For Quick Alerts
  ALLOW NOTIFICATIONS  
  For Daily Alerts

  ಮದುವೆ ಬಳಿಕ ಸಿಹಿ ಸುದ್ದಿ ಹಂಚಿಕೊಂಡ ನಟಿ ನಿಹಾರಿಕಾ

  By ಫಿಲ್ಮ್ ಡೆಸ್ಕ್
  |

  ಟಾಲಿವುಡ್ ಮೆಗಾ ಕುಟುಂಬದ ಏಕೈಕ ನಟಿ ನಿಹಾರಿಕಾ ಕೊನಿಡೆಲಾ ಇತ್ತೀಚಿಗಷ್ಟೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ನಿಹಾರಿಕಾ ಚೈತನ್ಯ ಜೊತೆ ಹಸೆಮಣೆ ಏರಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನಿಹಾರಿಕಾ ಮತ್ತು ಚೈತನ್ಯ ಪತಿ-ಪತ್ನಿಯರಾಗಿದ್ದಾರೆ.

  ಸದ್ಯ ಮದುವೆ ಜೀವನವನ್ನು ಎಂಜಾಯ್ ಮಾಡುತ್ತಿರುವ ನಟಿ ನಿಹಾರಿಕಾ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹೌದು, ಮದುವೆ ಬಳಿಕ ನಿಹಾರಿಕಾ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಈ ಬಾರಿ ನಟಿಸುತ್ತಿರುವುದು ವೆಬ್ ಸಿರೀಸ್ ನಲ್ಲಿ. ನಿಹಾರಿಕಾ ವೆಬ್ ಸೀರಿಸ್ ನಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.

  ಭಾನು ರಾಯಡು ನಿರ್ದೇಶನ ಮಾಡುತ್ತಿರುವ ವೆಬ್ ಸೀರಿಸ್ ನಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ನಿನ್ನ (ಜನವರಿ 08) ಈ ವೆಬ್ ಸೀರಿಸ್ ಗೆ ಅಧಿಕೃತ ಚಾಲನೆ ಸಿಕ್ಕಿದೆ. ವಿಶೇಷ ಎಂದರೆ ಪತಿ ಚೈತನ್ಯ ಸಹ ಪತ್ನಿಯ ವೆಬ್ ಸೀರಿಸ್ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  ಮದುವೆ ಬಳಿಕವೂ ನಟನೆಯಲ್ಲಿ ಮುಂದುವರೆದಿರುವ ನಿಹಾರಿಕಾ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ವೆಬ್ ಸೀರಿಸ್ ಗೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಜೊತೆಗೆ ನಿಹಾರಿಕಾ ನಟಿಸುತ್ತಿರುವ ಮೊದಲ ವೆಬ್ ಸೀರಿಸ್ ಬಗ್ಗೆ ಹೆಚ್ಚಿನ ಮಾಹಿತಿ ಸಹ ಬಹಿರಂಗವಾಗಿಲ್ಲ. ಸದ್ಯದಲ್ಲೇ ತಂಡ ಎಲ್ಲಾ ಮಾಹಿತಿ ನೀಡಲಿದೆ.

  ಮದುವೆ ಬಳಿಕ ಮಾಲ್ಡೀವ್ಸ್ ಹನಿಮೂನ್ ಗೆ ತೆರಳಿದ್ದ ನಿಹಾರಿಕಾ ಇತ್ತೀಚಿಗಷ್ಟೆ ಎಂದರೆ ಕ್ರಿಸ್ಮಸ್ ಸಮಯದಲ್ಲಿ ವಾಪಸ್ ಆಗಿದ್ದಾರೆ. ನಿಹಾರಿಕಾ ಮತ್ತು ಚೈತನ್ಯ ದಂಪತಿ ಮೆಗಾ ಕುಟುಂಬದಲ್ಲಿ ನಡೆದ ಕ್ರಿಸ್ಮಸ್ ಪಾರ್ಟಿಯಲ್ಲಿ ಭಾಗಿಯಾಗಿ ಸಖತ್ ಎಂಜಾಯ್ ಮಾಡಿದ್ದರು. ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಕ್ರಿಸ್ಮಸ್ ಪಾರ್ಟಿಯ ಬಳಿಕ ರಾಮ್ ಚರಣ್ ಮತ್ತು ವರುಣ್ ತೇಜ್ ಇಬ್ಬರಿಗೂ ಕೊರೊನಾ ಸೋಂಕು ತಗುಲ್ಲಿದ್ದು, ಕ್ವಾರಂಟೈನ್ ಆಗಿದ್ದರು. ಸದ್ಯ ಗುಣಮುಖರಾಗಿರುವ ಇಬ್ಬರು ಸಿನಿಮಾ ಕೆಲಗಳಲ್ಲಿ ಭಾಗಿಯಾಗಿದ್ದಾರೆ.

  English summary
  Tollywood Actres Niharika Konidela set to act in web series after marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X