Just In
Don't Miss!
- News
ಕೊರೊನಾ ಸೋಂಕು ಹಿನ್ನೆಲೆ; ಉಚ್ಚಂಗಿದುರ್ಗ ಜಾತ್ರೋತ್ಸವ ರದ್ದು
- Automobiles
ದುಬಾರಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್ ಎಸ್ಯುವಿ ಖರೀದಿಸಿದ ನಟ ಅರ್ಜುನ್ ಕಪೂರ್
- Finance
ಜೂನ್ 1ರಿಂದ ಚಿನ್ನಾಭರಣಗಳ ಮೇಲೆ ಹಾಲ್ಮಾರ್ಕ್ ಕಡ್ಡಾಯ
- Lifestyle
ವರ್ಷದ ಮೊದಲ ರಾಶಿ ಮೇಷಗೆ ಏ.14ಕ್ಕೆ ಸೂರ್ಯ ಸಂಚಾರ: ಇದರಿಂದ ನಿಮ್ಮ ರಾಶಿಯ ಮೇಲಾಗಲಿದೆ ಈ ಪರಿಣಾಮ
- Sports
ಐಪಿಎಲ್ 2021: ಮುಂಬೈ vs ಕೋಲ್ಕತ್ತಾ, ಪಂದ್ಯದ ಹೈಲೈಟ್ಸ್
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಡಿಯೋ: ಪವನ್ ಕಲ್ಯಾಣ್ ಅಭಿಮಾನಿಗಳಿಂದ ದಾಂಧಲೆ
ಪವನ್ ಕಲ್ಯಾಣ್ ಅಭಿನಯದ 'ವಕೀಲ್ ಸಾಬ್' ಸಿನಿಮಾ ಇಂದು (ಏಪ್ರಿಲ್ 09) ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡು, ಕೇರಳ ಸೇರಿ ಇನ್ನೂ ಕೆಲವು ರಾಜ್ಯಗಳಲ್ಲಿ ಬಿಡುಗಡೆ ಆಗಿದೆ.
ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಏಪ್ರಿಲ್ 8 ರ ಮಧ್ಯರಾತ್ರಿಯೇ ವಿಶೇಷ ಶೋಗಳನ್ನು ಆಯೋಜಿಸಲಾಗಿತ್ತು. ಆದರೆ ರಾಜ್ಯ ಸರ್ಕಾರದ ಆದೇಶದಿಂದಾಗಿ ವಿಶೇಷ ಶೋಗಳನ್ನು ಚಿತ್ರಮಂದಿರಗಳು ರದ್ದು ಮಾಡಿವೆ.
ಚಿತ್ರಮಂದಿರಗಳ ಈ ಹಠಾತ್ ನಿರ್ಧಾರದಿಂದ ರೊಚ್ಚಿಗೆದ್ದ ಪವನ್ ಕಲ್ಯಾಣ್ ಅಭಿಮಾನಿಗಳು ಆಂಧ್ರದ ಹಲವು ಚಿತ್ರಮಂದಿರಗಳಲ್ಲಿ ದಾಂಧಲೆ ಮಾಡಿ, ಚಿತ್ರಮಂದಿರಗಳಿಗೆ ಹಾನಿ ಮಾಡಿದ್ದಾರೆ.
ಕೊರೊನಾ ಹೆಚ್ಚಳ ಆಗುತ್ತಿರುವ ಕಾರಣ ಆಂಧ್ರದಲ್ಲಿ ಚಿತ್ರಮಂದಿರಗಳು ವಿಶೇಷ ಶೋ ಪ್ರದರ್ಶನ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿತ್ತು. ಹಾಗಾಗಿ ಏಪ್ರಿಲ್ 8 ರ ರಾತ್ರಿ ಹಾಗೂ ಏಪ್ರಿಲ್ 9 ರ ಬೆಳ್ಳಂಬೆಳಗ್ಗೆ ನಿಗದಿಯಾಗಿದ್ದ ಶೋಗಳನ್ನು ರದ್ದು ಮಾಡಲಾಗಿದೆ.
ಆಂಧ್ರ ಸರ್ಕಾರವು ಪವನ್ ಕಲ್ಯಾಣ್ ಮೇಲಿನ ರಾಜಕೀಯ ದ್ವೇಷದಿಂದ ಈ ರೀತಿ ಆದೇಶ ಹೊರಡಿಸಿದೆ ಎಂದು ಆರೋಪಿಸಿ ಹಲವೆಡೆ ಚಿತ್ರಮಂದಿರಗಳ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಚಿತ್ರಮಂದಿರಗಳಿಗೆ ಕಲ್ಲು ತೂರಿದ್ದಾರೆ. ಚಿತ್ರಮಂದಿರಗಳ ಒಳಗೂ ಸೀಟುಗಳು, ಸ್ಕ್ರೀನ್‌ಗಳಿಗೆ ಹಾನಿ ಮಾಡಿದ್ದಾರೆ. ದಾಂಧಲೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಆಂಧ್ರದ ಗದ್ವಾಲ, ನೆಲ್ಲೂರು, ಕಡಪ, ಅನಂತಪುರಂ, ಒಂಗೋಲೆ ಇನ್ನೂ ಕೆಲವು ಕಡೆಗಳಲ್ಲಿ ಅಭಿಮಾನಿಗಳು ಚಿತ್ರಮಂದಿರಗಳಲ್ಲಿ ದಾಂಧಲೆ ನಡೆಸಿದ್ದಾರೆ. ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ.
Baga Hurt chesaru pk fans nto ippudu chupistham 🔥🔥#VakeelSaab pic.twitter.com/CXhEzaTkAq
— Rajesh Kanna (@RajeshK41600264) April 8, 2021
'ವಕೀಲ್ ಸಾಬ್' ಬಿಡುಗಡೆ ವೇಳೆಗೆ ಕೊರೊನಾ ಎರಡನೇ ಅಲೆ ತೀವ್ರಗೊಳ್ಳುತ್ತಿರುವ ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಚಿತ್ರಮಂದಿರಗಳಲ್ಲಿ 50% ಸೀಟು ಭರ್ತಿಗಷ್ಟೆ ಅವಕಾಶ ನೀಡಲಾಗಿದೆ. ಪವನ್‌ಕಲ್ಯಾಣ್‌ಗೆ ಸಾಕಷ್ಟು ಅಭಿಮಾನಿಗಳಿರುವ ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
#PawanKalyan fans Vandalize Srinivasa Theatre in Jogulamba Gadwal district after #VakeelSaab screening is disrupted due to a technical error.pic.twitter.com/znV5NNuaNd
— MIRCHI9 (@Mirchi9) April 9, 2021
ಆಂಧ್ರ, ತೆಲಂಗಾಣಗಳಲ್ಲಿ ಚಿತ್ರಮಂದಿರಗಳ ಮೇಲೆ ಪ್ರಸ್ತುತ ಯಾವುದೇ ನಿರ್ಬಂಧ ಹೇರಿಲ್ಲವಾದರೂ ತೆಲಂಗಾಣ ರಾಜ್ಯದಲ್ಲಿ ನಿರ್ಬಂಧ ಹೇರುವ ಬಗ್ಗೆ ಚರ್ಚೆ ಜಾರಿಯಲ್ಲಿದೆ. ಈ ನಡುವೆ ಆಂಧ್ರ ಪ್ರದೇಶ ಸರ್ಕಾರವು ಚಿತ್ರಮಂದಿರಗಳು ವಿಶೇಷ ಶೋ ಪ್ರದರ್ಶಿಸುವಂತಿಲ್ಲ ಎಂದಿದೆ.