For Quick Alerts
  ALLOW NOTIFICATIONS  
  For Daily Alerts

  "ರಾತ್ರಿಯಿಂದ ಬಹಳ ಖುಷಿ ಆಗ್ತಿದೆ": ಪವಿತ್ರಾ ಲೋಕೇಶ್ ಭುಜದ ಮೇಲೆ ಕೈಹಾಕಿ ನರೇಶ್ ವಿಡಿಯೋ

  |

  ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಲಿವ್ ಇನ್ ರಿಲೇಷನ್ ಶಿಪ್‌ನಲ್ಲಿ ಇದ್ದಾರೆ. ಮದುವೆ ಕೂಡ ಆಗಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳ ಹಿಂದೆ ಭಾರೀ ಸದ್ದು ಮಾಡ್ತಿತ್ತು. ನರೇಶ್ ಹಾಗೂ ಪವಿತ್ರಾ ಲೋಕೇಶ್ ಮೈಸೂರಿನಲ್ಲಿ ಒಂದೇ ಹೋಟೆಲ್ ಕೊಠಡಿಯಲ್ಲಿ ತಂದಿದ್ದು, ರೆಡ್‌ ಹ್ಯಾಂಡ್‌ ಆಗಿ ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಎದುರು ಸಿಕ್ಕಿ ಬಿದ್ದಿದ್ದರು. ನಾವಿಬ್ಬರು ಒಳ್ಳೆ ಸ್ನೇಹಿತರು ಅಷ್ಟೇ ಎಂದು ಇಬ್ಬರು ಹೇಳಿದ್ದರು. ಇದೀಗ ಇಬ್ಬರು ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

  ತೆಲುಗಿನ ಕೆಲ ಸಿನಿಮಾಗಳಲ್ಲಿ ನರೇಶ್ ಹಾಗೂ ಪವಿತ್ರಾ ಒಟ್ಟಿಗೆ ನಟಿಸಿದ್ದಾರೆ. ನರೇಶ್ ಕುಟುಂಬಕ್ಕೂ ಪವಿತ್ರಾ ಬಹಳ ಆಪ್ತರಾಗಿದ್ದಾರೆ. ಮೈಸೂರಿನ ಹೋಟೆಲ್‌ನಲ್ಲಿ ನಡೆದ ಹೈಡ್ರಾಮಾ ನಂತರ ಇಬ್ಬರು ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಆದರೆ 'ರಾಮಾರಾವು ಆನ್‌ ಡ್ಯೂಟಿ' ಚಿತ್ರದಲ್ಲಿ ಅಣ್ಣ, ತಂಗಿ ಪಾತ್ರಗಳಲ್ಲಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆಯಾದಾಗ ಥಿಯೇಟರ್‌ಗಳಲ್ಲಿ ಇಬ್ಬರನ್ನು ನೋಡಿ ಕೆಲವರು ಅಪಹಾಸ್ಯ ಮಾಡಿದ್ದರು. ನಂತರ ಇಬ್ಬರಿಗೂ ಪೋಷಕ ಕಲಾವಿದರಾಗಿ ಭಾರೀ ಡಿಮ್ಯಾಂಡ್ ಶುರುವಾಯ್ತು ಎನ್ನುವ ಮಾತುಗಳು ಕೇಳಿಬಂದಿತ್ತು.

  ನರೇಶ್ ಜೊತೆಗಿನ ಅಫೇರ್ ವಿವಾದ: ಸ್ಟಾರ್ ನಟನಿಂದ ಪವಿತ್ರಾ ಲೋಕೇಶ್‌ಗೆ ಕಹಿ ಅನುಭವ?ನರೇಶ್ ಜೊತೆಗಿನ ಅಫೇರ್ ವಿವಾದ: ಸ್ಟಾರ್ ನಟನಿಂದ ಪವಿತ್ರಾ ಲೋಕೇಶ್‌ಗೆ ಕಹಿ ಅನುಭವ?

  ನರೇಶ್ ಮತ್ತು ಪವಿತ್ರಾ ಲೋಕೇಶ್ ಒಟ್ಟಿಗೆ ನಟಿಸಿರುವ ಮತ್ತೊಂದು ಸಿನಿಮಾ ಬಿಡುಗಡೆಯಾಗಿದೆ. ಆದರೆ ಸಿನಿಮಾ ಥಿಯೇಟರ್‌ಗೆ ಬಂದಿಲ್ಲ. ನೇರವಾಗಿ ಓಟಿಟಿಗೆ ಬಂದು ಒಳ್ಳೆ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ. ಇಬ್ಬರು ಒಟ್ಟಿಗೆ ವಿಡಿಯೋ ಮಾಡಿ ಈ ಸಂತಸ ಹಂಚಿಕೊಂಡಿದ್ದಾರೆ.

  ಪವಿತ್ರಾ ಭುಜದ ಮೇಲೆ ನರೇಶ್ ಕೈ

  ಪವಿತ್ರಾ ಭುಜದ ಮೇಲೆ ನರೇಶ್ ಕೈ

  ಹಾಸ್ಯ ನಟ ಆಲಿ ನಿರ್ಮಿಸಿ ನಟಿಸಿರುವ ಸಿನಿಮಾ 'ಅಂದರೂ ಬಾಗುಂಡಾಲಿ ಅಂದುಲೋ ನೇನುಂಡಾಲಿ'. ಕಿರಣ್ ಶ್ರೀಪುರಂ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನರೇಶ್ ಮತ್ತು ಪವಿತ್ರಾ ಮತ್ತೆ ಗಂಡ- ಹೆಂಡತಿ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ನೇರವಾಗಿ 'ಆಹಾ' ಓಟಿಟಿ ಫ್ಲಾಟ್‌ಫಾರ್ಮ್‌ಗೆ ಬಂದಿದೆ. ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ ಎಲ್ಲರಿಗೂ ಧನ್ಯವಾದ ಎಂದು ವಿಡಿಯೋವೊಂದರಲ್ಲಿ ಇಬ್ಬರು ಹೇಳಿದ್ದಾರೆ. ಆ ವಿಡಿಯೋ ಈ ಸಿಕ್ಕಾಪಟ್ಟೆ ವೈರಲ್ ಆಗಿದೆ.

  ರೊಮ್ಯಾಂಟಿಕ್ ಆಗಿ ಜೋಡಿ ದರ್ಶನ

  ರೊಮ್ಯಾಂಟಿಕ್ ಆಗಿ ಜೋಡಿ ದರ್ಶನ

  ಸದ್ಯ ಈ ವಿಡಿಯೋ ನೋಡಿದವರು ಇಬ್ಬರು ರಿಲೇಶನ್‌ಶಿಪ್‌ನಲ್ಲಿ ಇರೋದು ನಿಜ ಎನ್ನುತ್ತಿದ್ದಾರೆ. ವಿಡಿಯೋದಲ್ಲಿ ನರೇಶ್ ರೊಮ್ಯಾಂಟಿಕ್ ಆಗಿ ಪವಿತ್ರಾ ಲೋಕೇಶ್ ಭುಜದ ಮೇಲೆ ಕೈ ಹಾಕಿ ನಿಂತಿದ್ದಾರೆ. ಮಾತು ಮಾತಿಗೂ ಭುಜ ಮುಟ್ಟುತ್ತಾ ಜೋಶ್‌ನಿಂದ ಮಾತನಾಡಿದ್ದಾರೆ. ಪರೋಕ್ಷವಾಗಿ ತಮ್ಮಿಬ್ಬರ ರಿಲೇಶನ್‌ಶಿಪ್‌ ಬಗ್ಗೆ ಕ್ಲಾರಿಟಿ ಕೊಡುತ್ತಿರುವಂತೆ ಕಾಣುತ್ತಿದೆ. ಅಥವಾ ಬೇಕಂತಲೇ 3ನೇ ಪತ್ನಿ ರಮ್ಯಾ ರಘುಪತಿ ಅವರನ್ನು ಕೆಣಕುವಂತಿದೆ ಎಂದು ಕೆಲವರು ಹೇಳುತ್ತಿದ್ದಾರೆ.

  ನರೇಶ್- ಪವಿತ್ರಾ ಹೇಳಿದ್ದೇನು?

  ನರೇಶ್- ಪವಿತ್ರಾ ಹೇಳಿದ್ದೇನು?

  'ಅಂದರೂ ಬಾಗುಂಡಾಲಿ ಅಂದುಲೋ ನೇನುಂಡಾಲಿ' ಸಿನಿಮಾ ರಾತ್ರಿಯಿಂದ 'ಆಹಾ'ಗೆ ಬಂದಿದೆ. ರಾತ್ರಿಯಿಂದ ನನಗೆ ಸಾಕಷ್ಟು ಮೆಸೆಜ್‌ಗಳು, ಫೋನ್ ಕರೆಗಳು ಬರ್ತಿದೆ. ಎಲ್ಲರೂ ಸಿನಿಮಾ ಚೆನ್ನಾಗಿದೆ ಎನ್ನುತ್ತಿದ್ದಾರೆ. ಒಳ್ಳೆಯ ಸಿನಿಮಾ ತೆಗೆದರೆ, ಕಂಟೆಂಟ್ ಬೇಸ್ಡ್ ಸಿನಿಮಾಗಳು ಎಲ್ಲರಿಗೂ ಇಷ್ಟ ಆಗುತ್ತದೆ. ಇಷ್ಟು ಒಳ್ಳೆಯ ರಿವ್ಯೂಗಳು ಇತ್ತೀಚಿನ ದಿನಗಳಲ್ಲಿ ಬಂದಿರಲಿಲ್ಲ. ಸಿನಿಮಾ ನೋಡಿ ಮೆಚ್ಚಿಕೊಂಡ ಎಲ್ಲರಿಗೂ ಥ್ಯಾಂಕ್ಸ್ ಎಂದು ನರೇಶ್, ಪವಿತ್ರ ಹೇಳಿದ್ದಾರೆ. ಆದರೆ ಇಡೀ ವಿಡಿಯೋದಲ್ಲಿ ಪವಿತ್ರಾ ಲೋಕೇಶ್ ಭುಜದ ಮೇಲೆ ಹಾಕಿದ ಕೈಯನ್ನು ನರೇಶ್ ತೆಗೆಯಲೇ ಇಲ್ಲ.

  ಅಂದವಾಗಿ ಕಾಣಿಸಲು ಲಕ್ಷ ಲಕ್ಷ ಖರ್ಚು

  ಅಂದವಾಗಿ ಕಾಣಿಸಲು ಲಕ್ಷ ಲಕ್ಷ ಖರ್ಚು

  ಇನ್ನು ಪವಿತ್ರಾ ಲೋಕೇಶ್ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಚೆಂದವಾಗಿ ಕಾಣಲು ಲಕ್ಷ ಲಕ್ಷ ಹಣ ಖರ್ಚು ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸ್ಪೆಷಲ್ ವರ್ಕೌಟ್ಸ್, ಡಯೆಟ್, ಫೇರ್‌ನೆಸ್ ಕ್ರೀಮ್, ಸ್ಕಿನ್ ಗ್ಲೋ ಹೀಗೆ ಏನೇನೋ ಬಳಸುತ್ತಿದ್ದಾರಂತೆ. ಇನ್ನು ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಪವಿತ್ರಾ ನಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಗಲಾಟೆ, ವಿವಾದದಿಂದ ಅವಕಾಶಗಳು ಹೆಚ್ಚಾಗಿದ್ದು, ನಟಿ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.

  English summary
  Pavitra Lokesh And Naresh About Andaru Bagundali Andulo nenundali movie Success. both express gratitude to audience. know More.
  Sunday, October 30, 2022, 13:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X