Don't Miss!
- Sports
ಭಾರತ vs ಪಾಕಿಸ್ತಾನ: ಟಿ20 ಸೆಣೆಸಾಟದಲ್ಲಿ ಹೆಚ್ಚು ಗೆದ್ದಿದ್ಯಾರು? ಹೆಚ್ಚು ಸಿಕ್ಸ್, ಹೆಚ್ಚು ವಿಕೆಟ್ ಸೇರಿದಂತೆ ಕುತೂಹಲಕರ ಮಾಹಿತ
- Finance
ಕೇರಳ ಲಾಟರಿ: 'ಅಕ್ಷಯ AK 561' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- News
ಮುಖ್ಯಮಂತ್ರಿ ಬದಲಾವಣೆ ಗೊಂದಲ ಸೃಷ್ಟಿಸಿದ್ದು ಬಿಜೆಪಿ; ಡಿಕೆಶಿ
- Technology
ಭಾರತದಲ್ಲಿ ಟೆಕ್ನೋ ಕ್ಯಾಮನ್ 19 ಪ್ರೊ 5G ಲಾಂಚ್! ವಾವ್ಹ್ ಎನಿಸುವ ಫೀಚರ್ಸ್!
- Automobiles
ದುಬಾರಿ ಬೆಲೆಯ ಸ್ಪೋರ್ಟ್ಸ್ ಕಾರ್ ಓಡಿಸುತ್ತಾ ಮುಂಬೈ ರಸ್ತೆಗಳಲ್ಲಿ ಕಾಣಿಸಿಕೊಂಡ ಕ್ರಿಕೆಟ್ ದೇವರು
- Lifestyle
ಮಂಕಿಪಾಕ್ಸ್: ಗುಣಮುಖರಾಗಿ ವಾರ ಕಳೆದರೂ ವೀರ್ಯದಲ್ಲಿರುತ್ತೆ ಮಂಕಿವೈರಸ್!
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಎನ್‌ಟಿಆರ್ ಸಾವಿನ ಹಿಂದಿನ ದಿನ ಚಂದ್ರಬಾಬು ನಾಯ್ಡು ಮಾಡಿದ್ದೇನು? ಎನ್‌ಟಿಆರ್ ಪತ್ನಿ ಲಕ್ಷ್ಮಿ ಬಿಚ್ಚಿಟ್ಟ ಮಾಹಿತಿ
ತೆಲುಗು ಚಿತ್ರರಂಗದ ಮೇರು ನಟ ಎನ್‌ಟಿಆರ್, ಅವಿಭಜಿತ ಆಂಧ್ರ ಪ್ರದೇಶ ರಾಜ್ಯದ ಮುಖ್ಯ ಮಂತ್ರಿ ಸಹ ಆಗಿದ್ದರು. ಚಿತ್ರರಂಗ ಹಾಗೂ ರಾಜಕೀಯ ಎರಡರಲ್ಲೂ ಮೆರೆದ ಅವರ ಅಂತ್ಯಕಾಲ ಮಾತ್ರ ಬಹಳ ತ್ರಾಸದಾಯಕವಾಗಿತ್ತು.
ಅವರೇ ಕಟ್ಟಿದ ಪಕ್ಷದಿಂದ ಅವರನ್ನು ಹೊರಹಾಕಲಾಯಿತು. ತಾವೇ ಮುಂದೆ ನಿಂತು ಗೆಲ್ಲಿಸಿದ ಎಂಎಲ್‌ಎಗಳು ಅವರಿಗೆ ಧಿಕ್ಕಾರ ಕೂಗಿದರು. ಪಕ್ಷದ ಕಚೇರಿಯ ಒಳಗೆ ಬರಲಲು ಬಿಟ್ಟಿರಲಿಲ್ಲ. ಅವರ ಸ್ವಂತ ಅಳಿಯನೇ ಎನ್‌ಟಿಆರ್‌ಗೆ ವಿರೋಧಿಯಾಗಿಬಿಟ್ಟಿದ್ದರು.
ಇದೀಗ ಕೆಲವು ದಿನಗಳ ಹಿಂದಷ್ಟೆ ಎನ್‌ಟಿಆರ್ ಅವರ ಕೊನೆಯ ಪುತ್ರಿ ಉಮಾ ಮಹೇಶ್ವರಿ ನಿಧನ ಹೊಂದಿದರು. ಅದೇ ವಿಷಯವಾಗಿ ಎನ್‌ಟಿಆರ್ ಅವರ ಎರಡನೇ ಪತ್ನಿ ಲಕ್ಷ್ಮಿ ಪಾರ್ವತಿ ಸುದ್ದಿಗೋಷ್ಠಿ ನಡೆಸಿದ್ದು ಉಮಾ ಮಹೇಶ್ವರಿ ಸಾವಿನ ಹಿಂದೆ ಚಂದ್ರಬಾಬು ನಾಯ್ಡು ಕೈವಾಡ ಇರಬಹುದೆಂದಿರುವುದಲ್ಲದೆ, ತಮ್ಮ ಪತಿ ಎನ್‌ಟಿಆರ್ ಸಾವಿಗೆ ಸಹ ಚಂದ್ರಬಾಬು ನಾಯ್ಡು ಕಾರಣ ಎಂದು ಆರೋಪಿಸಿದ್ದಾರೆ.
''ಎನ್‌ಟಿಆರ್ ಕುಟುಂಬಕ್ಕೆ ಶನಿಯ ಮಾದರಿಯಲ್ಲಿ ಚಂದ್ರಬಾಬು ನಾಯ್ಡು ಪ್ರವೇಶ ಮಾಡಿದರು. ನನ್ನ ಪತಿ ಎನ್‌ಟಿಆರ್ ಸಾವಿಗೆ ಸಹ ಈತನೇ ಕಾರಣನಾದ. ಚಂದ್ರಬಾಬು ನಾಯ್ಡು ತನಗೆ ಮಾಡಿರುವ ಅನ್ಯಾಯವನ್ನು ಜನರಿಗೆ ಹೇಳಬೇಕೆಂದು 'ಸಿಂಹ ಘರ್ಜನ' ಎಂಬ ಅಭಿಯಾನ ಆರಂಭಿಸಿ ಅದಕ್ಕೆ ಪ್ರಣಾಳಿಕೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಇದು ಚಂದ್ರಬಾಬು ನಾಯ್ಡುಗೆ ಆತಂಕ ತಂದಿತ್ತು'' ಎಂದು ಹಳೆಯ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ ಲಕ್ಷ್ಮಿ ಪಾರ್ವತಿ.

ಅದೇ ದಿನ ಎನ್‌ಟಿಆರ್ ಸಾವು
''ಎನ್‌ಟಿಆರ್ ಜನರ ಬಳಿ ಬಂದು ಸತ್ಯ ಹೇಳಿದರೆ ನನ್ನ ರಾಜಕೀಯ ಜೀವನ ಮುಗಿದು ಹೋಗುತ್ತದೆ. ನನ್ನ ಸಿಎಂ ಪದವಿ ಹೊರಟು ಹೋಗುತ್ತದೆ ಎಂದು ಯೋಚಿಸಿ. ಎನ್‌ಟಿಆರ್ ಅವರ ಎಲ್ಲ ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಿಸಿ ಅವರಿಗೆ ಒಂದು ರೂಪಾಯಿ ಹಣವೂ ಧಕ್ಕದಂತೆ ಮಾಡಿದ. ಅವರ ವಿರುದ್ಧ ಸ್ಟೇ ತೆಗೆದುಕೊಂಡು ಬಂದ. ಎನ್‌ಟಿಆರ್ ಹೊರಗೆ ಹೋಗಬಾರದು, ಜನಗಳ ಸಂಪರ್ಕ ಮಾಡಬಾರದು ಎಂದು ಹೀಗೆ ಮಾಡಿದ. ಇದರಿಂದ ತೀವ್ರ ಆಘಾತಕ್ಕೆ ಒಳಗಾದ ಎನ್‌ಟಿಆರ್‌ಗೆ ಅದೇ ದಿನ ಮಧ್ಯರಾತ್ರಿ ಹೃದಯಾಘಾತವಾಯಿತು'' ಎಂದಿದ್ದಾರೆ ಲಕ್ಷ್ಮಿ ಪಾರ್ವತಿ.

ತಂದೆಯ ಕೊಲೆಗಾರನನ್ನೇ ಮಕ್ಕಳು ನಂಬಿದರು: ಲಕ್ಷ್ಮಿ
''ಎನ್‌ಟಿಆರ್ ಕುಟುಂಬದವರನ್ನು ಕಂಡರೆ ನನಗೆ ಪಾಪ ಎನಿಸುತ್ತದೆ. ತಮ್ಮ ತಂದೆಯ ಕೊಲೆಗಾರನನ್ನೇ ಅವರು ನಂಬಿದ್ದಾರೆ. ಹಸುವೊಂದು ಕಸಾಯಿಯವನ್ನು ನಂಬಿದಂತೆ ಅವನನ್ನೇ ನಂಬಿ ಅವನೊಟ್ಟಿಗೆ ಇದ್ದಾರೆ. ಚಂದ್ರಬಾಬು ನಾಯ್ಡು ಎಷ್ಟು ಕೆಟ್ಟವನೋ, ಆತನಿಂದ ತನಗೆ ಎಷ್ಟು ಅನ್ಯಾಯವಾಯಿತು. ನಂಬಿಕೆ ದ್ರೋಹ ಆಯಿತು ಎಂಬುದನ್ನು ಸ್ವತಃ ಎನ್‌ಟಿಆರ್ ಹೇಳಿದ್ದಾರೆ ಅದು ಈಗಲೂ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದೆ. ಆದರೆ, ಚಂದ್ರಬಾಬು ನಾಯ್ಡು ಎಲ್ಲದಕ್ಕೂ ನನ್ನನ್ನು ದೂಷಿಯನ್ನಾಗಿ ಮಾಡಿದರು. ಅದನ್ನು ಎನ್‌ಟಿಆರ್ ಕುಟುಂಬ ನಂಬಿತು ಸಹ'' ಎಂದಿದ್ದಾರೆ.

ಜೂ ಎನ್‌ಟಿಆರ್ ತಂದೆಗೆ ಅಪಮಾನ ಮಾಡಿದ ಚಂದ್ರಬಾಬು ನಾಯ್ಡು
ಎನ್‌ಟಿಆರ್ ಮಾತ್ರವಲ್ಲ ಜೂ ಎನ್‌ಟಿಆರ್ ತಂದೆ ಹರಿಕೃಷ್ಣ ಸಾವಿಗೂ ಇದೇ ಚಂದ್ರಬಾಬು ನಾಯ್ಡು ಕಾರಣ. ಹರಿಕೃಷ್ಣಗೆ ಸಚಿವ ಸ್ಥಾನ ನೀಡಿ ಆ ಬಳಿಕ ಆರೇ ತಿಂಗಳಿಗೆ ಆ ಸ್ಥಾನ ಕಿತ್ತುಕೊಂಡು ಆತನನ್ನು ಅವಮಾನಿಸಿದ. ಬೇರೆ ಬೇರೆ ರೀತಿಯಲ್ಲಿ ಹರಿಕೃಷ್ಣಗೆ ಚಂದ್ರಬಾಬು ನಾಯ್ಡು ಕಾಟ ಕೊಟ್ಟರು. ಹರಿಕೃಷ್ಣ ಹಲವು ಬಾರಿ ಚಂದ್ರಬಾಬು ನಾಯ್ಡು ಅನ್ನು ಬಹಿರಂಗವಾಗಿ ಟೀಕಿಸಿದರು. ಕೊನೆಗೆ ತಾವೇ ಒಂದು ಸ್ವಂತ ಪಕ್ಷ ಸಹ ಕಟ್ಟಿದರು. ಆದರೆ ಹಣವಿಲ್ಲದೆ ಪಕ್ಷ ನಡೆಸುವುದು ಹೇಗೆ, ನನ್ನ ರೀತಿಯಲ್ಲಿಯೇ ಹರಿಕೃಷ್ಣ ಸಹ ಸೋತು ಹೋದರು. ಈಗಲೂ ಸಹ ಜೂ ಎನ್‌ಟಿಆರ್ ಆಗಲಿ ಅವರ ಸಹೋದರ ಕಲ್ಯಾಣ್ ರಾಮ್ ಆಗಲಿ ಚಂದ್ರಬಾಬು ನಾಯ್ಡು ಜೊತೆ ಮಾತನಾಡುವುದಿಲ್ಲ'' ಎಂದಿದ್ದಾರೆ ಲಕ್ಷ್ಮಿ ಪಾರ್ವತಿ.

''ಕೋಡೆಲ ಶಿವಪ್ರಸಾದ್ ಸಾವಿಗೂ ಚಂದ್ರಬಾಬು ನಾಯ್ಡು ಕಾರಣ''
ಮಾಜಿ ಸಚಿವ ಕೋಡೆಲ ಶಿವಪ್ರಸಾದ್ ಮರಣಕ್ಕೂ ಇದೇ ಚಂದ್ರಬಾಬು ನಾಯ್ಡು ಕಾರಣ. ಚಂದ್ರಬಾಬು ಮಾಡಿದ ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಕೋಡೆಲ ಶಿವಪ್ರಸಾದ್ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸತ್ತಿದ್ದರು. ಆದರೆ ಆ ಮೊಬೈಲ್ ಅನ್ನೇ ಚಂದ್ರಬಾಬು ನಾಯ್ಡು ತನ್ನ ಪ್ರಭಾವ ಬಳಸಿ ಎಗರಿಸಿದರು. ಅಲ್ಲದೆ ಅವರನ್ನು ಅಲ್ಲಿಯೇ ಚಿಕಿತ್ಸೆ ಕೊಡಿಸದೆ ಎರಡು ಗಂಟೆ ಪ್ರಯಾಣ ಮಾಡಿ ಬಸವಕಲ್ಯಾಣಂ ಆಸ್ಪತ್ರೆಗೆ ಕರೆತಂದರು. ಅಲ್ಲಿಯೇ ಆಸ್ಪತ್ರೆಗೆ ಸೇರಿಸಿದ್ದರೂ ಅವರು ಬದುಕುಳಿಯುತ್ತಿದ್ದರು. ಚಂದ್ರಬಾಬು ನಾಯ್ಡು ಬೇಕೆಂದೇ ಹೀಗೆ ಮಾಡಿದರು'' ಎಂದಿದ್ದಾರೆ.