For Quick Alerts
  ALLOW NOTIFICATIONS  
  For Daily Alerts

  ಕಾಜಲ್ ಮದುವೆಯಲ್ಲಿ ಸಹೋದರಿಯ ಕಣ್ಣೀರು; ಭಾವುಕ ಚಿತ್ರ ಹಂಚಿಕೊಂಡ ನಟಿ

  |

  ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಇಂದು (ಅ.30) ಹಸೆಮಣೆ ಏರಿದ್ದಾರೆ. ಬಹುಕಾಲದ ಗೆಳೆಯ ಗೌತಮ್ ಕಿಚಲು ಜೊತೆ ಕಾಜಲ್ ಇಂದು ಸಪ್ತಪದಿ ತುಳಿದಿದ್ದಾರೆ. ಮುಂಬೈನಲ್ಲಿ ನಡೆದ ಸರಳ ಮದುವೆ ಸಮಾರಂಭದಲ್ಲಿ ಕಾಜಲ್ ಮತ್ತು ಗೌತಮ್ ಪತಿ-ಪತ್ನಿಯರಾಗಿದ್ದಾರೆ.

  ಕಾಜಲ್ ಮದುವೆ ಸಮಾರಂಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಳೆದ ಎರಡು ದಿನಗಳಿಂದ ಕಾಜಲ್ ಮನೆಯಲ್ಲಿ ಮದುವೆ ಶಾಸ್ತ್ರಗಳು ಜೋರಾಗಿ ನಡೆಯುತ್ತಿದೆ. ಹಳದಿ, ಮೆಹಂದಿ ಶಾಸ್ತ್ರಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿ ನಟಿ ಕಾಜಲ್ ಅಗರ್ವಾಲ್

  ಕಾಜಲ್ ಹಳದಿ ಶಾಸ್ತ್ರದ ಸಮಯದಲ್ಲಿ ಸಹೋದರಿ ನಿಶಾ ಅಗರ್ವಾಲ್ ಭಾವುಕರಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಹೋದರಿ ನಿಶಾ ಕಣ್ಣೀರಾಕುತ್ತಿರುವ ಫೋಟೋವನ್ನು ನಟಿ ಕಾಜಲ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಎಲ್ಲರ ಮುಂದೆ ಅಭಿಮಾನಿಯನ್ನು ಪ್ರೀತಿಯಿಂದ ಮಾತನಾಡಿಸಿದ ಡಿ ಬಾಸ್ | Darshan | Munirathna | Filmibeat Kannada

  ಬ್ಲ್ಯಾಕ್ ಅಂಡ್ ವೈಟ್ ಫೋಟೋದಲ್ಲಿ ನಿಶಾ ಅಗರ್ವಾಲ್ ಒಂದು ಕೈಯಲ್ಲಿ ಫೋನ್ ಹಿಡಿದು ಮತ್ತೊಂದು ಕೈಯಲ್ಲಿ ಕಣ್ಣೀರೊರೆಸಿಕೊಳ್ಳುತ್ತಾ ಕುಳಿತಿರುವ ಫೋಟೋ ಫೋಟೋ ಕಾಜಲ್ ಶೇರ್ ಮಾಡಿ ಯಾವುದೇ ಕ್ಯಾಪ್ಷನ್ ಹಾಕಿಲ್ಲ. ಬಳಿಕ ಈ ಫೋಟೋವನ್ನು ನಿಶಾ ಸಹ ಶೇರ್ ಮಾಡಿ, ಭಾವನಾತ್ಮಕ? ಸಂತೋಷದ ಕಣ್ಣೀರು ಎಂದು ಬರೆದುಕೊಂಡಿದ್ದಾರೆ.

  ಕಾಜಲ್ ಮದುವೆ ದಿನದ ಫೋಟೋ ಇನ್ನೂ ಶೇರ್ ಆಗಿಲ್ಲ. ಮದುವೆಯಲ್ಲಿ ಕಾಜಲ್ ಹೇಗೆ ಕಾಣಿಸಿಕೊಳ್ಳುತ್ತಿದ್ದರು ಎಂದು ನೋಡುವ ಕುತೂಹಲ ಅಭಿಮಾನಿಗಳಲ್ಲಿದೆ ಇದೆ. ಕಾಜಲ್ ಮದುವೆ ಫೋಟೋ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  English summary
  Nisha Aggarwal was seen getting emotional at her sister Kajal Aggarwal's haldi ceremony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X