For Quick Alerts
  ALLOW NOTIFICATIONS  
  For Daily Alerts

  ನಟಿ ಕೀರ್ತಿ ಸುರೇಶ್ ಕಾಣೆಯಾಗಿದ್ದಾರೆ! ತಕ್ಷಣವೇ ಸ್ಪಂದಿಸಿದ ಹೈದರಾಬಾದ್ ಪೊಲೀಸ್

  |

  ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಕಾಣೆಯಾಗಿದ್ದಾರೆ! ಹೀಗೆಂದು ತೆಲುಗಿನ ಖ್ಯಾತ ನಟ ಆತಂಕ ವ್ಯಕ್ತಪಡಿಸಿದ್ದಾರೆ.

  ನಟ ನಿತೀನ್ ಅವರು ಟ್ವೀಟ್ ಮಾಡಿ, 'ಕಾಣೆಯಾಗಿದ್ದಾರೆ, ಪ್ರೀತಿಯ ಅನು, ನೀನು ಎಲ್ಲಿದ್ದರೂ 'ರಂಗ್‌ ದೇ' ಸಿನಿಮಾದ ಪ್ರಚಾರ ಕಾರ್ಯದಲ್ಲಿ ಭಾಗವಹಿಸಬೇಕು. ಇಂತಿ ನಿನ್ನ ಅರ್ಜುನ್' ಎಂದಿರುವ ನಿತಿನ್. ಕೀರ್ತಿ ಸುರೇಶ್ ಅವರ ಹಳೆಯ ಚಿತ್ರವೊಂದನ್ನು ಪ್ರಕಟಿಸಿದ್ದಾರೆ.

  ನಟ ನಿತಿನ್ ಅವರ ಈ ಕಾಲೆಳೆಯುವ ಟ್ವೀಟ್‌ಗೆ ಸ್ಪಂದಿಸಿರುವ ಹೈದರಾಬಾದ್ ಪೊಲೀಸರು, 'ಚಿಂತೆ ಮಾಡಬೇಡಿ ನಟ ನಿತಿನ್. ಈ ಸಮಸ್ಯೆಯನ್ನು ನಾವು ನೋಡಿಕೊಳ್ಳುತ್ತೇವೆ' ಎಂದಿದ್ದಾರೆ.

  ನಟ ನಿತಿನ್ ಹಾಗೂ ಕೀರ್ತಿ ಸುರೇಶ್ ಜೊತೆಯಾಗಿ ನಟಿಸಿರುವ ತೆಲುಗು ಸಿನಿಮಾ 'ರಂಗ್‌ ದೇ' ಮಾರ್ಚ್ 26 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯ ಪ್ರಾರಂಭವಾಗಲಿದ್ದು, ಪ್ರಚಾರ ಕಾರ್ಯದ ಆರಂಭದಲ್ಲಿ ಕೀರ್ತಿ ಸುರೇಶ್ ಗೈರಾಗಿದ್ದರು. ಹಾಗಾಗಿ ನಟ ನಿತಿನ್ ಅವರು ಈ ರೀತಿ ತಮಾಷೆಯ ಪೋಸ್ಟ್ ಹಾಕಿದ್ದಾರೆ.

  ಆದರೆ ನಿತಿನ್ ಅವರು ಪೋಸ್ಟ್ ಹಾಕಿದ ನಂತರ ಹೈದರಾಬಾದ್ ನಲ್ಲಿ ನಡೆದ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಟಿ ಕೀರ್ತಿ ಸುರೇಶ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಿರ್ದೇಶಕ ತ್ರಿವಿಕ್ರಿಮ್ ಶ್ರೀನಿವಾಸ್ ಅತಿಥಿಯಾಗಿ ಭಾಗವಹಿಸಿದ್ದರು.

  ನಟಿ ಕೀರ್ತಿ ಸುರೇಶ್ ನಟನೆಯ ರಂಗ್ ದೇ, ಮರಕ್ಕರ್, ಗುಡ್ ಲಕ್ ಸಖಿ, ರೆಂಡು ಜಡಲ ಸೀತಾ, ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಸರ್ಕಾರು ವಾರಿ ಪಾಠ, ಅನ್ನಾತೆ, ವಾಶಿ, ಸಾನಿ ಕಾಯಿದಂ ಸಿನಿಮಾಗಳ ಚಿತ್ರೀಕರಣ ನಡೆಯುತ್ತಿದೆ.

  ಇನ್ನು ನಟ ನಿತಿನ್ ಅವರು ರಂಗ್ ದೇ ಸಿನಿಮಾ ಬಿಡುಗಡೆ ಬಳಿಕ ಮೆರ್ಲಪಾಕ ಗಾಂಧಿ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾದಲ್ಲಿ ನಟಿಸಲಿದ್ದಾರೆ.

  ಯುವರತ್ನ ಟ್ರೈಲರ್ ನೋಡಿ ಫಿದಾ ಆದ್ರು ಅಧೀರ ಸಂಜಯ್ ದತ್ | Filmibeat Kannada

  'ರಂಗ್‌ ದೇ' ಸಿನಿಮಾವು ಮಾರ್ಚ್ 26 ರಂದು ಬಿಡುಗಡೆ ಆಗಲಿದ್ದು, ಸಿನಿಮಾವನ್ನು ವೆಂಕಿ ಅಟ್ಲೂರಿ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ನಿರ್ಮಾಣ ಮಾಡಿರುವುದು ಸೂರ್ಯದೇವರ ನಾಗವಂಶಿ.

  English summary
  Actor Nithiin tweeted that actress Keerthy Suresh is missing Hyderabad police replied to tweet and said we will take case of this case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X