For Quick Alerts
  ALLOW NOTIFICATIONS  
  For Daily Alerts

  ಮಹೇಶ್ ಬಾಬು ಅಭಿಮಾನಿಗಳ ದಾಖಲೆ ಬೆನ್ನತ್ತಿದೆ ಪವನ್ ಕಲ್ಯಾಣ್ ಫ್ಯಾನ್ಸ್!

  |

  ಟಾಲಿವುಡ್ ಇಂಡಸ್ಟ್ರಿಯಲ್ಲಿ ಫ್ಯಾನ್ಸ್ ವಾರ್ ಜೋರಾಗಿಯೇ ಇರುತ್ತದೆ. ತೆರೆಮೇಲೆ ಆದರೂ ಸರಿನೇ ತೆರೆ ಹಿಂದೆ ಆದರೂ ಸರಿನೇ, ನಮ್ಮ ಸ್ಟಾರ್ ರೆಕಾರ್ಡ್ ಸೆಟ್ ಮಾಡಬೇಕು ಎಂಬ ಹಠಕ್ಕೆ ಬೀಳುತ್ತಾರೆ ತೆಲುಗು ಅಭಿಮಾನಿಗಳು.

  ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada

  ಇದೀಗ, ಮಹೇಶ್ ಬಾಬು ಅಭಿಮಾನಿಗಳು ಮತ್ತು ಪವನ್ ಕಲ್ಯಾಣ್ ಅಭಿಮಾನಿಗಳ ನಡುವೆ ಟ್ವಿಟ್ಟರ್‌ನಲ್ಲಿ ಪೈಪೋಟಿ ನಡೆಯುತ್ತಿದೆ. ಮಹೇಶ್ ಬಾಬು ಫ್ಯಾನ್ಸ್ ಹೆಸರಿನಲ್ಲಿರುವ ದಾಖಲೆಯನ್ನು ಪವರ್ ಸ್ಟಾರ್ ಫ್ಯಾನ್ಸ್ ಹಿಂದಿಕ್ಕಲು ಸಜ್ಜಾಗಿದ್ದಾರೆ. ಮುಂದೆ ಓದಿ...

  ಪವನ್ ಕಲ್ಯಾಣ್ ಹುಟ್ಟುಹಬ್ಬ

  ಪವನ್ ಕಲ್ಯಾಣ್ ಹುಟ್ಟುಹಬ್ಬ

  ಸೆಪ್ಟೆಂಬರ್ 2 ರಂದು ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬ. ಈ ಹಿನ್ನೆಲೆ ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಸೆಪ್ಟೆಂಬರ್ 1 ರಂದು ಸಂಜೆ ಆರು ಗಂಟೆಗೆ ಪವನ್ ಕಲ್ಯಾಣ್ ಹೆಸರಿನಲ್ಲಿ ಹ್ಯಾಷ್‌ಟ್ಯಾಗ್ ಟ್ರೆಂಡ್ ಮಾಡುತ್ತಿದ್ದಾರೆ.

  ಮಹೇಶ್ ಬಾಬು ಹುಟ್ಟುಹಬ್ಬದ ದಿನ ವಿಶ್ವ ದಾಖಲೆ ನಿರ್ಮಿಸಿದ ಅಭಿಮಾನಿಗಳು

  ಮಹೇಶ್ ಬಾಬು ದಾಖಲೆ ಏನು?

  ಮಹೇಶ್ ಬಾಬು ದಾಖಲೆ ಏನು?

  ಆಗಸ್ಟ್ 9 ರಂದು ಮಹೇಶ್ ಬಾಬು ಅವರ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆ HBDMaheshbabu ಹ್ಯಾಷ್‌ಟ್ಯಾಗ್‌ನಲ್ಲಿ ಅತಿ ಹೆಚ್ಚು ಟ್ವೀಟ್ ಮಾಡುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದರು ಪ್ರಿನ್ಸ್ ಅಭಿಮಾನಿಗಳು. 24 ಗಂಟೆಯಲ್ಲಿ 60.2 ಮಿಲಿಯನ್ ಟ್ವೀಟ್ ಈ ಹ್ಯಾಷ್‌ಟ್ಯಾಗ್‌ನಲ್ಲಿ ಮಾಡಲಾಗಿತ್ತು.

  ಅದಕ್ಕೂ ಮುಂಚೆ ಯಾರ ಹೆಸರಿನಲ್ಲಿತ್ತು?

  ಅದಕ್ಕೂ ಮುಂಚೆ ಯಾರ ಹೆಸರಿನಲ್ಲಿತ್ತು?

  ಮಹೇಶ್ ಬಾಬು ಅಭಿಮಾನಿಗಳು ರೆಕಾರ್ಡ್ ಸೆಟ್ ಮಾಡುವುದಕ್ಕೂ ಮುಂಚೆ 2019ರಲ್ಲಿ #TwitterBestFandom ಎಂಬ ಹ್ಯಾಷ್‌ಟ್ಯಾಗ್ ಮೊದಲ ಸ್ಥಾನದಲ್ಲಿತ್ತು. 60.05 ಮಿಲಿಯನ್ ಟ್ವೀಟ್ ಈ ಹ್ಯಾಷ್‌ಟ್ಯಾಗ್‌ನಲ್ಲಿ ಆಗಿತ್ತು. ಆದರೆ, ಈ ದಾಖಲೆಯನ್ನು ಮಹೇಶ್ ಅಭಿಮಾನಿಗಳು ಬ್ರೇಕ್ ಮಾಡಿದ್ದರು.

  ಮೆಗಾವಾರ್‌ಗೆ ವೇದಿಕೆ ಸಜ್ಜು

  ಮೆಗಾವಾರ್‌ಗೆ ವೇದಿಕೆ ಸಜ್ಜು

  ಮಹೇಶ್ ಬಾಬು ಅಭಿಮಾನಿಗಳು ಸೃಷ್ಟಿಸಿರುವ ದಾಖಲೆಯನ್ನು ಗಮನದಲ್ಲಿಟ್ಟುಕೊಂಡಿರುವ ಪವರ್ ಸ್ಟಾರ್ ಫ್ಯಾನ್ಸ್ ಇದರಲ್ಲಿ ಯಶಸ್ಸು ಆಗ್ತಾರಾ ಗೊತ್ತಿಲ್ಲ. ಆದರೆ, ಈ ಟ್ವಿಟ್ಟರ್ ಟ್ರೆಂಡ್ ಮಾತ್ರ ಭಾರಿ ಕುತೂಹಲ ಹುಟ್ಟುಹಾಕಿದೆ. ಇನ್ನುಳಿದಂತೆ ಪವನ್ ಕಲ್ಯಾಣ್ 'ವಕೀಲ್ ಸಾಬ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ಇನ್ನು ಎರಡು ಚಿತ್ರಗಳನ್ನು ಕೈಗೆತ್ತಿಕೊಳ್ಳಲಿದ್ದಾರೆ.

  English summary
  Pawan Kalyan Fans Set to Break Mahesh babu Fans Record. Mahesh Babu's birthday hashtag that garnered 60.2 million tweets within 24 hours.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X