For Quick Alerts
  ALLOW NOTIFICATIONS  
  For Daily Alerts

  RRR ಬಗ್ಗೆ ಗಾಡ್‌ಫಾದರ್ ಸ್ಟೇಜ್ ಮೇಲೆ ಚಿರು ಆಡಿದ ಮಾತು ಕೇಳಿ ಕಿಡಿಕಾರಿದ NTR ಫ್ಯಾನ್ಸ್!

  |

  ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಗಾಡ್ ಫಾದರ್ ಹಿಂದಿ ಪ್ರೆಸ್ ಮೀಟ್ ವೇಳೆ ವೇದಿಕೆ ಮೇಲೆ RRR ಬಗ್ಗೆ ಆಡಿದ ಮಾತುಗಳನ್ನು ಕೇಳಿ ಇದೀಗ ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಬೇಸರಕ್ಕೆ ಒಳಗಾಗಿದ್ದಾರೆ ಹಾಗೂ ಚಿರಂಜೀವಿ ವಿರುದ್ಧ ಕಿಡಿಕಾರುತ್ತಿದ್ದಾರೆ.

  ಹೌದು, ಚಿರಂಜೀವಿ ಅಭಿನಯದ ಗಾಡ್ ಫಾದರ್ ಚಿತ್ರ ತೆಲುಗು ಹಾಗೂ ಹಿಂದಿ ಎರಡೂ ಭಾಷೆಯಲ್ಲಿಯೂ ಬಿಡುಗಡೆಯಾಗುತ್ತಿದ್ದು ಹಿಂದಿ ಅವತರಣಿಕೆಯ ಪ್ರಚಾರ ಮಾಡಲು ವೇದಿಕೆ ಏರಿದ್ದ ಚಿರಂಜೀವಿ 'ರಾಮ್ ಚರಣ್ ಅಭಿನಯದ RRR ಚಿತ್ರ ಇತ್ತೀಚಿಗಷ್ಟೆ ಹಿಂದಿಯಲ್ಲಿ ಬಿಡುಗಡೆಯಾಗಿ ದೊಡ್ಡ ಮಟ್ಟದ ಹಿಟ್ ಆಯಿತು ಹಾಗೂ ಹಿಂದಿ ಜನ ಆತನನ್ನು ತಮ್ಮವನಂತೆ ಸ್ವೀಕರಿಸಿದರು, ಈ ರೀತಿಯ ಸ್ವೀಕಾರ ನನಗೂ ಸಹ ಹಿಂದಿಯಲ್ಲಿ ಇಲ್ಲಿಯವರೆಗೂ ಸಿಕ್ಕಿಲ್ಲ. ಆದರೆ ರಾಮ್ ಚರಣ್ ಇಷ್ಟು ದೊಡ್ಡ ಮಟ್ಟದ ಪ್ರೀತಿ ಪಡೆದಿರುವುದು ನನಗೆ ಖುಷಿ ತಂದಿದೆ' ಎಂದರು.

  ಸೀಕ್ರೆಟ್ ಬಿಚ್ಚಿಟ್ಟ ಚಿರಂಜೀವಿ: 'ಗಾಡ್‌ಫಾದರ್' ಚಿತ್ರಕ್ಕೆ ಸಲ್ಲು ಕೇಳಿದ ಸಂಭಾವನೆ ಎಷ್ಟು ಗೊತ್ತಾ? ಸೀಕ್ರೆಟ್ ಬಿಚ್ಚಿಟ್ಟ ಚಿರಂಜೀವಿ: 'ಗಾಡ್‌ಫಾದರ್' ಚಿತ್ರಕ್ಕೆ ಸಲ್ಲು ಕೇಳಿದ ಸಂಭಾವನೆ ಎಷ್ಟು ಗೊತ್ತಾ?

  ಚಿರಂಜೀವಿ ಆಡಿದ ಈ ಮಾತುಗಳ ವಿರುದ್ಧ ಕಿಡಿಕಾರಿರುವ ಜೂನಿಯರ್ ಎನ್ ಟಿಆರ್ ಅಭಿಮಾನಿಗಳು 'RRR ಕೇವಲ ನಿಮ್ಮ ಮಗನಿಗೆ ಸೇರಿದ್ದು ಎಂದುಕೊಂಡಿದ್ದೀರಾ? ಈ ಹಿಂದೆ ಇದೇ ಚಿತ್ರದ ಬಗ್ಗೆ ಮಾತನಾಡಿದ ನೀವು ರಾಮ್ ಚರಣ್ ಹಾಗೂ ತಾರಕ್ ಇಬ್ಬರನ್ನು ಸಹ ಒಂದೇ ಮಟ್ಟಕ್ಕೆ ಪ್ರಶಂಸೆ ಮಾಡಿದ್ರಿ. ಆದರೆ ಈಗ ಚಿತ್ರ ವಿಶ್ವದಾದ್ಯಂತ ಗುರುತಿಸಿಕೊಳ್ಳುತ್ತಿರುವ ಕಾರಣ ಕೇವಲ ನಿಮ್ಮ ಮಗನಿಗೆ ಮಾತ್ರ ಕ್ರೆಡಿಟ್ ಕೊಡ್ತಾ ಇದ್ದೀರಿ. ಅದೇ ನಿಮ್ಮ ಮಗ ಅಭಿನಯಿಸಿದ್ದ ಆಚಾರ್ಯ ಚಿತ್ರ ಫ್ಲಾಪ್ ಆದಾಗ ನಿರ್ದೇಶಕ ಕಾರಣ ಎಂದ್ರಿ ಈಗ RRR ಗೆಲುವಿನ ಹಿಂದೆ ನಿಮ್ಮ ಮಗ ಮಾತ್ರ ಇದ್ದಾರಾ?' ಎಂದು ಸಾಮಾಜಿಕ ಜಾಲತಾಣದಲ್ಲಿ ಚಿರಂಜೀವಿಗೆ ಪ್ರಶ್ನೆ ಹಾಕಿದ್ದಾರೆ.

  ಇನ್ನು ತಾರಕ್ ಅಭಿಮಾನಿಗಳು ಮಾಡಿರುವ ಈ ಕಾಮೆಂಟ್ ಕುರಿತು ಪ್ರತಿಕ್ರಿಯಿಸಿರುವ ಮೆಗಾಫ್ಯಾಮಿಲಿ ಅಭಿಮಾನಿಗಳು ಒಬ್ಬ ತಂದೆ ತನ್ನ ಮಗನ ಕುರಿತು ಮೆಚ್ಚುಗೆ ವ್ಯಕ್ತಪಡಿಸುವುದರಲ್ಲೇನು ತಪ್ಪು, ಚಿತ್ರದ ಕುರಿತು ಮಾತನಾಡುವಾಗ ನಿಮ್ಮ ನಟನ ಹೆಸರನ್ನು ಪ್ರತಿಬಾರಿ ಉಲ್ಲೇಖಿಸಲೇಬೇಕು ಎಂದು ನಿಯಮವೇನಾದರೂ ಇದೆಯಾ, ಅವರು ಕೇವಲ ಮೆಗಾ ಸ್ಟಾರ್ ಮಾತ್ರವಲ್ಲ ಓರ್ವ ತಂದೆ ಎಂಬುದನ್ನು ಕೂಡ ನೆನಪಿನಲ್ಲಿಟ್ಟುಕೊಳ್ಳಿ ಎಂದು ಪ್ರತ್ಯುತ್ತರ ನೀಡಿದ್ದಾರೆ.

  English summary
  NTR fans are not happy with Chiranjeevi speech about RRR during Godfather press meet. Read on
  Sunday, October 2, 2022, 13:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X