For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಹೊಸ ಸಿನಿಮಾದಲ್ಲಿ ಕನ್ನಡದ ನಟಿ: ಯಾರಾಕೆ?

  |

  2018 ರಲ್ಲಿ ತೆರೆ ಕಂಡು ಹೀನಾಯ ಸೋಲು ಕಂಡ 'ಅಜ್ಞಾತವಾಸಿ' ಸಿನಿಮಾದ ಬಳಿಕ ಚಿತ್ರರಂಗದಿಂದ ಬಿಡುವು ಪಡೆದಿದ್ದ ಪವನ್ ಕಲ್ಯಾಣ್ ರಾಜಕೀಯದಲ್ಲಿ ತೊಡಗಿಕೊಂಡಿದ್ದರು. ಆದರೆ ಈಗ ಒಮ್ಮೆಲೆ ಒಂದರ ಹಿಂದೊಂದರಂತೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.

  'ವಕೀಲ್ ಸಾಬ್' ಸಿನಿಮಾ ಚಿತ್ರೀಕರಣ ಮುಗಿಸಿರುವ ಪವನ್ ಕಲ್ಯಾಣ್ ಈಗ ಒಮ್ಮೆಲೆ ಎರಡು ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಐತಿಹಾಸಿಕ ಕತೆ ಹೊಂದಿರುವ 'ಹರಿ ಹರ ವೀರ ಮಲ್ಲು' ಹಾಗೂ ಇನ್ನೂ ಹೆಸರಿಡದ ಮಲಯಾಳಂ ಸೂಪರ್ ಹಿಟ್ ಸಿನಿಮಾ ಒಂದರ ರೀಮೇಕ್‌ನಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ.

  ಪವನ್ ಕಲ್ಯಾಣ್ ನಟಿಸುತ್ತಿರುವ ಮಲಯಾಳಂ ಸಿನಿಮಾದ ರೀಮೇಕ್‌ಲನಲ್ಲಿ ರಾಣಾ ದಗ್ಗುಬಾಟಿ ಸಹ ನಟಿಸುತ್ತಿದ್ದು, ಸಿನಿಮಾದಲ್ಲಿ ಕನ್ನಡದ ನಟಿಯೊಬ್ಬರು ಮುಖ್ಯ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ.

  'ಅಯ್ಯಪ್ಪನುಂ-ಕೊಶಿಯುಂ' ರೀಮೇಕ್‌ನಲ್ಲಿ ಪವನ್ ಕಲ್ಯಾಣ್

  'ಅಯ್ಯಪ್ಪನುಂ-ಕೊಶಿಯುಂ' ರೀಮೇಕ್‌ನಲ್ಲಿ ಪವನ್ ಕಲ್ಯಾಣ್

  ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿದ್ದ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ತೆಲುಗು ರೀಮೇಕ್‌ನಲ್ಲಿ ಪವನ್ ಕಲ್ಯಾಣ್ ನಟಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಕರ್ನಾಟಕ ಮೂಲದ ನಟಿ ನಿತ್ಯಾ ಮೆನನ್ ಸಹ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

  ರಾಣಾ ದಗ್ಗುಬಾಟಿ ಪತ್ನಿ ಪಾತ್ರದಲ್ಲಿ ನಿತ್ಯಾ ಮೆನನ್?

  ರಾಣಾ ದಗ್ಗುಬಾಟಿ ಪತ್ನಿ ಪಾತ್ರದಲ್ಲಿ ನಿತ್ಯಾ ಮೆನನ್?

  ನಿತ್ಯಾ ಮೆನನ್ ಅವರು ರಾಣಾ ದಗ್ಗುಬಾಟಿ ಪತ್ನಿಯ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ. ಮಲಯಾಳಂನಲ್ಲಿ ಇದೇ ಪಾತ್ರವನ್ನು ಅನ್ನಾ ರಾಜನ್ ನಿರ್ವಿಸಿದ್ದರು. ಸಿನಿಮಾದಲ್ಲಿ ಇದು ದೊಡ್ಡ ಪಾತ್ರವಲ್ಲದಿದ್ದರೂ ಮುಖ್ಯ ಪಾತ್ರಗಳ ಮೇಲೆ ಪ್ರಭಾವ ಬೀರುವ ಪಾತ್ರವಾಗಿದೆ.

  ಇದೇ ಸಿನಿಮಾದಲ್ಲಿ ಸಾಯಿ ಪಲ್ಲವಿ ಸಹ ನಟನೆ?

  ಇದೇ ಸಿನಿಮಾದಲ್ಲಿ ಸಾಯಿ ಪಲ್ಲವಿ ಸಹ ನಟನೆ?

  'ಅಯ್ಯಪ್ಪನುಂ ಕೋಶಿಯುಂ' ಮಲಯಾಳಂ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್, ಬಿಜು ಮೆನನ್ ನಟಿಸಿದ್ದರು. ಮಲಯಾಳಂನಲ್ಲಿ ಬಿಜು ಮೆನನ್ ನಟಿಸಿದ್ದ ಪಾತ್ರದಲ್ಲಿ ಪವನ್ ಕಲ್ಯಾಣ್, ಪೃಥ್ವಿರಾಜ್ ನಟಿಸಿದ್ದ ಪಾತ್ರದಲ್ಲಿ ರಾಣಾ ದಗ್ಗುಬಾಟಿ ನಟಿಸಲಿದ್ದಾರೆ. ಇದೇ ಸಿನಿಮಾದಲ್ಲಿ ಪವನ್ ಕಲ್ಯಾಣ್ ಪತ್ನಿ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ.

  Ajay Devgan ದಿಡೀರ್ ಅಂತ ಹೆಸರು ಚೇಂಜ್ ಮಾಡಿಕೊಳ್ಳುವುದಕ್ಕೆ ಕಾರಣ ಏನು? | Filmibeat Kannada
  ಹಲವಾರು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ ನಿತ್ಯಾ

  ಹಲವಾರು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ ನಿತ್ಯಾ

  'ಸೆವೆನ್ ಓ ಕ್ಲಾಕ್' ಕನ್ನಡ ಸಿನಿಮಾದ ಮೂಲಕ ಸಿನಿಮಾ ವೃತ್ತಿ ಆರಂಭಿಸಿದ ನಟಿ ನಿತ್ಯಾ ಮೆನನ್ ಈಗಾಗಲೇ ಹಲವಾರು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಅಲಾ ಮೊದಲೈಂದಿ', 'ಇಷ್ಕ್‌', 'ಗುಂಡೆ ಜಾರಿ ಗಲ್ಲಂತೈಯ್ಯಿಂದೆ', 'ಒಕ್ಕಡಿನೆ', 'ಗೀತಾ ಗೋವಿಂದಂ', 'ಸನ್ ಆಫ್ ಸತ್ಯಮೂರ್ತಿ', ಇನ್ನೂ ಕೆಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

  English summary
  Actress Nithya Menen may act in Pawan Kalyan's next movie which is a remake of Malayalam movie Ayyappanum Koshiyum.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X