Don't Miss!
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- News
Breaking: ಭವಾನಿ ರೇವಣ್ಣಗೆ ಹಾಸನದಿಂದ ಟಿಕೆಟ್ ನೀಡುವಂತೆ ಪ್ರತಿಭಟನೆ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೈಸೂರು ಘಟನೆ ಬಳಿಕ ಸುಚೇಂದ್ರ ಪ್ರಸಾದ್‌ಗೆ ಪವಿತ್ರಾ ಲೋಕೇಶ್ ಫೋನ್ ಮಾಡಿದ್ರಾ? ಟಾಲಿವುಡ್‌ನಲ್ಲಿ ಏನಿದು ಸುದ್ದಿ?
ಕಳೆದ ಮೂರು ವಾರಗಳಿಂದ ತೆಲುಗು ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ಆಫೇರ್ ಬಗ್ಗೆ ಚರ್ಚೆ. ಈಗಾಗಲೇ ಇವರು ಲಿವ್ ಇನ್ ರಿಲೇಷನ್‌ಶಿಫ್‌ನಲ್ಲಿದ್ದು, ಮದುವೆ ಆಗುವ ಸಾಧ್ಯತೆಯಿದೆ ಎಂದು ಟಾಲಿವುಡ್‌ವುಡ್‌ನಲ್ಲಿ ಸುದ್ದಿಗಳು ಹರಿದಾಡುತ್ತಿವೆ.
ಈ ಮಧ್ಯೆ ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಈ ಸಂಬಂಧದ ಬಗ್ಗೆ ರಂಪಾಟ ಮಾಡಿದ್ದಾರೆ. ಅದರಲ್ಲೂ ಮೈಸೂರಿನ ಹೋಟೆಲ್‌ನಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಒಟ್ಟಿಗೆ ಇದ್ದಾಗಲೇ ರಮ್ಯಾ ಕೈಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
ಆಕೆಗೆ
ಆಸೆ
ಜಾಸ್ತಿ,
ಆ
ಮಹಾನುಭಾವನೊಂದಿಗೂ
ಇನ್ನು
6
ತಿಂಗಳು
ಅಷ್ಟೇ':
ಸುಚೇಂದ್ರ
ಪ್ರಸಾದ್!
ಮೈಸೂರಿನ ಘಟನೆ ಬಳಿಕ ಪತಿ ಸುಚೇಂದ್ರ ಪ್ರಸಾದ್ ಪತ್ನಿ ಪವಿತ್ರಾ ಲೋಕೇಶ್ ಅವರಿಗೆ ಫೋನ್ ಮಾಡಿದ್ದಾರೆಂಬ ಸುದ್ದಿ ಟಾಲಿವುಡ್‌ನಲ್ಲಿ ಸುದ್ದಿಯಾಗಿದೆ. ಅಷ್ಟಕ್ಕೂ ಸುಚೇಂದ್ರ ಪ್ರಸಾದ್ ಬಗ್ಗೆ ಟಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯೇನು? ಫೋನ್ ಮಾಡಿದ್ದು ನಿಜವೇ? ತಿಳಿಯಲು ಮುಂದೆ ಓದಿ.

6 ತಿಂಗಳು ಅಷ್ಟೇ ಈ ಭವಿಷ್ಯ
ಪವಿತ್ರಾ ಲೋಕೇಶ್‌ಗೆ ಲಾಲಸೆಯಿದೆ. ಇಷ್ಟೆಲ್ಲಾ ವಿವಾದಕ್ಕೆ ಕಾರಣವೇ ಅವರ ಆಸೆ ಎನ್ನುವಂತೆ ಖಾಸಗಿ ಮಾಧ್ಯಮವೊಂದರಲ್ಲಿ ಸುಚೇಂದ್ರ ಪ್ರಸಾದ್ ಮಾತಾಡಿದ್ದ ಆಡಿಯೋ ಕ್ಲಿಪ್ ಒಂದು ಹಲವು ದಿನಗಳ ಹಿಂದೆ ವೈರಲ್ ಆಗಿತ್ತು. ಅಲ್ಲದೆ ಈ ಆಸೆಯ ಪರಿಣಾಮವನ್ನು ಆ ಮಹಾನುಭಾವನಿಗೂ ತಿಳಿಯುತ್ತೆ. ಈ ಸಂಬಂಧದ ಭವಿಷ್ಯ ಇನ್ನು ಆರು ತಿಂಗಳು ಅಷ್ಟೇ ಎಂದು ಫೋನ್‌ನಲ್ಲಿ ಮಾತಾಡಿದ್ದರು. ಅದು ಕರ್ನಾಟಕದಲ್ಲಿ ಸಂಚಲನವನ್ನು ಸೃಷ್ಟಿಸಿತ್ತು.
ಮದುವೆ
ಬಳಿಕ
ಈಗ
ನೆಕ್ಲೆಸ್
ಕಿತ್ತಾಟ:
ಪವಿತ್ರಾ
ಲೋಕೇಶ್,
ರಮ್ಯಾ
ರಘುಪತಿ
ಆರೋಪ-ಪ್ರತ್ಯಾರೋಪ!

ತೆಲುಗು ಚಿತ್ರರಂಗದಲ್ಲೇನು ಸುದ್ದಿ?
ಮೈಸೂರಿನಲ್ಲಿ ನಡೆದ ಘಟನೆ ನಡೆಯುವುದಕ್ಕೂ ಮುನ್ನ ಸುಚೇಂದ್ರ ಪ್ರಸಾದ್‌ರನ್ನು ಪವಿತ್ರಾ ಲೋಕೇಶ್ ವಿವಾಹವಾಗಿಲ್ಲ ಎಂದು ಹೇಳಿದ್ದರು. ಆದರೆ, ಘಟನೆಯ ಬಳಿಕ ಸ್ವತ: ಪವಿತ್ರಾ ಲೋಕೇಶ್ ಅವರೇ ಸುಚೇಂದ್ರ ಪ್ರಸಾದ್ ಅವರಿಗೆ ಫೋನ್ ಮಾಡಿ ವಿವರಣೆಯನ್ನು ನೀಡಿದ್ದರು ಎಂದು ವರದಿಯಾಗಿದೆ. ಇದರಲ್ಲಿ ಯಾವುದೇ ರೀತಿ ಅನುಮಾನ ಪಡುವುದು ಬೇಡ ಎಂದು ಸುಚೇಂದ್ರ ಪ್ರಸಾದ್ ಹೇಳಿದ್ದಾರೆ ಎಂದು ವರದಿಯಾಗಿದೆ.

ಮದುವೆಯ ದಾಖಲೆಗಳು ಇಲ್ಲ
ಪವಿತ್ರಾ ಲೋಕೇಶ್ ನಾನು ಮದುವೆನೇ ಆಗಿಲ್ಲ ಎಂಬ ಹೇಳಿಕೆ ನೀಡಿದ ಬಳಿಕ ಈ ಗೊಂದಲಗಳಿಗೆ ಸುಚೇಂದ್ರ ಪ್ರಸಾದ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಅವರ ಪಾಸ್ ಪೋರ್ಟ್‌ನಲ್ಲಿ ಪತಿ ಎಂದು ನನ್ನ ಹೆಸರು ಹಾಗೂ ನನ್ನ ಪಾಸ್ ಪೋರ್ಟ್‌ನಲ್ಲಿ ಪತ್ನಿ ಎಂದು ಅವರ ಹೆಸರು ಇದೆ ಎಂದು ಸುಚೇಂದ್ರ ಪ್ರಸಾದ್ ಹೇಳಿಕೆ ಕೊಟ್ಟಿದ್ದಾರೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ.

ಅಗತ್ಯ ಬಿದ್ದರೆ ಬಹಿರಂಗ
ಇನ್ನು ಮದುವೆ ಬಗ್ಗೆ ದಾಖಲೆಗಳಿಲ್ಲ ಎಂಬುದು ಸುಳ್ಳು. ಅಗತ್ಯ ಬಿದ್ದರೆ ಪುರಾವೆಗಳನ್ನು ಬಹಿರಂಗಪಡಿಸುವುದಾಗಿ ಸುಚೇಂದ್ರ ಪ್ರಸಾದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ವರದಿ ಮಾಡಿವೆ. ಅಲ್ಲದೆ ರಮ್ಯಾ ಅನೈತಿಕ ಸಂಬಂಧದ ಆರೋಪದ ಬಗ್ಗೆ ಏನೂ ಗೊತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ ಎಂದೂ ವರದಿಯಾಗಿದೆ.