For Quick Alerts
  ALLOW NOTIFICATIONS  
  For Daily Alerts

  ಪವಿತ್ರಾ-ನರೇಶ್ ಬಗ್ಗೆ ಸುದ್ದಿ: ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ದೂರು

  |

  ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ನಡುವಿನ ಪ್ರಣಯದ ಸುದ್ದಿ ಕಳೆದ ಕೆಲ ತಿಂಗಳಿನಿಂದಲೂ ತೆಲುಗು ಹಾಗೂ ಕನ್ನಡ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಲೇ ಇವೆ.

  ಸುಚೇಂದ್ರ ಪ್ರಸಾದ್ ಜೊತೆ ವಿವಾಹವಾಗಿ ಮಕ್ಕಳನ್ನು ಹೊಂದಿದ್ದ ಪವಿತ್ರಾ ಲೋಕೇಶ್ ಹಾಗೂ ರಮ್ಯಾ ಹೆಸರಿನ ಕನ್ನಡತಿಯೊಟ್ಟಿಗೆ ವಿವಾಹವಾಗಿ ಮಗು ಹೊಂದಿ ಈಗ ಪವಿತ್ರಾ ಲೋಕೇಶ್‌ ಜೊತೆ ವಾಸಿಸುತ್ತಿರುವ ನರೇಶ್‌ರ ಈ ಸಂಬಂಧವನ್ನು ಅಕ್ರಮ ಎಂದು ರಮ್ಯಾ ಆರೋಪಿಸಿದ್ದರು. ಈ ಬಗ್ಗೆ ದೂರು ಹಾಗೂ ಪ್ರತಿದೂರುಗಳು ಸಹ ದಾಖಲಾಗಿದ್ದವು.

  ಕೈ ಸನ್ನೆ.. ಕಣ್ಸನ್ನೆ.. ಸೂತಕದ ಮನೆಯಲ್ಲೂ ನರೇಶ್- ಪವಿತ್ರಾ ಲೋಕೇಶ್ ಡ್ರಾಮಾ: ಮಹೇಶ್‌ ಬಾಬುಗೂ ಮುಜುಗರ!ಕೈ ಸನ್ನೆ.. ಕಣ್ಸನ್ನೆ.. ಸೂತಕದ ಮನೆಯಲ್ಲೂ ನರೇಶ್- ಪವಿತ್ರಾ ಲೋಕೇಶ್ ಡ್ರಾಮಾ: ಮಹೇಶ್‌ ಬಾಬುಗೂ ಮುಜುಗರ!

  ಇತ್ತೀಚೆಗೆ ಈ ಜೋಡಿ ಮತ್ತೆ ಸುದ್ದಿಗೆ ಬಂದಿತ್ತು. ನರೇಶ್‌ರ ಮಲತಂದೆ, ಸೂಪರ್ ಸ್ಟಾರ್ ಕೃಷ್ಣ ಅವರು ನಿಧನ ಹೊಂದಿದ್ದು ಅವರ ಅಂತಿಮ ದರ್ಶನಕ್ಕೆ ಬಂದ ಸಮಯದಲ್ಲಿಯೂ ನರೇಶ್ ಹಾಗೂ ಪವಿತ್ರ ಲೋಕೇಶ್ ಅವರುಗಳು ನಡೆದುಕೊಂಡ ರೀತಿಯ ಬಗ್ಗೆ. ಕೃಷ್ಣ ನಿಧನದ ಸಮಯದಲ್ಲಿ ತಮ್ಮ ಸಿನಿಮಾ ಪ್ರಚಾರ ಮಾಡಿದ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಆದರೆ ತಮ್ಮ ವಿರುದ್ಧ ಪ್ರಸಾರವಾದ ಸುದ್ದಿಗಳ ವಿರುದ್ಧ ಇದೀಗ ಪವಿತ್ರಾ ಲೋಕೇಶ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

  ಒಟ್ಟಿಗೆ ಕಾಣಿಸಿಕೊಂಡಿದ್ದ ನರೇಶ್-ಪವಿತ್ರಾ

  ಒಟ್ಟಿಗೆ ಕಾಣಿಸಿಕೊಂಡಿದ್ದ ನರೇಶ್-ಪವಿತ್ರಾ

  ಸೂಪರ್ ಸ್ಟಾರ್ ಕೃಷ್ಣ ಅವರ ಅಂತಿಮ ದರ್ಶನದ ಸಮಯದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಲ್ಲದೆ, ಘನತೆ ಮರೆತು ಈ ಜೋಡಿಗಳು ಅಲ್ಲಿ ವರ್ತಿಸಿದ್ದಾರೆ ಎಂದು ಕೆಲವು ವೆಬ್‌ಸೈಟ್‌ಗಳು, ಯೂಟ್ಯೂಬ್ ಚಾನೆಲ್‌ಗಳು ವರದಿ ಮಾಡಿದ್ದವು. ಇವರಿಬ್ಬರೂ ಕೃಷ್ಣ ಅವರ ಅಂತಿಮ ದರ್ಶನಕ್ಕೆ ಜಂಟಿಯಾಗಿ ಆಗಮಿಸಿದ ವಿಡಿಯೋಗಳು ಸಹ ಬಹಳ ವೈರಲ್ ಆಗಿದ್ದವು.

  ದೂರು ನೀಡಿರುವ ಪವಿತ್ರಾ ಲೋಕೇಶ್

  ದೂರು ನೀಡಿರುವ ಪವಿತ್ರಾ ಲೋಕೇಶ್

  ಇದೀಗ ನಟಿ ಪವಿತ್ರಾ ಲೋಕೇಶ್, ತಮ್ಮ ಹಾಗೂ ನರೇಶ್ ವಿರುದ್ಧ ಕೆಟ್ಟದಾಗಿ ಬರೆದ, ವಿಡಿಯೋ ಪ್ರಕಟಿಸಿದ ವೆಬ್‌ಸೈಟ್‌ಗಳು ಹಾಗೂ ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ತೆಲಂಗಾಣ ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ತಮ್ಮ ಬಗ್ಗೆ ಅವಹೇಳನಕಾರಿಯಾಗಿ ಸುದ್ದಿ ಪ್ರಸಾರ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ.

  ವೈಯಕ್ತಿಕ ದ್ವೇಷದಿಂದ ಮಾನಹಾನಿ: ಪವಿತ್ರಾ

  ವೈಯಕ್ತಿಕ ದ್ವೇಷದಿಂದ ಮಾನಹಾನಿ: ಪವಿತ್ರಾ

  ಪವಿತ್ರಾ ಲೋಕೇಶ್‌ ನೀಡಿರುವ ದೂರು ಸ್ವೀಕರಿಸಿರುವ ಸೈಬರ್ ಪೊಲೀಸರು ಕೇಸು ನಮೂದಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ. ಕೆಲವು ಯೂಟ್ಯೂಬ್ ಚಾನೆಲ್‌ಗಳು, ವೆಬ್‌ಸೈಟ್‌ಗಳು ಹಾಗೂ ಕೆಲವು ಮಾಧ್ಯಮ ಸಂಸ್ಥೆಗಳು ನನ್ನ ವಿರುದ್ಧ ವೈಯಕ್ತಿಕ ದ್ವೇಷದಿಂದ ಮಾನಹಾನಿಕಾರಕ ಸುದ್ದಿಗಳನ್ನು ಪರಕಟಿಸಿವೆ ಎಂದು ಪವಿತ್ರಾ ಲೋಕೇಶ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.

  ವಿಚ್ಛೇದನ ಪಡೆಯದೇ ಸಹಬಾಳ್ವೆ

  ವಿಚ್ಛೇದನ ಪಡೆಯದೇ ಸಹಬಾಳ್ವೆ

  ಪವಿತ್ರಾ ಲೋಕೇಶ್ ಅವರು ಸುಚೇಂದ್ರ ಪ್ರಸಾದ್ ಅವರೊಟ್ಟಿಗೆ ಎರಡನೇ ಮದುವೆಯಾಗಿ ಮಕ್ಕಳನ್ನು ಸಹ ಪಡೆದಿದ್ದರು. ಇನ್ನು ನಟ ನರೇಶ್‌ ಕನ್ನಡತಿ ರಮ್ಯಾ ಅವರೊಟ್ಟಿಗೆ ಮೂರನೇ ಬಾರಿ ಮದುವೆಯಾಗಿದ್ದರು. ಆದರೆ ಇಬ್ಬರೂ ಸಹ ವಿಚ್ಛೇದನ ಪಡೆಯದೆ ಇದೀಗ ಪರಸ್ಪರ ಒಟ್ಟಿಗೆ ಜೀವಿಸುತ್ತಿದ್ದಾರೆ. ತಾವಿಬ್ಬರೂ ಆತ್ಮೀಯ ಗೆಳೆಯರು ಎಂದು ಮೊದಲು ಹೇಳಿಕೊಂಡಿದ್ದ ನರೇಶ್ ಆ ನಂತರ ತಾವು ಲಿವಿನ್‌ ರಿಲೇಷನ್‌ನಲ್ಲಿರುವುದಾಗಿ ಹೇಳಿಕೊಂಡರು. ಇತ್ತೀಚೆಗಷ್ಟೆ ತೆರೆಯ ಮೇಲೂ ಪತಿ-ಪತ್ನಿಯಾಗಿ 'ಅಂದರೂ ಬಾಗುಂಡಾಲಿ, ಅಂದುಲೋ ನೇನುಂಡಾಲಿ' ಸಿನಿಮಾದಲ್ಲಿ ಈ ಜೋಡಿ ನಟಿಸಿದೆ.

  English summary
  Actress Pavithra Lokesh gave complaint to cyber police against some news website and YouTube for publishing news about her and VK Naresh.
  Sunday, November 27, 2022, 10:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X