For Quick Alerts
  ALLOW NOTIFICATIONS  
  For Daily Alerts

  ಹಾಟ್, ಬೋಲ್ಡ್ ಸೀನ್ ಮಾಡಿದ್ರೂ ಅನುಪಮಾಗೆ ಸಿಗದಿದ್ದ ಯಶಸ್ಸನ್ನು ತಂದುಕೊಡ್ತು ಕಾರ್ತಿಕೇಯ 2!

  |

  ಪ್ರೇಮಂ ಚಿತ್ರದಲ್ಲಿ ಮೇರಿ ಜಾರ್ಜ್ ಪಾತ್ರದ ಮೂಲಕ ಸಿನಿಪ್ರೇಕ್ಷಕರಿಗೆ ಪರಿಚಯವಾದ ಅನುಪಮಾ ಪರಮೇಶ್ವರನ್ ತನ್ನ ಮೊದಲ ಅಭಿನಯದಲ್ಲಿಯೇ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

  ಮೊದಲ ಚಿತ್ರದಲ್ಲಿ ಶಾಲಾ ಹುಡುಗಿಯ ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದ ಅನುಪಮಾ ಪರಮೇಶ್ವರನ್ ನಂತರದ ದಿನಗಳಲ್ಲಿ ತಮಿಳು, ತೆಲುಗು ಹಾಗೂ ಕನ್ನಡದ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದಲ್ಲಿ ಶ್ರುತಿ ಎಂಬ ವಕೀಲೆ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಕನ್ನಡ ಪ್ರೇಕ್ಷಕರ ಮನಸ್ಸನ್ನೂ ಗೆದ್ದಿದ್ದ ಅನುಪಮಾ ಪರಮೇಶ್ವರನ್ ಎಂದರೆ ಪುನೀತ್ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಈ ಚಿತ್ರದ ನಂತರ ಬಂದಿದ್ದ ಯುವರತ್ನ ಚಿತ್ರಕ್ಕೂ ಸಹ ಅನುಪಮಾ ಅವರನ್ನೇ ನಾಯಕಿಯನ್ನಾಗಿ ಆರಿಸಿ ಎಂದು ಅಪ್ಪು ಫ್ಯಾನ್ಸ್ ಪಟ್ಟು ಹಿಡಿದಿದ್ದರು.

  ದುಬಾರಿ ಕಾರು ಖರೀದಿಸಿದ ನಿರೂಪಕಿ ಅನುಪಮಾ ಗೌಡ!ದುಬಾರಿ ಕಾರು ಖರೀದಿಸಿದ ನಿರೂಪಕಿ ಅನುಪಮಾ ಗೌಡ!

  ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಅನುಪಮಾ ಪರಮೇಶ್ವರನ್ ನಟಸಾರ್ವಭೌಮ ನಂತರ ಅಭಿನಯಿಸಿದ ಯಾವ ಚಿತ್ರವೂ ಅವರ ಕೈ ಹಿಡಿಯಲಿಲ್ಲ. ಆದರೆ ಇತ್ತೀಚೆಗಷ್ಟೇ ಬಿಡುಗಡೆಯಾದ ಅನುಪಮಾ ಪರಮೇಶ್ವರನ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ ಕಾರ್ತಿಕೇಯ 2 ಅನುಪಮಾ ಪರಮೇಶ್ವರನ್ ಅವರನ್ನು ಫ್ಲಾಪ್ ಜೋನ್ ನಿಂದ ಹೊರಗೆಳೆದಿದೆ.

  ಸಾಲು ಸಾಲು ಫ್ಲಾಪ್

  ಸಾಲು ಸಾಲು ಫ್ಲಾಪ್

  ತಮಿಳಿನ ರಾಟ್ಸಸನ್ ರಿಮೇಕ್ ಆದ ರಾಕ್ಷಸುಡು ಚಿತ್ರದಲ್ಲಿ ಅಭಿನಯಿಸಿದ್ದ ಅನುಪಮಾ ಪರಮೇಶ್ವರನ್ ಊಹಿಸಿದ್ದಷ್ಟು ಗೆಲುವು ಪಡೆಯಲಿಲ್ಲ, ನಂತರ ಮಲಯಾಳಂನ ಮಣಿಯಾರಯಿಲೆ ಅಶೋಕನ್ ಕೊವಿಡ್ ಕಾರಣದಿಂದ ನೇರವಾಗಿ ಓಟಿಟಿಗೆ ಲಗ್ಗೆ ಇಟ್ಟಿತು, ನಂತರ ತಮಿಳಿನ ತಳ್ಳಿ ಪೋಗದೆ ಚಿತ್ರದಲ್ಲೂ ಅನುಪಮಾ ನಟಿಸಿದರು ಹಾಗೂ ತೆಲುಗಿನ ರೌಡಿ ಬಾಯ್ಸ್ ಚಿತ್ರದಲ್ಲಿಯೂ ಅನುಪಮಾ ನಾಯಕನಟಿಯಾಗಿ ಅಭಿನಯಿಸಿದರು. ಈ ಎಲ್ಲಾ ಚಿತ್ರಗಳು ನಿರೀಕ್ಷಿಸಿದ ಯಶಸ್ಸು ಗಳಿಸಲಿಲ್ಲ. ಹಾಗೂ ಈ ಚಿತ್ರಗಳ ನಡುವೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಕುರುಪ್ ಹಾಗೂ ಅಂಟೆ ಸುಂದರಾನಿಕಿ ಚಿತ್ರಗಳಲ್ಲಿಯೂ ಅತಿಥಿ ಪಾತ್ರದಲ್ಲಿ ಅನುಪಮಾ ಪರಮೇಶ್ವರನ್ ಅಭಿನಯಿಸಿದ್ದರಾದರೂ ನಾಯಕಿಯಾಗಿರಲಿಲ್ಲ.

  ರೌಡಿ ಬಾಯ್ಸ್ ಚಿತ್ರದಲ್ಲಿ ಸಖತ್ ಹಾಟ್

  ರೌಡಿ ಬಾಯ್ಸ್ ಚಿತ್ರದಲ್ಲಿ ಸಖತ್ ಹಾಟ್

  ತೆಲುಗಿನ ರೌಡಿ ಬಾಯ್ಸ್ ಎಂಬ ಚಿತ್ರದಲ್ಲಿ ಅನುಪಮಾ ಪರಮೇಶ್ವರನ್ ಕಾಲೇಜು ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಟ್ರೈಲರ್ ಮೂಲಕವೇ ಸಖತ್ ಸದ್ದು ಮಾಡಿದ್ದ ಈ ಚಿತ್ರ ಚಿತ್ರಮಂದಿರದಲ್ಲಿ ಸೈಲೆಂಟ್ ಆಗಿ ಬಿಟ್ಟಿತು. ಅನುಪಮಾ ಪರಮೇಶ್ವರನ್ ಅವರ ಲಿಪ್ ಲಾಕ್ ಹಾಗೂ ಕಿಸ್ಸಿಂಗ್ ದೃಶ್ಯಗಳು ಟ್ರೈಲರ್ ಅನ್ನು ವೈರಲ್ ಆಗುವಂತೆ ಮಾಡಿತ್ತಾದರೂ ಚಿತ್ರವನ್ನು ಗೆಲ್ಲಿಸಲು ಆಗಿರಲಿಲ್ಲ.

  ಕಾರ್ತಿಕೇಯ 2 ಮೂಲಕ ಫ್ಲಾಪ್ ಗೆ ಬೈ

  ಕಾರ್ತಿಕೇಯ 2 ಮೂಲಕ ಫ್ಲಾಪ್ ಗೆ ಬೈ

  ನಿಖಿಲ್ ಸಿದ್ಧಾರ್ಥ್ ಅಭಿನಯದ ಸೂಪರ್ ಹಿಟ್ ಕಾರ್ತಿಕೇಯ 2 ಚಿತ್ರದಲ್ಲಿ ನಟಿ ಅನುಪಮಾ ಪರಮೇಶ್ವರನ್ ಒಂದೊಳ್ಳೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಕತೆಗೆ ತಿರುವು ಕೊಡುವ ಪಾತ್ರ ಇವರದ್ದಾಗಿದ್ದು ಈ ಚಿತ್ರದ ಮೂಲಕ ಅನುಪಮಾ ಪರಮೇಶ್ವರನ್ ಸೋಲಿಗೆ ಪೂರ್ಣ ವಿರಾಮ ಇಟ್ಟಿದ್ದಾರೆ. ಈ ಮೂಲಕ ಎಷ್ಟೇ ಬೋಲ್ಡ್ ಆಗಿ ಅಭಿನಯಿಸಿದರೂ ಸಹ ಚಿತ್ರದಲ್ಲಿ ಕಂಟೆಂಟ್ ಇಲ್ಲದಿದ್ದರೆ ಜನ ತಿರುಗಿ ನೋಡುವುದಿಲ್ಲ ಎಂಬುದು ಸಾಬೀತಾಗಿದೆ.

  ರೌಡಿ ಬಾಯ್ಸ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದ ಅನುಪಮಾ ಪರಮೇಶ್ವರನ್

  ರೌಡಿ ಬಾಯ್ಸ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದ ಅನುಪಮಾ ಪರಮೇಶ್ವರನ್

  ಇನ್ನು ರೌಡಿ ಬಾಯ್ಸ್ ಚಿತ್ರದಲ್ಲಿ ತಾವು ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದ ಅನುಪಮಾ ಪರಮೇಶ್ವರನ್ ತಾನು ಬೋಲ್ಡ್ ಚಿತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸಬಲ್ಲೆ ಎನ್ನುವುದನ್ನು ತಿಳಿಸಲು ಆ ಪಾತ್ರದಲ್ಲಿ ಅಭಿನಯಿಸಿರಲಿಲ್ಲ ಬದಲಾಗಿ ಚಿತ್ರಕಥೆಗೆ ತಕ್ಕಂತೆ ಅಭಿನಯಿಸಿದ್ದೆ ಅಷ್ಟೆ ಎಂದು ಹೇಳಿಕೆ ನೀಡಿದ್ದರು.

  English summary
  Not bold scenes good script like Karthikeya 2 helped Anupama Parameswaran to get out of flop zone

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X