For Quick Alerts
  ALLOW NOTIFICATIONS  
  For Daily Alerts

  ನಿಶ್ಯಬ್ಧಂ ಟ್ರೇಲರ್‌ ಬಿಡುಗಡೆ: ಎಲ್ಲರೂ ಹುಡುಕುತ್ತಿರುವುದು ಏನನ್ನು?

  |

  ನಟಿ ಅನುಷ್ಕಾ ಶೆಟ್ಟಿ ಎರಡು ವರ್ಷಗಳ ನಂತರ ಪೂರ್ಣ ಪ್ರಮಾಣದ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ 'ನಿಶ್ಯಬ್ಧಂ' ನ ಟ್ರೇಲರ್ ಇಂದು (ಸೋಮವಾರ) ಬಿಡುಗಡೆ ಆಗಿದೆ.

  ಅನುಷ್ಕಾ ಶೆಟ್ಟಿ ಕೊನೆಯದಾಗಿ 'ಸೈರಾ ನರಸಿಂಹ ರೆಡ್ಡಿ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನಾ ಪೂರ್ಣ ಪ್ರಮಾಣದ ನಾಯಕಿ ಪಾತ್ರದಲ್ಲಿ 'ಭಾಗವಮತಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು, ಅದು 2018 ರಲ್ಲಿ ಬಿಡಗುಡೆ ಆಗಿತ್ತು.

  ಈಗ ಎರಡೂವರೆ ವರ್ಷಗಳ ನಂತರ ಅನುಷ್ಕಾ ಶೆಟ್ಟಿ ನಟನೆಯ ಸಿನಿಮಾ ಬಿಡುಗಡೆ ಆಗುತ್ತಿದೆ. ಅದೇ ನಿಶ್ಯಬ್ಧಂ. ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ಟ್ರೇಲರ್ ಕುತೂಹಲ ಕೆರಳಿಸಿದೆ.

  ಹುಡುಕಾಟವಿದೆ ಟ್ರೇಲರ್‌ನಲ್ಲಿ

  ಹುಡುಕಾಟವಿದೆ ಟ್ರೇಲರ್‌ನಲ್ಲಿ

  'ನಿಶ್ಯಬ್ಧಂ' ಒಂದು ಥ್ರಿಲ್ಲರ್ ಕತೆಯೆಂದು ಟ್ರೇಲರ್‌ ನಿಂದ ತಿಳಿದು ಬರುತ್ತಿದೆ. ಸಿನಿಮಾದಲ್ಲಿ ನಡೆವ ಘಟನೆಗಳಿಗೆ ದೆವ್ವ ಕಾರಣವಾ ಅಥವಾ ವ್ಯಕ್ತಿ ಕಾರಣವಾ ಎಂಬ ಹುಡುಕಾಟ ಟ್ರೇಲರ್‌ನಲ್ಲಿದೆ. ಸಿನಿಮಾದಲ್ಲಿಯೂ ಇದೇ ಹುಡುಕಾಟ ಇರಲಿದೆ.

  ಮಾತು ಬಾರದ, ಕಿವಿ ಕೇಳದ ಮಹಿಳೆ ಪಾತ್ರದಲ್ಲಿ ಅನುಷ್ಕಾ

  ಮಾತು ಬಾರದ, ಕಿವಿ ಕೇಳದ ಮಹಿಳೆ ಪಾತ್ರದಲ್ಲಿ ಅನುಷ್ಕಾ

  ಅನುಷ್ಕಾ ಶೆಟ್ಟಿ, ಈ ಸಿನಿಮಾದಲ್ಲಿ ಮಾತು ಬಾರದ, ಕಿವಿ ಕೇಳದ ವ್ಯಕ್ತಿಯಾಗಿ ನಟಿಸಿದ್ದಾರೆ. ನಟಿಯಾಗಿ 15 ವರ್ಷ ಅನುಭವ ಇರುವ ಅವರಿಗೆ, ಭಾವನೆ ದಾಟಿಸಲು ಮಾತುಗಳ ಅವಶ್ಯಕತೆ ಇಲ್ಲವೆಂದು ಟ್ರೇಲರ್‌ನಲ್ಲೇ ಗೊತ್ತಾಗುತ್ತಿದೆ.

  ಅರ್ಜುನ್ ರೆಡ್ಡಿ ಖ್ಯಾತಿನ ನಟಿ ಶಾಲಿನಿ ದೇಶಪಾಂಡೆ ಇದ್ದಾರೆ

  ಅರ್ಜುನ್ ರೆಡ್ಡಿ ಖ್ಯಾತಿನ ನಟಿ ಶಾಲಿನಿ ದೇಶಪಾಂಡೆ ಇದ್ದಾರೆ

  ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಜೊತೆಗೆ ಖ್ಯಾತ ನಟ ಮಾಧವನ್ ಇದ್ದಾರೆ. ಅರ್ಜುನ್ ರೆಡ್ಡಿ ಖ್ಯಾತಿನ ನಟಿ ಶಾಲಿನಿ ದೇಶಪಾಂಡೆ ಇದ್ದಾರೆ. ಕನ್ನಡದ ರಣವಿಕ್ರಮ, ಹೊಂಗನಸು ಸಿನಿಮಾಗಳಲ್ಲಿ ನಟಿಸಿರುವ ಅಂಜಲಿ ಇದ್ದಾರೆ. ವಿದೇಶಿ ನಟ ಮೈಖಲ್ ಮ್ಯಾಡ್ಸನ್ ಸಹ ಮುಖ್ಯಪಾತ್ರದಲ್ಲಿದ್ದಾರೆ.

  ಇದು ಕನ್ನಡದ ಹೆಣ್ಣು ಮಗಳ ಹೃದಯ | Pranitha | Filmibeat Kannada
  ಅಕ್ಟೋಬರ್ 2 ಕ್ಕೆ ಬಿಡುಗಡೆ

  ಅಕ್ಟೋಬರ್ 2 ಕ್ಕೆ ಬಿಡುಗಡೆ

  ನಿಶ್ಯಬ್ಧಂ ಸಿನಿಮಾ ಅಕ್ಟೋಬರ್ 2 ನೇ ತಾರೀಖಿನಂದು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಕೊಳ್ಳಲು ದೊಡ್ಡ ಮೊತ್ತದ ಹಣವನ್ನೇ ನಿರ್ಮಾಪಕರಿಗೆ ನೀಡಲಾಗಿದೆ ಎನ್ನಲಾಗುತ್ತಿದೆ. ಸಿನಿಮಾವು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

  English summary
  Anushka Shetty's Nishambam movie trailer released on Monday. Movie will be released on Amazon prime.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X