲ್ಲಿ 'ಖುಷಿ' ಸಿನಿಮಾ ರೀ ರಿಲೀಸ್ ರೈಟ್ಸ್ ಖರೀದಿಸಿದ್ದಾರೆ. ಅಡ್ವಾನ್ಸ್ ಬುಕ್ಕಿಂಗ್‌ಗೆ ಸಿಕ್ತಿರುವ ರೆಸ್ಪಾನ್ಸ್ ನೋಡಿ ವಿತರಕರು ಖುಷಿಯಾಗಿದ್ದಾರೆ. "ಸದ್ಯ 25 ಸ್ಕ್ರೀನ್‌ಗಳು ಕನ್ಫರ್ಮ್ ಅಗಿದೆ. ಮತ್ತಷ್ಟು ಶೋಗಳನ್ನು ಆಡ್ ಮಾಡುತ್ತೇವೆ. ಸಿನಿಮಾ ನಿರ್ಮಾಪಕರಾದ ಎ. ಎಂ ರತ್ನಂ ಜೊತೆಗಿನ ಸ್ನೇಹಕ್ಕಾಗಿ ಈ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ, ಶನಿವಾರ ಒಂದೇ ದಿನ ಅಲ್ಲ, ಭಾನುವಾರವೂ ಸಿನಿಮಾ ಪ್ರದರ್ಶನ ಮುಂದುವರೆಯಲಿದೆ. ಪ್ರೇಕ್ಷಕರ ಪ್ರತಿಕ್ರಿಯೆ ನೋಡಿಕೊಂಡು ಸಿನಿಮಾ ಪ್ರದರ್ಶನ ಮುಂದುವರೆಸುತ್ತೇವೆ" ಎಂದು ವಿತರಕರು ಹೇಳಿದ್ದಾರೆ.

  "ಪವನ್ ಅಂದ್ರೆ ಇಷ್ಟ.. ಆದ್ರೆ ಜಗನ್‌ಗೆ ನನ್ನ ವೋಟ್: ವಿಶಾಲ್ ಹೇಳಿಕೆಗೆ ಜನಸೇನಾನಿ ಫ್ಯಾನ್ಸ್ ಗರಂ

  ಸಿನಿಮಾ ರೀ ರಿಲೀಸ್ ಟ್ರೆಂಡ್

  ಸಿನಿಮಾ ರೀ ರಿಲೀಸ್ ಟ್ರೆಂಡ್

  ಹಳೇ ಸಿನಿಮಾಗಳನ್ನು ರೀ ರಿಲೀಸ್ ಮಾಡೋದು ಹೊಸದೇನು ಅಲ್ಲ. ಆದರೆ ತೆಲುಗಿನಲ್ಲಿ ಮಹೇಶ್‌ ಬಾಬು ಹುಟ್ಟುಹಬ್ಬಕ್ಕೆ 'ಪೋಕಿರಿ' ಸಿನಿಮಾ 4k ವರ್ಷನ್‌ನಲ್ಲಿ ವಿಶ್ವದಾದ್ಯಂತ ರಿಲೀಸ್ ಆಗಿ ಸದ್ದು ಮಾಡಿತ್ತು. ನಂತರ ಪವನ್ ಕಲ್ಯಾಣ್ ನಟನೆಯ 'ಜಲ್ಸಾ' ಕೂಡ ಮತ್ತೆ ರಿಲೀಸ್ ಆಗಿ 3 ಕೋಟಿ ಕಲೆಕ್ಷನ್ ಮಾಡಿತ್ತು. ಇತ್ತೀಚೆಗೆ ರಜನಿಕಾಂತ್‌ ಬರ್ತ್‌ಡೇ ಸ್ಪೆಷಲ್ಲಾಗಿ 'ಬಾಬಾ' ಸಿನಿಮಾ ಹೊಸ ರೂಪದಲ್ಲಿ ತೆರೆಗೆ ಬಂದಿತ್ತು. ಒಂದೇ ವಾರಕ್ಕೆ 10 ಸಾವಿರಕ್ಕೂ ಅಧಿಕ ಟಿಕೆಟ್ಸ್ ಮಾರಾಟವಾಗಿ ದಾಖಲೆ ಬರೆದಿತ್ತು. ಇದೇ ಹಾದಿಯಲ್ಲಿ 'ಖುಷಿ' ಸಿನಿಮಾ ಬರ್ತಿದೆ.

  English summary
  New Year Special: Pawan Kalyan's Kushi special show tickets sold out like hot cakes. a Romantic drama released in 2001. New Year’s Eve, the makers Planing to Release Kushi 4K version. know more.
  Thursday, December 29, 2022, 19:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X