twitter
    For Quick Alerts
    ALLOW NOTIFICATIONS  
    For Daily Alerts

    'ಲೈಗರ್' ತಿರಸ್ಕರಿಸಿದ್ದ ತೆಲುಗು ಸೂಪರ್ ಸ್ಟಾರ್, ವಿಜಯ್ ದೇವರಕೊಂಡ 2ನೇ ಆಯ್ಕೆ!

    |

    'ಲೈಗರ್' ಸಿನಿಮಾ ಆಗಸ್ಟ್ 25ಕ್ಕೆ ರಿಲೀಸ್ ಆಗಿದೆ. 'ಲೈಗರ್' ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಕಂಡಿದೆ. ನಟ ವಿಜಯ್ ದೇವರಕೊಂಡ ಸಿನಿಮಾ ಬದುಕಿನಲ್ಲೇ ಬಹುದೊಡ್ಡ ಸಿನಿಮಾ ಇದು. ಈ ಸಿನಿಮಾ ಬಾಕ್ಸಿಂಗ್ ಕಥೆಯನ್ನು ಹೊಂದಿದೆ.

    ಭಾರಿ ನಿರೀಕ್ಷೆ ಇಡಲಾಗಿದ್ದ ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಮಕಾಡೆ ಮಲಗಿದೆ. ಸಿನಿಮಾದ ಬಗ್ಗೆ ಅತ್ಯಂತ ಕೆಟ್ಟ ವಿಮರ್ಶೆಗಳು ಹೊರಬಿದ್ದಿವೆ. ಸಿನಿ ವಿಮರ್ಶಕರೇ ಈ ಚಿತ್ರವನ್ನು ಟೀಕಿಸಿದ್ದಾರೆ. ತಕ್ಕ ಮಟ್ಟಿಗೆ ಓಪನಿಂಗ್ ಪಡೆದುಕೊಂಡ ಈ ಸಿನಿಮಾ, ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ದಾಖಲೆ ಬರೆಯಲು ಸೋತಿದೆ.

    'ಲೈಗರ್' 2ನೇ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?'ಲೈಗರ್' 2ನೇ ದಿನ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?

    ಇನ್ನು ಈ ಚಿತ್ರಕ್ಕೆ ವಿಜಯ್ ದೇವರಕೊಂಡ ಮೊದಲ ಆಯ್ಕೆ ಅಲ್ಲ ಎನ್ನುವುದು ಈಗ ಹೊರ ಬಂದಿದೆ. ವಿಜಯ್ ದೇವರಕೊಂಡಗೂ ಮೊದಲೇ, ಈ ಚಿತ್ರ ನಟ ಮಹೇಶ್ ಬಾಬು ಬಳಿಗೆ ಹೋಗಿತ್ತಂತೆ. ಮಹೇಶ್ ಬಾಬು ಈ ಚಿತ್ರವನ್ನು ತಿರಸ್ಕರಿದ್ದಾರೆ.

    ಮಹೇಶ್ ಬಾಬುಗಾಗಿ ಮಾಡಿದ 'ಲೈಗರ್'!

    ಮಹೇಶ್ ಬಾಬುಗಾಗಿ ಮಾಡಿದ 'ಲೈಗರ್'!

    ಪ್ಯಾನ್ ಇಂಡಿಯಾ ಟೈಟಲ್‌ನಲ್ಲಿ ರಿಲೀಸ್ ಆಗಿರುವ ಸಿನಿಮಾ ಹಲವು ವಿಚಾರಗಳಿಂದ ಗಮನಸೆಳೆದಿದೆ. ಇನ್ನು ಈ ಸಿನಿಮಾಗೆ ಮೊದಲ ಆಯ್ಕೆ ನಟ ವಿಜಯ್ ದೇವರಕೊಂಡ ಅಲ್ಲ ಎನ್ನುವುದು ಈಗ ಬಹಿರಂಗವಾಗಿದೆ. ನಿರ್ದೇಶಕ ಪೂರಿ ಜಗನ್ನಾಥ್ ಈ ಚಿತ್ರವನ್ನು ತೆಲುಗಿನ ಸೂಪರ್ ಸ್ಟಾರ್, ಮಹೇಶ್ ಬಾಬುಗಾಗಿ ಮಾಡಿದ್ದಾರಂತೆ. ಹಾಗಾಗಿ ಈ ಕಥೆಯನ್ನು ತೆಗೆದುಕೊಂಡು ಪೂರಿ ಜಗನ್ನಾಥ್ ಮಹೇಶ್ ಬಾಬು ಬಳಿಗೆ ಹೋಗಿದ್ದಾರೆ. ಈ ಹಿಂದೆ ಇವರ ಕಾಂಬಿನೇಷನ್‌ನಲ್ಲಿ ಬಂದ 'ಪೋಕಿರಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ 'ಲೈಗರ್' ಕಥೆ ಕೇಳಿ ಈ ಚಿತ್ರವನ್ನು ಮಹೇಶ್ ಬಾಬು ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ.

    'ಅನಕೊಂಡ' ಎಂದಿದ್ದ ಥಿಯೇಟರ್ ಮಾಲೀಕರನ್ನು ಭೇಟಿಯಾದ ವಿಜಯ್ ದೇವರಕೊಂಡ!'ಅನಕೊಂಡ' ಎಂದಿದ್ದ ಥಿಯೇಟರ್ ಮಾಲೀಕರನ್ನು ಭೇಟಿಯಾದ ವಿಜಯ್ ದೇವರಕೊಂಡ!

    ಮಹೇಶ್ ಬಾಬು ರಿಜೆಕ್ಟ್, ವಿಜಯ್ ಎಂಟ್ರಿ!

    ಮಹೇಶ್ ಬಾಬು ರಿಜೆಕ್ಟ್, ವಿಜಯ್ ಎಂಟ್ರಿ!

    ಹೌದು ಮೊದಲು ಈ ಕಥೆಯನ್ನು ಪೂರಿಜಗನ್ನಾಥ್, ಮಹೇಶ್ ಬಾಬುಗಾಗಿ ಮಾಡುವ ಯೋಚನೆಯಲ್ಲಿದ್ದರು. ಆದರೆ ಮಹೇಶ್ ಬಾಬು ಈ ಸಿನಿಮಾವನ್ನು ತಿರಸ್ಕರಿಸಿದ ಬಳಿಕ, ಇದೇ ಕಥೆಯನ್ನು ವಿಜಯ್ ದೇವರಕೊಂಡಗಾಗಿ ಮಾಡಲಾಗಿದೆ. ಈ ಕಥೆಯನ್ನು ಒಪ್ಪಿದ ವಿಜಯ್ ದೇವರಕೊಂಡ, ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ಚಿತ್ರದ ಬಗ್ಗೆ ನೆಗೆಟಿವ್ ವಿಮರ್ಶೆಗಳು, ಟೀಕೆಗಳು ಬರುತ್ತಿವೆ. ಮಹೇಶ್ ಬಾಬು ಅಭಿಮಾನಿಗಳು, ಈ ಸಿನಿಮಾವನ್ನು ಒಪ್ಪದೇ ಇದ್ದದ್ದು ಒಳ್ಳೆಯದಾಯಿತು ಎಂದು ಮಹೇಶ್ ಬಾಬುಗೆ ಶುಭ ಕೋರುತ್ತಿದ್ದಾರೆ. ವಿಜಯ್ ದೇವರಕೊಂಡ ವಿಚಾರಕ್ಕೆ ಬರುವುದಾದರೆ ಇಲ್ಲಿ ತನಕ ಕಾಣಿಸಿಕೊಳ್ಳದಂತಹ ಪಾತ್ರದಲ್ಲಿ ವಿಜಯ್ ದೇವರಕೊಂಡ ನಟಿಸಿದ್ದಾರೆ.

    ಫ್ಲಾಪ್ ಲಿಸ್ಟ್ ಸೇರಿದ ಸಿನಿಮಾ!

    ಫ್ಲಾಪ್ ಲಿಸ್ಟ್ ಸೇರಿದ ಸಿನಿಮಾ!

    'ಲೈಗರ್' ಸಿನಿಮಾ ರಿಲೀಸ್‌ಗೂ ಮುನ್ನ ದೊಡ್ಡ ಮಟ್ಟದಲ್ಲಿ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಸಿನಿಮಾದ ಕಂಟೆಂಟ್ ಮೇಲೆ ಚಿತ್ರತಂಡಕ್ಕೂ ತುಂಬಾ ದೊಡ್ಡ ನಿರೀಕ್ಷೆಯಿತ್ತು. ಆದರೆ ಸಿನಿಮಾ ರಿಲೀಸ್ ಬಳಿಕ ಅದೆಲ್ಲವೂ ಉಲ್ಟಾ ಆಗಿದೆ. ಅಂದುಕೊಂಡ ಮಟ್ಟಿಗೆ ನಿರೀಕ್ಷೆಯನ್ನು ಮುಟ್ಟುವಲ್ಲಿ 'ಲೈಗರ್' ಸಿನಿಮಾ ಸೋತಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ದೊರೆತಿದ್ದು, ಬಾಕ್ಸಾಫೀಸ್‌ನಲ್ಲಿ ಕೂಡ ಸಿನಿಮಾ ಅಂತಹ ದೊಡ್ಡ ದಾಖಲೆ ಬರೆದಿಲ್ಲ.

    ಪೂರಿ ಜಗನ್ನಾಥ್ ಬದಲಾಗಬೇಕು?

    ಪೂರಿ ಜಗನ್ನಾಥ್ ಬದಲಾಗಬೇಕು?

    ಇನ್ನು ಪ್ರಮುಖವಾಗಿ 'ಲೈಗರ್' ಸಿನಿಮಾ ವಿಚಾರದಲ್ಲಿ ನಿರ್ದೇಶಕ ಪೂರಿಜಗನ್ನಾಥ್ ಅವ್ರನ್ನೇ ಜರಿಯಲಾಗುತ್ತಿದೆ. ಈ ಹಿಂದೆ ಇದೇ ರೀತಿಯ ಕೆಲವು ಸಿನಿಮಾಗಳನ್ನು ಪೂರಿಜಗನ್ನಾಥ್ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಇನ್ನು ಮುಂದಾದರೂ ಈ ರೀತಿಯ ಕಥೆಗಳನ್ನು ಮಾಡುವುದನ್ನು ಪೂರಿಜಗನ್ನಾಥ್ ಬಿಡಬೇಕು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದು ನಿರ್ದೇಶಕ ಪೂರಿ ಜಗನ್ನಾಥ್ ಅವರಿಗೆ ಸವಾಲಾಗಿ ಪರಿಣಮಿಸಿದೆ.

    Recommended Video

    ದರ್ಶನ್ ಫ್ಯಾನ್ಸ್ ದಾಖಲೆ ಮುರಿದ ಸುದೀಪ್ ಫ್ಯಾನ್ಸ್..! | Filmibeat Kannada

    English summary
    Not Vijay Devarakonda Mahesh Babu Was The First Choice For Liger, Know More,
    Monday, August 29, 2022, 16:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X