For Quick Alerts
  ALLOW NOTIFICATIONS  
  For Daily Alerts

  ಜನಪ್ರಿಯ ನಟನೊಟ್ಟಿಗೆ ಎಂಗೇಜ್‌ಮೆಂಟ್ ಮಾಡಿಕೊಂಡ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ

  |

  ನಟಿ ಸಂಜನಾ ಗಲ್ರಾನಿಯ ಸಹೋದರಿ, ನಟಿ ನಿಕ್ಕಿ ಗಲ್ರಾನಿ ಕೊನೆಗೂ ಎಂಗೇಜ್ ಆಗಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಿರುವ ಸ್ಟಾರ್ ಯುವನಟನೊಡನೊಂದಿಗೆ ಉಂಗುರ ಬದಲಾಯಿಸಿಕೊಂಡಿದ್ದಾರೆ ಈ ಚೆಲುವೆ.

  ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಿಕ್ಕಿ ಗಲ್ರಾನಿ ಹೆಚ್ಚಾಗಿ ನಟಿಸಿರುವುದು ಪರಭಾಷೆಗಳಲ್ಲಿಯೇ. ಇದೀಗ ಈ ನಟಿ ತೆಲುಗು ಚಿತ್ರರಂಗದ ಜನಪ್ರಿಯ ಯುವನಟ ಆದಿ ಪಿನಿಶೆಟ್ಟಿ ಜೊತೆಗೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ.

  ಕಳೆದ ಬುಧವಾರವೇ ಈ ಇಬ್ಬರ ಎಂಗೇಜ್‌ಮೆಂಟ್ ಗುಟ್ಟಾಗಿ ನಡೆದಿದೆ. ಕೆಲವೇ ಗೆಳೆಯರು, ಕುಟುಂಬ ಸದಸ್ಯರು, ಹಿತೈಷಿಗಳ ಮುಂದೆ ಈ ನವ ಜೋಡಿ ಉಂಗುರ ಬದಲಾಯಿಸಿಕೊಂಡಿದೆ. ತಮ್ಮ ಎಂಗೇಜ್‌ಮೆಂಟ್ ವಿಚಾರವನ್ನು ಗುಟ್ಟಾಗಿರಿಸಿದ್ದ ಈ ಜೋಡಿ ಇಂದು ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

  ''ಕೆಲವು ವರ್ಷಗಳ ಹಿಂದೆ ನಾವಿಬ್ಬರು ಪರಚಿತರಾದೆವು. ಪರಸ್ಪರ ಇಷ್ಟಪಟ್ಟೆವು'' ಎಂದಿರುವ ಆದಿ ಪಿನಿಶೆಟ್ಟಿ, ಮಾರ್ಚ್ 23 (ಬುಧವಾರ) ನಮ್ಮಿಬ್ಬರ ಪಾಲಿಗೂ ಮರೆಯಲಾಗದ ದಿನ. ಆ ದಿನ ನಾವು ಕುಟುಂಬದವರು, ಹಿರಿಯರು, ಸ್ನೇಹಿತರ ಮುಂದೆ ಎಂಗೇಜ್ ಆದೆವು'' ಎಂದಿದ್ದಾರೆ. ಎಂಗೇಜ್‌ಮೆಂಟ್‌ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

  ನಟಿ ನಿಕ್ಕಿ ಗಲ್ರಾನಿ ಸಹ ಇದೇ ಸಂದೇಶದೊಂದಿಗೆ ಆದಿ ಹಂಚಿಕೊಂಡಿರುವ ಚಿತ್ರವನ್ನೇ ಹಂಚಿಕೊಂಡಿದ್ದಾರೆ. ನಿಕ್ಕಿ ಹಾಗೂ ಆದಿ ಕೆಲವು ವರ್ಷಗಳಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ಈ ಇಬ್ಬರು ಒಟ್ಟಿಗೆ 'ಮರಗದ ನಾನಯಮ್' ಹಾಗೂ 'ಯಗವರಯಿನುಮ್ ನಾ ಕಾಕ' ಸಿನಿಮಾದಲ್ಲಿ ನಟಿಸಿದ್ದಾರೆ.

  ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಆದಿ ಪಿನಿಶೆಟ್ಟಿ ನಟಿಸಿದ್ದಾರೆ. ಉತ್ತಮ ನಟರಾಗಿ ಹೆಸರು ಮಾಡಿರುವ ಅವರು, ತೆಲುಗು, ತಮಿಳು ಎರಡೂ ಭಾಷೆಗಳಲ್ಲಿ ನಟಿಸಿದ್ದಾರೆ. ಹೀರೋ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಜೊತೆಗೆ, ಮುಖ್ಯ ಪೋಷಕ ನಟನಾಗಿ ರಜನೀಕಾಂತ್‌ರ 'ಕೊಚಾಡಿಯನ್', ಕೀರ್ತಿ ಸುರೇಶ್ ನಟನೆಯ 'ಗುಡ್ ಲಕ್ ಸಖಿ', ರಾಮ್ ಚರಣ್ ತೇಜ ನಟನೆಯ 'ರಂಗಸ್ಥಳಂ' ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಇನ್ನು ನಟಿ ನಿಕ್ಕಿ ಗಲ್ರಾನಿ, ಅಕ್ಕ ಸಂಜನಾರಂತೆ ಯಾವುದೇ ವಿವಾದಗಳಿಗೆ ಆಹಾರವಾಗದೆ ತಮ್ಮ ಪಾಡಿಗೆ ತಾವು ನಟಿನೆ ಮಾಡುತ್ತಾ ಸಾಗಿದ್ದಾರೆ. 2014 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿರುವ ನಿಕ್ಕಿ ಗಲ್ರಾನಿ, ಪ್ರಸ್ತುತ ಮಲಯಾಳಂನ 'ವೀರುಣ್ಣು', ಹಾಗೂ 'ಮೇರಿ ಆವಾಜ್ ಸುನೊ' ಹಾಗೂ ತಮಿಳಿನ 'ಇಡಿಯಟ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Actress Nikki Galrani engaged to Telugu-Tamil actor Aadhi Pinishetty on March 23. Aadhi Pinishetty acted in many hit Telugu and Tamil movies.
  Saturday, March 26, 2022, 19:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X