For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸಹೋದರನ ಮಗಳ ಮದುವೆ ದಿನಾಂಕ ಮತ್ತು ಸ್ಥಳ ಬಹಿರಂಗ

  |

  ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಮದುವೆ ದಿನಾಂಕ ಫಿಕ್ಸ್ ಆಗಿದೆ. ಉದ್ಯಮಿ ಚೈತನ್ಯ ಜೊತೆ ಕಳೆದ ಕೆಲವು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಮದುವೆ ದಿನಾಂಕ ಬಹಿರಂಗವಾಗಿರಲಿಲ್ಲ. ಇದೀಗ ನಿಹಾರಿಕಾ ಮತ್ತು ಚೈತನ್ಯ ಮದುವೆ ಡೇಟ್ ಫಿಕ್ಸ್ ಆಗಿದೆ.

  ನಟಿ ನಿಹಾರಿಕಾ ಅಭಿನಯಿಸಿರುವುದು ಕೇವಲ ಐದೇ ಸಿನಿಮಾಗಳಲ್ಲಿಯಾದರೂ ಆಕೆಯ ಜನಪ್ರಿಯತೆ ಕಡಿಮೆ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಿಹಾರಿಕಾ ಮದುವೆ ಯಾವಾಗ ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಆದರೀಗ ಈಪ್ರಶ್ನೆಗೆ ಉತ್ತರ ಸಿಕ್ಕಿದೆ. ನಿಹಾರಿಕಾ ಮದುವೆಯನ್ನು ಕುಟುಂಬದವರು ಭಾರಿ ಅದ್ದೂರಿಯಾಗಿ ಮಾಡಲು ಪ್ಲಾನ್ ಮಾಡಿದ್ದಾರೆ. ಡೆಸ್ಟಿನೇಶನ್ ವೆಡ್ಡಿಂಗ್ ಮಾಡಲು ನಿರ್ಧರಿಸಿದ್ದ ಕುಟುಂಬ ಸ್ಥಳವನ್ನು ಹುಡುಕ್ಕಿದ್ದಾರೆ.

  ಅದ್ಧೂರಿಯಾಗಿ ನಡೆಯಲಿದೆ ಚಿರಂಜೀವಿ ಸಹೋದರನ ಮಗಳ ಮದುವೆಅದ್ಧೂರಿಯಾಗಿ ನಡೆಯಲಿದೆ ಚಿರಂಜೀವಿ ಸಹೋದರನ ಮಗಳ ಮದುವೆ

  ನಿಹಾರಿಕಾ ಮತ್ತು ಚೈತನ್ಯ ವಿವಾಹ ಡಿಸೆಂಬರ್ 9ರಂದು ನಡೆಯಲಿದೆ ಎಂದು ಹೇಳಲಾಗುತ್ತಿದೆ. ಬೆಳಗ್ಗೆ 7:15ರ ಮುಹೂರ್ತದಲ್ಲಿ ಚೈತನ್ಯ ನಟಿ ನಿಹಾರಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ಅಂದ್ಹಾಗೆ ಇವರ ಮದುವೆ ರಾಜಸ್ಥಾನದಲ್ಲಿ ಮಾಡಲು ಕುಟುಂಬದವರು ನಿರ್ಧರಿಸಿದ್ದಾರಂತೆ. ರಾಜಸ್ಥಾನದ ಉದೈ ವಿಲಾಸ ಅರಮನೆಯಲ್ಲಿ ಇಬ್ಬರ ಮದುವೆ ನಡೆಯಲಿದೆ.

  ಮದುವೆಯ ಸಂಪೂರ್ಣ ಜವಾಬ್ದಾರಿಯನ್ನು ನಿಹಾರಿಕಾ ಸಹೋದರ ನಟ ವರುಣ್ ತೇಜ್ ವಹಿಸಿಕೊಂಡಿದ್ದಾರೆ. ಈಗಾಗಲೇ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರಂತೆ. ನಟಿ ನಿಹಾರಿಕಾ ಇತ್ತೀಚಿಗಷ್ಟೆ ಬ್ಯಾಚುಲರ್ ಪಾರ್ಟಿ ಮಾಡಿ ಸ್ನೇಹಿತರ ಜೊತೆ ಎಂಜಾಯ್ ಮಾಡಿದ್ದರು.

  English summary
  Telugu Actress Niharika konidela will tie the knot with chaitanya on December 9th.
  Thursday, November 5, 2020, 9:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X